ನವದೆಹಲಿ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಸೋಮವಾರವೂ ಏರಿಯತ್ತ ಮುಖಮಾಡಿದ್ದು, ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 15 ಪೈಸೆ ಏರಿಕೆಯಾಗಿದೆ. ಇದರೊಂದಿಗೆ ಪೆಟ್ರೋಲ್ ಬೆಲೆ ಲೀಟರ್ಗೆ 82.06 ರೂ. ತಲುಪಿದೆ. ಡೀಸೆಲ್ ಬೆಲೆ 6 ಪೈಸೆ ಏರಿಕೆಯಾಗಿ 73.78 ರೂ.ಗೆ ತಲುಪಿದೆ. ಅದೇ ಸಮಯದಲ್ಲಿ ಮುಂಬೈಯಲ್ಲಿ ಪೆಟ್ರೋಲ್ ದರ ಶೀಘ್ರದಲ್ಲೇ 90 ರೂ. ತಲುಪುವ ಸಂಭವ ಹೆಚ್ಚಾಗಿದೆ.
Petrol at Rs 82.06/litre (increase by Rs 0.15/litre) and diesel at Rs 73.78/litre (increase by Rs 0.6/litre) in Delhi. Petrol at Rs 89.44/litre (increase by Rs 0.15/litre) and diesel at Rs 78.33/litre (increase by Rs 0.7/litre) in Mumbai. pic.twitter.com/Z9Yk0KnJOp
— ANI (@ANI) September 17, 2018
ಭಾನುವಾರ ದೆಹಲಿಯಲ್ಲಿ ಪೆಟ್ರೋಲ್ ದರವು ಲೀಟರ್ಗೆ 28 ಪೈಸೆ ಏರಿಕೆಯಾಗಿ ಬೆಲೆ ಲೀಟರ್ಗೆ 81.91 ರೂ. ತಲುಪಿತ್ತು, ಡೀಸೆಲ್ 18 ಪೈಸೆ ಹೆಚ್ಚಾಗಿ 73.72 ರೂ. ಪ್ರತಿ ಲೀಟರ್ ತಲುಪಿತು.
ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ಸಾಧ್ಯತೆ
ಮುಂಬೈನಲ್ಲಿ 89.44 ರೂ. ಪ್ರತಿ ಲೀಟರ್ ತಲುಪಿದ ಪೆಟ್ರೋಲ್:
ದೇಶದ ಅರ್ಥಿಕ ರಾಜಧಾನಿ ಮುಂಬೈನಲ್ಲಿ ಪೆಟ್ರೋಲ್ ಬೆಲೆ 15 ಪೈಸೆ ಏರಿಕೆಯಾಗಿದೆ. ಇದರ ನಂತರ ಪೆಟ್ರೋಲ್ ಲೀಟರ್ಗೆ 89.44 ರೂ. ತಲುಪಿದೆ. ಅದೇ ಸಮಯದಲ್ಲಿ ಡೀಸೆಲ್ ಬೆಲೆ 7 ಪೈಸೆ ಏರಿಕೆಯಾಗಿದ್ದು, 78.33 ರೂ. ಆಗಿದೆ.
ಕರ್ನಾಟಕದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ ಸಾಧ್ಯತೆ:
ದೇಶದಲ್ಲಿ ಗಗನಕ್ಕೇರುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಯುವ ಲಕ್ಷಣ ಕಾಣಿಸದೇ ಇರುವ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಸೆಸ್ ಕಡಿಮೆ ಮಾಡಿ ಇವುಗಳ ದರವನ್ನು 2ರಿಂದ 2.5 ರೂ.ನಷ್ಟು ಇಳಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಸುವ ಕುರಿತು ಪರಿಶೀಲಿಸಿ ಪ್ರಸ್ತಾವನೆ ಸಿದ್ಧಪಡಿಸುವಂತೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಸೂಚನೆಯಂತೆ ಹಣಕಾಸು ಇಲಾಖೆ ಅಧಿಕಾರಿಗಳು ದರ ಇಳಿಕೆ ಕುರಿತು ಚರ್ಚಿಸಿದ್ದು, ಮುಖ್ಯಮಂತ್ರಿಗಳೊಂದಿಗೆ ಇನ್ನೊಂದು ಸುತ್ತು ಮಾತುಕತೆ ನಡೆಸಿ ದರ ಇಳಿಕೆ ಆದೇಶ ಹೊರಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.