ಬೆಂಗಳೂರು: ನೈತಿಕತೆ ಎಂಬುದು ಕಾಂಗ್ರೆಸ್ ಡಿಎನ್ಎಯಲ್ಲೇ ಇಲ್ಲ. ಅನೈತಿಕ ಹಾಗೂ ಭ್ರಷ್ಟತೆಯೇ ಕಾಂಗ್ರೆಸ್ ಪಕ್ಷದ ಜೀವಾಳ ಎಂದು ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಸಂಬಂಧ ಕೆ.ಎಸ್.ಈಶ್ವರಪ್ಪ ಬಂಧನಕ್ಕೆ ಆಗ್ರಹಿಸಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಗೆ ಬಿಜೆಪಿ ಕಿಡಿಕಾರಿದೆ.
‘ನೈತಿಕತೆ ಎಂಬುದು ಕಾಂಗ್ರೆಸ್ ಡಿಎನ್ಎಯಲ್ಲೇ ಇಲ್ಲ. ಅನೈತಿಕ ಹಾಗೂ ಭ್ರಷ್ಟತೆಯೇ ಕಾಂಗ್ರೆಸ್ ಪಕ್ಷದ ಜೀವಾಳ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಎಂ.ಬಿ.ಪಾಟೀಲ್, ಜಮೀರ್ ಅಹ್ಮದ್ ಖಾನ್, ಕೆ.ಜೆ.ಜಾರ್ಜ್, ವಿನಯ್ ಕುಲಕರ್ಣಿ, ಆರ್.ವಿ.ದೇಶಪಾಂಡೆ ಮತ್ತು ಬಿ.ಕೆ.ಹರಿಪ್ರಸಾದ್ ಇವರು ನೈತಿಕತೆ ತ್ಯಜಿಸಿದ ಕಾಂಗ್ರೆಸ್ ರಾಜಕಾರಣಿಗಳು’ ಎಂದು ಬಿಜೆಪಿ ಕುಟುಕಿದೆ.
ನೈತಿಕತೆ ಎಂಬುದು ಕಾಂಗ್ರೆಸ್ ಡಿಎನ್ಎಯಲ್ಲೇ ಇಲ್ಲ. ಅನೈತಿಕ ಹಾಗೂ ಭ್ರಷ್ಟತೆಯೇ ಕಾಂಗ್ರೆಸ್ ಪಕ್ಷದ ಜೀವಾಳ.
ನೈತಿಕತೆ ತ್ಯಜಿಸಿದ ಕಾಂಗ್ರೆಸ್ ರಾಜಕಾರಣಿಗಳ ಪಟ್ಟಿ ಇಲ್ಲಿದೆ.
√ಸೋನಿಯಾ ಗಾಂಧಿ
√ ರಾಹುಲ್ ಗಾಂಧಿ
√ ಮಲ್ಲಿಕಾರ್ಜುನ ಖರ್ಗೆ
√ ಸಿದ್ದರಾಮಯ್ಯಮುಂದುವರೆಯುವುದು...#ಅನೈತಿಕಕಾಂಗ್ರೆಸ್
— BJP Karnataka (@BJP4Karnataka) April 15, 2022
ಇದನ್ನೂ ಓದಿ: ಬಿಜೆಪಿಗೆ ಕಾರ್ಯಕರ್ತರೆಂದರೆ ಬಳಸಿ ಬೀಸಾಡುವ #ಟೂಲ್ಕಿಟ್ ಅಷ್ಟೇ: ಕಾಂಗ್ರೆಸ್
‘ದೇಶಕ್ಕೆ ನೈತಿಕತೆಯ ಪಾಠ ಮಾಡುವ ಕಾಂಗ್ರೆಸ್ ಪಕ್ಷದ ನಡುಮನೆಯಲ್ಲೇ ಅನೈತಿಕತೆಯ ಬಿರುಮಳೆ ಸುರಿಯುತ್ತಿದೆ. ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ಪಕ್ಷವನ್ನೇ ದೋಚಿ ಬೇಲ್ ಮೇಲೆ ಅಲೆದಾಡುತ್ತಿರುವ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಿಗೆ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ತಾನು ಕಳ್ಳ ಪರರ ನಂಬ!!!’ ಎಂದು ಟೀಕಿಸಿದೆ.
ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ಅತ್ಯಂತ ನಿಷ್ಪಕ್ಷಪಾತವಾಗಿ ನಡೆಯುತ್ತಿದೆ.
ಇದಕ್ಕಾಗಿ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ. ನೈತಿಕ ಹೊಣೆ ಹೊತ್ತು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದಾರೆ.
