ಬೆಂಗಳೂರು : ಒಂದು ಕಡೆ 'ಕೆಜಿಎಫ್' ಚಾಪ್ಟರ್ 2 ರಿಲೀಸ್‌ಗೆ ಕೌಂಟ್‌ಡೌನ್ ಶುರುವಾಗಿದ್ದರೆ, ಕನ್ನಡದ ಚಿತ್ರವೊಂದು ಜಗತ್ತಿನಾದ್ಯಂತ ದೊಡ್ಡ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ. ಥಿಯೇಟರ್‌ಗಳ ವಿಚಾರದಿಂದ ಹಿಡಿದು, ಪ್ರೀ ರಿಲೀಸ್ ಕಲೆಕ್ಷನ್ ತನಕ 'ಕೆಜಿಎಫ್-2'(KGF 2) ಮಾಡಿರುವ ದಾಖಲೆಗಳು ಒಂದೆರಡಲ್ಲ. ಈಗ ಮತ್ತೊಂದು ದಾಖಲೆಗೂ 'ಕೆಜಿಎಫ್' ಚಾಪ್ಟರ್ 2 ಸಾಕ್ಷಿಯಾಗಿದ್ದು, ದಕ್ಷಿಣ ಭಾರತದ ಸಿನಿಮಾವೊಂದಕ್ಕೆ ಯುರೋಪ್‌ನಲ್ಲಿ ಸಿಗುತ್ತಿರುವ ಹೈಪ್ ನೋಡಿ ಭಾರತೀಯ ಚಿತ್ರರಂಗದ ಸ್ಟಾರ್‌ಗಳಿಗೆ ಶಾಕ್ ಆಗಿ ಹೋಗಿದೆ.
ಎಲ್ಲೆಲ್ಲೂ 'ಕೆಜಿಎಫ್-2' (KGF 2) ಹವಾ ಜೋರಾಗಿದೆ. ಕನ್ನಡದ ಸಿನಿಮಾ ಒಂದಕ್ಕೆ ಇಷ್ಟು ದೊಡ್ಡ ಮಾರುಕಟ್ಟೆ ಸಿಗುರುತ್ತಿರುವುದು ಇದೇ ಮೊದಲು ಅಂತಾ ಹೇಳಬಹುದು. ಹಾಗೇ 'ಕೆಜಿಎಫ್-2' ಕನ್ನಡಿಗರ ಪಾಲಿಗೆ ಎಂದೆಂದಿಗೂ ಮರೆಯಲಾಗದ ಸಿನಿಮಾ ಕೂಡ ಹೌದು. ಇಂತಹ ಲೆಜೆಂಡ್ ಸಿನಿಮಾಗೆ ಇದೀಗ ಮತ್ತೊಂದು ಗರಿ ಸಿಕ್ಕಿದೆ. ಮತ್ತೊಂದು ರೆಕಾರ್ಡ್ ಕ್ರಿಯೇಟ್ ಮಾಡುವ ಮೂಲಕ 'ಕೆಜಿಎಫ್' ಚಾಪ್ಟರ್ 2 ಜಾಗತಿಕ ಸಿನಿಮಾ ರಂಗದಲ್ಲಿ ತನ್ನದೇ ಹವಾ ಎಬ್ಬಿಸಿದೆ (KGF 2 Records). ಅದೇನು ಅನ್ನೋದರ ಡೀಟೇಲ್ಸ್ ಮುಂದೆ ಹೇಳ್ತೀವಿ ಕೇಳಿ.
ಇದನ್ನೂ ಓದಿ : Rashmika Mandanna: ಹಿಜಾಬ್ ಧರಿಸಿ ಹೊಸ ಗೆಟಪ್ನಲ್ಲಿ ಕಾಣಿಸಿಕೊಂಡ ರಶ್ಮಿಕಾ ಮಂದಣ್ಣ..!
