White Hair: ಬಿಳಿ ಕೂದಲ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ

ಮೀನಿನ ಎಣ್ಣೆಯು ನೆತ್ತಿಯನ್ನು ಪೋಷಣೆ ಮಾಡುತ್ತದೆ & ಕೂದಲನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ.

Written by - Zee Kannada News Desk | Last Updated : Aug 31, 2022, 02:20 PM IST
  • ಮೀನಿನ ಎಣ್ಣೆ ಆರೋಗ್ಯಕ್ಕೆ ಮಾತ್ರವಲ್ಲದೆ ಕೂದಲಿಗೂ ವರದಾನವಾಗಿದೆ
  • ಒಮೆಗಾ-3 ಕೊಬ್ಬಿನಾಮ್ಲ ಹೊಂದಿರುವ ಮೀನಿನ ಎಣ್ಣೆ ಕೂದಲು ಉದುರುವಿಕೆ ತಡೆಯುತ್ತದೆ
  • ಮೀನಿನ ಎಣ್ಣೆ ನೆತ್ತಿಯನ್ನು ಪೋಷಣೆ ಮಾಡುವುದರ ಜೊತೆಗೆ ಕೂದಲನ್ನು ಆರೋಗ್ಯಕರವಾಗಿಸುತ್ತದೆ
White Hair: ಬಿಳಿ ಕೂದಲ ಸಮಸ್ಯೆಗೆ ಇಲ್ಲಿದೆ ಸುಲಭ ಪರಿಹಾರ title=
ಕೂದಲು ಉದುರುವಿಕೆ ಸಮಸ್ಯೆಗೆ ಪರಿಹಾರ

ನವದೆಹಲಿ: ಇತ್ತೀಚಿನ ದಿನಗಳಲ್ಲಿ  ಬಹುತೇಕರು ದಪ್ಪ, ಮೃದುವಾದ ಮತ್ತು ಕಪ್ಪು ಕೂದಲು ಬಯಸುತ್ತಾರೆ. ಆದರೆ ಚಿಕ್ಕ ವಯಸ್ಸಿನಲ್ಲಿಯೇ ಕೂದಲು ಬೆಳ್ಳಗಾದರೆ ಚಿಂತೆ ದುಪ್ಪಟ್ಟಾಗುತ್ತದೆ. ಇದಕ್ಕೆ ಪರಿಹಾರ ಪಡೆಯಲು ಅನೇಕ ಮಾರ್ಗಗಳನ್ನು ಜನರು ಹುಡುಕುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಬಣ್ಣಗಳನ್ನು ತಲೆಗೆ ಹಚ್ಚಿಕೊಳ್ಳುತ್ತಾರೆ. ಇದು ಕೂದಲಿಗೆ ಹಾನಿಯನ್ನುಂಟುಮಾಡಬಹುದು. ಹೀಗಾಗಿ ನೈಸರ್ಗಿಕ ವಿಧಾನಗಳ ಮೂಲಕ ಕೂದಲು ಕಪ್ಪಾಗಿಸುವ ವಿಧಾನದ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡಲಿದ್ದೇವೆ.   

ಮೀನಿನ ಎಣ್ಣೆ ಬಳಕೆ: ಮೀನಿನ ಎಣ್ಣೆ ಆರೋಗ್ಯಕ್ಕೆ ಮಾತ್ರವಲ್ಲದೆ ಕೂದಲಿಗೂ ವರದಾನವಾಗಿದೆ. ಇದು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿದೆ. ಇದು ಕೂದಲು ಉದುರುವಿಕೆ ತಡೆಯಲು ಸಹಾಯ ಮಾಡುತ್ತದೆ. ಆದರೆ ಕೂದಲು ಬಿಳಿಯಾಗುವ ಸಮಸ್ಯೆಯನ್ನುಂಟುಮಾಡುವುದಿಲ್ಲ. ಮಾರುಕಟ್ಟೆಯಲ್ಲಿ ನಿಮಗೆ ಮೀನಿನ ಎಣ್ಣೆಯ ಕ್ಯಾಪ್ಸೂಲ್ ಸಹ ಸಿಗುತ್ತವೆ. ಇವುಗಳನ್ನು ಕೂದಲಿಗೆ ಹಚ್ಚಿದ ನಂತರ ಉತ್ತಮ ಫಲಿತಾಂಶ ದೊರೆಯುತ್ತದೆ.

ಇದನ್ನೂ ಓದಿ: Relationship Tips: ಈ 5 ಗುಣಗಳನ್ನು ಹೊಂದಿರುವ ಹುಡುಗರ ಮೇಲೆ ಹುಡುಗಿಯರು ಫಿದಾ ಆಗ್ತಾರೆ....ನಿಮ್ಮಲ್ಲಿ?

