ಬೆಂಗಳೂರು : Diabetes Dehydration Symptom: ಮಧುಮೇಹ ರೋಗಿಗಳು ತಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಬೇಕಾಗುತ್ತದೆ. ಡಯಾಬಿಟೀಸ್ ರೋಗಿಗಳು ಮೊದಲೇ ಔಷಧಿಗಳನ್ನು ತೆಗೆದುಕೊಳ್ಳುತ್ತಿರುತ್ತಾರೆ. ಇದರ ಜೊತೆಗೆ ಮತ್ತೆ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ದೇಹದಲ್ಲಿ ನೀರಿನ ಕೊರತೆಯಾದರೂ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಈಗ ಬೇಸಿಗೆ ಬೇರೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ದೇಹದಲ್ಲಿ ನೀರಿನ ಕೊರತೆಯಾಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ನಿಮ್ಮ ದೇಹದಲ್ಲಿ ನೀರಿನ ಕೊರತೆ ಉಂಟಾದಾಗ ದೇಹ ನೀಡುವ ಸೂಚನೆಗಳು ಯಾವುವು ನೋಡೋಣ .
ನೀರಿನ ಕೊರತೆಯಿಂದಾಗಿ ನಿರ್ಜಲೀಕರಣ ಉಂಟಾಗುತ್ತದೆ :
ಮಧುಮೇಹ ರೋಗಿಗಳ ದೇಹದಲ್ಲಿ ನೀರಿನ ಕೊರತೆಯಾದರೆ, ಅನೇಕ ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ದೇಹದಲ್ಲಿ ನೀರಿನ ಕೊರತೆ ಉಂಟಾಗುವುದಕ್ಕು ಅನೇಕ ಕಾರಣಗಳಿವೆ.
ಇದನ್ನೂ ಓದಿ : Health Tips: ಮೊಸರಿನ ಜೊತೆ ಈ ಆಹಾರ ಸೇವಿಸಲೇಬೇಡಿ
ನಿರ್ಜಲೀಕರಣ ಏಕೆ ಸಂಭವಿಸುತ್ತದೆ?
ಮೊದಲನೆಯದಾಗಿ, ಕಡಿಮೆ ನೀರು ಕುಡಿಯುವ ಅಭ್ಯಾಸದಿಂದಾಗಿ, ದೇಹದಲ್ಲಿ ನಿರ್ಜಲೀಕರಣವು ಪ್ರಾರಂಭವಾಗುತ್ತದೆ. ರೋಗಿಗಳ ದೇಹದಲ್ಲಿ ನೀರಿನ ಕೊರತೆಯೇ ಇದಕ್ಕೆ ಕಾರಣ. ಇದೇ ಕಾರಣಕ್ಕಾಗಿ ದಿನವಿಡೀ ಕನಿಷ್ಠ 7ರಿಂದ 8 ಗ್ಲಾಸ್ ನೀರನ್ನು ಕುಡಿಯಬೇಕು.
ಅನೇಕ ಬಾರಿ ರೋಗಿಗಳ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚುತ್ತಲೇ ಇರುತ್ತದೆ. ಇದರಿಂದಾಗಿ ನಿರ್ಜಲೀಕರಣದ ಸಮಸ್ಯೆಯೂ ಉಂಟಾಗುತ್ತದೆ. ಹಾಗಾಗಿ ಡಯಾಬಿಟೀಸ್ ರೋಗಿಗಳು ಈ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.
ನಿರ್ಜಲೀಕರಣಕ್ಕೆ ಕಳಪೆ ಆಹಾರ ಸೇವನೆಯೂ ಕಾರಣವಾಗಿರಬಹುದು. ಆದ್ದರಿಂದ, ರೋಗಿಗಳು ತಮ್ಮ ಆಹಾರದ ಬಗ್ಗೆ ವಿಶೇಷ ಗಮನ ಹರಿಸಬೇಕು. ಇದರಿಂದ ನಿಮ್ಮ ದೇಹವು ಯಾವುದೇ ರೀತಿಯಲ್ಲಿ ನಿರ್ಜಲೀಕರಣಗೊಳ್ಳುವುದಿಲ್ಲ.
