ಚಾಮರಾಜನಗರ: ಮನುಷ್ಯನನ್ನೇ ಬಲಿ ಕೊಡುವ ನರಬಲಿ ಹಬ್ಬ ಚಾಮರಾಜ ನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಸೋಮವಾರ ಮಧ್ಯರಾತ್ರಿಯಿಂದ ಇಂದು ಬೆಳಗ್ಗೆವರೆಗೆ ನಡೆಸಿದೆ. ಈ ಹಬ್ಬದ ಆಚರಣೆಯಲ್ಲಿ 7-8 ತಾಸು ಮೃತಪಟ್ಟಿದ್ದ ವ್ಯಕ್ತಿ ಮತ್ತೇ ಮರಳಿ ಜೀವ ಪಡೆಯುತ್ತಾನೆ ಎಂಬುದು ಇಲ್ಲಿನ ಜನರ ವಿಚಿತ್ರ ಹಾಗೂ ನಂಬಿಕೆಗೆ ನಿಲುಕದ ವಿಶಿಷ್ಟ ಆಚರಣೆಯಾಗಿದೆ.
19 ವರ್ಷಗಳ ಬಳಿಕ ಹಬ್ಬವು ಗ್ರಾಮದಲ್ಲಿ ನಡೆದಿದ್ದು ವ್ಯಕ್ತಿ 7-8 ತಾಸು ಉಸಿರಾಟ ನಿಲ್ಲಿಸಿ ಮತ್ತೇ ಬದುಕುತ್ತಾನೆಂಬ ನಂಬಿಕೆ ಇಲ್ಲಿನ ಜನರದ್ದಾಗಿದ್ದು ಮೇಲ್ನೋಟಕ್ಕೆ ವ್ಯಕ್ತಿ ಜೀವ ಕಳೆದುಕೊಂಡು ತಾಸುಗಟ್ಟಲೇ ಬಳಿಕ ಮತ್ತೇ ಬದುಕಿಬಂದಂತೆ ಕಂಡುಬಂದಿದೆ.
ಹೇಗೆ ನಡೆಯಿತು ಬಲಿ ಹಬ್ಬ:
ಪಾಳ್ಯ ಗ್ರಾಮದಲ್ಲಿ 19 ವರ್ಷಗಳ ಬಳಿಕ ಸೀಗಮಾರಮ್ಮನ ಬಲಿ ಹಬ್ಬ ಎಂಬ ಆಚರಣೆ ನಡೆದಿದ್ದು ವ್ಯಕ್ತಿಯೊಬ್ಬರ ಪ್ರಾಣಪಕ್ಷಿ ಹಾರಿಹೋಗಿ ಬರೋಬ್ಬರಿ 9 ತಾಸು ಬಳಿಕ ಮತ್ತೇ ಬದುಕಿ ಬಂದಿದ್ದಾರೆ ಎಂಬುದು ಜನರ ನಂಬಿಕೆ. ಕಳೆದ 24ರಂದು ಈ ಗ್ರಾಮದೇವತೆ ಹಬ್ಬಕ್ಕೆ ಚಾಲನೆ ಸಿಕ್ಕಿದ್ದು ಇಂದು ನರಬಲಿ ಆಚರಣೆ ನಡೆದಿದೆ.
ಇದನ್ನೂ ಓದಿ- ವೈರಲ್ ವಿಡಿಯೋ: ಮಹಿಳೆಯ ಆತ್ಮ ಆಕೆಯ ದೇಹದಿಂದ ಹೊರಬಂದಾಗ...
ಸೀಗಮಾರಮ್ಮನ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಐದು ಮಂದಿಯ ತಂಡವು ಬಾವಿಯೊಂದಕ್ಕೆ ಪೂಜೆ ಸಲ್ಲಿಸಿ ತಾಮ್ರದ ಕೊಡದಲ್ಲಿ ನೀರನ್ನು ಕುಣಿಯುತ್ತ ತರುವ ವೇಳೆ ದೇವಿಯ ಮುಖವಾಡ ಮೆರವಣಿಗೆ, ಹೆಬ್ರ ಬಡಿದು ಬರುವ ತಂಡ ಮುಖಾಮುಖಿಯಾಯಿತು.
