ಮೊಬೈಲ್‌ನಿಂದ ಮೆದುಳಿಗೆ ಬರಬಹುದು ಮಾರಣಾಂತಿಕ ಕಾಯಿಲೆ: ಈ ವಿಷಯ ನೆನಪಿಟ್ಟುಕೊಳ್ಳಿ

ನೀವು ಸ್ಮಾರ್ಟ್‌ಫೋನ್ ಬಳಸುವಾಗ ಈ ಸಲಹೆಗಳನ್ನು ಅನುಸರಿಸದಿದ್ದರೆ, ನೀವು ಕ್ಯಾನ್ಸರ್ ಅಥವಾ ಬ್ರೈನ್ ಟ್ಯೂಮರ್‌ನಂತಹ ಅಪಾಯಕಾರಿ ಕಾಯಿಲೆಗಳಿಗೆ ಗುರಿಯಾಗಬಹುದು. 

Written by - Bhavishya Shetty | Last Updated : Jul 23, 2022, 10:55 AM IST
  • ಸ್ಮಾರ್ಟ್‌ಫೋನ್‌ಗಳು ಅಪಾಯಕಾರಿ ವಿಕಿರಣಗಳನ್ನು ಹೊರಸೂಸುತ್ತವೆ
  • ಬ್ರೈನ್ ಟ್ಯೂಮರ್‌ನಂತಹ ಅಪಾಯಕಾರಿ ಕಾಯಿಲೆಗಳಿಗೆ ಗುರಿಯಾಗುವ ಸಾಧ್ಯತೆ
  • ಸ್ಮಾರ್ಟ್‌ಫೋನ್ ಬಳಸುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು ಇಲ್ಲಿವೆ
ಮೊಬೈಲ್‌ನಿಂದ ಮೆದುಳಿಗೆ ಬರಬಹುದು ಮಾರಣಾಂತಿಕ ಕಾಯಿಲೆ: ಈ ವಿಷಯ ನೆನಪಿಟ್ಟುಕೊಳ್ಳಿ title=
Smartphone

ಇಂದು ಸ್ಮಾರ್ಟ್‌ಫೋನ್‌ಗಳನ್ನು ಬಳಸದೆ ಇರುವ ಯಾವೊಬ್ಬ ವ್ಯಕ್ತಿಯೂ ಇಲ್ಲ. ಅದು ಕೆಲಸವಾಗಲಿ ಅಥವಾ ಮನರಂಜನೆಯಾಗಲಿ ಪ್ರತಿಯೊಬ್ಬರು ಬಳಕೆ ಮಾಡುತ್ತಾರೆ. ನಮ್ಮ ಹೆಚ್ಚಿನ ಕೆಲಸಗಳಿಗೆ ನಾವು ಮೊಬೈಲ್ ಫೋನ್‌ಗಳ ಮೇಲೆ ಅವಲಂಬಿತರಾಗಿರುತ್ತೇವೆ. ಆದ್ದರಿಂದ ಫೋನ್ ಇಲ್ಲದೆ ಒಂದು ನಿಮಿಷವೂ ಕಳೆಯಲು ಕಷ್ಟವಾಗುತ್ತದೆ. ನೀವು ಸಹ ಸ್ಮಾರ್ಟ್‌ಫೋನ್ ಬಳಕೆದಾರರಾಗಿದ್ದರೆ ಮತ್ತು ಈ ಸಾಧನವನ್ನು ಹಲವು ವಿಷಯಗಳಿಗಾಗಿ ಬಳಸುತ್ತಿದ್ದರೆ, ನಿಮಗೊಂದು ಎಚ್ಚರಿಕೆಯ ಸಂದೇಶವನ್ನು ನೀಡಲು ಬಯಸುತ್ತೇವೆ. ನಾವು ನಿಮಗಾಗಿ ಕೆಲವು ಪ್ರಮುಖ ಸಲಹೆಗಳನ್ನು ನೀಡಲಿದ್ದೇವೆ. 

ನೀವು ಸ್ಮಾರ್ಟ್‌ಫೋನ್ ಬಳಸುವಾಗ ಈ ಸಲಹೆಗಳನ್ನು ಅನುಸರಿಸದಿದ್ದರೆ, ನೀವು ಕ್ಯಾನ್ಸರ್ ಅಥವಾ ಬ್ರೈನ್ ಟ್ಯೂಮರ್‌ನಂತಹ ಅಪಾಯಕಾರಿ ಕಾಯಿಲೆಗಳಿಗೆ ಗುರಿಯಾಗಬಹುದು. 

