ಗೂಡ್ ಶೆಡ್ ರಸ್ತೆಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಪೂರ್ಣ- ವಾಹನ ಸಂಚಾರಕ್ಕೆ ಮುಕ್ತ

Written by - Manjunath Hosahalli | Edited by - Manjunath N | Last Updated : Jul 8, 2022, 10:54 PM IST
  • ಕಾಮಗಾರಿಯ ಮೂಲ ಯೋಜನೆಯಲ್ಲಿ ಒಳಚರಂಡಿ ಮತ್ತು ನೀರಿನ ಕೊಳವೆಗಳನ್ನು ಅಳವಡಿಸುವ ಪ್ರಸ್ತಾವನೆ ಇರಲಿಲ್ಲ.
ಗೂಡ್ ಶೆಡ್ ರಸ್ತೆಯಲ್ಲಿ ವೈಟ್‌ಟಾಪಿಂಗ್ ಕಾಮಗಾರಿ ಪೂರ್ಣ- ವಾಹನ ಸಂಚಾರಕ್ಕೆ ಮುಕ್ತ title=

ಬೆಂಗಳೂರು- ನಗರದ 1.31 ಕಿ.ಮೀ ಉದ್ದದ ಗೂಡ್ ಶೆಡ್(ಡಾ|| ಟಿ.ಸಿ.ಎಮ್. ರಾಯನ್)ರಸ್ತೆಯಲ್ಲಿ ಕೈಗೆತ್ತಿಕೊಂಡಿದ್ದ ವೈಟ್‌ಟಾಪಿಂಗ್ ಕಾಮಗಾರಿಯನ್ನು ಸಂಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

ನಗರದ ಗೂಡ್ ಶೆಡ್  ರಸ್ತೆಯಲ್ಲಿ ವೈಟ್‌ಟಾಪಿಂಗ್ ಅಳವಡಿಸಲು ಸರ್ಕಾರದಿಂದ ಅನುಮೋದನೆ ಅಗಿದ್ದು ಸದರಿ ರಸ್ತೆಯಲ್ಲಿ ಮೊದಲನೆಯ ಹಂತದಲ್ಲಿ ಡಾ||ಭಾಲಗಂಗಾಧರನಾಥ ಸ್ವಾಮೀಜಿ ಪ್ಲೈ ಒವರ್ ಡೌನ್ ರ‍್ಯಾಂಪ್ ನಿಂದ ಬೇಲಿ ಮಠ ರಸ್ತೆವರೆಗೆ 550 ಮೀಟರ್ ಉದ್ದಕ್ಕೆ ಕಾಮಗಾರಿ ಪ್ರಾರಂಭಿಸಲು ಉಲ್ಲೇಖ(1)ರಂತೆ ಪೋಲಿಸ್(ಸಂಚಾರ)ರವರಿಂದ ಅನುಮತಿ ಪಡೆದು ಕಾಮಗಾರಿ ಪ್ರಾರಂಭಿಸಲಾಗಿತ್ತು.ಕಾಮಗಾರಿಯ ಮೂಲ ಯೋಜನೆಯಲ್ಲಿ ಒಳಚರಂಡಿ ಮತ್ತು ನೀರಿನ ಕೊಳವೆಗಳನ್ನು ಅಳವಡಿಸುವ ಪ್ರಸ್ತಾವನೆ ಇರಲಿಲ್ಲ.

ಇದನ್ನೂ ಓದಿ: ಸ್ಯಾಂಡಲ್‌ವುಡ್‌ ಅಂಗಳದಲ್ಲಿ ಹೊಸ 'ಹೋಪ್'..!‌ ಇದು ಸ್ನೂಕರ್ ಪಟು ಚೊಚ್ಚಲ ಕನಸು..!

ಕಾಮಗಾರಿಯನ್ನು ಪ್ರಾರಂಭಿಸಿದ ನಂತರ ಸ್ಥಳೀಯರ ಹಾಗೂ ಜಲಮಂಡಳಿಯ ಕೋರಿಕೆಯಂತೆ ಹೆಚ್ಚುವರಿ ಒಳಚರಂಡಿ ಮತ್ತು ನೀರಿನ ಕೊಳವೆಗಳನ್ನು ಅಳವಡಿಸಲು ಅಗೆತದ ಕಾಮಗಾರಿಯ ಸಮಯದಲ್ಲಿ ಗಟ್ಟಿ ಬಂಡೆ ಅಡ್ಡಬಂದಿದ್ದರಿಂದ ಹಾಗೂ ಕಳೆದ ವರ್ಷದ ಆಗಸ್ಟ್ ನಿಂದ ನವೆಂಬರ್ ವರೆಗೂ ನಗರದಲ್ಲಿ ಹೆಚ್ಚು ಮಳೆಯಾದುದರಿಂದ ಮತ್ತು ಬೃಹತ್ ಮಳೆ ನೀರುಗಾಲುವೆ ಕಾಮಗಾರಿಯನ್ನೂ ಸಹ ಕೈಗೊಂಡಿದ್ದರಿಂದ ಈ ಭಾಗದಲ್ಲಿ ತುಸು ವಿಳಂಬವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ ಸ್ಥಳೀಯ ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.No description available.

ಇದನ್ನೂ ಓದಿ: Humanity Story: ಮಾನವೀಯತೆ ಮೆರೆದ PSI ಅನಿತಾಲಕ್ಷ್ಮೀ

ಈ ರಸ್ತೆಯ ಉಳಿದ ಭಾಗದಲ್ಲಿ ಬೇಲಿ ಮಠ ರಸ್ತೆಯಿಂದ ಶಾಂತಲಾ ಸಿಲ್ಕ್ ವೃತ್ತದವರೆಗೆ 760 ಮೀಟರ್ ಉದ್ದಕ್ಕೆ ವೈಟ್ ಟಾಪಿಂಗ್ ಅಳವಡಿಸಲು ಮೇ ತಿಂಗಳಲ್ಲಿ ಅನುಮತಿಯನ್ನು ನೀಡಿದ್ದು, ಒಳಚರಂಡಿ ಕೊಳವೆಗಳು, ನೀರಿನ ಕೊಳವೆಗಳು, ಬೆಸ್ಕಾಂ ಉಪಯುಕ್ತತೆಗಳನ್ನು ಅಳವಡಿಸಲು ಡಕ್ಟ್ಗಳ ನಿರ್ಮಾಣ ಒಳಗೊಂಡಂತೆ ಕ್ಯಾರೇಜ್‌ವೇ ಕಾಮಗಾರಿಯನ್ನು 30 ಕೆಲಸದ ದಿನಗಳಲ್ಲಿ ಪೂರ್ಣಗೊಳಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News