ಬೇಕಾಗುವ ವಸ್ತುಗಳು

2 ಟೀಸ್ಪೂನ್ ಆಲಿವ್ ಎಣ್ಣೆ

2 ಟೀಸ್ಪೂನ್ ಮೀನಿನ ಎಣ್ಣೆ ಅಥವಾ ಕ್ಯಾಪ್ಸುಲ್

2 ಟೀಸ್ಪೂನ್ ಅಲೋವೆರಾ ಜೆಲ್  

ಹೇಗೆ ಬಳಸಬೇಕು..?

ಮೊದಲು ಒಂದು ಬಟ್ಟಲಿನಲ್ಲಿ ಎಲ್ಲಾ ಪದಾರ್ಥಗಳನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಬಳಿಕ ತಲೆಗೆ ಹಚ್ಚಿಕೊಳ್ಳಿ.

ಕೂದಲಿಗೆ ಹಚ್ಚುವುದು ಹೇಗೆ..?

ಮೊದಲು ಕೂದಲನ್ನು ಚೆನ್ನಾಗಿ ತೊಳೆದು ಒಣಗಿಸಿರಿ. ಬಳಿಕ ಕೂದಲಿನ ಬೇರುಗಳಿಗೆ ಎಣ್ಣೆಯನ್ನು ಚೆನ್ನಾಗಿ ಹಚ್ಚಿ ಮಸಾಜ್ ಮಾಡಿ. ಕನಿಷ್ಟ 5-7 ನಿಮಿಷಗಳ ಕಾಲ ಕೂದಲನ್ನು ಹೀಗೆ ಮಸಾಜ್ ಮಾಡಬೇಕು. ಈಗ ಅದನ್ನು ಕನಿಷ್ಠ 30 ನಿಮಿಷಗಳ ಕಾಲ ಬಿಡಿ, ನೀವು ಬಯಸಿದಲ್ಲಿ ರಾತ್ರಿಯಿಡೀ ಬಿಡಬಹುದು. ಇದರ ನಂತರ ಮೈಲ್ಡ್ ಶಾಂಪೂ ಮತ್ತು ಕಂಡೀಷನರ್ ನಿಂದ ಕೂದಲನ್ನು ಚೆನ್ನಾಗಿ ತೊಳೆಯಿರಿ.

ಇದನ್ನೂ ಓದಿ: Astro Tips: ಪ್ರತಿದಿನ ಮಾಡುವ ಈ 5 ಕೆಲಸಗಳು ದುರದೃಷ್ಟವನ್ನು ಅದೃಷ್ಟವನ್ನಾಗಿ ಪರಿವರ್ತಿಸುತ್ತೆ!

ಪ್ರಯೋಜನಗಳು

1. ಮೀನಿನ ಎಣ್ಣೆಯು ನೆತ್ತಿಯನ್ನು ಪೋಷಣೆ ಮಾಡುತ್ತದೆ. ಕೂದಲನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಇದರಿಂದ ಕೂದಲು ಉದುರುವಿಕೆ ಕಡಿಮೆಯಾಗುವುದಲ್ಲದೆ, ಜೀವನದುದ್ದಕ್ಕೂ ಬೆಳ್ಳಗಾಗುವುದಿಲ್ಲ.

2. ಒಮೆಗಾ ಕೊಬ್ಬಿನಾಮ್ಲಗಳನ್ನು ಸೇವಿಸುವುದರಿಂದ ನಿಮ್ಮ ಕೂದಲು ಉತ್ತಮವಾಗಿ ಬೆಳೆಯಲು ಸಹಾಯ ಮಾಡುತ್ತದೆ. ಏಕೆಂದರೆ ಇದರಲ್ಲಿ ಪೋಷಕಾಂಶಗಳು ಮತ್ತು ಪ್ರೋಟೀನ್‌ಗಳು ಅಧಿಕವಾಗಿರುತ್ತವೆ. ಅದೇ ರೀತಿ ಒಮೆಗಾ -3 ಆಮ್ಲಗಳು ಮೀನಿನ ಎಣ್ಣೆಯಲ್ಲಿ ಹೇರಳವಾಗಿವೆ.

3. ಇದು ಕೂದಲಿನ ಬೇರುಗಳು ಮತ್ತು ಚರ್ಮಕ್ಕೆ ಅಗತ್ಯವಾದ ಪ್ರೋಟೀನ್ ಮತ್ತು ಪೋಷಕಾಂಶಗಳನ್ನು ಒದಗಿಸುತ್ತದೆ. ಇದರೊಂದಿಗೆ ಇದು ನೆತ್ತಿಯಲ್ಲಿ ರಕ್ತ ಪರಿಚಲನೆ ಹೆಚ್ಚಿಸುತ್ತದೆ. ಇದರಿಂದ ಕೂದಲ ಬೆಳವಣಿಗೆಯು ಉತ್ತಮವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News