Chanakya Niti: ಇಂತಹ ಪರಿಸ್ಥಿತಿಯಲ್ಲಿ ಮನುಷ್ಯನಿಗೆ ಜ್ಞಾನವೂ ವಿಷಕ್ಕೆ ಸಮಾನ

Chanakya Niti: ಚಾಣಕ್ಯ ನೀತಿಯಲ್ಲಿ ಒಂದು ಶ್ಲೋಕದ ಮಾಧ್ಯಮದ ಮೂಲಕ ಯಾವ ಪರಿಸ್ಥಿತಿಯಲ್ಲಿ ಜ್ಞಾನ ಮನುಷ್ಯನ ಪಾಲಿಗೆ ವಿಷಕ್ಕೆ ಸಮಾನ ಎಂಬುದನ್ನು ಹೇಳಲಾಗಿದೆ. ಅದನ್ನು ಸರಿಯಾಗಿ ಉಪಯೋಗಿಸದೆ ಹೋದಲ್ಲಿ ಅದು ತುಂಬಾ ಅಪಾಯಕಾರಿ ಸಾಬೀತಾಗುತ್ತದೆ.  

Written by - Nitin Tabib | Last Updated : Sep 3, 2022, 08:00 PM IST
  • ಸಾಮಾನ್ಯವಾಗಿ ಜ್ಞಾನ ವ್ಯಕ್ತಿಗೆ ಸಾಮರ್ಥ್ಯವನ್ನು ನೀಡುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ.
  • ಜ್ಞಾನದ ಬಲದಿಂದ ವ್ಯಕ್ತಿ ವಿಭಿನ್ನ ಕಠಿಣ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸುತ್ತಾನೆ.
  • ಜ್ಞಾನವಿದ್ದಷ್ಟು ವ್ಯಕ್ತಿ ತನ್ನ ಬುದ್ಧಿಯ ಬಲದಿಂದ ಶಕ್ತಿಶಾಲಿ ಹಾಗೂ ಸಂಪನ್ನನಾಗಿರುತ್ತಾನೆ.
Chanakya Niti: ಇಂತಹ ಪರಿಸ್ಥಿತಿಯಲ್ಲಿ ಮನುಷ್ಯನಿಗೆ ಜ್ಞಾನವೂ ವಿಷಕ್ಕೆ ಸಮಾನ title=
Chanakya Niti

Chanakya Niti: ಸಾಮಾನ್ಯವಾಗಿ ಜ್ಞಾನ ವ್ಯಕ್ತಿಗೆ ಸಾಮರ್ಥ್ಯವನ್ನು ನೀಡುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಜ್ಞಾನದ ಬಲದಿಂದ ವ್ಯಕ್ತಿ ವಿಭಿನ್ನ ಕಠಿಣ ಪರಿಸ್ಥಿತಿಗಳನ್ನು ಸಮರ್ಥವಾಗಿ ಎದುರಿಸುತ್ತಾನೆ. ಜ್ಞಾನವಿದ್ದಷ್ಟು ವ್ಯಕ್ತಿ ತನ್ನ ಬುದ್ಧಿಯ ಬಲದಿಂದ ಶಕ್ತಿಶಾಲಿ ಹಾಗೂ ಸಂಪನ್ನನಾಗಿರುತ್ತಾನೆ. ಆದರೆ, ಆಚಾರ್ಯ ಚಾಣಕ್ಯರು ಶ್ಲೋಕವೊಂದರ ಮಾಧ್ಯಮದ ಮೂಲಕ ಎಂತಹ ಪರಿಸ್ಥಿತಿಗಳಲ್ಲಿ ಈ ಜ್ಞಾನ ವಿಷಕ್ಕೆ ಸಮಾನ ಎಂಬುದನ್ನು ಹೇಳಿದ್ದಾರೆ. ಅಷ್ಟೇ ಅಲ್ಲ ಅದನ್ನು ಸರಿಯಾಗಿ ಉಪಯೋಗಿಸದೆ ಹೋದಲ್ಲಿ ಅದು ತುಂಬಾ ಅಪಾಯಕಾರಿ ಸಾಬೀತಾಗಬಹುದು ಎಂದು ಹೇಳಿದ್ದಾರೆ.

