Parrot Viral Video : ಸಾಮಾಜಿಕ ಜಾಲತಾಣಗಳಲ್ಲಿನ ವಿಡಿಯೋಗಳು ಹೆಚ್ಚು ಗಮನ ಸೆಳೆಯುತ್ತಿವೆ. ಈ ಮಾಧ್ಯಮಗಳಲ್ಲಿನ ಕೆಲವು ವಿಡಿಯೋಗಳು ಜನರ ಜೀವನದ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಚಲನಚಿತ್ರಗಳ ಹಾಸ್ಯ ದೃಶ್ಯಗಳು, ರೀಲ್ಗಳು, ಮದುವೆಯ ವೀಡಿಯೊಗಳು ಮತ್ತು ಪ್ರಾಣಿ ಪಕ್ಷಿಗಳ ವೀಡಿಯೊ ವೈರಲ್ ಆಗುತ್ತಿರುತ್ತವೆ. ಪ್ರಾಣಿ ಪಕ್ಷಿಗಳ ವಿಡಿಯೋಗಳನ್ನು ವೀಕ್ಷಿಸುವವರು ಅವುಗಳನ್ನು ಇಷ್ಟಪಡುವವರ ದೊಡ್ಡ ಬಳಗವೇ ಇದೆ. ಇದೀಗ ಸೋಶಿಯಲ್ ಮೀಡಿಯಾದಲ್ಲಿ ಗಿಳಿಯ ವಿಡಿಯೋವೊಂದು ಭಾರೀ ಸದ್ದು ಮಾಡುತ್ತಿದೆ.
ಗಿಳಿಗಳು ನಮ್ಮ ದೇಶದ ಅತ್ಯಂತ ಸಾಮಾನ್ಯ ಪಕ್ಷಿ. ನಮ್ಮ ದೇಶದಲ್ಲಿ ಹಸಿರು ಬಣ್ಣದ ಗಿಳಿಗಳು ಕಾಣಸಿಗುತ್ತವೆ. ಆದರೆ ಪ್ರಪಂಚದ ವಿವಿಧ ಭಾಗಗಳಲ್ಲಿ ನೀಲಿ, ಕೆಂಪು, ಹಳದಿ ಮತ್ತು ಬಿಳಿಯಂತಹ ವಿವಿಧ ಬಣ್ಣಗಳ ಗಿಳಿಗಳಿವೆ. ಗಿಳಿಗಳು ಮನುಷ್ಯರ ಮಾತನ್ನು ಅನುಕರಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರಣಕ್ಕಾಗಿಯೇ ಹೆಚ್ಚಿನ ಜನರು ಗಿಳಿಯನ್ನು ಇಷ್ಟಪಡುತ್ತಾರೆ. ಆದರೆ ಇಲ್ಲೊಂದು ಗಿಳಿ ತನ್ನ ವಿಶೇಷ ಸಾಮರ್ಥ್ಯದಿಂದ ಜನರನ್ನು ತನ್ನತ್ತ ಆಕರ್ಷಿಸುತ್ತಿದೆ. ಈ ಗಿಳಿಯೊಂದು ಹಾಡಿನ ಟ್ಯೂನ್ಗೆ ತಕ್ಕಂತೆ ಹೆಜ್ಜೆ ಹಾಕುತ್ತಿದೆ. ಸಂಗೀತ ಬದಲಾದಂತೆ ಗಿಳಿಯ ಸ್ಟೆಪ್ ಕೂಡಾ ಬದಲಾಗುತ್ತದೆ.
ಇದನ್ನೂ ಓದಿ : ‘ಕಾಲಾ ಚಶ್ಮಾ’ ಹಿಂದಿ ಹಾಡಿಗೆ ಜಪಾನ್ ಬಾಲೆಯರ ಭರ್ಜರಿ ಸ್ಟೆಪ್: ವಿಡಿಯೋ ನೋಡಿದ್ರೆ ನೀವು ಕುಣಿಯೋದು ಗ್ಯಾರಂಟಿ
ಫೋನ್ ಮತ್ತು ಗಿಳಿಯನ್ನು ವೀಡಿಯೊದಲ್ಲಿ ಕಾಣಬಹುದು. ವ್ಯಕ್ತಿಯೊಬ್ಬ ಫೋನ್ ಹಿಡಿದುಕೊಂಡು ಫೋನ್ ನಲ್ಲಿ ರಿಂಗ್ ಟೋನ್ ಬದಲಿಸುತ್ತಿರುತ್ತಾನೆ. ಗಿಳಿ ಆ ರಿಂಗ್ ಟೋನ್ ಬದಲಾಗುತ್ತಿದ್ದಂತೆ ತಾನು ಸೊಂಟ ಬಳಕಿಸುವ ರೀತಿಯನ್ನು ಕೂಡಾ ಬದಲಿಸುತ್ತಿರುತ್ತದೆ.
Talented and very sweet parrot. pic.twitter.com/prFCEWH1JD
— Fgn (@figenhistory) September 23, 2022
ಇದನ್ನೂ ಓದಿ : Viral Video: ಸನ್ ಗ್ಲಾಸ್ ಹಾಕೊಂಡು ಜ್ಯೂಸ್ ಕುಡಿತಿರೋ ಈ ಚಿಂಪಾಜಿ ಸ್ಟೈಲ್ ನೋಡ್ರೀ…ಹೊಟ್ಟೆಕಿಚ್ಚು ಪಡ್ತೀರ
ಇದು Fgn ಎಂಬ ಖಾತೆಯಿಂದ ಈ ವೀಡಿಯೊವನ್ನು ಶೇರ್ ಮಾಡಲಾಗಿದೆ. ಇಲ್ಲಿಯವರೆಗೆ 41000 ಕ್ಕೂ ಹೆಚ್ಚು ಜನರು ಈ ವೀಡಿಯೊವನ್ನು ವೀಕ್ಷಿಸಿದ್ದಾರೆ. ಸಾಕಷ್ಟು ಮಂದಿ ಕಾಮೆಂಟ್ಸ್ ಕೂಡಾ ಮಾಡಿದ್ದಾರೆ.
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...