ಬೆಂಗಳೂರು : ಬೇಸಿಗೆಯಲ್ಲಿ ದೇಹವನ್ನು ತಂಪಾಗಿಡಲು ಜನರು ಅನೇಕ ಪದಾರ್ಥಗಳನ್ನು ತಿನ್ನುತ್ತಾರೆ ಅಥವಾ ಕುಡಿಯುತ್ತಾರೆ. ಈ ಋತುವಿನಲ್ಲಿ ಮೊಸರಿನ ಬಳಕೆ ಅಧಿಕವಾಗಿರುತ್ತದೆ. ಮೊಸರೂ, ಮಜ್ಜಿಗೆ, ಲಸ್ಸಿ, ಹೀಗೆ ಬೇರೆ ಬೇರೆ ರೀತಿಯಲ್ಲಿ ಮೊಸರನ್ನು ಸೇವಿಸಲಾಗುತ್ತದೆ. ಬೇಸಿಗೆಯಲ್ಲಿ ಮೊಸರು ಸೇವಿಸುವುದು ಆರೋಗ್ಯಕ್ಕೆ ಬಹಳ ಲಾಭದಾಯಕವಗಿರುತ್ತದೆ. ಆದರೆ ಮೊಸರನ್ನು ಕೆಲವೊಂದು ಆಹಾರಗಳ ಜೊತೆಗೆ ಅಥವಾ ನಂತರ ಸೇವಿಸಬಾರದು. ಇದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಲಿದೆ.
ಮಾವಿನ ಹಣ್ಣಿನೊಂದಿಗೆ ಮೊಸರು ತಿನ್ನಬಾರದೇ? :
ಬೇಸಿಗೆಯಲ್ಲಿ ಮಾವಿನಹಣ್ಣು ಮತ್ತು ಹಾಲಿನೊಂದಿಗೆ ಮಾಡಿದಮ್ಯಾಂಗೋ ಶೇಕ್ ಕುಡಿಯುವುದೆಂದರೆ ಬಹಳಷ್ಟು ಜನರಿಗೆ ಇಷ್ಟ. ಆದರೆ ಮೊಸರು ಬೆರೆಸಿದ ಮಾವಿನಹಣ್ಣನ್ನು ತಿನ್ನುವುದು ಅಥವಾ ಮಾವಿನ ಹಣ್ಣು ತಿಂದ ನಂತರ ಮೊಸರು ತಿನ್ನುವುದರಿಂದ ಆರೋಗ್ಯ ಹದಗೆಡುತ್ತದೆ.
ಇದನ್ನೂ ಓದಿ : Diabetes: ಅಡುಗೆಮನೆಯಲ್ಲಿರುವ ಈ ವಸ್ತುವಿನಿಂದ ಬ್ಲಡ್ ಶುಗರ್ ಅನ್ನು ಸುಲಭವಾಗಿ ನಿಯಂತ್ರಿಸಬಹುದು
ಈ ಬೇಳೆಯೊಂದಿಗೆ ಮೊಸರು ತಿನ್ನಬಾರದು :
ಮೊಸರು ಮತ್ತು ಉದ್ದಿನಬೇಳೆಯನ್ನು ಒಟ್ಟಿಗೆ ತಿನ್ನುವುದು ಹಾನಿಕಾರಕ. ಇದರಿಂದ ದೇಹದಲ್ಲಿ ಅಸಿಡಿಟಿ, ಹೊಟ್ಟೆ ಉಬ್ಬುವುದು, ಲೂಸ್ ಮೋಷನ್ ಇತ್ಯಾದಿ ಸಮಸ್ಯೆಗಳು ಉದ್ಭವಿಸಬಹುದು. ಮೊಸರು ಮತ್ತು ಉದ್ದಿನ ಬೇಳೆಯಿಂದ ಮಾಡಿದ ವಸ್ತುಗಳನ್ನು ತಿನ್ನುವಾಗ ನಡುವೆ ಸ್ವಲ್ಪ ಅಂತರವಿರಲಿ.
ಮೀನು ಮತ್ತು ಮೊಸರನ್ನು ಒಟ್ಟಿಗೆ ತಿನ್ನಬೇಡಿ :
ಮೊಸರು ಮತ್ತು ಮೀನನ್ನು ಒಟ್ಟಿಗೆ ತಿನ್ನಬಾರದು ಎಂದು ತಜ್ಞರು ಹೇಳುತ್ತಾರೆ. ಇದನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಹಲವಾರು ರೀತಿಯಲ್ಲಿ ಹಾನಿಯುಂಟಾಗುತ್ತದೆ. ಮೊಸರು ಮತ್ತು ಮೀನನ್ನು ಒಟ್ಟಿಗೆ ತಿಂದರೆ ಅಜೀರ್ಣ ಮತ್ತು ಹೊಟ್ಟೆ ನೋವಿನಂತಹ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಇದನ್ನೂ ಓದಿ : Fenugreek Seed Benefits: ಮೆಂತೆ ಕಾಳುಗಳ ಸೇವನೆಯಿಂದಾಗುವ ಈ ಅದ್ಭುತ ಲಾಭ ನಿಮಗೆ ತಿಳಿದಿದೆಯೇ?
ಮೊಸರು ಅನೇಕ ಪ್ರಯೋಜನಗಳನ್ನು ನೀಡುತ್ತದೆ :
ಕೆಲವು ಪದಾರ್ಥಗಳೊಂದಿಗೆ ಮೊಸರನ್ನು ಬೆರೆಸಿ ತಿನ್ನುವುದರಿಂದ ಉಂಟಾಗುವ ಹಾನಿಯನ್ನು ಬದಿಗಿಟ್ಟರೆ, ಅದು ನಿಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಮೊಸರು ತಿನ್ನುವುದರಿಂದ ದೇಹದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಇದಲ್ಲದೆ, ಇದು ಹಲ್ಲು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಜೊತೆಗೆ ಹೃದಯವನ್ನು ಕೂಡಾ ಆರೋಗ್ಯವಾಗಿಡುತ್ತದೆ.
(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.