Fake News Alert: ಆಲಿಯಾ ಗರ್ಭದಿಂದ ಸುಶಾಂತ್ ಸಿಂಗ್ ರಜಪೂತ್ ಪುನರ್ಜನ್ಮ, ಜೀ ನ್ಯೂಸ್ ಹೆಸರಿನಲ್ಲಿ ಹರಿದಾಡುತ್ತಿದೆ ಸುಳ್ಳು ಸುದ್ದಿ

ಜೀ ನ್ಯೂಸ್ ಹೆಸರನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಕ್ರೀನ್ ಶಾಟ್ ಶೇರ್ ಮಾಡುತ್ತಿರುವ ಫೋಟೋದಲ್ಲಿ ಆಲಿಯಾ ಭಟ್ ಮಗುವಿನ ರೂಪದಲ್ಲಿ ಸುಶಾಂತ್ ಪುನರ್ಜನ್ಮ ಎಂದು ಬರೆಯಲಾಗಿದೆ. 

Written by - Zee Kannada News Desk | Last Updated : Jun 30, 2022, 10:37 AM IST
  • ಜೀ ನ್ಯೂಸ್ ಹೆಸರಿನ ದುರ್ಬಳಕೆ
  • ಜೀ ನ್ಯೂಸ್ ಹೆಸರನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಶೇರ್
  • ಜೀ ನ್ಯೂಸ್‌ಗೂ ಶೇರ್ ಆಗುತ್ತಿರುವ ಸ್ಕ್ರೀನ್ ‌ಶಾಟ್‌ಗೂ ಯಾವುದೇ ಸಂಬಂಧವಿಲ್ಲ
Fake News Alert: ಆಲಿಯಾ ಗರ್ಭದಿಂದ ಸುಶಾಂತ್ ಸಿಂಗ್ ರಜಪೂತ್ ಪುನರ್ಜನ್ಮ, ಜೀ ನ್ಯೂಸ್ ಹೆಸರಿನಲ್ಲಿ ಹರಿದಾಡುತ್ತಿದೆ ಸುಳ್ಳು ಸುದ್ದಿ  title=
Fake News Alert on Sushant Singh Rajput and Alia Bhatt pregnancy (file photo)

ನವದೆಹಲಿ : ಚಲನಚಿತ್ರ ನಟಿ ಆಲಿಯಾ ಭಟ್ ಗರ್ಭಧಾರಣೆಯ ಸುದ್ದಿ ಇತ್ತೀಚಿನ ದಿನಗಳಲ್ಲಿ ಭಾರೀ ಸದ್ದು ಮಾಡಿದೆ. ಆಲಿಯಾ ಭಟ್ ಮತ್ತು ನಟ ರಣಬೀರ್ ಕಪೂರ್ 2 ತಿಂಗಳ ಹಿಂದೆ ಮದುವೆಯಾಗಿದ್ದರು. ಇದೀಗ ಆಲಿಯಾ ತಾಯಿಯಾಗುತ್ತಿರುವ ಸುದ್ದಿ ಮುನ್ನಲೆಗೆ ಬಂದಿದೆ. ಈ ಸುದ್ದಿಯನ್ನು ಆಲಿಯಾ ಸಾಮಾಜಿಕ ಮಾಧ್ಯಮದಲ್ಲಿ ಹಂಚಿ ಕೊಂಡಿದ್ದರು.  ಇದಾದ ನಂತರ ಕೆಲವು ಕಿಡಿಗೇಡಿಗಳು ಈ ಸುದ್ದಿಯನ್ನು ಸುಶಾಂತ್ ಸಿಂಗ್ ರಜಪೂತ್ ಅವರ ಪುನರ್ಜನ್ಮದೊಂದಿಗೆ ಜೋಡಿಸಲು ಪ್ರಯತ್ನಿಸಿದ್ದಾರೆ. ಇದಕ್ಕಾಗಿ ಜೀ ನ್ಯೂಸ್ ಹೆಸರನ್ನು ಬಳಸಲಾಗಿದೆ. ಜೀ ನ್ಯೂಸ್ ಹೆಸರನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಿರುವ ಫೋಟೋದಲ್ಲಿ ಆಲಿಯಾ ಭಟ್ ಮಗುವಿನ ರೂಪದಲ್ಲಿ ಸುಶಾಂತ್ ಪುನರ್ಜನ್ಮ ಎಂದು ಬರೆಯಲಾಗಿದೆ. 

ಜೀ  ನ್ಯೂಸ್‌ಗೂ ಶೇರ್ ಆಗುತ್ತಿರುವ ಸ್ಕ್ರೀನ್ ‌ಶಾಟ್‌ಗೂ ಯಾವುದೇ ಸಂಬಂಧವಿಲ್ಲ :
ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸ್ಕ್ರೀನ್‌ಶಾಟ್‌ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಫೋಟೋ ಮತ್ತು ಜೀ ನ್ಯೂಸ್ ಲೋಗೋ ಇದೆ. ಆದರೆ Zee News ಗೂ ಈ ಸ್ಕ್ರೀನ್‌ಶಾಟ್‌ಗೂ ಯಾವುದೇ ಸಂಬಂಧವಿಲ್ಲ. ಜೀ ನ್ಯೂಸ್ ಅಂತಹ ಯಾವುದೇ ಕಾರ್ಯಕ್ರಮವನ್ನು ಪ್ರಸಾರ ಮಾಡಿಲ್ಲ. ಇದು ಸಂಪೂರ್ಣ ನಕಲಿ ಸ್ಕ್ರೀನ್‌ಶಾಟ್ ಆಗಿರುತ್ತದೆ.  ಯಾವುದೋ ದುರುದ್ದೇಶದಿಂದ ಫೋಟೋಶಾಪ್ ಸಹಾಯದಿಂದ ಇದನ್ನು ಮಾಡಲಾಗಿದೆ.

ಇದನ್ನೂ ಓದಿ : ಮುಹೂರ್ತ ಮುಗಿಸಿದ ವಿಭಿನ್ನ ಶೀರ್ಷಿಕೆಯ ಇನ್ನಿಲ್ಲ ಸೂರಿ ಸಿನಿಮಾ..!

ನಕಲಿ ಸ್ಕ್ರೀನ್‌ಶಾಟ್‌ : 

ನಕಲಿ ಸ್ಕ್ರೀನ್‌ಶಾಟ್‌ಗಳನ್ನು ನಂಬಬೇಡಿ :
ಈ ನಕಲಿ ಸ್ಕ್ರೀನ್‌ಶಾಟ್  ನಲ್ಲಿ ಜೀ ನ್ಯೂಸ್ ನ ಯಾವ ಕಾರ್ಯಕ್ರಮದ ಫೋಟೋ ಬಳಸಲಾಗಿದೆಯೋ ಆ ಶೋವನ್ನು ಬಹಳ ಹಿಂದೆಯೇ ನಿಲ್ಲಿಸಲಾಗಿದೆ. ಇದೊಂದು ಸಂಪೂರ್ಣ ಸುಳ್ಳು ಸುದ್ದಿಯಾಗಿದ್ದು,  ಜೀ  ನ್ಯೂಸ್‌ಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ.

ಇದನ್ನೂ ಓದಿ : BS Avinash car accident : ಕೆಜಿಎಫ್ ನಟ ಆ್ಯಂಡ್ರೂಸ್ ಕಾರು ಅಪಘಾತ!

 

 ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News