NRI News: ಆಗಸ್ಟ್ 23 ರಂದು ಮಸ್ಕತ್‌ನಲ್ಲಿ ತೀರ್ಥ ಕಟೀಲ್ ರವರ ಐವರು ಶಿಷ್ಯಂದ್ಯರ ರಂಗಪ್ರವೇಶ  

'ಭ್ರಾಮರಿ ನೃತ್ಯ ಅಕಾಡೆಮಿ ಅಕಾಡೆಮಿ ಮೂಲಕ ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿರುವ ತೀರ್ಥ ಕಟೀಲ್ ಅವರ ಐವರು ಶಿಷ್ಯೆಯಂದೆರಿಗೆ ರಂಗ ಪ್ರವೇಶದ ಕಾರ್ಯಕ್ರಮವನ್ನು ಆಗಸ್ಟ್ 23 ರಂದು ಮಸ್ಕತ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

Written by - Zee Kannada News Desk | Last Updated : Aug 22, 2024, 02:40 PM IST
  • ಈಕೆ ಶ್ರೀಯುತ ಪ್ರದೀಪ್ ಶೆಟ್ಟಿ ಹಾಗೂ ಶ್ರೀಮತಿ ಅಮಿತಾ ಪ್ರದೀಪ್ ಶೆಟ್ಟಿ ಇವರ ಸುಪುತ್ರಿಯಾಗಿದ್ದು, 9ನೇ ತರಗತಿಯಲ್ಲಿ ಓದುತ್ತಿದ್ದಾರೆ.
  • ಈಕೆಯೂ ಸಹ Indian School Muscat, ಇಲ್ಲಿಯ ವಿದ್ಯಾರ್ಥಿಯಾಗಿದ್ದಾರೆ.
  • ಭಾರತೀಯ ಸಂಸ್ಕೃತಿಯನ್ನು ಮಸ್ಕತ್‌ ನಲ್ಲಿ ಬಿಂಬಿಸುವುದರ ಮೂಲಕ ಸಜ್ಜಾಗಿದ್ದಾರೆ
NRI News: ಆಗಸ್ಟ್ 23 ರಂದು ಮಸ್ಕತ್‌ನಲ್ಲಿ ತೀರ್ಥ ಕಟೀಲ್ ರವರ ಐವರು ಶಿಷ್ಯಂದ್ಯರ ರಂಗಪ್ರವೇಶ   title=

ಮಸ್ಕತ್: 'ಭ್ರಾಮರಿ ನೃತ್ಯ ಅಕಾಡೆಮಿ ಅಕಾಡೆಮಿ ಮೂಲಕ ದೇಶ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಗಳಿಸಿರುವ ತೀರ್ಥ ಕಟೀಲ್ ಅವರ ಐವರು ಶಿಷ್ಯಂದ್ಯರಿಗೆ ರಂಗ ಪ್ರವೇಶದ ಕಾರ್ಯಕ್ರಮವನ್ನು ಆಗಸ್ಟ್ 23 ರಂದು ಮಸ್ಕತ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

ಭ್ರಾಮರಿ ನೃತ್ಯ ಅಕಾಡೆಮಿಯು ಕಳೆದ 12 ವರ್ಷಗಳಿಂದ ಭ್ರಾಮರಿ ನೃತ್ಯ ಅಕಾಡೆಮಿ ಶ್ರೀಕ್ಷೇತ್ರ ಕಟೀಲನ್ನು ಕೇಂದ್ರವಾಗಿರಿಸಿಕೊಂಡು ನೃತ್ಯ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಪ್ರದರ್ಶನ ನೀಡುವಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿ. ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದೆ.ಈಗ ಈ ಸಂಸ್ಥೆಯ ಸಾರಥಿಯಾಗಿರುವ ಶ್ರೀಮತಿ ತೀರ್ಥ ಕಟೀಲು ಅವರು ಭರತ ನಾಟ್ಯದಲ್ಲಿ ವಿದ್ವತ್ ಪದವಿಯನ್ನು ಪಡೆದುಕೊಂಡು ಶ್ರೀ ಕ್ಷೇತ್ರವಾಗಿರುವ ಕಟೀಲಿನಿಂದಲೇ ದೇಶದುದ್ದಗಲಕ್ಕೂ ತಮ್ಮ ಛಾಪನ್ನು ಮೂಡಿಸಿದ್ದಾರೆ.

No description available.

