Alia-Ranbir Marriage: ಕೊನೆಗೂ ಫಿಕ್ಸ್‌ ಆಯ್ತು ಬಾಲಿವುಡ್‌ ಕ್ಯೂಟ್‌ ಕಪಲ್‌ ವಿವಾಹ ದಿನಾಂಕ..! 

ಇದೇ ತಿಂಗಳ ಎರಡನೇ ವಾರದಲ್ಲಿ ರಣಬೀರ್‌ ಕಪೂರ್ ಮತ್ತು ಆಲಿಯಾ ಭಟ್ ಮದುವೆಯಾಗಲಿದ್ದಾರೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿದೆ. ಸುದ್ದಿ ಮಾಧ್ಯಮವೊಂದು ನಡೆಸಿದ ಕಾರ್ಯಕ್ರಮದಲ್ಲಿ ರಣಬೀರ್‌ ಕಪೂರ್ ಮತ್ತು ಆಲಿಯಾ ಭಟ್ ತಮ್ಮ ಮದುವೆಯ ಬಗ್ಗೆ ಚರ್ಚೆ ಮಾಡಿದ್ದಾರೆ.

Written by - Zee Kannada News Desk | Last Updated : Apr 5, 2022, 05:21 PM IST
  • ಬಾಲಿವುಡ್‌ ಕ್ಯೂಟ್‌ ಕಪಲ್‌ ವಿವಾಹ ದಿನಾಂಕ ಫಿಕ್ಸ್‌!
  • ರಣಬೀರ್‌ ಕಪೂರ್- ಆಲಿಯಾ ಭಟ್‌ ಮದುವೆ ಏಪ್ರಿಲ್‌ 17ರಂದು ಫಿಕ್ಸ್‌!
  • ಮುಂಬೈನ ಪೂರ್ವಜರ ಮನೆಯಲ್ಲಿ ನಡೆಯಲಿದೆಯಂತೆ ಮದುವೆ
 Alia-Ranbir Marriage:  ಕೊನೆಗೂ ಫಿಕ್ಸ್‌ ಆಯ್ತು ಬಾಲಿವುಡ್‌ ಕ್ಯೂಟ್‌ ಕಪಲ್‌ ವಿವಾಹ ದಿನಾಂಕ..!  title=
Alia-Ranbir Marriage

ಬಾಲಿವುಡ್‌(Bollywood)ನ ಮತ್ತೊಂದು ಜನಪ್ರಿಯ ಜೋಡಿಯು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದೆ. ಕಳೆದ ಕೆಲ ವರ್ಷಗಳಿಂದ ಡೇಟಿಂಗ್‌ ಮಾಡುತ್ತಿದ್ದ ಪ್ರೇಮ ಪಕ್ಷಿಗಳು ಇದೀಗ ಮದುವೆಯಾಗಲು ದಿನಾಂಕ ಫಿಕ್ಸ್‌ ಮಾಡಿದ್ದಾರೆ. ಅವರು ಬೇರೆ ಯಾರೂ ಅಲ್ಲ ಬಾಲಿವುಡ್‌ನ ಹ್ಯಾಂಡ್ಸಮ್ ಹಂಕ್ ರಣಬೀರ್‌ ಕಪೂರ್(Ranbir Kapoor) ಮತ್ತು ಕ್ಯೂಟ್ ಗರ್ಲ್‌ ಆಲಿಯಾ ಭಟ್(Alia Bhatt). 

ಇದೇ ತಿಂಗಳ ಎರಡನೇ ವಾರದಲ್ಲಿ ರಣಬೀರ್‌ ಕಪೂರ್ ಮತ್ತು ಆಲಿಯಾ ಭಟ್ ಮದುವೆಯಾಗಲಿದ್ದಾರೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿದೆ. ಸುದ್ದಿ ಮಾಧ್ಯಮವೊಂದು ನಡೆಸಿದ ಕಾರ್ಯಕ್ರಮದಲ್ಲಿ ರಣಬೀರ್‌ ಕಪೂರ್ ಮತ್ತು ಆಲಿಯಾ ಭಟ್ ತಮ್ಮ ಮದುವೆಯ ಬಗ್ಗೆ ಚರ್ಚೆ ಮಾಡಿದ್ದಾರೆ. 

ಇದನ್ನು ಓದಿ: ಮದುವೆಗೆ ಶಾಪಿಂಗ್‌ನಲ್ಲಿ ಬ್ಯುಸಿಯಾಗಿದ್ದಾರಾ ಆಲಿಯಾ-ರಣಬೀರ್?

ಇನ್ನು ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ಏಪ್ರಿಲ್‌ 17ರಂದು ಮುಂಬೈನಲ್ಲಿರುವ ಚೆಂಬೂರಿನ ಕಪೂರ್ ಕುಟುಂಬದ ಪೂರ್ವಜರ ಮನೆಯಾದ ಆರ್.ಕೆ ಹೌಸ್‌ನಲ್ಲಿ ನಡೆಯಲಿದೆ ಎಂದು ವರದಿಗಳು ತಿಳಿಸಿದೆ. ಈ ಹಿಂದೆ, ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ರಾಜಸ್ಥಾನದ ಉದಯಪುರದಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಗಳು ಪ್ರಸಾರವಾಗಿತ್ತು. ಆದರೆ ಕುಟುಂಬವು ಈ ನಿರ್ಧಾರ ತೆಗೆದುಕೊಂಡಿದೆ ಎನ್ನಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News