Dhanatrayodashi 2022: ರಾಶಿಗಳಿಗೆ ಅನುಗುಣವಾಗಿ ಏನನ್ನು ಖರೀದಿಸಬೇಕು/ಖರೀದಿಸಬಾರದು?

Dhanatrayodashi 2022: ಧನತ್ರಯೋದಶಿಯ ದಿನ ಶಾಪಿಂಗ್ ಮಾಡುವುದು ತುಂಬಾ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಈ ದಿನ ಚಿನ್ನ, ಬೆಳ್ಳಿ ಮತ್ತು ಇತರ ವಸ್ತುಗಳನ್ನು ಖರೀದಿಸುವುದರಿಂದ ಮನೆಯಲ್ಲಿ ಸುಖ-ಶಾಂತಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.  

Written by - Nitin Tabib | Last Updated : Oct 20, 2022, 08:01 PM IST
  • ಈ ವರ್ಷ ಧನತ್ರಯೋದಶಿಯನ್ನು ಅಕ್ಟೋಬರ್ 22 ರಂದು ಆಚರಿಸಲಾಗುತ್ತದೆ.
  • ಈ ದಿನದಂದು ಶಾಪಿಂಗ್ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ.
  • ಈ ದಿನ ಚಿನ್ನ, ಬೆಳ್ಳಿ ಮತ್ತು ಇತರ ವಸ್ತುಗಳನ್ನು ಖರೀದಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ ಎಂಬುದು ಧಾರ್ಮಿಕ ನಂಬಿಕೆ.
Dhanatrayodashi 2022: ರಾಶಿಗಳಿಗೆ ಅನುಗುಣವಾಗಿ ಏನನ್ನು ಖರೀದಿಸಬೇಕು/ಖರೀದಿಸಬಾರದು? title=
Dhanatrayodashi 2022 Purchase

Dhanatrayodashi 2022: ಧನತ್ರಯೋದಶಿಯನ್ನು ಸಂತೋಷ ಮತ್ತು ಸಮೃದ್ಧಿಯ ಹಬ್ಬವಾಗಿ ಆಚರಿಸಲಾಗುತ್ತದೆ. ಈ ದಿನ ಶ್ರೀವಿಷ್ಣುವಿನ ಅವತಾರವಾದ ಧನ್ವಂತರಿ ದೇವನನ್ನು ಮತ್ತು ಸಂಪತ್ತಿನ ದೇವರು ಎಂದೇ ಕರೆಯಲಾಗುವ ಕುಬೇರನನ್ನು ಧನತ್ರಯೋದಶಿಯ ದಿನ ಪೂಜಿಸಲಾಗುತ್ತದೆ. ಈ ವರ್ಷ ಧನತ್ರಯೋದಶಿಯನ್ನು  ಅಕ್ಟೋಬರ್ 22 ರಂದು ಆಚರಿಸಲಾಗುತ್ತದೆ. ಈ ದಿನದಂದು ಶಾಪಿಂಗ್ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಚಿನ್ನ, ಬೆಳ್ಳಿ ಮತ್ತು ಇತರ ವಸ್ತುಗಳನ್ನು ಖರೀದಿಸುವುದರಿಂದ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ ಎಂಬುದು ಧಾರ್ಮಿಕ ನಂಬಿಕೆ. 

ಸಾಮಾನ್ಯವಾಗಿ, ಜನರು ಧನತ್ರಯೋದಶಿಯ ದಿನದಂದು ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುತ್ತಾರೆ. ಆದರೆ ನಿಮ್ಮ ರಾಶಿಗೆ ಅನುಗುಣವಾಗಿ ಪ್ರಕಾರ ನೀವು ಶಾಪಿಂಗ್ ಮಾಡಿದರೆ ಅದು ಹೆಚ್ಚು ಪ್ರಯೋಜನಕಾರಿಯಾಗಿದೆ. ಇಂದು ನಾವು ನಿಮಗಾಗಿ ಅಂತಹ ಕೆಲವು ಮಾಹಿತಿಯನ್ನು ತಂದಿದ್ದೇವೆ, ಈ ಸಮಯದಲ್ಲಿ ನೀವು ಏನನ್ನು ಖರೀದಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಖ್ಯಾತ ಜೋತಿಷ್ಯ ಪಂಡಿತರು ಧನತ್ರಯೋದಶಿಯ ದಿನ ರಾಶಿಗಳಿಗೆ ಅನುಗುಣವಾಗಿ ಏನನ್ನು ಖರೀದಿಸಬೇಕು ಮತ್ತು ಏನನ್ನು ಖರೀದಿಸಬಾರದು ಎಂಬುದರ ಕುರಿತು ಹೇಳಿದ್ದಾರೆ. ಹಾಗಾದರೆ ಬನ್ನಿ ನಿಮ್ಮ ರಾಶಿಗೆ ಅನುಗುಣವಾಗಿ ನೀವು ಏನನ್ನು ಖರೀದಿಸಬೇಕು ಅಥವಾ ಏನನ್ನು ಖರೀದಿಸಬಾರದು ತಿಳಿದುಕೊಳ್ಳೋಣ,