ಇದನ್ನೂ ಓದಿ: Grey parrot: ಕೊನೆಗೂ ಮಾಲೀಕರ ಕೈಸೇರಿದ ಮಿಸ್ಸಿಂಗ್ ‘ರುಸ್ತುಮಾ’..!

ಎಲ್ಲಾ ಸ್ಮಾರ್ಟ್‌ಫೋನ್‌ಗಳು ಅಪಾಯಕಾರಿ ವಿಕಿರಣಗಳನ್ನು ಹೊರಸೂಸುತ್ತವೆ ಎಂಬ ಅಂಶದ ಬಗ್ಗೆ ಬಹುಶಃ ಯಾರಿಗೂ ತಿಳಿದಿರಲಿಕ್ಕಿಲ್ಲ. ಅದು ಮನುಷ್ಯರಿಗೆ ತುಂಬಾ ಅಪಾಯಕಾರಿ ಮತ್ತು ಮಾರಕವಾಗಿದೆ. ಸ್ಮಾರ್ಟ್‌ಫೋನ್‌ಗಳ ಬಳಕೆಯ ಮೇಲೆ ಒಂದು ರೀತಿಯ ರೇಡಿಯೋ ಫ್ರೀಕ್ವೆನ್ಸಿ (ಆರ್‌ಎಫ್) ವಿಕಿರಣವು ಹೊರಸೂಸಲ್ಪಡುತ್ತದೆ. ಇದು ನಮ್ಮ ದೇಹ ಮತ್ತು ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಮೊಬೈಲ್‌ಗಳಿಂದ ಹೊರಹೊಮ್ಮುವ ಈ ವಿಕಿರಣಗಳು ಮನುಷ್ಯನ ಮೆದುಳಿನಲ್ಲಿ ಕ್ಯಾನ್ಸರ್‌ ಅಥವಾ ಟ್ಯೂಮರ್‌ನಂತಹ ರೋಗಗಳನ್ನು ಉಂಟುಮಾಡುತ್ತವೆ.  ಸ್ಮಾರ್ಟ್‌ಫೋನ್ ಬಳಸುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು ಇಲ್ಲಿವೆ.

ಸ್ಮಾರ್ಟ್‌ಫೋನ್ ಅನೇಕ ವೈಶಿಷ್ಟ್ಯಗಳೊಂದಿಗೆ ಬಂದರೂ, ಮುಖ್ಯವಾಗಿ ಈ ಫೋನ್ ಅನ್ನು ಕರೆಗಳಲ್ಲಿ ಮಾತನಾಡಲು ಬಳಸಲಾಗುತ್ತದೆ. ಮೊದಲನೆಯದಾಗಿ, ಫೋನ್‌ನಲ್ಲಿ ದೀರ್ಘಕಾಲ ಮಾತನಾಡದಿರಲು ಪ್ರಯತ್ನಿಸಿ. ಏಕೆಂದರೆ ದೀರ್ಘಕಾಲದವರೆಗೆ ಕರೆಯಲ್ಲಿ ಉಳಿಯುವ ಮೂಲಕ ವಿಕಿರಣಗಳು ಬಹಳಷ್ಟು ಹೆಚ್ಚಾಗುತ್ತವೆ.

ಅಲ್ಲದೆ, ನೀವು ಫೋನ್‌ನಲ್ಲಿ ದೀರ್ಘಕಾಲ ಮಾತನಾಡಬೇಕಾದರೆ, ಅದನ್ನು ಸ್ಪೀಕರ್‌ನಲ್ಲಿ ಮಾಡಿ ಮತ್ತು ಫೋನ್ ಅನ್ನು ನಿಮ್ಮ ದೇಹದೊಂದಿಗೆ ನೇರ ಸಂಪರ್ಕದಲ್ಲಿ ಇರಿಸಿಕೊಳ್ಳಲು ಪ್ರಯತ್ನಿಸಿ̤ ಏಕೆಂದರೆ ಪ್ರತಿ 30 ಸೆಕೆಂಡಿಗೆ ಫೋನ್ ಶಾಖ ವಿಕಿರಣವನ್ನು ಹೊರಸೂಸುತ್ತದೆ. ಇದು ಪ್ರಮುಖ ಅಂಗಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. 

