ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ಮೋದಿ ರಾಮನಾಮ ಜಪಿಸುವಂತೆ ಮಾಡಿದ್ದಾರೆ: ಬಿಜೆಪಿ

ರಾಮಾಯಣ, ರಾಮನಿಗೆ ಅವಮಾನ ಮಾಡಿದವರನ್ನು ಸಮ್ಮಾನಿಸಿದವರು ಇಂದು ಅಧಿಕಾರಕ್ಕಾಗಿ ರಾಮನ ಮೊರೆ ಹೋಗಿದ್ದಾರೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.

Written by - Puttaraj K Alur | Last Updated : Oct 14, 2022, 03:29 PM IST
  • ಪ್ರಧಾನಿ ಮೋದಿ ಕಾಂಗ್ರೆಸ್‍ಅನ್ನು ಬೀದಿಗೆ ಮಾತ್ರ ತಂದಿಲ್ಲ, ರಾಮನಾಮ ಜಪಿಸುವಂತೆ ಮಾಡಿದ್ದಾರೆ
  • ರಾಮಸೇತು ಕಾಲ್ಪನಿಕವೆಂದು ರಾಮಮಂದಿರ ನಿರ್ಮಾಣಕ್ಕೆ ವಿರೋಧಿಸಿದ್ದನ್ನು ದೇಶದ ಜನತೆ ಮರೆತಿಲ್ಲ
  • ರಾಮಾಯಣ & ರಾಮನಿಗೆ ಅವಮಾನ ಮಾಡಿದವರನ್ನು ಸಮ್ಮಾನಿಸಿದವರು ರಾಮನ ಮೊರೆ ಹೋಗಿದ್ದಾರೆ
ಕಾಂಗ್ರೆಸ್ ಪಕ್ಷಕ್ಕೆ ಪ್ರಧಾನಿ ಮೋದಿ ರಾಮನಾಮ ಜಪಿಸುವಂತೆ ಮಾಡಿದ್ದಾರೆ: ಬಿಜೆಪಿ title=
ರಾಹುಲ್ ವಿರುದ್ಧ ಬಿಜೆಪಿ ಆಕ್ರೋಶ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್‌ ಪಕ್ಷವನ್ನು ಬೀದಿಗೆ ಬರುವಂತೆ ಮಾತ್ರ ಮಾಡಿದ್ದಲ್ಲ, ರಾಮನಾಮವನ್ನೂ ಜಪಿಸುವಂತೆ ಮಾಡಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ರಾಮಾಯಣವನ್ನು ಆವರಿಸಿರುವುದು ರಾಮನ ವನವಾಸದ ಯಾತ್ರೆ, ವನವಾಸದ ಉದ್ದಕ್ಕೂ ಭಾರತವನ್ನು ಅನ್ವೇಷಿಸುತ್ತಾ, ಭಾರತದ ವೈವಿದ್ಯತೆಗಳು ಆಸ್ವಾದಿಸುತ್ತಾ, ತನ್ನ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಾ ನಡೆಯುತ್ತಾನೆ ರಾಮ..ರಾಹುಲ್ ಗಾಂಧಿ ಕೂಡ ಭಾರತದ ಶ್ರೇಷ್ಠತೆಯನ್ನು ಅನ್ವೇಷಿಸುತ್ತಾ ನಡೆಯುತ್ತಿದ್ದಾರೆ’ ಅಂತಾ Bharat Jodo Yatraಯ ಬಗ್ಗೆ ಕಾಂಗ್ರೆಸ್ ಟ್ವೀಟ್ ಮಾಡಿತ್ತು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ‘ಭಾರತ್ ಜೋಡೋ ಯಾತ್ರೆ’ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ‘ಕೈ’ ಪಕ್ಷದ ವಿರುದ್ಧ ಹರಿಹಾಯ್ದಿದೆ.

ಇದನ್ನೂ ಓದಿ: ಮಳೆಗೆ ಹತ್ತಿ ಬೆಳೆ ಸಂಪೂರ್ಣ ಹಾಳು, ವಿಷದ ಬಾಟಲಿ ಹಿಡಿದು ರೈತ ಕಣ್ಣೀರು

‘ಪ್ರಧಾನಿ ಮೋದಿ ಅವರು ಕಾಂಗ್ರೆಸ್‌ ಪಕ್ಷವನ್ನು ಬೀದಿಗೆ ಬರುವಂತೆ ಮಾತ್ರ ಮಾಡಿದ್ದಲ್ಲ, ರಾಮನಾಮವನ್ನೂ ಜಪಿಸುವಂತೆ ಮಾಡಿದ್ದಾರೆ. ಅಂದ ಹಾಗೆ ರಾಮಸೇತು ಎನ್ನುವುದೇ ಕಾಲ್ಪನಿಕ ಎಂದಿದ್ದನ್ನು, ರಾಮಮಂದಿರ ನಿರ್ಮಾಣಕ್ಕೆ ವಿರೋಧಿಸಿದ್ದನ್ನು ದೇಶದ ಜನತೆ ಮರೆತಿಲ್ಲ’ವೆಂದು ಬಿಜೆಪಿ ಕುಟುಕಿದೆ.

‘ಶ್ರೀರಾಮನ ಆಸ್ತಿತ್ವದ ಕುರಿತು ಪ್ರಶ್ನೆ ಮಾಡಿದ ಕಾಂಗ್ರೆಸ್, ಕಾಲ್ಪನಿಕ ಎನ್ನುತ್ತಾ #RamSetu ಒಡೆಯಲು ಮುಂದಾಗಿತ್ತು. ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ವಿರೋಧಿಸಿ, ಬಾಬ್ರಿ ಕಟ್ಟಡದ ಪರ ಕಾಂಗ್ರೆಸ್ ವಾದಿಸಿತ್ತು. ರಾಮಾಯಣ, ರಾಮನಿಗೆ ಅವಮಾನ ಮಾಡಿದವರನ್ನು ಸಮ್ಮಾನಿಸಿದವರು ಇಂದು ಅಧಿಕಾರಕ್ಕಾಗಿ ರಾಮನ ಮೊರೆ ಹೋಗಿದ್ದಾರೆ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಇದನ್ನೂ ಓದಿ: ಚರ್ಮಗಂಟು ರೋಗ ನಿರ್ವಹಣೆಗೆ 13 ಕೋಟಿ ಬಿಡುಗಡೆಗೆ ಸಿಎಂ ಬೊಮ್ಮಾಯಿ ಆದೇಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News