ವಾಸ್ತು ನಿಯಮಗಳು: ತುಳಸಿಗೆ ನೀರನ್ನು ಅರ್ಪಿಸುವಾಗ ಈ ಮಂತ್ರ ಪಠಿಸಿ

Vastu Tips for Tulsi Pooja : ಹಿಂದೂ ಧರ್ಮದಲ್ಲಿ ತುಳಸಿಗೆ ತನ್ನದೇ ಆದ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಲಕ್ಷ್ಮಿ ದೇವತೆಯ ಸ್ವರೂಪ ಎಂದೇ  ತುಳಸಿನ್ನು ಪೂಜಿಸಲಾಗುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ಹಣಕಾಸಿನ ಸಮಸ್ಯೆಗಳು ಎದುರಾದಾಗ ತುಳಸಿಗೆ ಪೂಜಿಸುವುದರಿಂದ ಸಂಕಷ್ಟ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ. 

Written by - Chetana Devarmani | Last Updated : Jul 17, 2022, 11:18 AM IST
  • ಜ್ಯೋತಿಷ್ಯದಲ್ಲಿ ತಿಳಿಸಿರುವಂತೆ ತುಳಸಿ ಪೂಜೆಗೆ ಇರುವ ನಿಯಮಗಳು
  • ತುಳಸಿಗೆ ಲಕ್ಷ್ಮಿ ದೇವತೆಯ ಸ್ಥಾನಮಾನವನ್ನು ನೀಡಲಾಗಿದೆ
  • ತುಳಸಿಗೆ ನೀರನ್ನು ಅರ್ಪಿಸುವಾಗ ಈ ಮಂತ್ರ ಪಠಿಸಿ
ವಾಸ್ತು ನಿಯಮಗಳು: ತುಳಸಿಗೆ ನೀರನ್ನು ಅರ್ಪಿಸುವಾಗ ಈ ಮಂತ್ರ ಪಠಿಸಿ   title=
ತುಳಸಿ

Vastu Tips for Tulsi Pooja : ಹಿಂದೂ ಧರ್ಮದಲ್ಲಿ ತುಳಸಿಗೆ ತನ್ನದೇ ಆದ ವಿಶೇಷ ಪ್ರಾಮುಖ್ಯತೆಯನ್ನು ನೀಡಲಾಗಿದೆ. ಲಕ್ಷ್ಮಿ ದೇವತೆಯ ಸ್ವರೂಪ ಎಂದೇ  ತುಳಸಿನ್ನು ಪೂಜಿಸಲಾಗುತ್ತದೆ. ನಿಮ್ಮ ಜೀವನದಲ್ಲಿ ಯಾವುದೇ ಹಣಕಾಸಿನ ಸಮಸ್ಯೆಗಳು ಎದುರಾದಾಗ ತುಳಸಿಗೆ ಪೂಜಿಸುವುದರಿಂದ ಸಂಕಷ್ಟ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ. ಆದರೆ ಅದಕ್ಕೂ ಮುನ್ನ ವಾಸ್ತು ಮತ್ತು ಜ್ಯೋತಿಷ್ಯದಲ್ಲಿ ತಿಳಿಸಿರುವಂತೆ ತುಳಸಿ ಪೂಜೆಗೆ ಇರುವ ನಿಯಮಗಳನ್ನು ತಿಳಿದುಕೊಳ್ಳುವುದು ಮುಖ್ಯ. ಅಲ್ಲದೇ ತುಳಸಿಗೆ ಪ್ರತಿದಿನ ನಾವು ಪೂಜೆ ಮಾಡುವುದು ಉತ್ತಮ ಫಲ ನೀಡುತ್ತದೆ. ತುಳಸಿಗೆ ನೀರನ್ನು ಅರ್ಪಿಸುವಾಗ ಈ ಮಂತ್ರ ಪಠಿಸಿದರೆ ತುಳಸಿ ಪ್ರಸನ್ನಳಾಗುತ್ತಾಳೆ. 