ಆ ವೇಳೆ ಬಲಿಯಾಗುವ ವ್ಯಕ್ತಿ ' ಕುರಿಸಿದ್ದ ನಾಯಕ' ಎಂಬವರ ಮೇಲೆ ಅರ್ಚಕರು ಮಂತ್ರಾಕ್ಷತೆ ಎಸೆದು ಅವರ ಎದೆ ಮೇಲೆ ಕಾಲಿಡುತ್ತಿದ್ದಂತೆ ಪ್ರಜ್ಞೆ ಕಳೆದುಕೊಂಡು ಬಿದ್ದರು. ಇದನ್ನೇ ಬಲಿ ಎಂದು ಕರೆಯಲಿದ್ದು ಆ ವ್ಯಕ್ತಿ ಸತ್ತಿರುತ್ತಾನೆ ಎಂಬುದು ಜನರ ನಂಬಿಕೆ.
ಇನ್ನು, ಆತನನ್ನು ಬಲಿ ಮನೆ ಎಂಬಲ್ಲಿ ಬರೋಬ್ಬರಿ 8 ತಾಸು ಇಟ್ಟಿದ್ದು ಆತನಿಗೆ ಅರಿಸಿನ ಲೇಪಿಸಲಾಗಿತ್ತು, ಕೈ-ಕಾಲು ಚಲನೆ ಇರಲಿಲ್ಲ, ಉಸಿರಾಟವೂ ಇರಲಿಲ್ಲ ಎನ್ನಲಾಗಿದೆ. ಇಂದು 5 ರ ಸುಮಾರಿಗೆ ಶವದ ಮೆರವಣಿಗೆ ನಡೆಸಿದ್ದು ನಾಲ್ವರು ಆತನನ್ನು ಮೇಲಕ್ಕೆ ತೂರಿಕೊಂಡೇ ಮೆರವಣಿಗೆ ನಡೆಸಿ ದೇವಾಲಯದತ್ತ ಮೃತದೇಹ ತಂದಿಟ್ಟಾಗ ಅರ್ಚಕರು ತೀರ್ಥ ಪ್ರೋಕ್ಷಿಸಿದ ನಂತರ ಆ ವ್ಯಕ್ತಿಗೆ ಮರುಜೀವ ಬಂದಿದೆ ಎಂಬುದು ಗ್ರಾಮಸ್ಥರ ನಂಬಿಕೆ.
ಇದನ್ನೂ ಓದಿ- Viral Video: ರಸ್ತೆಮಧ್ಯೆ ಕೆಟ್ಟು ನಿಂತ ಪೊಲೀಸ್ ವ್ಯಾನ್.. ಸಾರ್ವಜನಿಕರಿಂದ ತಳ್ಳು-ಐಸಾ ತಳ್ಳು-ಐಸಾ!!
ಪ್ರತಿ 3 ವರ್ಷಕ್ಕೊಮ್ಮೆ ನಡೆಯುತ್ತಿದ್ದ ಈ ನರಬಲಿ ಆಚರಣೆ ಕೆಲ ಕಾರಣಗಳಿಂದ ನಿಂತು ಹೋಗಿ 19 ವರ್ಷದ ಬಳಿಕ ನಡೆದಿದ್ದು ಹಬ್ಬವು ನಿರಂತರ ಒಂದು ತಿಂಗಳಕಾಲ ನಡೆದಿದೆ. ಈ ದಿನಗಳಲ್ಲಿ ಯಾರೋಬ್ಬರು ಮಾಂಸಹಾರ ಸೇವಿಸದೇ, ಸೀಗೆಮಾರಮ್ಮನ ಒಕ್ಕಲಿನವರು ಹೋಟೆಲ್ ಗಳಲ್ಲಿ ತಿನ್ನದೇ, ಒಗ್ಗರಣೆ ಹಾಕಿದ ಆಹಾರ ಸೇವಿಸದೇ ತೀವ್ರ ಕಟ್ಟುಪಾಡಿನಿಂದ ಆಚರಣೆ ನಡೆಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.