ಈ ದಿನದಂದು ಭಾರತದಲ್ಲಿ 5G ಸೇವೆ ಲಭ್ಯ : ಕೇಂದ್ರ ಸರ್ಕಾರ ನೀಡಿದೆ ಮಹತ್ವದ ಮಾಹಿತಿ

5G ಸೇವೆಗಳನ್ನು ಭಾರತದಲ್ಲಿ ಹಂತ ಹಂತವಾಗಿ ಪ್ರಾರಂಭಿಸಲಾಗುವುದು. ಮೊದಲ ಹಂತದಲ್ಲಿ 13 ನಗರಗಳಲ್ಲಿ  5G ಇಂಟರ್ನೆಟ್ ಸೇವೆಗಳು ಲಭ್ಯವಿರಲಿವೆ. 

Written by - Ranjitha R K | Last Updated : Aug 26, 2022, 02:12 PM IST
  • ಅಕ್ಟೋಬರ್ 12 ರೊಳಗೆ ದೇಶದಲ್ಲಿ 5G ಸೇವೆ
  • ಮೊದಲ ಹಂತದಲ್ಲಿ 13 ನಗರಗಳಲ್ಲಿ 5G ಲಭ್ಯ
  • ಯಾವೆಲ್ಲಾ ನಗರಗಳಿಗೆ ಸಿಗಲಿದೆ 5G ಸೇವೆ
ಈ ದಿನದಂದು ಭಾರತದಲ್ಲಿ 5G ಸೇವೆ ಲಭ್ಯ : ಕೇಂದ್ರ ಸರ್ಕಾರ ನೀಡಿದೆ ಮಹತ್ವದ ಮಾಹಿತಿ  title=
5g service launch date (file photo)

ಬೆಂಗಳೂರು : ಅಕ್ಟೋಬರ್ 12 ರೊಳಗೆ ದೇಶದಲ್ಲಿ 5G ಸೇವೆಗಳನ್ನು ಹೊರತರುವ ನಿರೀಕ್ಷೆಯಿದೆ ಎಂದು ಸರ್ಕಾರ ಗುರುವಾರ ಹೇಳಿದೆ.  ಅಲ್ಲದೆ ಇದರ ಬೆಲೆ ಕೂಡಾ  ಗ್ರಾಹಕರಿಗೆ ಕೈಗೆಟುಕುವಂತೆ ಇರಲಿದೆ ಎಂದು ಹೇಳಿದೆ. 5ಜಿ ಯೋಜನೆಗಳು ಸಾರ್ವಜನಿಕರಿಗೆ ಕೈಗೆಟುಕುವ ದರದಲ್ಲಿ ಸಿಗುವುದನ್ನು ಸರ್ಕಾರ ಖಚಿತಪಡಿಸುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ಗತಿಶಕ್ತಿ ಸಂಚಾರ ಪೋರ್ಟಲ್‌ನಲ್ಲಿ 5G ರೈಟ್ ಆಫ್ ವರ್ಕ್ ಅರ್ಜಿ ನಮೂನೆಯನ್ನು ಬಿಡುಗಡೆ ಮಾಡುವುದರೊಂದಿಗೆ ಸರ್ಕಾರವು 'ದಿ ಇಂಡಿಯನ್ ಟೆಲಿಗ್ರಾಫ್ ರೈಟ್ ಆಫ್ ವೇ ನಿಯಮ 2022' ಅನ್ನು ಪರಿಚಯಿಸಿತು.

13 ನಗರಗಳಲ್ಲಿ 5G ಲಭ್ಯ :
ಇಂಡಿಯನ್ ಟೆಲಿಗ್ರಾಫ್ ರೈಟ್ ಆಫ್ ವೇ ನಿಯಮಗಳು, 2022 ಡಿಜಿಟಲ್ ಮೂಲಸೌಕರ್ಯ, ಸಣ್ಣ ಸೆಲ್, ಏರಿಯಲ್ ಫೈಬರ್ ಮತ್ತು  ಸ್ಟ್ರೀಟ್ ಫರ್ನಿಚರ್ ಗಳ ತ್ವರಿತ ಪ್ರಸರಣದಲ್ಲಿ ಉದ್ಯಮಕ್ಕೆ ಸಹಾಯ ಮಾಡುತ್ತದೆ. 5G ಸೇವೆಗಳನ್ನು ಭಾರತದಲ್ಲಿ ಹಂತ ಹಂತವಾಗಿ ಪ್ರಾರಂಭಿಸಲಾಗುವುದು. ಮೊದಲ ಹಂತದಲ್ಲಿ 13 ನಗರಗಳಲ್ಲಿ  5G ಇಂಟರ್ನೆಟ್ ಸೇವೆಗಳು ಲಭ್ಯವಿರಲಿವೆ. 

