Budhavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಶ್ರಾವಣ ಮಾಸ, ಶುಕ್ಲ ಪಕ್ಷ, ತೃತೀಯಾ ತಿಥಿ, ಬುಧವಾರದ ಈ ದಿನ ಪೂರ್ವಾ ನಕ್ಷತ್ರ, ಪರಿಘ ಯೋಗ ಯಾವ ರಾಶಿಯ ಜನರಿಗೆ ಏನು ಫಲ ನೀಡಲಿದೆ ತಿಳಿಯಿರಿ.
ಮೇಷ ರಾಶಿಯವರ ಭವಿಷ್ಯ (Aries Horoscope):
ವೃತ್ತಿಪರ ಜೀವನವು ನಿಮ್ಮ ವ್ಯವಸ್ಥಾಪಕ ಕೌಶಲ್ಯಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ಹುದ್ದೆಯಲ್ಲಿ ಬಡ್ತಿಗೆ ಸಹಕಾರಿ ಆಗಲಿದೆ. ಆರ್ಥಿಕ ಸ್ಥಿತಿಯು ಬಲಗೊಳ್ಳಲಿದೆ.
ವೃಷಭ ರಾಶಿಯವರ ಭವಿಷ್ಯ (Taurus Horoscope):
ವ್ಯವಹಾರ ವಿಸ್ತರಣೆಗೆ ಸಕಾಲ. ಹೂಡಿಕೆಯಿಂದ ಉತ್ತಮ ಲಾಭವನ್ನು ನಿರೀಕ್ಷಿಸಬಹುದು. ತಾಳ್ಮೆಯಿಂದ ಮುಂದುವರೆದರೆ ಹಣಕಾಸಿನ ಸ್ಥಿತಿಯಲ್ಲಿ ಸುಧಾರಣೆ ಕಾಣಬಹುದು.
ಮಿಥುನ ರಾಶಿಯವರ ಭವಿಷ್ಯ (Gemini Horoscope):
ಆತ್ಮ ಸಂಗಾತಿ ಹುಡುಕಾಟದಲ್ಲಿರುವವರಿಗೆ ನಿರಾಶೆಯುಂಟಾಗಬಹುದು. ಆರೋಗ್ಯ ಸಮಸ್ಯೆಗಳು ದಿನವಿಡೀ ನಿಮ್ಮನ್ನು ಕಾಡಬಹುದು. ವೃತ್ತಿಪರವಾಗಿ, ನೀವು ಹೊಸ ಯೋಜನೆಯನ್ನು ತೆಗೆದುಕೊಳ್ಳಲು ನಿರ್ಧರಿಸಬಹುದು. ಭವಿಷ್ಯದಲ್ಲಿ ಇದು ಲಾಭದಾಯಕವಾಗಲಿದೆ.
ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope):
ಇಂದು ವೃತ್ತಿ ಬದುಕಿನಲ್ಲಿ ಬೆಳವಣಿಗೆ, ಅಭಿವೃದ್ಧಿಗೆ ಉತ್ತಮ ಅವಧಿಯಾಗಿದೆ. ಯಾವುದೇ ಹೊಸ ಯೋಜನೆಗಳಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ಮುಂದುವರೆಯಿರಿ. ಸಂಬಂಧಗಳು ಮತ್ತು ಸಾಮಾಜಿಕ ಜೀವನವು ಸುಧಾರಿಸುತ್ತದೆ.
ಇದನ್ನೂ ಓದಿ- Rahu Nakshatra Gochar: ವಾರದ ಬಳಿಕ ಈ 4 ರಾಶಿಯವರಿಗೆ ಕೇವಲ ಸುಖವನ್ನೇ ಕರುಣಿಸಲಿದ್ದಾನೆ ಕ್ರೂರ ಗ್ರಹ ರಾಹು!
ಸಿಂಹ ರಾಶಿಯವರ ಭವಿಷ್ಯ (Leo Horoscope):
ಸೃಜನಶೀಲ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಲು ಯೋಜಿಸುತ್ತಿರುವವರಿಗೆ ಕೆಲಸದ ಒತ್ತಡ ಹೆಚ್ಚಾಗಿ ವೈಯಕ್ತಿಕ ಜೀವನದ ಮೇಲೆ ಪರಿಣಾಮ ಬೀರಬಹುದು. ಖಾಸಗಿ ವಲಯದಲ್ಲಿರುವವರು ಬಡ್ತಿ ನಿರೀಕ್ಷಿಸಬಹುದು. ಆರೋಗ್ಯವು ಉತ್ತಮವಾಗಿದೆ .