ಗ್ರೀಸ್‌ಗೆ ಗ್ರ್ಯಾಂಡ್ ಎಂಟ್ರಿ :
ಅಂದಹಾಗೆ ಕೆಜಿಎಫ್ ಜಗತ್ತಿನಾದ್ಯಂತ ರಿಲೀಸ್ ಆಗುತ್ತಿರುವುದು ಗೊತ್ತಿರುವ ಸಂಗತಿ (KGHF Release). ಭಾರತೀಯ ಸಿನಿಮಾಗಳು ಸಾಮಾನ್ಯವಾಗಿ ಜಗತ್ತಿನ ಮೂಲೆ ಮೂಲೆಯಲ್ಲೂ ರಿಲೀಸ್ ಆಗುತ್ತವೆ. ಆದರೆ ಕೆಲವು ಪ್ರದೇಶಗಳಲ್ಲಿ ಭಾರತೀಯರು ಇಲ್ಲದ ಜಾಗಗಳಲ್ಲಿ ಭಾರತೀಯ ಸಿನಿಮಾಗಳು ರಿಲೀಸ್ ಆಗುವುದಿಲ್ಲ. ಅದೇ ರೀತಿ ಯುರೋಪ್ ಖಂಡದ ಪ್ರತಿಯೊಂದು ದೇಶದಲ್ಲೂ 'ಕೆಜಿಎಫ್' ಚಾಪ್ಟರ್ 2 ರಿಲೀಸ್ ಆಗಲಿದ್ದು, ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಸಿನಿಮಾ ಒಂದು ಗ್ರೀಸ್ನಲ್ಲಿ ಗ್ರ್ಯಾಂಡ್ ರಿಲೀಸ್ ಕಾಣುತ್ತಿದೆ.
ಇದಿಷ್ಟೇ ಅಲ್ಲ ಅಮೆರಿಕ, ಆಸ್ಟ್ರೇಲಿಯಾ, ರಷ್ಯಾ ಸೇರಿದಂತೆ ಬಹುತೇಕ ಜಗತ್ತಿನ ಎಲ್ಲಾ ದೇಶಗಳಲ್ಲೂ ಸದ್ದು ಮಾಡಲಿದೆ 'ಕೆಜಿಎಫ್' ಚಾಪ್ಟರ್ 2. ಯಾಕಂದ್ರೆ 'ಕೆಜಿಎಫ್' ಚಾಪ್ಟರ್ 1 ಕ್ರಿಯೇಟ್ ಮಾಡಿದ್ದ ಹವಾ ಹಂಗಿತ್ತು. 'ಕೆಜಿಎಫ್' ಚಾಪ್ಟರ್ 1 ನೋಡಿರುವ ಅಭಿಮಾನಿಗಳು ಕಳೆದ 4 ವರ್ಷಗಳಿಂದ 'ಕೆಜಿಎಫ್' ಚಾಪ್ಟರ್ 2 ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಭಾರತದಲ್ಲಿ ಇರುವಷ್ಟೇ ಅಭಿಮಾನಿ ಬಳಗ ಜಾಗತಿಕ ಮಟ್ಟದಲ್ಲೂ 'ಕೆಜಿಎಫ್' ಚಾಪ್ಟರ್ 2ಗಾಗಿ ಕಾಯುತ್ತಿದೆ. ಇದೇ ಕಾರಣಕ್ಕೆ ಜಗತ್ತಿನ ಮೂಲೆ ಮೂಲೆಯಲ್ಲೂ 'ಕೆಜಿಎಫ್' ಚಾಪ್ಟರ್ 2 ರಿಲೀಸ್ ಆಗಲಿದ್ದು, ಹೊಸ ದಾಖಲೆ ಬರೆಯಲಿದೆ (KGF 2 records).
ಇದನ್ನೂ ಓದಿ : Rajamartanda: ಶೀಘ್ರವೇ ಚಿರಂಜೀವಿ ಸರ್ಜಾ ಅಭಿನಯದ ‘ರಾಜಮಾರ್ತಾಂಡ’ ಚಿತ್ರ ಬಿಡುಗಡೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.