Social Media Trending: ಡಿಸ್ಕವರಿ ಚಾನೆಲ್‌ಗಳಲ್ಲಿ ಕೆಲವರು ಹಾವುಗಳ ಜೀವ ಉಳಿಸುವುದನ್ನು ನೀವು ಆಗಾಗ ನೋಡಿರಬಹುದು. ಈ ಜನರು ಹಾವುಗಳೊಂದಿಗೆ ಎಷ್ಟು ಅಂಟಿಕೊಂಡಿರುತ್ತಾರೆ ಎಂದರೆ ಈ ಅಪಾಯಕಾರಿ ಪ್ರಾಣಿಗಳ ಜೀವವನ್ನು ಉಳಿಸಲು ಹೋಗಿ ಈ ಜನರು ಅನೇಕ ಬಾರಿ ಗಾಯಗೊಳ್ಳುತ್ತಾರೆ. ಹಾವುಗಳ ಜೀವವನ್ನು ಉಳಿಸುವ ಜನರನ್ನು ಸ್ನೇಕ್ ರೆಸ್ಕ್ಯೂರ್ಸ್ ಅಥವಾ ಉರಗ ರಕ್ಷಕ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ: WATCH : ಹನುಮಾನ್ ಚಾಲೀಸಾ ಪಠಿಸುವ ರಷ್ಯನ್ ಬಾಲಕಿ, ವಿಡಿಯೋ ವೈರಲ್
ವಾಸ್ತವವಾಗಿ ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಬಾವಿಯೊಳಗೆ ಹೋಗುತ್ತಿರುವುದನ್ನು ಕಾಣಬಹುದು. ಆದರೆ ಈ ಬಾವಿಯಲ್ಲಿ ವಿಷಪೂರಿತ ಹಾವುಗಳು ತುಂಬಿದ್ದು, ಅವುಗಳ ಪ್ರಾಣ ಉಳಿಸಲು ವ್ಯಕ್ತಿ ಬಾವಿಗೆ ಇಳಿದಿದ್ದಾರೆ ಎಂದು ತಿಳಿದರೆ ಅಚ್ಚರಿ ಪಡುತ್ತೀರಿ. ಮೊದಲನೆಯದಾಗಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಅಪಾಯಕಾರಿ ವಿಡಿಯೋವನ್ನು ನೀವೂ ನೋಡಲೇಬೇಕು.
ವ್ಯಕ್ತಿ ತನ್ನ ಪ್ರಾಣವನ್ನೇ ಪಣಕ್ಕಿಟ್ಟಿದ್ದಾನೆ ಎಂಬುದರಲ್ಲಿ ಸಂದೇಹವಿಲ್ಲ. ಅವನ ಮುಖದಲ್ಲಿ ಯಾವ ಭಯವೂ ಕಾಣುತ್ತಿಲ್ಲ. ವಿಡಿಯೋದಲ್ಲಿರುವ ವ್ಯಕ್ತಿ ಎಲ್ಲಾ ಹಾವುಗಳನ್ನು ಒಂದೊಂದಾಗಿ ಬ್ಯಾಗ್ ಗೆ ಹಾಕಿಕೊಂಡಿದ್ದಾರೆ. ಈ ಹಾವುಗಳ ಮಧ್ಯೆ ಒಂದಷ್ಟು ಚೇಳುಗಳು ಇರುವುದನ್ನು ಸಹ ನೀವು ಕಾಣಬಹುದು. ಆ ವ್ಯಕ್ತಿಯು ಬಾವಿಯಿಂದ ಚೀಲದೊಂದಿಗೆ ಹೊರಬಂದು ಎಲ್ಲಾ ಹಾವುಗಳನ್ನು ಕಾಡಿನಲ್ಲಿ ಬಿಟ್ಟು ಹೋಗುವುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ಯೂಟ್ಯೂಬ್‌ನಲ್ಲಿ ಶೇರ್ ಆಗಿರುವ ಈ ವಿಡಿಯೋ ನೋಡಿ ಹಲವರು ಉಸಿರು ಬಿಗಿ ಹಿಡಿದಿರಬೇಕು. ಈ ವಿಡಿಯೋವನ್ನು ಲಕ್ಷಾಂತರ ಬಾರಿ ವೀಕ್ಷಿಸಲಾಗಿದೆ ಮತ್ತು ಸಾವಿರಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವಿಡಿಯೋವನ್ನು ಇಷ್ಟಪಟ್ಟಿದ್ದಾರೆ.
ಇದನ್ನೂ ಓದಿ: Viral Video: ಠಾಣೆಗೆ ಬಂದ 3 ವರ್ಷದ ಮಗು! ಚಾಕೊಲೇಟ್ ಕೊಡದ ಅಮ್ಮನ ಮೇಲೆ ಮಾರುದ್ದ ದೂರು
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.