Bengaluru: ಗಂಡನ ಕಥೆ ಮುಗಿಸಿ ನಾಟಕವಾಡುತ್ತಿದ್ದ ಚಾಲಕಿ ಹೆಂಡತಿಯ ಬಂಧನ!

ಅಕ್ಕನ ಮಗನ ಸಹಾಯದಿಂದ ಬೆಂಗಳೂರಿನಲ್ಲಿ ಪತಿ ಕೊಂದು ಶವವನ್ನು ಊರಿಗೆ ಕೊಂಡೊಯ್ದು ನಾಟಕವಾಡಿದ್ದ ಹೆಂಡತಿಯನ್ನು ಮಂಡ್ಯದಲ್ಲಿ ಬಂಧಿಸಲಾಗಿದೆ.

Written by - VISHWANATH HARIHARA | Edited by - Puttaraj K Alur | Last Updated : Sep 4, 2022, 12:33 PM IST
  • ಅನೈತಿಕ ಸಂಬಂಧವಿದೆ ಎಂದು ಅನುಮಾನಿಸುತ್ತಿದ್ದ ಗಂಡನ ಕಥೆ ಮುಗಿಸಿದ ಪತ್ನಿ
  • ಬೆಂಗಳೂರಿನಲ್ಲಿ ಪತಿ ಕೊಂದು ಶವವನ್ನು ಊರಿಗೆ ಕೊಂಡೊಯ್ದು ನಾಟಕವಾಡಿದ್ದ ಹೆಂಡತಿ ಬಂಧನ
  • ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಪತಿಯನ್ನು ಅಕ್ಕನ ಮಗನ ಸಹಾಯದಿಂದ ಹತ್ಯೆ ಮಾಡಿಸಿದ್ದ ಪತ್ನಿ
Bengaluru: ಗಂಡನ ಕಥೆ ಮುಗಿಸಿ ನಾಟಕವಾಡುತ್ತಿದ್ದ ಚಾಲಕಿ ಹೆಂಡತಿಯ ಬಂಧನ! title=
ಅನುಮಾನಿಸುತ್ತಿದ್ದ ಗಂಡನ ಕಥೆ ಮುಗಿಸಿದ ಪತ್ನಿ

ಬೆಂಗಳೂರು: ಅನೈತಿಕ ಸಂಬಂಧವಿದೆ ಎಂದು ಪದೇ ಪದೇ ಅನುಮಾನಿಸುತ್ತಿದ್ದ ಗಂಡನ ಕಥೆಯನ್ನು ಪತ್ನಿಯೇ ಮುಗಿಸಿದ್ದಾಳೆ. ಅಕ್ಕನ ಮಗನ ಸಹಾಯದಿಂದ ಬೆಂಗಳೂರಿನಲ್ಲಿ ಪತಿಯನ್ನು ಕೊಂದು ಶವವನ್ನು ಊರಿಗೆ ಕೊಂಡೊಯ್ದು ನಾಟಕವಾಡಿದ್ದ ಹೆಂಡತಿಯನ್ನು ಮಂಡ್ಯದಲ್ಲಿ ಬಂಧಿಸಲಾಗಿದೆ. ಶಿಲ್ಪಾ ಬಂಧಿತ ಆರೋಪಿಯಾಗಿದ್ದು, ಮಹೇಶ್ ಕೊಲೆಯಾದ ದುರ್ದೈವಿ.

ಮಂಡ್ಯ ಮೂಲದ ಮಹೇಶ್ ಮತ್ತು ಶಿಲ್ಪಾಗೆ 8 ವರ್ಷಗಳ ಹಿಂದೆ ಮದುವೆಯಾಗಿತ್ತು. ಈ ದಂಪತಿ ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ  ವಾಸವಾಗಿದ್ದರು. ಇತ್ತೀಚೆಗಷ್ಟೇ ಶಿಲ್ಪಾ ಬೆಂಗಳೂರಲ್ಲಿ ವಾಸವಿದ್ರೆ, ಕೆಲಸದ ನಿಮಿತ್ತ ಮಹೇಶ್ ಮಂಡ್ಯದಲ್ಲಿ ವಾಸವಿದ್ದ. ಆಗಾಗ ಬೆಂಗಳೂರಿಗೆ ಬಂದು ಹೋಗ್ತಿದ್ದ ಮಹೇಶ್ ಬರುವಾಗಲೆಲ್ಲ ಮದ್ಯ ಸೇವಿಸಿರುತ್ತಿದ್ದ. ಈ ವೇಳೆ ಮನೆಗೆ ಬಂದು ಗಲಾಟೆ ಮಾಡಿ ‘ನಿನಗೆ ಅನೈತಿಕ ಸಂಬಂಧ ಇದೆ’ ಎಂದು ಶಿಲ್ಪಾಗೆ ಕಾಟ ನೀಡುತ್ತಿದ್ದನಂತೆ.