ಇದನ್ನೂ ಓದಿ: ಮೀನ ರಾಶಿಯಲ್ಲಿ ಬೃಹಸ್ಪತಿಯ ವಕ್ರ ನಡೆ! ಈ ರಾಶಿಗಳ ಜನರಿಗೆ ಸಮಯ ಕಠಿಣವಾಗಿರಲಿದೆ

ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ದೇವತೆಗಳು ನೆಲೆಸಿದ್ದಾರೆ ಎಂಬ ನಂಬಿಕೆಯಿರುವ ಕಾರಣ, ತುಳಸಿಯನ್ನು ಮನೆಯ ಈ ದಿಕ್ಕುಗಳಲ್ಲಿಟ್ಟು ಪೂಜಿಸಬೇಕು. ಮನೆಯ ಬಾಲ್ಕನಿ ಅಥವಾ ಕಿಟಕಿಯ ಮೇಲೆ ತುಳಸಿಯನ್ನು ಇಡಬಾರದು. ತುಳಸಿಯನ್ನು ಅಪ್ಪಿತಪ್ಪಿಯೂ ಮನೆಯ ದಕ್ಷಿಣ ದಿಕ್ಕಿನಲ್ಲಿ ನೆಡಬಾರದು. ಈ ದಿಕ್ಕು ಪೂರ್ವಜರಿಗೆ ಸೇರಿದ ಕಾರಣ ಇಲ್ಲಿ ತುಳಸಿ ಗಿಡವನ್ನು ಇಟ್ಟರೆ ಭಾರೀ ಆರ್ಥಿಕ ನಷ್ಟವನ್ನು ಅನುಭವಿಸಬಹುದು. ತುಳಸಿ ಗಿಡವನ್ನು ಮನೆಯ ಪ್ರವೇಶ ದ್ವಾರದಲ್ಲಿ ಅಥವಾ ಕಸವನ್ನು ಇಡುವ ಅಥವಾ ಚಪ್ಪಲಿ ತೆಗೆಯುವ ಯಾವುದೇ ಸ್ಥಳದಲ್ಲಿ ಎಂದಿಗೂ ನೆಡಬಾರದು. 

ತುಳಸಿ ಪೂಜೆಯ ವೇಳೆ ಪಠಿಸುವ ಮಂತ್ರ: 

ಬೆಳಗಿನ ಹೊತ್ತು ತುಳಸಿಯನ್ನು ಪೂಜಿಸಬೇಕು. ಆದರೆ ತುಳಸಿಯನ್ನು ಸಂಜೆ ಮುಟ್ಟಬಾರದು. ಭಾನುವಾರ ತುಳಸಿಗೆ ನೀರು ಹಾಕಬಾರದು. ಪ್ರತಿದಿನ ತುಳಸಿಗೆ ಪ್ರದಕ್ಷಿಣೆ ಹಾಕಿ, ನೀರನ್ನು ಅರ್ಪಿಸಬೇಕು. ತುಳಸಿ ಗಿಡಕ್ಕೆ ಮೂರು ಬಾರಿ ಪ್ರದಕ್ಷಿಣೆ ಹಾಕಬೇಕು. ನೀವು ಮೊದಲು ಸೂರ್ಯನಿಗೆ ನೀರನ್ನು ಅರ್ಪಿಸಬೇಕು ಮತ್ತು ನಂತರ ತುಳಸಿಗೆ ನೀರನ್ನು ಹಾಕಬೇಕು. ತುಳಸಿಗೆ ನೀರನ್ನು ಅರ್ಪಿಸುವಾಗ, ನೀವು ಈ ಮಂತ್ರವನ್ನು ಪಠಿಸಬೇಕು:

'ಮಹಾಪ್ರಸಾದ ಜನನಿ, ಸರ್ವ ಸೌಭಾಗ್ಯವರ್ಧಿನಿ ಅಧಿಕ ವ್ಯಾಧಿ ಹರ ನಿತ್ಯಂ, ತುಳಸಿ ತ್ವಂ ನಮೋಸ್ತುತೇ.' 

ಇದನ್ನೂ ಓದಿ: Onion And Garlic ಸಿಪ್ಪೆಗಳನ್ನು ಎಸೆಯುವ ತಪ್ಪು ಮಾಡಬೇಡಿ, ಸಿಗುತ್ತವೆ ಈ ಅದ್ಭುತ ಲಾಭಗಳು

(Disclaimer: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.  ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News