ಚಾಮರಾಜನಗರ: ಭಾರತದಲ್ಲಿ ಆಶ್ರಯ ಪಡೆದ ಟಿಬೆಟಿಯನ್ನರು ತಾವಿರುವ ನೆಲದ ಋಣ ಮರೆಯದೇ ದೇಶಾಭಿಮಾನಕ್ಕೆ ಮೇಲ್ಪಂಕ್ತಿ ಹಾಕಿಕೊಟ್ಟಿರುವ ಘಟನೆ ಹನೂರು ತಾಲೂಕಿನ ಒಡೆಯರಪಾಳ್ಯ ಸಮೀಪದ ಟಿಬೆಟಿಯನ್ ಕ್ಯಾಂಪಿನಲ್ಲಿ ನಡೆದಿದೆ.
ಹೌದು..., ದೇಶ ಬಿಟ್ಟು ಭಾರತದಲ್ಲಿಆಶ್ರಯ ಪಡೆದಿರುವ ಟಿಬೆಟಿಯನ್ನರು ಇಲ್ಲಿನ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದಲ್ಲಿ ಭಾಗಿಯಾಗಿ ಬಾವುಟ ಹಿಡಿದು ಬೈಕ್ ರ್ಯಾಲಿ ನಡೆಸಿದ್ದಾರೆ. ಜೊತೆಗೆ, ಸೆಟಲ್ ಮೆಂಟ್ ಗಳಲ್ಲಿರುವ ಬೌದ್ಧ ಮಂದಿರದಲ್ಲಿ ಮುಂಭಾಗ ತಿರಂಗ ಹಾರಿಸಿ ರಾಷ್ಟ್ರಗೀತೆ ಹಾಡುವ ಮೂಲಕ ತಮಗೆ ನೆಲೆ ಕೊಟ್ಟ ಭಾರತಾಂಬೆಗೆ ಜೈಕಾರ ಹಾಕಿದ್ದಾರೆ.
ಇದನ್ನೂ ಓದಿ: Bigg Boss Kannada OTT : ಕಾಂಟ್ರವರ್ಷಿಯಲ್ ಲೇಡಿ ಸೋನು ಗೌಡ ಎಲಿಮಿನೇಟ್ ಆದ್ರಾ..? ಇಲ್ವಾ..?
ಒಡೆಯರಪಾಳ್ಯದ ಟಿಬೆಟಿಯನ್ ಸೆಟಲ್ ಮೆಂಟ್ ಆಫೀಸರ್ ಗೀಕ್ ಜುಂಗ್ನೆ, ಮಿಡಲ್ ವೇ ಟಿಬೆಟಿಯನ್ ಯೂಥ್ ಕಾಂಗ್ರೆಸ್ ಕೊಳ್ಳೇಗಾಲ ಅಧ್ಯಕ್ಷ ಸೆರಿಂಗ್ ಡಾರ್ಜಿ ಹಾಗೂ ಚುಂಗ್ ಎಂಬವರ ನೇತೃತ್ವದಲ್ಲಿ ನೂರಾರು ಯುವಕರು ಬೈಕ್ ರ್ಯಾಲಿ ನಡೆಸಿ ಗಮನ ಸೆಳೆದಿದ್ದಾರೆ.
ಇವರು ಭಾರತೀಯರಲ್ಲ ಆದರೆ ಭಾರತದ ಮೇಲಿನ ಅಭಿಮಾನ ಮರೆಯದೇ ತಿರಂಗ ಹಾರಿಸಿ, ದೇಶದ ಹಬ್ಬವೊಂದರಲ್ಲಿ ಭಾಗಿಯಾಗಿದ್ದು ಮಾದರಿಯಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.