ಪಾಟ್ನಾ: ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯರು ಕೇಳಿದ ಪ್ರಶ್ನೆಗೆ ಅತ್ಯಂತ ಒರಟಾಗಿ ಉತ್ತರಿಸಿದ ಹಿರಿಯ ಐಎಎಸ್ ಅಧಿಕಾರಿ ಮತ್ತು ಬಿಹಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಎಂಡಿ ಹರ್ಜೋತ್ ಕೌರ್ ಬಮ್ಹ್ರಾ ದೊಡ್ಡ ವಿವಿವಾ ಸೃಷ್ಟಿಸಿದ್ದಾರೆ. ಇದೀಗ ಈ ಐಎಎಸ್ ಅಧಿಕಾರಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕಾರ್ಪೊರೇಷನ್ ಮತ್ತು ಯುನಿಸೆಫ್ ಬುಧವಾರ 9 ಮತ್ತು 10ನೇ ತರಗತಿಯ ವಿದ್ಯಾರ್ಥಿನಿಯರಿಗಾಗಿ ಆಯೋಜಿಸಿದ್ದ ‘ಶಕ್ತ ಬೇಟಿ ಸಮೃದ್ಧ ಬಿಹಾರ್’ (ಸಬಲ ಪುತ್ರಿ, ಸಮೃದ್ಧ ಬಿಹಾರ) ಕಾರ್ಯಾಗಾರದಲ್ಲಿ ಕೇಳಿದ ಪ್ರಶ್ನೆಗೆ ಹರ್ಜೋತ್ ಕೌರ್ ವಿವಾದಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಅಧಿಕಾರಿ ನೀಡಿದ ಉತ್ತರದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
‘ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿನಿಯೊಬ್ಬಳು ಮಾತನಾಡಿ, ಸರ್ಕಾರ ವಿದ್ಯಾರ್ಥಿಗಳಿಗೆ ಶಾಲಾ ಉಡುಗೆ, ವಿದ್ಯಾರ್ಥಿ ವೇತನ, ಸೈಕಲ್ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ವಿದ್ಯಾರ್ಥಿನಿಯರಿಗೆ 20ರಿಂದ 30 ರೂ.ಗೆ ಸ್ಯಾನಿಟರಿ ಪ್ಯಾಡ್ಗಳನ್ನು ನೀಡಬಹುದಲ್ಲವೇ ಪ್ರಶ್ನಿಸಿದ್ದಳು. ಈ ಪ್ರಶ್ನೆ ಕೇಳುತ್ತಿದ್ದಂತೆಯೇ ನೆರೆದಿದ್ದ ಇನ್ನುಳಿದ ವಿದ್ಯಾರ್ಥಿನಿಯರು ಜೋರಾಗಿ ಚಪ್ಪಾಳೆ ತಟ್ಟಿದ್ದಾರೆ.
ಇದನ್ನೂ ಓದಿ: Meesho ದಲ್ಲಿ ಡ್ರೋನ್ ಕ್ಯಾಮೆರಾ ಆರ್ಡರ್ ಮಾಡಿದವರಿಗೆ ಸಿಕ್ಕಿದ್ದೇನು ನೋಡಿ.!
A simple request for good quality sanitary pads (costing Rs 20-30) was met with a snarky response from Bihar’s IAS officer Harjot Kaur.
