#BeastDisaster:ಬೀಸ್ಟ್ ಸಿನಿಮಾ ನೋಡಿ ಡಿಸಾಸ್ಟರ್ ಎಂದ ಫ್ಯಾನ್ಸ್!

ಹಲವರಿಗೆ ಸಿನಿಮಾ ಇಷ್ಟವಾಗಿಲ್ಲ ಎಂದು ಹೇಳಿದ್ದಾರೆ. ಅನೇಕರು #BeastDisaster ಎಂಬ ಹ್ಯಾಷ್‌ಟ್ಯಾಗ್ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. 

Written by - Chetana Devarmani | Last Updated : Apr 13, 2022, 07:32 PM IST
  • ತಮಿಳು ನಟ ದಳಪತಿ ವಿಜಯ್‌ ಹಾಗೂ ಪೂಜಾ ಹೆಗ್ಡೆ ಅಭಿನಯದ ‘ಬೀಸ್ಟ್‌’
  • ಇಂದು ವಿಶ್ವದಾದ್ಯಂತ ಬಿಡುಗಡೆಯಾದೆ ಬೀಸ್ಟ್
  • ಬೀಸ್ಟ್ ಟ್ವಿಟರ್ ವಿಮರ್ಶೆ ನೋಡಿದರೆ ಚಿತ್ರದ ಬಗೆಗಿನ ನಿರೀಕ್ಷೆ ಹುಸಿಯಾಗಿದೆ
#BeastDisaster:ಬೀಸ್ಟ್ ಸಿನಿಮಾ ನೋಡಿ ಡಿಸಾಸ್ಟರ್ ಎಂದ ಫ್ಯಾನ್ಸ್! title=
ಬೀಸ್ಟ್‌

ತಮಿಳು ನಟ ದಳಪತಿ ವಿಜಯ್‌ ಹಾಗೂ ಪೂಜಾ ಹೆಗ್ಡೆ ಅಭಿನಯದ ‘ಬೀಸ್ಟ್‌’ ಸಿನಿಮಾ ಇಂದು ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಬೀಸ್ಟ್ ಟ್ವಿಟರ್ ವಿಮರ್ಶೆ ನೋಡಿದರೆ ಚಿತ್ರದ ಬಗೆಗಿನ ನಿರೀಕ್ಷೆ ಹುಸಿಯಾಗಿದೆ ಎಂದು ಹೇಳಲಾಗ್ತಿದೆ. 

ಇದನ್ನೂ ಓದಿ: ಕನ್ನಡದ ಕೋಟ್ಯಾಧಿಪತಿ...ಅಪ್ಪು ಸ್ಥಾನ ತುಂಬ್ತಾರಾ ಕಿಚ್ಚ ಸುದೀಪ್‌..?

ಹಲವರಿಗೆ ಸಿನಿಮಾ ಇಷ್ಟವಾಗಿಲ್ಲ ಎಂದು ಹೇಳಿದ್ದಾರೆ. ಅನೇಕರು #BeastDisaster ಎಂಬ ಹ್ಯಾಷ್‌ಟ್ಯಾಗ್ ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ. ಭಾರಿ ನಿರೀಕ್ಷೆ ಸೃಷ್ಟಿ ಮಾಡಿದ್ದ ಬೀಸ್ಟ್​ ಬಿಡುಗಡೆ ಆಗಿದೆ. ಈ ಸಿನಿಮಾ ನೋಡಿ ಬಂದಿರುವ ಪ್ರೇಕ್ಷಕರು ಹಲವು ಬಗೆಯಲ್ಲಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿದ್ದಾರೆ.

ಕೆಜಿಎಫ್ 2 ಗೆ ಸವಾಲು ನೀಡಲು ಬಂದಿರುವ ಈ ಸಿನಿಮಾಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅದರಲ್ಲೂ #BeastDisaster ಎಂಬ ರೀತಿಯಲ್ಲಿ ರಿವೀವ್‌ ಸಿಕ್ಕಿರುವುದರಿಂದ ಗಲ್ಲಾ ಪೆಟ್ಟಿಗೆಯಲ್ಲಿ ಹಿನ್ನಡೆ ಆಗುವ ಸಾಧ್ಯತೆ ಹೆಚ್ಚಿದೆ ಎಂದೂ ಹೇಳಲಾಗುತ್ತಿದೆ. 

ಇದನ್ನೂ ಓದಿ: ಮೊದಲ ದಿನದಂದೇ ಆರ್ ಆರ್ ಆರ್ ದಾಖಲೆ ಧೂಳಿಪಟ ಮಾಡಲಿದೆ ಕೆಜಿಎಫ್ 2...!

ಹಲವು ವಿಚಾರಗಳಲ್ಲಿ ಸಿನಿಮಾ ಎಡವಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬೀಸ್ಟ್​ ಚಿತ್ರಕ್ಕೆ ನೆಲ್ಸನ್​ ದಿಲೀಪ್​ ಕುಮಾರ್​ ನಿರ್ದೇಶನ ಮಾಡಿದ್ದಾರೆ. ಸನ್​ ಪಿಕ್ಚರ್ಸ್​ ಬ್ಯಾನರ್‌ ಅಡಿಯಲ್ಲಿ ಈ ಸಿನಿಮಾ ಮೂಡಿಬಂದಿದೆ. ಆ್ಯಕ್ಷನ್​ ಜೊತೆ ಕಾಮಿಡಿ ಮೂಲಕವೂ ರಂಜಿಸಲು ನಿರ್ದೇಶಕರು ಪ್ರಯತ್ನಿಸಿದ್ದಾರೆ. ಆದರೆ ಅದೇಕೋ ಪ್ರೇಕ್ಷಕರು ಮಾತ್ರ ನಿರಾಸೆ ವ್ಯಕ್ತಪಡಿಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News