NRI: ಮೂರು ವರ್ಷದಲ್ಲಿ‌ ಭಾರತೀಯ ಪೌರತ್ವ ತ್ಯಜಿಸಿದ ಮೂರು ಲಕ್ಷ ಮಂದಿ!

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಒದಗಿಸಿದ ಅಂಕಿ ಅಂಶಗಳ ಪ್ರಕಾರ, ಎನ್‌ಆರ್‌ಐಗಳು ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಭಾರತೀಯ ಪೌರತ್ವವನ್ನು ತ್ಯಜಿಸಿದ್ದು, 120 ಕ್ಕೂ ಹೆಚ್ಚು ದೇಶಗಳಲ್ಲಿ ಪೌರತ್ವವನ್ನು ಪಡೆದಿದ್ದಾರೆ. 

Written by - Bhavishya Shetty | Last Updated : Jul 22, 2022, 03:57 PM IST
  • ಮೂರು ವರ್ಷಗಳಲ್ಲಿ 392,000ಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ
  • ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಪೌರತ್ವ ತೊರೆದ ಭಾರತೀಯರು
  • ಪೌರತ್ವ ತ್ಯಜಿಸಿದವರಲ್ಲಿ 1,70,795 ಜನರು ಯುಎಸ್ ಪೌರತ್ವವನ್ನು ಪಡೆದಿದ್ದಾರೆ
NRI: ಮೂರು ವರ್ಷದಲ್ಲಿ‌ ಭಾರತೀಯ ಪೌರತ್ವ ತ್ಯಜಿಸಿದ ಮೂರು ಲಕ್ಷ ಮಂದಿ!  title=
NRI

ಫೆಡರಲ್ ಮಾಹಿತಿಯ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ 392,000 ಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ. ಅವರಲ್ಲಿ 170,000 ಜನರು ಯುಎಸ್‌ ನಾಗರಿಕರಾಗಿದ್ದಾರೆ ಎಂದು ತಿಳಿದುಬಂದಿದೆ. ಲಿಖಿತ ಉತ್ತರದಲ್ಲಿ ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ಮಾಹಿತಿ ನೀಡಿದ್ದು, 2019, 2020 ಮತ್ತು 2021 ರಲ್ಲಿ ಒಟ್ಟು 3,92,643 ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ತೆರಿಗೆಯಲ್ಲಿ ಬಂಪರ್ ಆಫರ್ ಬೇಕೆ? ಹಾಗಿದ್ರೆ ಮನೆಯಲ್ಲೇ ಕುಳಿತು ಈ 'ಸ್ಪೆಷಲ್ ಅಕೌಂಟ್' ತೆರೆಯಿರಿ!

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಒದಗಿಸಿದ ಅಂಕಿ ಅಂಶಗಳ ಪ್ರಕಾರ, ಎನ್‌ಆರ್‌ಐಗಳು ತಮ್ಮ ವೈಯಕ್ತಿಕ ಕಾರಣಗಳಿಗಾಗಿ ಭಾರತೀಯ ಪೌರತ್ವವನ್ನು ತ್ಯಜಿಸಿದ್ದು, 120 ಕ್ಕೂ ಹೆಚ್ಚು ದೇಶಗಳಲ್ಲಿ ಪೌರತ್ವವನ್ನು ಪಡೆದಿದ್ದಾರೆ. 

ಪೌರತ್ವ ತ್ಯಜಿಸಿದವರಲ್ಲಿ 1,70,795 ಜನರು ಯುಎಸ್ ಪೌರತ್ವವನ್ನು ಪಡೆದಿದ್ದಾರೆ. ಇನ್ನುಳಿದಂತೆ ಕೆನಡಾದಲ್ಲಿ 64,071 ಮಂದಿ, ಆಸ್ಟ್ರೇಲಿಯಾದಲ್ಲಿ 58,391 ಜನ, ಇಂಗ್ಲೆಂಡ್‌ನಲ್ಲಿ 35,435 ಜನ, ಇಟಲಿಯಲ್ಲಿ 12,131 ಮಂದಿ, ನ್ಯೂಜಿಲೆಂಡ್‌ನಲ್ಲಿ 8,882, ಸಿಂಗಾಪುರದಲ್ಲಿ 7,046, ಸಿಂಗಾಪುರದಲ್ಲಿ 7,046 ಮತ್ತು ಪಾಕಿಸ್ತಾನದಲ್ಲಿ 48 ಮಂದಿ ಪೌರತ್ವ ಸ್ವೀಕರಿಸಿದ್ದಾರೆ.

2019 ರಿಂದ ಪ್ರಸಕ್ತ ವರ್ಷದವರೆಗೆ ಭಾರತೀಯ ಪೌರತ್ವವನ್ನು ತ್ಯಜಿಸಿದವರ ಸಂಖ್ಯೆ ಮತ್ತು ವಿವರಗಳನ್ನು ಬಹುಜನ ಸಮಾಜ ಪಕ್ಷದ ಸಂಸದ ಹಾಜಿ ಫಜ್ಲುರ್ ರೆಹಮಾನ್ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಯ ಲಾಭಗಳು ಇವು ..! ಆದರೆ ಈ ವಿಚಾರಗಳು ನೆನಪಿರಲಿ

ಭಾರತೀಯ ಪೌರತ್ವವನ್ನು ತ್ಯಜಿಸಿದ ಭಾರತೀಯರ ಸಂಖ್ಯೆ ಮತ್ತು ಅವರು ಪೌರತ್ವ ಪಡೆದ ದೇಶಗಳ ಸಂಖ್ಯೆಗೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಒದಗಿಸಿದ ಡೇಟಾವನ್ನು ಉಲ್ಲೇಖಿಸಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಪ್ರತಿಕ್ರಿಯಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News