ಒಂದೇ ಚಾರ್ಜ್‌ನಲ್ಲಿ 121 ಕಿಮೀ ಮೈಲೇಜ್ ನೀಡುವ ದೇಶದ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳು

ನೀವು ಎಲೆಕ್ಟ್ರಿಕ್ ಸ್ಕೂಟರ್ ತೆಗೆದುಕೊಳ್ಳಲು ಯೋಚಿಸುತ್ತಿದ್ದರೆ ಭಾರತೀಯ ಮಾರುಕಟ್ಟೆಯಲ್ಲಿರುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ.

Best Electric Scooter: ಇಂದಿನ ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಕ್ಕೇರಿವೆ. ಅಗತ್ಯ ವಸ್ತುಗಳ ಜೊತೆಗೆ ಇಂಧನ ಬೆಲೆ ಏರಿಕೆಯ ಹೊಡೆತಕ್ಕೆ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಇದರಿಂದ ದೇಶದ ಜನರು ಎಲೆಕ್ಟ್ರಿಕ್ ವಾಹನ(Electric Scooter)ಗಳ ಕಡೆಗೆ ಆಸಕ್ತಿ ತೋರಿಸುತ್ತಿದ್ದಾರೆ. ನೀವು ಎಲೆಕ್ಟ್ರಿಕ್ ಸ್ಕೂಟರ್ ತೆಗೆದುಕೊಳ್ಳಲು ಯೋಚಿಸುತ್ತಿದ್ದರೆ ಭಾರತೀಯ ಮಾರುಕಟ್ಟೆಯಲ್ಲಿರುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳ ಬಗ್ಗೆ ಮಾಹಿತಿ ಇಲ್ಲಿದೆ. ಇವು ಕೇವಲ ಒಂದೇ ಒಂದು ಸಾರಿ ಚಾರ್ಜ್ ಮಾಡಿದರೆ ಸಾಕು 100 ಕಿಲೋಮೀಟರ್‌ಗಳಷ್ಟು ಮೈಲೇಜ್ ನೀಡುತ್ತವೆ. ಈ ಸ್ಕೂಟರ್‌ಗಳ ಬೆಲೆ ಮತ್ತು ವೈಶಿಷ್ಟ್ಯಗಳ ಬಗೆಗಿನ ಮಾಹಿತಿ ಇಲ್ಲಿದೆ ನೋಡಿ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

OLA S1 Electric Scooter: ಓಲಾದ S1 ಎಲೆಕ್ಟ್ರಿಕ್ ಸ್ಕೂಟರ್ ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇದರ ಬೆಲೆಯನ್ನು 99,999 ರೂ.ಗೆ ನಿಗದಿ ಮಾಡಲಾಗಿದೆ. ಇದು 121 ಕಿಮೀ ವ್ಯಾಪ್ತಿ ಮತ್ತು 90 ಕಿಮೀ ವೇಗದೊಂದಿಗೆ ಬರುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಪೂರ್ತಿ ಚಾರ್ಜ್ ಆಗಲು 5 ಗಂಟೆಗಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ. ಓಲಾ ಸ್ಕೂಟರ್‌ನ S1 Pro ಮಾದರಿಯೂ ಇದ್ದು, ಇದರ ಬೆಲೆ 1.30 ಲಕ್ಷ ರೂ. ಇದೆ. ಇದು ಹೆಚ್ಚಿನ ಶ್ರೇಣಿ, ಫಾಸ್ಟರ್ ಸ್ಪೀಡ್ ಮತ್ತು ಇತರ ಹೊಸ ವೈಶಿಷ್ಟ್ಯಗಳೊಂದಿಗೆ ಬರುತ್ತದೆ.

2 /5

Magnus EX: ಇತ್ತೀಚೆಗೆ Ampere ಎಲೆಕ್ಟ್ರಿಕ್ Magnus EX ಇ-ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ. Magnus EX ತನ್ನ ಹಲವು ನವೀನ ಮತ್ತು ಸುಧಾರಿತ ವೈಶಿಷ್ಟ್ಯಗಳೊಂದಿಗೆ ಪುಣೆಯಲ್ಲಿ 68,999 ರೂ. ಎಕ್ಸ್ ಶೋರೂಂ ಬೆಲೆ ಹೊಂದಿದೆ. Magnus EX 121 ಕಿಮೀ ಮೈಲೇಜ್ ಅನ್ನು ಪೂರ್ಣ ಚಾರ್ಜ್‌ನಲ್ಲಿ Class Comfort ಮತ್ತು ಕಾರ್ಯಕ್ಷಮತೆಯೊಂದಿಗೆ ನೀಡುತ್ತದೆ.

