FedEX: ಫೆಡೆಕ್ಸ್‌ ಕಂಪನಿ ಸಿಇಒ ಸಂಜಾತ ರಾಜ್ ಸುಬ್ರಹ್ಮಣ್ಯಂ: ಭಾರತೀಯರ ಹವಾ ಶುರು

ಪ್ರಸ್ತುತ ಫ್ರೆಡೆರಿಕ್ ಡಬ್ಲ್ಯು ಸ್ಮಿತ್ ಎಂಬವರು ಫೆಡೆಕ್ಸ್ ಅಧ್ಯಕ್ಷ ಹಾಗೂ ಸಿಇಒ ಆಗಿದ್ದು, ಜೂನ್ 1ರ ಬಳಿಕ ಆ ಸ್ಥಾನವನ್ನು ರಾಜ್ ಸುಬ್ರಹ್ಮಣ್ಯಂ ಅಲಂಕರಿಸಲಿದ್ದಾರೆ. 

Written by - Bhavishya Shetty | Last Updated : Apr 25, 2022, 12:49 PM IST
  • ಫೆಡೆಕ್ಸ್‌ನಲ್ಲಿ ಭಾರತೀಯರ ಹವಾ ಶುರು
  • ಕಂಪನಿ ಸಿಇಒ ಆಗಿ ಸಂಜಾತ ರಾಜ್ ಸುಬ್ರಹ್ಮಣ್ಯಂ ನೇಮಕ
  • ಜಗತ್ತಿನಾದ್ಯಂತ 6,00,000 ಉದ್ಯೋಗಿಗಳನ್ನೊಳಗೊಂಡ ಫೆಡೆಕ್ಸ್‌ ಸಂಸ್ಥೆ
FedEX: ಫೆಡೆಕ್ಸ್‌ ಕಂಪನಿ ಸಿಇಒ ಸಂಜಾತ ರಾಜ್ ಸುಬ್ರಹ್ಮಣ್ಯಂ: ಭಾರತೀಯರ ಹವಾ ಶುರು title=
FedEx Transport Company

ನ್ಯೂಯಾರ್ಕ್: ಅಮೆರಿಕದ ಬಹುರಾಷ್ಟ್ರೀಯ ಕೊರಿಯರ್ ಪೂರೈಕೆ ಸಂಸ್ಥೆ ಫೆಡೆಕ್ಸ್‌ನಲ್ಲಿ ಭಾರತೀಯರ ಹವಾ ಶುರುವಾಗಿದೆ. ಈ ಕಂಪನಿಯ ನೂತನ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಭಾರತ ಮೂಲದ ಸಂಜಾತ ರಾಜ್ ಸುಬ್ರಹ್ಮಣ್ಯಂ ನೇಮಕಗೊಂಡಿದ್ದಾರೆ.

ಇದನ್ನು ಓದಿ: OMG Video: ಹುಡುಗಿಯ ತಲೆ ಕೂದಲಿನ ಮಧ್ಯೆ ಬಂತು ಹಾವಿನ ಮರಿ!

ಪ್ರಸ್ತುತ ಫ್ರೆಡೆರಿಕ್ ಡಬ್ಲ್ಯು ಸ್ಮಿತ್ ಎಂಬವರು ಫೆಡೆಕ್ಸ್ ಅಧ್ಯಕ್ಷ ಹಾಗೂ ಸಿಇಒ ಆಗಿದ್ದು, ಜೂನ್ 1ರ ಬಳಿಕ ಆ ಸ್ಥಾನವನ್ನು ರಾಜ್ ಸುಬ್ರಹ್ಮಣ್ಯಂ ಅಲಂಕರಿಸಲಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿರುವ ಸ್ಮಿತ್‌, "ಫೆಡೆಕ್ಸ್‌ ಕಂಪನಿಯನ್ನು ರಾಜ್ ಸುಬ್ರಹ್ಮಣ್ಯಂ ಉತ್ತಮ ರೀತಿಯಲ್ಲಿ ಮುನ್ನಡೆಸುತ್ತಾರೆ ಎಂಬ ಭಾವನೆ ನನಗಿದೆ" ಎಂದಿದ್ದಾರೆ. 