“Tomorrow you'll say the Govt can give jeans too. And why not some beautiful shoes after that… family planning method, nirodh too.” pic.twitter.com/b98VWA3b8H
— Marya Shakil (@maryashakil) September 28, 2022
ಇದಕ್ಕೆ ಪ್ರತಿಕ್ರಿಯಿಸಿದ ಹರ್ಜೋತ್ ಕೌರ್ ‘ಮೊದಲು ಚಪ್ಪಾಳೆ ತಟ್ಟುವುದನ್ನು ನಿಲ್ಲಿಸಿ, ಇಂತಹ ಬೇಡಿಕೆಗಳಿಗೆ ಕೊನೆಯೇ ಇಲ್ಲ. ಇಂದು ಸರ್ಕಾರವು ನಿಮಗೆ 20 ರಿಂದ 30 ರೂ.ಗೆ ಸ್ಯಾನಿಟರಿ ಪ್ಯಾಡ್ಗಳನ್ನು ನೀಡುತ್ತದೆ. ನಂತರ ನೀವು ಜೀನ್ಸ್, ಪ್ಯಾಂಟ್ ಮತ್ತು ಸುಂದರವಾದ ಶೂಗಳನ್ನು ಕೇಳುತ್ತೀರಿ. ಕುಟುಂಬ ಯೋಜನೆಯ ವಿಷಯಕ್ಕೆ ಬಂದರೆ ಸರ್ಕಾರ ನಿಮಗೆ ಕಾಂಡೋಮ್ (ನಿರೋಧ್) ಸಹ ಕೊಡಬೇಕಾಗುತ್ತದೆ. ಸರ್ಕಾರದಿಂದ ಎಲ್ಲವನ್ನೂ ಉಚಿತವಾಗಿ ತೆಗೆದುಕೊಳ್ಳುವ ಅಭ್ಯಾಸ ಏಕೆ? ಅದರ ಅಗತ್ಯವೇನು?’ ಅಂತಾ ಅವರು ಪ್ರಶ್ನಿಸಿದ್ದಾರೆ.
ಅಧಿಕಾರಿಯ ಇರುಸುಮುರಿಸಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿದ್ಯಾರ್ಥಿನಿ, ‘ನಮ್ಮ ಮತ ಕೇಳಲು ಸರ್ಕಾರವು ತಮ್ಮ ಬಳಿಗೆ ಬರುತ್ತದೆ ಎಂದು ಹೇಳಿದ್ದಾಳೆ. ಇದಕ್ಕೆ ಕೋಪದಿಂದ ಪ್ರತಿಕ್ರಿಯಿಸಿದ ಹರ್ಜೋತ್ ಕೌರ್, ‘ಇದು ಮೂರ್ಖತನದ ಪರಮಾವಧಿ. ನಿನಗೆ ಇಷ್ಟವಿದ್ದರೆ ಮತ ಹಾಕು, ಇಲ್ಲವೇ ಪಾಕಿಸ್ತಾನಕ್ಕೆ ಹೋಗು. ಸರ್ಕಾರದಿಂದ ಹಣ ಮತ್ತು ಸೌಲಭ್ಯ ಪಡೆಯಲು ನೀವು ಮತ ನೀಡುತ್ತಿದ್ದೀರಿ’ ಅಂತಾ ಹೇಳಿದ್ದಾರೆ.
ಬಳಿಕ ನಾನು ಭಾರತೀಯಳು, ಪಾಕಿಸ್ತಾನಕ್ಕೆ ಏಕೆ ಹೋಗಬೇಕು ಅಂತಾ ಆ ವಿದ್ಯಾರ್ಥಿನಿ ಐಎಎಸ್ ಅಧಿಕಾರಿಗೆ ಪ್ರಶ್ನಿಸಿದ್ದಾಳೆ. ಸಾರ್ವಜನಿಕವಾಗಿ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಈ ರೀತಿ ಅಣಕಿಸಿದ ಅಧಿಕಾರಿಯ ವರ್ತನೆ ವಿವಾದಕ್ಕೆ ಕಾರಣವಾಗಿದೆ. ಈ ಘಟನೆ ಬಗ್ಗೆ ಸಮಾಜ ಕಲ್ಯಾಣ ಖಾತೆ ಸಚಿವ ಮದನ್ ಸಾಹ್ನಿ ಆಘಾತ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Watch: ಮುದ್ದಾದ ನಾಯಿ ಮರಿ ಜೊತೆ ಪುಟಾಣಿ ಬಾತುಕೋಳಿಗಳ ಆಟ.. ಇದೆಂದಥಾ ಒಡನಾಟ.!
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.