3 /5

Ather 450X: Ather Energy ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ EV ಸ್ಟಾರ್ಟ್ಅಪ್‌ಗಳಲ್ಲಿ ಒಂದಾಗಿದೆ. ಈ ಬ್ರಾಂಡ್ ತನ್ನ ಸ್ಕೂಟರ್ ಅನ್ನು ದಕ್ಷಿಣ ಭಾರತದ ನಗರಗಳಾದ ಬೆಂಗಳೂರು ಮತ್ತು ಚೆನ್ನೈನಲ್ಲಿ ಮಾತ್ರ ನೀಡುತ್ತಿದೆ. ಆದರೆ ಇದು ಶೀಘ್ರದಲ್ಲೇ ದೆಹಲಿ ಮತ್ತು ಮುಂಬೈ ಸೇರಿದಂತೆ ಇತರ ನಗರಗಳಲ್ಲಿ ತನ್ನ ವಾಹನಗಳನ್ನು ಬಿಡುಗಡೆ ಮಾಡಲು ಪ್ಲಾನ್ ಮಾಡಿದೆ. Ather 450X ಕಂಪನಿಯ ಪ್ರಮುಖ ಎಲೆಕ್ಟ್ರಿಕ್ ಸ್ಕೂಟರ್ ಆಗಿದೆ. ಈ ಸ್ಕೂಟರ್ ಒಂದು ಚಾರ್ಜ್ ನಲ್ಲಿ 107 ಕಿಮೀ ಡ್ರೈವಿಂಗ್ ರೇಂಜ್ ನೀಡುವ ಸಾಮರ್ಥ್ಯ ಹೊಂದಿದೆ. ಈ ಸ್ಕೂಟರಿನ ಬೆಲೆ 1 ಲಕ್ಷ ರೂ.ನಿಂದ ಆರಂಭವಾಗುತ್ತದೆ.

4 /5

Bajaj Chetak: ಬಜಾಜ್ ಆಟೋದಿಂದ ಸೊಗಸಾದ Bajaj Chetak ಎಲೆಕ್ಟ್ರಿಕ್ ಸ್ಕೂಟರ್ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ. ನೋಡಲು ಉತ್ತಮ ನೋಟವನ್ನು ಹೊಂದಿರುವ ಈ ಸ್ಕೂಟರ್ ದೇಶದ ಜನರ ಗಮನ ಸೆಳೆದಿದೆ. ಕಳೆದ ವರ್ಷ ಬಿಡುಗಡೆಯಾದ ಚೇತಕ್ ಕಂಪನಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದೆ. ಎಲೆಕ್ಟ್ರಿಕ್ ಸ್ಕೂಟರ್ ಚೇತಕ್ 2 ರೂಪಾಂತರಗಳಲ್ಲಿ ಲಭ್ಯವಿದೆ. ಎಂಟ್ರಿ ಲೆವೆಲ್ ಅರ್ಬೇನ್ ವೇರಿಯಂಟ್ ಮತ್ತು ಟಾಪ್ ಎಂಡ್ ಪ್ರೀಮಿಯಂ ವೇರಿಯಂಟ್. ಈ ಇ-ಸ್ಕೂಟರ್ 3.8kW ಪವರ್ ಮತ್ತು 4.1kW ಪೀಕ್ ಪವರ್ ಎಲೆಕ್ಟ್ರಿಕ್ ಮೋಟಾರ್ ಪಡೆಯುತ್ತದೆ. ಪೂರ್ಣ ಚಾರ್ಜ್ ಮಾಡಿದ ನಂತರ ಈ ಸ್ಕೂಟರ್ 95 ಕಿಮೀ ವ್ಯಾಪ್ತಿಯನ್ನು ಇಕೋ ಮೋಡ್‌ನಲ್ಲಿ ಮತ್ತು 85 ಕಿಮೀ ಸ್ಪೋರ್ಟ್‌ ಮೋಡ್‌ನಲ್ಲಿ ಕ್ರಮಿಸುತ್ತದೆ.

5 /5

TVS iQube: TVS iQube ಸ್ಕೂಟರ್ ಅನ್ನು 2020ರ ಆರಂಭದಲ್ಲಿ ಪರಿಚಯಿಸಲಾಯಿತು. TVSನ ಈ ಎಲೆಕ್ಟ್ರಿಕ್ ಸ್ಕೂಟರ್ ತುಂಬಾ ಚೆನ್ನಾಗಿದೆ. ಇದರಲ್ಲಿ ನೀವು 4.4 KW ಸಾಮರ್ಥ್ಯದ ಎಲೆಕ್ಟ್ರಿಕ್ ಮೋಟಾರ್ ಪಡೆಯುತ್ತೀರಿ. ಇದರೊಂದಿಗೆ ಈ ಸ್ಕೂಟರ್ ಒಂದು ಬಾರಿ ಪೂರ್ಣ ಚಾರ್ಜಿಂಗ್‌ನಲ್ಲಿ ಸುಮಾರು 75 ಕಿಮೀ ಚಲಿಸುತ್ತದೆ. ಇದು ಗಂಟೆಗೆ 78 ಕಿಮೀ ವೇಗವನ್ನು ನೀಡುತ್ತದೆ. ಇದಲ್ಲದೆ ಇದು 6 BHP ಮತ್ತು 140 NM ಟಾರ್ಕ್ ಶಕ್ತಿಯನ್ನು ಉತ್ಪಾದಿಸುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಇದರ ಬೆಲೆ ಸುಮಾರು 1.15 ಲಕ್ಷ ರೂ. ಇದೆ. ಇದರಲ್ಲಿ ಗಂಟೆಗೆ 40 ಕಿಮೀ ವೇಗವನ್ನು ಕ್ರಮಿಸಲು ಕೇವಲ 4.2 ಸೆಕೆಂಡುಗಳಲ್ಲಿ ಹಿಡಿಯುತ್ತದೆ.