ಇನ್ನು ರಾಜ್‌ ಸುಬ್ರಮಣ್ಯಂ ಅವರು ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು,"ಫ್ರೆಡ್ ಉದ್ಯಮ ಜಗತ್ತಿನ ದಂತಕಥೆ. ಅವರು ವಿಶ್ವದ ಶ್ರೇಷ್ಠ ಮತ್ತು ಅತ್ಯಂತ ಮೆಚ್ಚುಗೆ ಪಡೆದ ಕಂಪನಿಗಳನ್ನು ಸ್ಥಾಪಿಸಿದ್ದಾರೆ. ಜವಾಬ್ದಾರಿಯನ್ನು ವಹಿಸಿಕೊಳ್ಳುವುದು ಮತ್ತು ಅವರು ಕಟ್ಟಿದ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುವುದು ನನ್ನ ಅದೃಷ್ಟ ಎಂದು ಭಾವಿಸುತ್ತೇನೆ" ಎಂದು ಹೇಳಿದ್ದಾರೆ. 

ಫೆಡೆಕ್ಸ್‌ ಸಂಸ್ಥೆ ಜಗತ್ತಿನಾದ್ಯಂತ  6,00,000 ಉದ್ಯೋಗಿಗಳನ್ನು ಹೊಂದಿದೆ. ರಾಜ್ ಸುಬ್ರಹ್ಮಣ್ಯಂ 2020ರಲ್ಲಿ ಫೆಡೆಕ್ಸ್ ನಿರ್ದೇಶಕರ ಮಂಡಳಿಗೆ ಆಯ್ಕೆಯಾಗಿದ್ದರು. ಇದೀಗ ಸಿಇಒ ಆಗಿ ನೇಮಕಗೊಂಡಿದ್ದಾರೆ. 

ಇದನ್ನು ಓದಿ: ವಿದ್ಯಾ ವೋಕ್ಸ್‌ : ʼಲೆಟ್‌ ಮಿ ಲವ್‌ ಯೂʼ ಗಾಯಕಿ ಬಗ್ಗೆ ಇಲ್ಲಿದೆ ಮಾಹಿತಿ

ಸಂಜಾತ ರಾಜ್ ಸುಬ್ರಹ್ಮಣ್ಯಂ ಹಿನ್ನೆಲೆ: 
ಫೆಡೆಕ್ಸ್ ಕಾರ್ಪೋರೇಷನ್ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ನೇಮಕಗೊಳ್ಳುವ ಮುನ್ನ ರಾಜ್‌ ಸುಬ್ರಹ್ಮಣ್ಯಂ ಅವರು ಫೆಡೆಕ್ಸ್ ಎಕ್ಸ್ ಪ್ರೆಸ್‌ನ ಅಧ್ಯಕ್ಷ ಹಾಗೂ ಸಿಇಒ ಆಗಿದ್ದರು. ಇದು ಜಗತ್ತಿನ ಅತೀದೊಡ್ಡ ಎಕ್ಸ್‌ಪ್ರೆಸ್ ಸಾರಿಗೆ ಸಂಸ್ಥೆಯಾಗಿದೆ. ಸುಬ್ರಹ್ಮಣ್ಯಂ ಫೆಡೆಕ್ಸ್ ಕಾರ್ಪೋರೇಷನ್ ಉಪಾಧ್ಯಕ್ಷ, ಮುಖ್ಯ ಮಾರ್ಕೆಟಿಂಗ್ ಹಾಗೂ ಸಂವಹನ ಅಧಿಕಾರಿಯಾಗಿ ಕೂಡ ಕಾರ್ಯನಿರ್ವಹಿಸಿದ್ದರು. ಇನ್ನು 1991ರಲ್ಲಿ ಫೆಡೆಕ್ಸ್‌ಗೆ ಸೇರ್ಪಡೆಗೊಂಡ ಅವರು ಬಳಿಕ ಕೆನಡಾದಲ್ಲಿ ಫೆಡೆಕ್ಸ್ ಎಕ್ಸ್ ಪ್ರೆಸ್ ಅಧ್ಯಕ್ಷರಾಗಿ ಹಾಗೂ  ಏಷ್ಯಾ-ಅಮೆರಿಕದಲ್ಲಿ ಅನೇಕ ನಿರ್ವಹಣಾ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. 

54 ವರ್ಷದ ಸುಬ್ರಹ್ಮಣ್ಯಂ ಮೂಲತಃ ಕೇರಳದ ತಿರುವನಂತಪುರದವರಾಗಿದ್ದು, ಐಐಟಿ ಬಾಂಬೆಯಿಂದ ಕೆಮಿಕಲ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಆ ಬಳಿಕ ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News