ಇದನ್ನೂ ಓದಿ : ಕಣ್ಣಿನ ಸುತ್ತ ಕಾಡುವ ಡಾರ್ಕ್ ಸರ್ಕಲ್ಗೆ ಇಲ್ಲಿದೆ ಸುಲಭ ಪರಿಹಾರ
ನಿರ್ಜಲೀಕರಣದ 5 ದೊಡ್ಡ ಲಕ್ಷಣಗಳು :
1. ನೀವು ತುಂಬಾ ಬಾಯಾರಿಕೆಯಾಗುವುದರ ಜೊತೆಗೆ ಪದೇ ಪದೇ ಶೌಚಾಲಯಕ್ಕೆ ಹೋಗುತ್ತಿದ್ದರೆ ಸಮಸ್ಯೆ ಹೆಚ್ಚಾಗುತ್ತದೆ. ಇದು ನಿಮ್ಮ ಆರೋಗ್ಯವನ್ನು ಮತ್ತಷ್ಟು ಬಿಗಡಾಯಿಸುತ್ತದೆ. ಏಕೆಂದರೆ ಆಗಾಗ ಶೌಚಾಲಯಕ್ಕೆ ಹೋಗುವುದರಿಂದ ನಿಮ್ಮ ದೇಹದಲ್ಲಿ ನೀರಿನ ಕೊರತೆಯನ್ನು ಉಂಟುಮಾಡಬಹುದು.
2. ಸುಸ್ತಾಗುವುದು ಇನ್ನೊಂದು ಲಕ್ಷಣ. ಏನೂ ಕೆಲಸ ಮಾಡದಿದ್ದರೂ ಸುಸ್ತಾಗುತ್ತಿದ್ದರೆ, ಈ ಬಗ್ಗೆ ಎಚ್ಚ್ಗರ ವಹಿಸಿ. ಇದು ದೇಹದಲ್ಲಿ ನೀರಿನ ಕೊರತೆಯಾಗಿರುವ ಸಂಕೇತವಾಗಿರಬಹುದು.
3. ಇದಲ್ಲದೇ ಕೈಕಾಲು ಮರಗಟ್ಟಿದಂತಾಗುತ್ತಿದ್ದರೆ ಕೂಡಾ ಎಚ್ಚರದಿಂದಿರಬೇಕು. ಏಕೆಂದರೆ ಇದರಿಂದ ನಿಮ್ಮ ಸಮಸ್ಯೆಯೂ ಇನ್ನೂ ಹೆಚ್ಚಾಗಬಹುದು.
4. ತೂಕ ಕಡಿಮೆಯಾಗುವುದು ಅಥವಾ ಹೆಚ್ಚಾಗುವುದು ಕೂಡ ದೇಹದಲ್ಲಿ ನೀರಿನ ಕೊರತೆಯ ಸಂಕೇತವಾಗಿರಬಹುದು. ಇದನ್ನೂ ಕಡೆಗಣಿಸಬೇಡಿ.
5. ಕೆಲವೊಮ್ಮೆ ಡಯಾಬಿಟೀಸ್ ರೋಗಿಗಳ ದೃಷ್ಟಿ ಮಂದವಾಗುತ್ತದೆ. ದೃಷ್ಟಿ ಮಂದವಾಗುತ್ತಿರುವಂತೆ ಅನಿಸಿದರೆ ಖಂಡಿತವಾಗಿಯೂ ನಿಮ್ತಕ್ಷಣ ವೈದ್ಯರನ್ನು ಸಂಪರ್ಕಿಸಿ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ಖಂಡಿತವಾಗಿಯೂ ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.