ಬೆಂಗಳೂರು : ಸ್ಯಾಂಡಲ್‌ವುಡ್‌ನಲ್ಲಿ ವಿಭಿನ್ನ ಸಿನಿಮಾಗಳನ್ನ ತೆರೆ ಮೇಲೆ ತಂದು ಯಶಸ್ವಿಯಾಗಿರುವ ನಿರ್ದೇಶಕ, ನಟ ರಿಷಬ್ ಶೆಟ್ಟಿ ಸದ್ಯ ʼಕಾಂತಾರʼದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಿಂಚಲು ಸಿದ್ಧತೆ ನಡೆಸಿದ್ದಾರೆ. ಈಗಾಗಲೇ ಕಾಂತಾರ ಟ್ರೈಲರ್ ಅಭಿಮಾನಿಗಳಲ್ಲಿ ಕುತೂಹಲ ಮೂಡುವಂತೆ ಮಾಡಿದೆ. ಸದ್ಯ ಚಿತ್ರತಂಡ ಸಿನಿಮಾದ ಮೇಕಿಂಗ್ ವಿಡಿಯೋವನ್ನು ಬಿಡುಗಡೆ ಮಾಡಿದ್ದು, ಚಿತ್ರದ ಮೇಲಿನ ಕಾನ್ಫಿಡೆನ್ಸ್ ಹೆಚ್ಚಿಸಿದೆ.
ಹೌದು, ಬ್ಯಾಕ್ ಟು ಬ್ಯಾಕ್ ಕನ್ನಡಿಗರ ಸಿನಿಮಾಗಳು ಭಾರತೀಯ ಚಿತ್ರರಂಗದಲ್ಲಿ ಹಿಸ್ಟರಿ ಸೃಷ್ಟಿಸುತ್ತಿವೆ. ಇದೇ ಸಾಲಿಗೆ ಶೆಟ್ಟರ್ ʼಕಾಂತಾರʼ ಸೇರ್ಪಡೆಯಾಗಲಿದೆ ಎಂಬ ಮಾತು ಗಾಂಧಿನಗರದಲ್ಲಿ ಹರಿದಾಡುತ್ತಿದೆ. ಕಾರಣ ಚಿತ್ರದ ಸ್ಟೋರಿ ಹಾಗೂ ಮೇಕಿಂಗ್. ಇನ್ನು ಮೇಕಿಂಗ್ ವಿಡಿಯೋದಲ್ಲಿ ರಿಷಬ್ ಕಂಬಳದ ಕಣದಲ್ಲಿ ಕೋಣದ ಜೊತೆ ಸರಿಸಮಾನವಾಗಿ ಓಡುವ ದೃಶ್ಯವನ್ನು ಕಾಣಬಹುದು. ಅಷ್ಟೇ ಅಲ್ಲದೆ ಸಿನಿಮಾಗೆ ಛಾಯಾಗ್ರಹಣ ಮಾಡಿರುವ ಅರವಿಂದ ಕಷ್ಯಪ್ ಅವರು ಕೆಸರಿನಲ್ಲಿ ಕ್ಯಾಮೆರಾ ಹಿಡಿದು ಅದ್ಭುತ ದೃಶ್ಯಗಳನ್ನು ಸೆರೆಹಿಡಿಯುತ್ತಿರುವುದು ಇದೆ. ಇನ್ನು ಸಿನಿಮಾಗಾಗಿ ರಿಷಬ್ ಅವರು ಎಷ್ಟು ತಯಾರಿ ನಡೆಸಿದ್ದರು ಎಂದು ಮೇಂಕಿಗ್ ನೋಡಿದ್ರೆ ತಿಳಿಯುತ್ತದೆ.
ಇದನ್ನೂ ಓದಿ: ಪಿಬಿಎಸ್ ಅವರ ಜನ್ಮದಿನದ ಸವಿನೆನಪು : ಅಮರ ಗಾಯಕನ ಯಾವ ಹಾಡು ನಿಮಗಿಷ್ಟ..?
𝐓𝐡𝐞 #𝐖𝐨𝐫𝐥𝐝𝐎𝐟𝐊𝐚𝐧𝐭𝐚𝐫𝐚 - 𝐄𝐩𝐢𝐬𝐨𝐝𝐞 𝟎𝟏
𝐒𝐡𝐢𝐯𝐚 & 𝐊𝐚𝐦𝐛𝐚𝐥𝐚 : https://t.co/3DEEzZ6tHh#Kantara releasing on 30th September.@shetty_rishab @VKiragandur @hombalefilms @gowda_sapthami @HombaleGroup @AJANEESHB #ArvindKashyap @KantaraFilm #KantaraOnSep30 pic.twitter.com/55ddKQ9igJ
— Hombale Films (@hombalefilms) September 22, 2022
‘ಕಾಂತಾರ’ ಚಿತ್ರದ ಕಥೆ ಕರಾವಳಿ ಭಾಗದ ಅಂಶಗಳನ್ನು ಒಳಗೊಂಡಿದ್ದು, ಕಥೆಯಲ್ಲಿ ಕಂಬಳ ಸ್ಪರ್ಧೆಯ ದೃಶ್ಯಗಳು ಕೂಡ ಬರಲಿವೆ. ರಿಷಬ್ ಶೆಟ್ಟಿ ಅವರು ಕಂಬಳದ ಕೋಣಗಳನ್ನು ಓಡಿಸುವುದು ಕಲಿತು ನಟಿಸಿರುವುದು ಇಲ್ಲಿ ಗಮನಾರ್ಹ ವಿಷಯ. ವೃತ್ತಿಪರ ಕಂಬಳದ ಓಟಗಾರನಂತೆ ಅವರು ಕೋಣವನ್ನು ಓಡಿಸುತ್ತಿರುವುದರ ಹಿಂದಿನ ಪರಿಶ್ರಮ ಅಷ್ಟು ಸುಲಭದ್ದಲ್ಲ. ಅದು ಹಲವು ದಿನಗಳ ಅಭ್ಯಾಸದ ಫಲ.
ದುಬಾರಿ ಕ್ಯಾಮೆರಾಗಳನ್ನು ಇಟ್ಟುಕೊಂಡು ಕೆಸರಿನಲ್ಲಿ ಶೂಟಿಂಗ್ ಮಾಡಿರುವುದು ಕಷ್ಟ ಅಲ್ಲದೆ, ಛಾಯಾಗ್ರಾಹಕ ಅರವಿಂದ್ ಕಶ್ಯಪ್ ಅವರು ಸಹ ಕಾಂತಾರಕ್ಕೆ ಶ್ರಮ ವಹಿಸಿರುವುದು ವಿಡಿಯೋದಲ್ಲಿದೆ. ಸದ್ಯ ಮೇಕಿಂಗ್ ವಿಡಿಯೋ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ʼಹೊಂಬಾಳೆ ಫಿಲ್ಮ್ಸ್ʼ ಬ್ಯಾನರ್ ಮೂಲಕ ವಿಜಯ್ ಕಿರಗಂದೂರು ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ರಿಷಬ್ ಶೆಟ್ಟಿ ಜೊತೆ ಸಪ್ತಮಿ ಗೌಡ, ಕಿಶೋರ್, ಅಚ್ಯುತ್ ಕುಮಾರ್, ಪ್ರಮೋದ್ ಶೆಟ್ಟಿ ಮುಂತಾದವರು ಚಿತ್ರದಲ್ಲಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.