ಇದನ್ನೂ ಓದಿ: ವೀರಾಧಿವೀರರೇ, ಸಿಡಿ ಶೂರರೇ, ಲಿಂಬಾವಳಿ ವಿರುದ್ಧ ನಿಮ್ಮ ಕ್ರಮ ಏನು..? : ಕಾಂಗ್ರೆಸ್‌ ಆಕ್ರೋಶ

ಗಂಡನ ಕಿರುಕುಳದಿಂದ ಬೇಸತ್ತ ಶಿಲ್ಪಾ ಈ ಬಗ್ಗೆ ತನ್ನ ತಾಯಿ ಬಳಿ ನೋವು ಹೇಳಿಕೊಂಡಿದ್ದಳು. ಕಳೆದ ಗುರುವಾರವೂ ಶಿಲ್ಪಾಳನ್ನು ಭೇಟಿಯಾಗಲು ಬಂದು ಗಲಾಟೆ ಮಾಡುತ್ತಿದ್ದ ಅಳಿಯನಿಗೆ ಬುದ್ಧಿವಾದ ಹೇಳುವಂತೆ ಶಿಲ್ಪಾಳ ತಾಯಿ ತನ್ನ ಹಿರಿಯ ಮಗಳ ಮಗ ಬಾಲಾಜಿಗೆ ಹೇಳಿದ್ದಳು.

ಅದರಂತೆ ಬುದ್ಧಿ ಹೇಳಲು ಬಂದಿದ್ದ ಬಾಲಾಜಿ ಕೋಪದಲ್ಲಿ ಮಹೇಶ್ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದ. ಪರಿಣಾಮ ಮಹೇಶ್ ಪ್ರಾಣಪಕ್ಷಿಯೇ ಹಾರಿಹೋಗಿದೆ. ಬಳಿಕ ಮೂರ್ಛೆ ರೋಗದಿಂದ ಮಹೇಶ್ ಮೃತಪಟ್ಟಿದ್ದಾನೆ ಎಂದು ಮೃತದೇಹವನ್ನು ಶಿಲ್ಪಾಳೇ ಆತನ ಹುಟ್ಟೂರಿಗೆ ತೆಗೆದುಕೊಂಡು ಹೋಗಿದ್ದಳು. ಅನುಮಾನಗೊಂಡ ಮಹೇಶ್ ಪೋಷಕರು ಮಂಡ್ಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಶಕ್ಕೆ ಪಡೆದು ವಿಚಾರಿಸಿದಾಗ ಅಸಲಿ ವಿಚಾರ ಬಯಲಾಗಿದ್ದು, ಕೊಲೆಗೆ ಸಹಕರಿಸಿದ ಶಿಲ್ಪಾ, ಆಕೆಯ ತಾಯಿಯನ್ನು ವಶಕ್ಕೆ ಪಡೆದಿದ್ದಾರೆ. ಮಂಡ್ಯ ಪೊಲೀಸರು ಪ್ರಕರಣವನ್ನು ಕೋಣನಕುಂಟೆ ಠಾಣೆಗೆ ವರ್ಗಾಯಿಸಿದ್ದಾರೆ. ಆರೋಪಿ‌ ಬಾಲಾಜಿ ತಲೆಮರೆಸಿಕೊಂಡಿದ್ದು ಶೋಧಕಾರ್ಯ ಮುಂದುವರೆದಿದೆ.

ಇದನ್ನೂ ಓದಿ: BBMP : ಬಿಬಿಎಂಪಿಯಿಂದ ಒತ್ತುವರಿ ತೆರವು ಕಾರ್ಯಾಚರಣೆ : 9 ಕಡೆ ಘರ್ಜಿಸಿದ ಜೆಸಿಬಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News