ಇಂದು ರಾಂಚಿಯ ಜೆಎಸ್‌ಸಿಎ ಇಂಟರ್‌ನ್ಯಾಶನಲ್ ಸ್ಟೇಡಿಯಂ ಕಾಂಪ್ಲೆಕ್ಸ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ದಕ್ಷಿಣ ಆಫ್ರಿಕಾ 50 ಓವರ್ ಗೆ ಏಳು ವಿಕೆಟ್ ನಷ್ಟಕ್ಕೆ 278 ರನ್ ಬಾರಿಸಿತ್ತು. ಗೆಲುವಿನ ಗುರಿ ಬೆನ್ನತ್ತಿದ್ದ ಟೀಂ ಇಂಡಿಯಾ 45.5 ಓವರ್ ನಲ್ಲಿ 3 ವಿಕೆಟ್ ನಷ್ಟಕ್ಕೆ 282 ರನ್ ಪೇರಿಸಿ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಟೀಂ ಇಂಡಿಯಾ ಸರಣಿ ಆಸೆಯನ್ನು ಜೀವಂತವಿರಿಸಿದೆ
ಇದನ್ನೂ ಓದಿ: Viral Video: ಮಿಸ್ಟರ್ 360 ಸೂರ್ಯ ಕುಮಾರ್ ಯಾದವ್ ಮಗಳು ತುಳುವಿನಲ್ಲಿ ಅಮ್ಮನೊಂದಿಗೆ ಮಾತನಾಡೋ ಚಂದ ನೋಡಿ
ದಕ್ಷಿಣ ಆಫ್ರಿಕಾ ಪರ ಕ್ವಿಂಟನ್ ಡಿ ಕಾಕ್ 5 ರನ್, ಜನ್ನೆಮನ್ ಮಲನ್ 25 ರನ್, ರೀಜಾ ಹೆನ್ಡ್ರಿಕ್ 74 ರನ್, ಏಡನ್ ಮರ್ಕ್ರಮ್ 79 ರನ್, ಹೆನ್ರಿಚ್ ಕ್ಲಾಸೆನ್ 30 ರನ್, ಡೇವಿಡ್ ಮಿಲ್ಲರ್ ಅಜೇಯ 35 ರನ್, ವೇನ್ ಪಾರ್ನೆಲ್ 16 ರನ್, ಕೇಶವ್ ಮಹಾರಾಜ್ 5 ರನ್, ಜಾನ್ ಫಾರ್ಟೂನ್ ಶೂನ್ಯ ರನ್ ಕಲೆ ಹಾಕಿದ್ದರು. ಈ ಮೂಲಕ ತಂಡವು ಒಟ್ಟು ಏಳು ವಿಕೆಟ್ ನಷ್ಟಕ್ಕೆ ಓವರ್ ಅಂತ್ಯಕ್ಕೆ 278 ರನ್ ಬಾರಿಸಿದೆ.
ದಕ್ಷಿಣ ಆಫ್ರಿಕಾ ತಂಡದಲ್ಲಿ ಇಬ್ಬರು ಆಟಗಾರರು ಅರ್ಧಶತಕ ಸಿಡಿಸಿದ್ದಾರೆ. ಇನ್ನು ಭಾರತ ಪರ ಬೌಲಿಂಗ್ ಮಾಡಿರುವ ಮೊಹಮ್ಮದ್ ಸಿರಾಜ್ ಅಬ್ಬರಿಸಿದ್ದು, 3 ವಿಕೆಟ್ ಕಬಳಿಸಿದ್ದಾರೆ. ಇನ್ನುಳಿದಂತೆ ವಾಷಿಂಗ್ಟನ್ ಸುಂದರ್, ಶಹ್ಬಾಜ್ ಅಹ್ಮದ್, ಕುಲ್ದೀಪ್ ಯಾದವ್ ಮತ್ತು ಶಾರ್ದುಲ್ ಠಾಕೂರ್ ತಲಾ ಒಂದು ವಿಕೆಟ್ ಕಬಳಿಸಿದ್ದಾರೆ.
ಇನ್ನು ಭಾರತದ ಕಲಿಗಳು ಬ್ಯಾಟಿಂಗ್ ನಲ್ಲಿ ಅಬ್ಬರಿಸಿದ್ದಾರೆ. ಟೀಂ ಇಂಡಿಯಾ ಸ್ಟ್ಯಾಂಡ್ ಇನ್ ನಾಯಕ ಶಿಖರ್ ಧವನ್ 13 ರನ್, ಶುಭ್ಮನ್ ಗಿಲ್ 28, ಇಶಾನ್ ಕಿಶಾನ್ ಮತ್ತು ಶ್ರೇಯಸ್ ಅಯ್ಯರ್ ಇಬ್ಬರೂ ಅರ್ಧ ಶತಕ ಬಾರಿಸಿ ತಂಡದ ಗೆಲುವಿಗೆ ಮುಖ್ಯ ಕೊಡುಗೆ ನೀಡಿದ್ದಾರೆ. ಇನ್ನು ಇಶಾನ್ 93 ರನ್ ಬಾರಿಸಿದರೆ, ಅಯ್ಯರ್ ಶತಕದಾಟವಾಡಿದ್ದು ಭರ್ಜರಿ 113 ರನ್ ಕಲೆ ಹಾಕಿದ್ದಾರೆ. ಇನ್ನು ಸಂಜು ಸ್ಯಾಮ್ಸನ್ 30 ರನ್ ಪೇರಿಸಿದ್ದಾರೆ.
ಭಾರತ ಪ್ಲೇಯಿಂಗ್ XI: ಶಿಖರ್ ಧವನ್(ಕ್ಯಾ), ಶುಭಮನ್ ಗಿಲ್, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್(ವಿ.ಕೀ), ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅವೇಶ್ ಖಾನ್
ಇದನ್ನೂ ಓದಿ: MS Dhoni: IPL 2023ರಲ್ಲಿ ಧೋನಿ ಆಡುವುದಿಲ್ಲ! ಈ ಬಗ್ಗೆ CSK ಹೇಳಿದ್ದೇನು?
ದಕ್ಷಿಣ ಆಫ್ರಿಕಾ ಪ್ಲೇಯಿಂಗ್ XI: ಜನ್ನೆಮನ್ ಮಲನ್, ಕ್ವಿಂಟನ್ ಡಿ ಕಾಕ್(ವಿ.ಕೀ), ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್, ಹೆನ್ರಿಕ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವೇಯ್ನ್ ಪಾರ್ನೆಲ್, ಕೇಶವ್ ಮಹಾರಾಜ್(ಕ್ಯಾ), ಜಾರ್ನ್ ಫೋರ್ಚುಯಿನ್, ಕಗಿಸೊ ರಬಾಡ, ಅನ್ರಿಚ್ ನಾರ್ಟ್ಜೆ,
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.