ನಾವು ಎಲ್ಲಿಗೆ ಹೋದರೂ, ಎಲ್ಲೇ ಇದ್ದರೂ ನಮ್ಮ ಸ್ಮಾರ್ಟ್‌ಫೋನ್ ಸಾಮಾನ್ಯವಾಗಿ ನಮ್ಮೊಂದಿಗೆ ಇರುತ್ತದೆ. ಆದರೆ ಫೋನ್ ಅನ್ನು ನೀವು ಬಳಸದ ಕೆಲವು ಸ್ಥಳಗಳಿವೆ. ಬಸ್ಸು, ಕಾರು, ರೈಲು ಇತ್ಯಾದಿಗಳಲ್ಲಿದ್ದರೆ ಅಥವಾ ವಾಹನವು ಚಲಿಸುತ್ತಿದ್ದರೆ, ಅಗತ್ಯವಿದ್ದಾಗ ಮಾತ್ರ ಫೋನ್ ಬಳಸಿ. ಏಕೆಂದರೆ ಈ ಸಮಯದಲ್ಲಿ ಫೋನ್ ಸಿಗ್ನಲ್‌ಗಾಗಿ ಹೆಚ್ಚು ಸಕ್ರಿಯವಾಗಿರುತ್ತದೆ ಮತ್ತು ಇದರಿಂದಾಗಿ ವಿಕಿರಣಗಳು ಸಹ ಹೆಚ್ಚು ಹರಡುತ್ತವೆ.

ನಿಮ್ಮ ಕಾರನ್ನು ಎಲ್ಲೋ ನಿಲ್ಲಿಸಿ ಅದರಲ್ಲಿ ಕುಳಿತಿರುವಾಗಲೂ ಸ್ಮಾರ್ಟ್‌ಫೋನ್ ಬಳಸುವುದು ತುಂಬಾ ಅಪಾಯಕಾರಿ. ಸುತ್ತಮುತ್ತಲಿನ ವಾಹನಗಳು ಮತ್ತು ನಿಮ್ಮ ವಾಹನದಿಂದ ಹೊರಸೂಸುವ ಶಾಖದಿಂದಾಗಿ, ಫೋನ್‌ನ ಬ್ಯಾಟರಿ ವಿಕಿರಣಗಳು ಗಮನಾರ್ಹವಾಗಿ ಹೆಚ್ಚಾಗುತ್ತದೆ. ಹೀಗಾಗಿ ರೇಡಿಯೊ ಆವರ್ತನ ವಿಕಿರಣಗಳು ಸಹ ವರ್ಧಿಸುತ್ತವೆ.

ಇದನ್ನೂ ಓದಿ: ಇಂದಿನಿಂದ 4 ದಿನಗಳ ಕಾಲ ಈ ರಾಜ್ಯಗಳಲ್ಲಿ ಭಾರೀ ಮಳೆ: ಶಾಲೆಗಳಿಗೆ ರಜೆ ಘೋಷಿಸುವ ಸಾಧ್ಯತೆ!

ನಮ್ಮಲ್ಲಿ ಹೆಚ್ಚಿನವರು ನಮ್ಮ ಸ್ಮಾರ್ಟ್‌ಫೋನ್ ಬಳಸುವಾಗ ನಿದ್ರೆಗೆ ಜಾರುತ್ತೇವೆ ಎಂದು ಭಾವಿಸಿರುತ್ತಾರೆ. ಅಷ್ಟೇ ಅಲ್ಲದೆ, ಹೆಚ್ಚಿನವರು ಮಲಗುವ ಸಂದರ್ಭದಲ್ಲಿ ತಲೆದಿಂಬಿನ ಪಕ್ಕದಲ್ಲಿಯೇ ಫೋನ್‌ನ್ನು ಇಡುತ್ತಾರೆ. ರಾತ್ರಿಯಲ್ಲಿ ಸ್ಮಾರ್ಟ್‌ಫೋನ್‌ನಿಂದ ಹೊರಸೂಸುವ ವಿಕಿರಣಗಳು ಮತ್ತು ಎಲ್ಲಾ ವಿದ್ಯುತ್ಕಾಂತೀಯ ಕ್ಷೇತ್ರಗಳು (EMF) ನಿದ್ರೆಯನ್ನು ಅಡ್ಡಿಪಡಿಸಬಹುದು. ಅಷ್ಟೇ ಅಲ್ಲದೆ, ಸ್ನಾಯು ನೋವನ್ನು ಉಂಟುಮಾಡಬಹುದು, ದೌರ್ಬಲ್ಯಕ್ಕೂ ಕಾರಣವಾಗಬಹುದು. ಇದು ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ಮಲಗುವ ಮೊದಲು, ನಿಮ್ಮ ಸ್ಮಾರ್ಟ್‌ಫೋನ್ ಅನ್ನು ನಿಮ್ಮಿಂದ ದೂರವಿಡಿ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News