ಅನಭ್ಯಾಸೆ ವಿಷಂ ಶಾಸ್ತ್ರಮಜೀರ್ಣೆ ಭೋಜನ ವಿಷಂ,
ದರಿದ್ರ್ಯಸ್ಯ ವಿಷಂ ಗೋಷ್ಠಿ, ವೃದ್ಧಾಸ್ಯ ತರುಣಿ ವಿಷಂ,

ಪ್ರಾಕ್ಟೀಸ್ ಇಲ್ಲದೆ ಹೋದಲ್ಲಿ ಜ್ಞಾನ ವಿಷಕ್ಕೆ ಸಮಾನ
ಒಬ್ಬ ವ್ಯಕ್ತಿಯು ತಾನು ಗಳಿಸಿರುವ ಜ್ಞಾನವನ್ನು ಅವನು ನಿರಂತರ ಅಭ್ಯಾಸ ಮಾಡದೆ ಹೋದಲ್ಲಿ ಅವನು ನಿಷ್ಪ್ರಯೋಜಕನಾಗುತ್ತಾನೆ ಎಂದು ಚಾಣಕ್ಯ ಹೇಳುತ್ತಾರೆ. ಚಾಣಕ್ಯನ ಪ್ರಕಾರ, ಅಪೂರ್ಣ ಜ್ಞಾನವು ತುಂಬಾ ಅಪಾಯಕಾರಿ, ಆದ್ದರಿಂದ ಅಭ್ಯಾಸ ಮಾಡುವ ಮೂಲಕ ಅದನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳಬೇಕು. ಉದಾಹರಣೆಗೆ, ವೈದ್ಯರು ಅಪೂರ್ಣ ಜ್ಞಾನದ ಆಧಾರದ ಮೇಲೆ ರೋಗಿಗಳಿಗೆ ಚಿಕಿತ್ಸೆ ನೀಡಿದರೆ, ಅದು ಎಷ್ಟು ಹಾನಿಕಾರಕವಾಗಿದೆ ಅಲ್ಲವೇ. ಜ್ಞಾನವನ್ನು ಗಳಿಸಿದ ನಂತರ, ಅದನ್ನು ಅಭ್ಯಾಸ ಮಾಡಿ, ಆಗ ಮಾತ್ರ ನಿಮಗೆ ಯಶಸ್ಸು ಸಿಗುತ್ತದೆ ಎಂದು ಆಚಾರ್ಯರು ಹೇಳಿದ್ದಾರೆ.

ಆಹಾರ ವಿಷದಂತಾಗುವುದು ಯಾವಾಗ?
ಚಾಣಕ್ಯನ ಪ್ರಕಾರ, ಒಬ್ಬ ವ್ಯಕ್ತಿಯು ಅಜೀರ್ಣದ ಸಂದರ್ಭದಲ್ಲಿ ಲಘು ಆಹಾರ ಅಥವಾ ಆಹಾರವನ್ನು ತೆಗೆದುಕೊಳ್ಳಬಾರದು. ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ. ಈ ಸ್ಥಿತಿಯಲ್ಲಿ, ಆಹಾರವು ವಿಷದಂತಿದೆ ಎಂದು ಹೇಳಲಾಗುತ್ತದೆ. ಅದು ವ್ಯಕ್ತಿಯನ್ನು ಮತ್ತಷ್ಟು ಘಾಸಿಗೊಳಿಸುತ್ತದೆ.

ಇದನ್ನೂ ಓದಿ-Mercury Retrograde 2022: ಶೀಘ್ರದಲ್ಲಿಯೇ ಕನ್ಯಾ ರಾಶಿಯಲ್ಲಿ ಬುಧನ ವಕ್ರನಡೆ ಆರಂಭ, ಯಾರಿಗೆ ಏನು ಲಾಭ-ನಷ್ಟ?

ಬಡವರಿಗೆ ಸಮಾರಂಭ
ಆಚಾರ್ಯ ಚಾಣಕ್ಯರು ಸ್ವಾಭಿಮಾನಿ ಬಡವನಿಗೆ ಸಮಾರಂಭಗಳು, ಮದುವೆಗಳು, ಆಚರಣೆಗಳು ಎಲ್ಲವೂ ನಿಷ್ಪ್ರಯೋಜಕವಾಗಿದೆ, ಏಕೆಂದರೆ ಅಂತಹ ಸ್ಥಳದಲ್ಲಿ ಅವನ ಆರ್ಥಿಕ ಸ್ಥಿತಿಯು ಹಾಸ್ಯಾಸ್ಪದವಾಗಿದೆ. ಅವನು ಅದನ್ನು ಸಹಿಸುವುದಿಲ್ಲ, ಮತ್ತು ಅಂತಹ ಹಾಸ್ಯಗಳು ಅವನಿಗೆ ವಿಷದಂತಾಗುತ್ತವೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ-Daily Horoscope 03 September 2022: ಇಂದು ಈ ರಾಶಿಗಳ ಜನರಿಗೆ ಸಿಗಲಿದೆ ಭಾಗ್ಯದ ಸಾಥ್, ನಿಮ್ಮ ರಾಶಿ ಫಲ ಓದಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News