ಆದರೆ ಇಂಥ ನೈತಿಕ ವಿಚಾರಗಳ ಪ್ರಶ್ನೆ ಬಂದಾಗ ಕಾಂಗ್ರೆಸ್ ನಡೆದುಕೊಂಡ ರೀತಿಯನ್ನು ನೆನಪಿಸಬೇಕೇ?#ಅನೈತಿಕಕಾಂಗ್ರೆಸ್
— BJP Karnataka (@BJP4Karnataka) April 15, 2022
‘ರಾಜ್ಯಸಭೆಯ ಕಾಂಗ್ರೆಸ್ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ಅಕ್ರಮ ಸಂಪತ್ತಿನ ಬಗ್ಗೆ ಮಾತನಾಡಲು ಹೊರಟರೆ ಅದೊಂದು ಮೆಗಾ ಧಾರವಾಹಿಯಾಗಬಹುದು!!! ನ್ಯಾಶನಲ್ ಹೆರಾಲ್ಡ್ ಪ್ರಕರಣದಲ್ಲಿ ತನಿಖೆ ಎದುರಿಸುತ್ತಿರುವ ಖರ್ಗೆ ಅವರಿಗೆ ರಾಜ್ಯಸಭಾ ವಿಪಕ್ಷ ನಾಯಕನಾಗಿ ಮುಂದುವರಿಯಲು ನೈತಿಕತೆ ಕಾಡುವುದಿಲ್ಲವೇ? ಎಂದು ಪ್ರಶ್ನಿಸಿರುವ ಬಿಜೆಪಿ, ‘ಕೊಲೆಗಾರನಿಗೆ ಕೊಲ್ಲುವ ಉದ್ದೇಶವಿರಲಿಲ್ಲ ಎಂದು ಚಾಕು ಹಿಡಿದವನ ಪರವಾಗಿ ಮಾತನಾಡಿದ್ದ ಜಮೀರ್ ಅಹ್ಮದ್ ಅವರಿಗೆ ನೈತಿಕತೆ ಇರಲಿ, ಕನಿಷ್ಠ ಮಾನವೀಯತೆಯಾದರೂ ಇದೆಯೇ?’ ಎಂದು ಟ್ವೀಟ್ ಮಾಡಿದೆ.
ಇದನ್ನೂ ಓದಿ: ಸರ್ಕಾರದ ಒಂದು ವಿಕೆಟ್ ಅಷ್ಟೇ ಅಲ್ಲ- ತನಿಖೆ ಮಾಡಿದ್ರೆ ಅರ್ಧ ಕ್ಯಾಬಿನೆಟ್ ಖಾಲಿಯಾಗುತ್ತೆ- ಪ್ರಿಯಾಂಕ್ ಖರ್ಗೆ
ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ದೇವರಾಜ್ ಅರಸು, ರಾಮಕೃಷ್ಣ ಹೆಗಡೆಯವರಂಥ ನಾಯಕರು ಕುಳಿತ ಜಾಗದಲ್ಲಿ "ಕದ್ದ ವಾಚು ಕಟ್ಟಿ" ಮೆರೆಯುವಾಗ @siddaramaiah ಅವರಿಗೆ ನೈತಿಕತೆಯ ಪ್ರಶ್ನೆ ಮರೆತು ಹೋಗಿತ್ತೇ?
ಅರ್ಕಾವತಿ ರೀಡು ಪ್ರಕರಣದಲ್ಲಿ ನೂರಾರು ಕೋಟಿ ನುಂಗಿದಾಗ ಎಲ್ಲಿ ಅಡಗಿತ್ತೋ ಆ ನಿಮ್ಮ ಶೌರ್ಯ?#ಅನೈತಿಕಕಾಂಗ್ರೆಸ್ pic.twitter.com/yJbqpqQhdz
— BJP Karnataka (@BJP4Karnataka) April 15, 2022
‘ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ತನಿಖೆ ಅತ್ಯಂತ ನಿಷ್ಪಕ್ಷಪಾತವಾಗಿ ನಡೆಯುತ್ತಿದೆ. ಇದಕ್ಕಾಗಿ ಪ್ರತ್ಯೇಕ ತಂಡ ರಚನೆ ಮಾಡಲಾಗಿದೆ. ನೈತಿಕ ಹೊಣೆ ಹೊತ್ತು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನೂ ನೀಡಿದ್ದಾರೆ. ಆದರೆ ಇಂತಹ ನೈತಿಕ ವಿಚಾರಗಳ ಪ್ರಶ್ನೆ ಬಂದಾಗ ಕಾಂಗ್ರೆಸ್ ನಡೆದುಕೊಂಡ ರೀತಿಯನ್ನು ನೆನಪಿಸಬೇಕೇ?’ ಅಂತಾ ಬಿಜೆಪಿ ಪ್ರಶ್ನಿಸಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.