ನವದೆಹಲಿ: ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿಅವರು ಭಾರತ ಸೇರಿದಂತೆ ಹಲವು ರಾಷ್ಟ್ರಗಳ ಉಕ್ರೇನ್ ರಾಯಭಾರಿಗಳನ್ನು ವಜಾಗೊಳಿಸಿದ್ದಾರೆ ಎಂದು ಸುದ್ದಿಮೂಲಗಳು ತಿಳಿಸಿವೆ.
ಈ ಕ್ರಮಕ್ಕೆ ಯಾವುದೇ ಕಾರಣವನ್ನು ನೀಡದ ಅವರು ಸದ್ಯ ಜರ್ಮನಿ, ಭಾರತ, ಜೆಕ್ ರಿಪಬ್ಲಿಕ್, ನಾರ್ವೆ ಮತ್ತು ಹಂಗೇರಿಯಲ್ಲಿ ಉಕ್ರೇನ್‌ನ ರಾಯಭಾರಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದ್ದಾರೆ.ಈ ರಾಯಭಾರಿಗಳಿಗೆ ಹೊಸ ಜವಾಬ್ದಾರಿಯನ್ನು ನೀಡುವುದರ ಬಗ್ಗೆಯೂ ಕೂಡ ಯಾವುದೇ ಮಾಹಿತಿ ನೀಡಿಲ್ಲ ಎನ್ನಲಾಗಿದೆ.
ಇದನ್ನೂ ಓದಿ: ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ
ಫೆಬ್ರುವರಿ 24 ರ ರಷ್ಯಾದ ಆಕ್ರಮಣವನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಿರುವಾಗ ಉಕ್ರೇನ್‌ಗೆ ಅಂತರರಾಷ್ಟ್ರೀಯ ಬೆಂಬಲ ಮತ್ತು ಮಿಲಿಟರಿ ಸಹಾಯವನ್ನು ಹೆಚ್ಚಿಸಲು ಝೆಲೆನ್ಸ್ಕಿ ತನ್ನ ರಾಜತಾಂತ್ರಿಕರನ್ನು ಒತ್ತಾಯಿಸಿದ್ದಾರೆ.
ಉಕ್ರೇನ್-ರಷ್ಯಾ ನಡುವಿನ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತವು ರಷ್ಯಾ ವಿರುದ್ಧವಾಗಿ ಮತ ಚಲಾಯಿಸದೇ ಮತದಾನದಿಂದ ದೂರ ಉಳಿದಿತ್ತು, ಇನ್ನೊಂದೆಡೆಗೆ ಭಾರತದ ನಡೆಗೆ ರಷ್ಯಾ ದೇಶವು ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಪಾಶ್ಚ್ಯಾತ್ಯ ದೇಶಗಳು ಅಸಮಾಧಾನ ವ್ಯಕ್ತಪಡಿಸಿದ್ದವು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