ಮೇಷ ರಾಶಿ
ಈ ಬಾರಿಯ ಧನತ್ರಯೋದಶಿಯ ದಿನ ಮೇಷ ರಾಶಿಯ ಜನರು ವಜ್ರದ ಆಭರಣಗಳು, ಚಿನ್ನ-ಬೆಳ್ಳಿ ನಾಣ್ಯಗಳು ಮತ್ತು ಪಾತ್ರೆಗಳನ್ನು ಖರೀದಿಸಬೇಕು, ಆದರೆ ರಾಸಾಯನಿಕಗಳು, ಕಬ್ಬಿಣ ಮತ್ತು ಚರ್ಮದಂತಹ ವಸ್ತುಗಳನ್ನು ಖರೀದಿಸುವುದನ್ನು ಆದಷ್ಟು ತಪ್ಪಿಸಿದರೆ ಒಳಿತು.

ವೃಷಭ ರಾಶಿ
ವೃಷಭ ರಾಶಿಯವರು ಧನತ್ರಯೋದಶಿಯ ದಿನಬ ವಜ್ರ, ಚಿನ್ನ ಮತ್ತು ಬೆಳ್ಳಿಯ ಆಭರಣಗಳ ಜೊತೆಗೆ ಕಂಚಿನ ಪಾತ್ರೆಗಳನ್ನು ಖರೀದಿಸುವುದು ತುಂಬಾ ಶುಭಕರವಾಗಿರುತ್ತದೆ. ಇದರೊಂದಿಗೆ ಈ ರಾಶಿಯ ಜನರು ಈ ದಿನ ಶ್ರೀಗಂಧ ಮತ್ತು ಕುಂಕುಮವನ್ನು ಖರೀದಿಸಬೇಕು. ಚರ್ಮದಿಂದ ತಯಾರಿಸಿದ ಸರಕುಗಳು, ಎಣ್ಣೆ, ಮರ ಮತ್ತು ವಾಹನಗಳನ್ನು ಖರೀದಿಸುವುದನ್ನು ತಪ್ಪಿಸಬೇಕು.

ಮಿಥುನ ರಾಶಿ
ಮಿಥುನ ಜಾತಕದವರಿಗೆ ಈ ಬಾರಿಯ ಧನತ್ರಯೋದಶಿ ತುಂಬಾ ಮಂಗಳಕರವಾಗಿದೆ. ಈ ರಾಶಿಯ ಜನರು ನೀಲಮಣಿ, ಚಿನ್ನ ಮತ್ತು ಬೆಳ್ಳಿಯನ್ನು ಖರೀದಿಸುವುದು, ಹಾಗೆಯೇ ಮನೆ, ಭೂಮಿ ಮತ್ತು ಪೀಠೋಪಕರಣಗಳನ್ನು ಖರೀದಿಸುವುದು ತುಂಬಾ ಮಂಗಳಕರವಾಗಿದೆ.