ಇದನ್ನೂ ಓದಿ ವಾಟ್ಸಾಪ್‌ನ ಅದ್ಭುತ ಫೀಚರ್: ಈಗ ನೀವು ಅಪ್ಲಿಕೇಶನ್ ತೆರೆಯದೆಯೂ ಸಂದೇಶ ಕಳುಹಿಸಬಹುದು

ಈ ನಗರಗಳಲ್ಲಿ ಲಭ್ಯವಿರಲಿದೆ 5G :
ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ ಮೊದಲ ಹಂತದಲ್ಲಿ5G ಸೇವೆ ಲಭ್ಯವಿರಲಿದೆ.  3G ಮತ್ತು 4G ನಂತೆ, ಟೆಲಿಕಾಂ ಕಂಪನಿಗಳು ಶೀಘ್ರದಲ್ಲೇ ಮೀಸಲಾದ 5G ಟ್ಯಾರಿಫ್ ಘೋಷಿಸುತ್ತವೆ.  ಗ್ರಾಹಕರು ತಮ್ಮ ಸಾಧನಗಳಲ್ಲಿ 5G ಸೇವೆಗಳನ್ನು ಬಳಸಲು ಹೆಚ್ಚು ಮೊತ್ತವನ್ನು ಪಾವತಿಸಬೇಕಾಗಬಹುದು ಎನ್ನುವುದು ತಜ್ಞರ ಅಭಿಪ್ರಾಯ. 

ಗೋಲ್ಡ್‌ಮನ್ ಸ್ಯಾಚ್ಸ್ ಇಕ್ವಿಟಿ ರಿಸರ್ಚ್‌ನ ವರದಿಯ ಪ್ರಕಾರ, 5G ರೋಲ್‌ಔಟ್‌ನ ಪರಿಣಾಮವಾಗಿ ಜಾಗತಿಕವಾಗಿ ಟೆಲ್ಕೋಸ್‌ಗಳಿಗೆ ಬಂಡವಾಳ ವೆಚ್ಚದಲ್ಲಿ ಹೇಳಿಕೊಳ್ಳುವಂಥಹ ಏರಿಕೆ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಭಾರತದಲ್ಲಿ ಇದೇ ರೀತಿಯ ಪ್ರವೃತ್ತಿಯನ್ನು ನಿರೀಕ್ಷಿಸಲಾಗುತ್ತಿದೆ. ಜಾಗತಿಕವಾಗಿ, 5G ಮತ್ತು 4G ದರಗಳ ನಡುವೆ ಯಾವುದೇ ಪ್ರಮುಖ ವ್ಯತ್ಯಾಸವಿಲ್ಲ ಎಂದು ಏರ್‌ಟೆಲ್ CTO ರಣದೀಪ್ ಸೆಖೋನ್ ಇತ್ತೀಚಿನ ವರದಿಯಲ್ಲಿ ಹೇಳಿದ್ದಾರೆ. "ಭಾರತದಲ್ಲಿ 5G ಯೋಜನೆಗಳು 4G ಸುಂಕಗಳಿಗೆ ಸಮನಾಗಿರುತ್ತದೆ   ನಿರೀಕ್ಷಿಸುವುದಾಗಿಯೂ ಹೇಳಿದ್ದಾರೆ. 

ಇದನ್ನೂ ಓದಿ : Jio Double Dhamaka: ರಿಲಯನ್ಸ್ ಜಿಯೋ 5G ಸೇವೆ ಹಾಗೂ ಅಗ್ಗದ 5G ಫೋನ್ ಬಿಡುಗಡೆಗೆ ಮುಹೂರ್ತ ಫಿಕ್ಸ್!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News