15 ವರ್ಷಗಳ ಸತತ ಅಭ್ಯಾಸದಿಂದ ಇದೀಗ ಮಸ್ಕತ್‌ ನಲ್ಲಿ ನೆಲೆಸಿರುವ ತೀರ್ಥ ಕಟೀಲ್ ಅವರು ತಮ್ಮ ಐದು ಶಿಷ್ಠೆಯರ ರಂಗಪ್ರವೇಶ ಕಾರ್ಯಕ್ರಮವನ್ನು ಮೊದಲಬಾರಿಗೆ ಮಸ್ಕತ್‌ನಲ್ಲಿ ಆಯೋಜಿಸಿದ್ದಾರೆ.ಈ ಕಾರ್ಯಕ್ಕೆ ಇವರಿಗೆ ಬೆನ್ನೆಲುಬಾಗಿ ಇವರ ಪತಿ ಕಾರ್ತಿಕ್ ಕುಂದರ್ ಹಾಗೂ ಇವರ ಗುರುಗಳು ಸಹಕಾರ ನೀಡುತ್ತಿದ್ದಾರೆ.ಈಗ ರಂಗಪ್ರವೇಶ ಕಾರ್ಯಕ್ರಮವು 23-8-2024 ಶುಕ್ರವಾರದಂದು ಸಂಜೆ 5.00 ಗಂಟೆಗೆ ಸರಿಯಾಗಿ ಮಸ್ಕತ್‌ ನಲ್ಲಿರುವ ಕಾಲೇಜ್ ಆಪ್ ಬ್ಯಾಂಕಿಂಗ್ ಆಂಡ್ ಫೈನಾನ್ಸಿಯಲ್ ಸರ್ವಿಸಸ್ ಹಾಲ್ (CBFS) ಬೌಶರ್, ಮಸ್ಕತ್ ಇಲ್ಲಿ ನೆರವೇರಲಿದೆ.No description available.

ಈ ದಿನ ವಿಶೇಷವಾಗಿ ಮೂರು ಕಲಾವಿದರು ವೇದಿಕೆಯನ್ನು ಸಮೂಹವಾಗಿ ಹಂಚಿಕೊಳ್ಳಲಿದ್ದಾರೆ.

1) ಕು॥ ಅಪೂರ್ವ ನಾಗರಾಜು,

ಈಕೆ ಡಾ|| ನಾಗರಾಜು.ಜಿ.ಬಿ. ಹಾಗೂ ಶ್ರೀಮತಿ ರಮ್ಯಾ.ಬಿ. ಇವರ ಸುಪುತ್ರಿಯಾಗಿದ್ದು, 10ನೇ ತರಗತಿಯಲ್ಲಿ ಕಲಿಯುತ್ತಿರುವ ಈಕೆ Indian School AL wadi AL Kabir (Muscat) ಇಲ್ಲಿಯ ವಿದ್ಯಾರ್ಥಿಯಾಗಿದ್ದಾರೆ.

2) ಕು॥ ಪ್ರೇರಣ ದಿವಾಕರ್ ಶೆಟ್ಟಿ,

ಈಕೆ ಶ್ರೀಯುತ ದಿವಾಕರ್ ಶೆಟ್ಟಿ ಹಾಗೂ ಶ್ರೀಮತಿ ವಿಜಯ ದಿವಾಕರ್ ಶೆಟ್ಟಿ ಇವರ ಸುಪುತ್ರಿಯಾಗಿದ್ದು, ಗ್ರೇಡ್ 11 ರಲ್ಲಿ ಓದುತ್ತಿದ್ದಾರೆ. ಈಕೆ Indian School Bousher, (Muscat) ಇಲ್ಲಿಯ ವಿದ್ಯಾರ್ಥಿಯಾಗಿದ್ದಾರೆ.

3) ಕು|| ಪಾರ್ಣಿಕ ಪ್ರವೀಣ್ ಶೆಟ್ಟಿ,

ಈಕೆ ಶ್ರೀಯುತ ಪ್ರದೀಪ್ ಶೆಟ್ಟಿ ಹಾಗೂ ಶ್ರೀಮತಿ ಅಮಿತಾ ಪ್ರದೀಪ್ ಶೆಟ್ಟಿ ಇವರ ಸುಪುತ್ರಿಯಾಗಿದ್ದು, 9ನೇ ತರಗತಿಯಲ್ಲಿ ಓದುತ್ತಿದ್ದಾರೆ. ಈಕೆಯೂ ಸಹ Indian School Muscat, ಇಲ್ಲಿಯ ವಿದ್ಯಾರ್ಥಿಯಾಗಿದ್ದಾರೆ.ಇದೀಗ ಶ್ರೀಮತಿ ತೀರ್ಥ ಕಟೀಲ್ ಇವರು ತಮ್ಮ ಚೊಚ್ಚಲ ರಂಗಪ್ರವೇಶದ ಸಂಭ್ರಮದಲ್ಲಿದ್ದು, ಭಾರತೀಯ ಸಂಸ್ಕೃತಿಯನ್ನು ಮಸ್ಕತ್‌ ನಲ್ಲಿ ಬಿಂಬಿಸುವುದರ ಮೂಲಕ ಸಜ್ಜಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News