ಕರ್ಕ ರಾಶಿ
ಈ ರಾಶಿಯವರು ಧನತ್ರಯೋದಶಿಯ ದಿನ ತಮ್ಮ ಸ್ವಂತ ಹೆಸರಿನಲ್ಲಿ ಶಾಪಿಂಗ್ ಮಾಡುವ ಬದಲು ತಮ್ಮ ಮಕ್ಕಳು ಅಥವಾ ಕುಟುಂಬದ ಹೆಸರಿನಲ್ಲಿ ಶಾಪಿಂಗ್ ಮಾಡಬೇಕು. ಕರ್ಕ ರಾಶಿಯವರು ಈ ದಿನದಂದು ಷೇರುಗಳು ಮತ್ತು ಚಿನ್ನವನ್ನು ಖರೀದಿಸುವುದನ್ನು ತಪ್ಪಿಸಬೇಕು.

ಸಿಂಹ ರಾಶಿ
ಸಿಂಹ ರಾಶಿಯವರಿಗೆ ಮರದಿಂದ ಮಾಡಿದ ಪಾತ್ರೆಗಳು, ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು, ಭೂಮಿ, ಚಿನ್ನ, ಬೆಳ್ಳಿ ಮತ್ತು ಕಂಚಿನ ವಸ್ತುಗಳನ್ನು ಧನತ್ರಯೋದಶಿಯ ದಿನ ಖರೀದಿಸುವುದು ತುಂಬಾ ಮಂಗಳಕರವಾಗಿರುತ್ತದೆ. ಈ ರಾಶಿಯ ಜನರು ಸಿಮೆಂಟ್, ಕಬ್ಬಿಣ ಅಥವಾ ಅವುಗಳಿಂದ ತಯಾರಿಸಿದ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು.

ಕನ್ಯಾರಾಶಿ
ಕನ್ಯಾ ರಾಶಿಯವರು ಧನತ್ರಯೋದಶಿಯ ದಿನ ಭೂಮಿ, ಗ್ಯಾಜೆಟ್‌ಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಬೇಕು. ಈ ರಾಶಿಯ ಜನರು ಚಿನ್ನ, ಬೆಳ್ಳಿ, ವಜ್ರವನ್ನು ಖರೀದಿಸುವುದನ್ನು ತಪ್ಪಿಸಬೇಕು.

ತುಲಾ ರಾಶಿ
ತುಲಾ ರಾಶಿಯವರಿಗೆ, ಈ ಸಮಯವು ಶಾಪಿಂಗ್ ಮಾಡಲು ಉತ್ತಮವಲ್ಲ, ಆದರೆ ನೀವು ಧನತ್ರಯೋದಶಿಯ ದಿನ ಶಾಪಿಂಗ್ ಮಾಡಲು ಬಯಸಿದರೆ, ನಿಮ್ಮ ಹೆಸರಿನ ಬದಲಿಗೆ ನಿಮ್ಮ ಕುಟುಂಬದ ಹೆಸರಿನಲ್ಲಿ ವಸ್ತುಗಳನ್ನು ಖರೀದಿಸಬಹುದು.

ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯ ಜನರು ಈ ಧನತ್ರಯೋದಶಿಯ ದಿನ ಚಿನ್ನ, ಬೆಳ್ಳಿ, ಮಣ್ಣಿನ ಪಾತ್ರೆ, ಬಟ್ಟೆ ಮತ್ತು ಕಬ್ಬಿಣದ ವಸ್ತುಗಳನ್ನು ಖರೀದಿಸುವುದು ಶುಭಕರವಾಗಿರುತ್ತದೆ. ಈ ರಾಶಿಯ ಜನರು ದೊಡ್ಡ ಹೂಡಿಕೆಗಳು ಅಥವಾ ವಹಿವಾಟುಗಳನ್ನು ತಪ್ಪಿಸಬೇಕು.

ಧನು ರಾಶಿ
ಈ ರಾಶಿಯವರಿಗೆ ಧನತ್ರಯೋದಶಿ ತುಂಬಾ ಮಂಗಳಕರವಾಗಿದೆ. ಧನು ರಾಶಿಯ ಜನರು ಈ ದಿನ ಭೂಮಿ, ಚಿನ್ನ, ಬೆಳ್ಳಿ ಅಥವಾ ಷೇರುಗಳಲ್ಲಿ ಹೂಡಿಕೆ ಮಾಡಬಹುದು.

