Yuzvendra Chahal : ದಾಂಪತ್ಯ ಜೀವನದಲ್ಲಿ ಬಿರುಕು! ವದಂತಿಗೆ ತೆರೆ ಎಳೆದ ಚಹಾಲ್

Yuzvendra Chahal : ಕ್ರಿಕೆಟ್​ ಲೋಕದಲ್ಲಿ ಕ್ಯೂಟ್​ ಜೋಡಿ ಎಂದೇ ಗುರುತಿಸಿ ಕೊಂಡಿರುವ ಟೀಂ ಇಂಡಿಯಾದ ಸ್ಪೋಟಕ ಬೌಲರ್​ ಯುಜವೇಂದ್ರ ಚಹಾಲ್  ಮತ್ತು ಪತ್ನಿ ಧನಶ್ರೀ ವರ್ಮಾ ಸಂಬಂಧದಲ್ಲಿ ಬಿರುಕು ಉಂಟಾಗಿದೆ ಎಂಬ ಗಾಳಿಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಖುದ್ದು ಚಹಾಲ್‌ ಅವರೇ ಸ್ಪಷ್ಟನೆ ನೀಡಿದ್ದಾರೆ. 

Written by - Chetana Devarmani | Last Updated : Aug 19, 2022, 04:27 PM IST
  • ಕ್ರಿಕೆಟ್​ ಲೋಕದಲ್ಲಿ ಕ್ಯೂಟ್​ ಜೋಡಿ
  • ದಾಂಪತ್ಯ ಜೀವನದಲ್ಲಿ ಬಿರುಕು!
  • ವದಂತಿಗೆ ತೆರೆ ಎಳೆದ ಚಹಾಲ್
Yuzvendra Chahal : ದಾಂಪತ್ಯ ಜೀವನದಲ್ಲಿ ಬಿರುಕು! ವದಂತಿಗೆ ತೆರೆ ಎಳೆದ ಚಹಾಲ್  title=
ಚಹಾಲ್ 

Yuzvendra Chahal : ಇದೀಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದ ವಿಚ್ಛೇದನ ಸುದ್ದಿಯ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ಲೆಗ್ ಸ್ಪಿನ್ನರ್ ಯುಜವೇಂದ್ರ ಚಹಾಲ್ ಅವರು ತಮ್ಮ ಅಭಿಮಾನಿಗಳಿಗೆ ವಿನಮ್ರ ವಿನಂತಿಯನ್ನು ಮಾಡಿದ್ದಾರೆ. ಪತ್ನಿ ಧನಶ್ರೀ ವರ್ಮಾ ಅವರೊಂದಿಗಿನ ಸಂಬಂಧದ ಬಗ್ಗೆ ಯಾವುದೇ ವದಂತಿಗಳನ್ನು ನಂಬಬೇಡಿ ಎಂದು ಒತ್ತಾಯಿಸಿದ್ದಾರೆ. “ನಮ್ಮ ಸಂಬಂಧಕ್ಕೆ ಸಂಬಂಧಿಸಿದ ಯಾವುದೇ ರೀತಿಯ ವದಂತಿಗಳನ್ನು ನಂಬಬೇಡಿ ಎಂದು ನಿಮಗೆಲ್ಲರಿಗೂ ವಿನಮ್ರ ವಿನಂತಿ. ದಯವಿಟ್ಟು, ಅದನ್ನು ಕೊನೆಗೊಳಿಸಿ. ಲವ್‌ ಯೂ ಆಲ್‌”ಎಂದು ಚಹಾಲ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Yuzvendra Chahal-Dhanashree : ಧನಶ್ರೀ, ಯುಜ್ವೇಂದ್ರ ಚಹಾಲ್ ದಾಂಪತ್ಯದಲ್ಲಿ ಬಿರುಕು..!

ಬುಧವಾರ (ಆಗಸ್ಟ್ 17), ಚಹಾಲ್ ತಮ್ಮ ಟ್ವಿಟ್ಟರ್ ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದರು ಅದರಲ್ಲಿ "ನ್ಯೂ ಲೈಫ್ ಲೋಡ್ ಆಗುತ್ತಿದೆ....' ಎಂದು ಬರೆಯಲಾಗಿತ್ತು. ಅಭಿಮಾನಿಗಳು ಅದು ಏನು ಎಂದು ಆಶ್ಚರ್ಯಗೊಂಡಿದ್ದಾರೆ. ವೃತ್ತಿಯಲ್ಲಿ ನೃತ್ಯಗಾರ್ತಿಯಾಗಿರುವ ಧನಶ್ರೀ ಅವರೊಂದಿಗೆ ಚಹಲ್ ತಮ್ಮ ಮೊದಲ ಮಗುವನ್ನು ಸ್ವಾಗತಿಸಲಿದ್ದಾರೆ ಎಂದು ಕೆಲವರು ಭಾವಿಸಿದ್ದಾರೆ. ಆದರೆ ಇತ್ತ ಅವರ ಪತ್ನಿ ಧನಶ್ರೀ ಸರ್ ನೇಮ್ ಚೇಂಜ್ ಮಾಡಿರುವುದು ಕೆಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು. 

Yuzvendra Chahal

ಪ್ರಸಿದ್ಧ ಯೂಟ್ಯೂಬರ್ ಮತ್ತು ನೃತ್ಯ ಸಂಯೋಜಕಿಯಾಗಿರುವ ಧನಶ್ರೀ ವರ್ಮಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಹೆಸರಿನಿಂದ 'ಚಹಾಲ್' ಅನ್ನು ತೆಗೆದುಹಾಕಿದ್ದಾರೆ ಎಂದು ವರದಿಯಾಗಿದೆ. ಇದೇ ಬೆನ್ನಲ್ಲೇ ಚಹಾಲ್‌ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುವ ವದಂತಿಗಳು ಶುರುವಾದವು. ಇದೆಲ್ಲದಕ್ಕೂ ಇದೀಗ ಖುದ್ದು ಚಹಾಲ್‌ ಅವರೇ ಸ್ಪಷ್ಟನೆ ನೀಡಿದ್ದು, ವದಂತಿಗಳಿಗೆ ತೆರೆ ಎಳೆದಿದ್ದಾರೆ.

2022 ರ ಏಷ್ಯಾ ಕಪ್ ನಲ್ಲಿ  ಚಹಾಲ್ ಕಾಣಿಸಿಕೊಳ್ಳಲಿದ್ದಾರೆ, ಅಲ್ಲಿ ಭಾರತವು ಆಗಸ್ಟ್ 28 ರಂದು ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಮೊದಲ ಪಂದ್ಯ ಆಡಲಿದೆ. 

ಇದನ್ನೂ ಓದಿ:‌ Elon Musk: ಕ್ರಿಸ್ಟಿಯಾನೋ ರೊನಾಲ್ಡೊ ಅವರ ಮ್ಯಾಂಚೆಸ್ಟರ್ ಯುನೈಟೆಡ್ ಖರೀದಿಸುತ್ತಾರಂತೆ ಎಲೋನ್ ಮಸ್ಕ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News