ಮಕರ ರಾಶಿ
ಈ ರಾಶಿಯವರಿಗೆ ಭೂಮಿ, ಅಮೂಲ್ಯ ಲೋಹಗಳು, ಪಾತ್ರೆಗಳು, ಬಟ್ಟೆಗಳನ್ನು ಖರೀದಿಸುವುದು ಶುಭಕರವಾಗಿರುತ್ತದೆ.

ಕುಂಭ ರಾಶಿ
ಈ ರಾಶಿಯ ಜನರು ಪುಸ್ತಕಗಳು, ಎಲೆಕ್ಟ್ರಾನಿಕ್ ಉತ್ಪನ್ನಗಳು ಮತ್ತು ಪೀಠೋಪಕರಣಗಳನ್ನು ಖರೀದಿಸಬೇಕು. ಇದರೊಂದಿಗೆ ಈ ಸಮಯವು ಕುಂಭ ರಾಶಿಯವರಿಗೆ ಹೂಡಿಕೆಯ ದೃಷ್ಟಿಯಿಂದ ತುಂಬಾ ಒಳ್ಳೆಯ ಸಮಯವಾಗಿದೆ. ಆದಾಗ್ಯೂ, ಈ ರಾಶಿಯ ಜನರು ಭೂಮಿ ಖರೀದಿಯನ್ನು ತಪ್ಪಿಸಬೇಕು.

ಮೀನ ರಾಶಿ
ಈ ಧನತ್ರಯೋದಶಿಯಲ್ಲಿ ಈ ರಾಶಿಯ ಜನರು ಚಿನ್ನ, ಬೆಳ್ಳಿ ಮತ್ತು ವಜ್ರಗಳನ್ನು ಖರೀದಿಸಬೇಕು. ಮೀನ ರಾಶಿಯವರು ಈ ಸಮಯದಲ್ಲಿ ಷೇರುಗಳಲ್ಲಿ ಹೂಡಿಕೆ ಮಾಡುವುದನ್ನು ತಪ್ಪಿಸಬೇಕು.

ಇದನ್ನೂ ಓದಿ-Dhanteras 2022: ಧನತ್ರಯೋದಶಿಯಲ್ಲಿ ಪಾತ್ರೆಗಳನ್ನು ಏಕೆ ಖರೀದಿಸಲಾಗುತ್ತದೆ ಗೊತ್ತಾ?

ಮನೆಯಲ್ಲಿ ಸುಖ ಸಮೃದ್ಧಿಗಾಗಿ ಏನನ್ನು ಮಾಡಬೇಕು?
ಇದರೊಂದಿಗೆ, ಧನತ್ರಯೋದಶಿಯ ದಿನ ನಾವು ಏನನ್ನು ಮಾಡಬಹುದು ಎಂಬುದಕ್ಕೆ ಉತ್ತರಿಸಿರುವ ಜೋತಿಷ್ಯ ಪಂಡಿತರು, ಕರೋನಾ ಸಾಂಕ್ರಾಮಿಕದ ನಂತರ ಸುಮಾರು ಎರಡು ವರ್ಷಗಳ ನಂತರ ಈ ಹಬ್ಬವನ್ನು ಆಚರಿಸಲಾಗುತ್ತಿದ್ದು, ನಿಮ್ಮ ಮತ್ತು ನಿಮ್ಮ ಕುಟುಂಬದ ಭವಿಷ್ಯಕ್ಕಾಗಿ ನೀವು ಹೂಡಿಕೆ ಮಾಡಬೇಕು. ಇದರೊಂದಿಗೆ ಈ ದಿನದಂದು ಅನ್ನದಾನ ಮಾಡುವುದು ತುಂಬಾ ಶ್ರೇಯಸ್ಕರ. ಈ ದಿನ ನೀವು ಅಗತ್ಯವಿರುವವರಿಗೆ ಆಹಾರವನ್ನು ನೀಡಬಹುದು. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಸುಖ-ಸಮೃದ್ಧಿ ಹೆಚ್ಚುತ್ತದೆ.

ಇದನ್ನೂ ಓದಿ-Diwali 2022: ಓರ್ವ ರಾಕ್ಷೆಸನ ಕಾರಣ ಭಾರತದ ಈ ರಾಜ್ಯದಲ್ಲಿ ದೀಪಾವಳಿ ಆಚರಿಸಲಾಗುವುದಿಲ್ಲವಂತೆ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News