ಕನ್ಯಾ ರಾಶಿಯವರ ಭವಿಷ್ಯ (Virgo Horoscope):
ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳು ಸಾಧಿಸಬಹುದಾದರೂ ದಿನಾಂತ್ಯಕ್ಕೆ ಕಷ್ಟಗಳು ಕೊನೆಗೊಳ್ಳಲಿವೆ. ಕಾನೂನು ವಿಷಯಗಳು ಸಹ ಇಂದು ನಿಮ್ಮ ಪರವಾಗಿ ಕೆಲಸ ಮಾಡಬಹುದು. ಸಾಗರೋತ್ತರ ವ್ಯಾಪಾರ ಲಾಭದಾಯಕವಾಗಿದೆ.
ತುಲಾ ರಾಶಿಯವರ ಭವಿಷ್ಯ (Libra Horoscope):
ಅನಿರೀಕ್ಷಿತ ಮೂಲದಿಂದ ಆದಾಯ ಹೆಚ್ಚಾಗುವುದರಿಂದ ಮನಸ್ಸಿಗೆ ನೆಮ್ಮದಿ. ಹಿಂದಿನ ಸಾಲಗಳನ್ನು ಮರುಪಾವತಿ ಮಾಡುವಿರಿ. ನಿಮ್ಮ ಸಂಗಾತಿಯೊಂದಿಗೆ ಪ್ರಾಮಾಣಿಕವಾಗಿ ಮತ್ತು ಮುಕ್ತವಾಗಿರಲು ಪ್ರಯತ್ನಿಸಿ.
ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):
ವೃತ್ತಿಪರವಾಗಿ, ಸ್ವಲ್ಪ ಸಮಯದ ಹಿಂದೆ ನಿಮಗೆ ಮಂಜೂರು ಮಾಡಿದ ಯೋಜನೆಗಳಲ್ಲಿ ನೀವು ಉತ್ತಮ ಸಾಧನೆ ಮಾಡಲಿದ್ದೀರಿ. ಭಾರೀ ಪ್ರಮಾಣದ ಹಣದ ಒಳಹರಿವು ನಿರೀಕ್ಷಿಸಬಹುದು. ಆರೋಗ್ಯದ ದೃಷ್ಟಿಯಿಂದ ಸಮಯ ಉತ್ತಮವಾಗಿದೆ.
ಇದನ್ನೂ ಓದಿ- 200 ವರ್ಷಗಳ ನಂತರ ರೂಪುಗೊಂಡ ದಿವ್ಯ ರಾಜಯೋಗಗಳು; ಈ 3 ರಾಶಿಯವರಿಗೆ ಸುಖ-ಸಂಪತ್ತು ಸಿಗಲಿದೆ!
ಧನು ರಾಶಿಯವರ ಭವಿಷ್ಯ (Sagittarius Horoscope):
ನಿಮ್ಮ ಜೀವನದಲ್ಲಿ ಮಾಜಿ ಪ್ರೇಮಿಯ ಪುನರಾಗಮನ ನಿಮಗೆ ಆಘಾತ ಉಂಟು ಮಾಡಬಹುದು. ವೃತ್ತಿಪರವಾಗಿ, ನಿಮಗೆ ಮಂಜೂರು ಮಾಡಿದ ಯೋಜನೆಗಳಲ್ಲಿ ನೀವು ಉತ್ತಮ ಸಾಧನೆ ಮಾಡಲಿದ್ದೀರಿ. ಆದಾಗ್ಯೂ, ನಿಮ್ಮ ಮಾತಿನಲ್ಲಿ ಹಿಡಿತ ಕಾಪಾಡಿಕೊಳ್ಳಿ.
ಮಕರ ರಾಶಿಯವರ ಭವಿಷ್ಯ (Capricorn Horoscope):
ದಿನವು ಸುಮಧುರತೆಯಿಂದ ಶಾಂತಚಿತ್ತವಾಗಿ ಆರಂಭವಾಗುತ್ತದೆ. ವೃತ್ತಿಪರ ಬೆಳವಣಿಗೆಯನ್ನು ನಿರೀಕ್ಷಿಸಬಹುದು. ನಿಮ್ಮ ಪ್ರೀತಿಯ ಜೀವನವು ಬಲವನ್ನು ಪಡೆಯುತ್ತದೆ. ನೀವು ಇಂದು ಹೆಚ್ಚು ಮುಕ್ತವಾಗಿ ಮಾತನಾಡುವಿರಿ.
ಕುಂಭ ರಾಶಿಯವರ ಭವಿಷ್ಯ (Aquarius Horoscope):
ಬಹುದಿನಗಳ ಬಳಿಕ ನಿಮ್ಮ ಪರಿಚಯಸ್ಥರನ್ನು ಭೇಟಿಯಾಗುವಿರಿ. ಯಾರಾದರೂ ನಿಮ್ಮನ್ನು ವಂಚಿಸುವ ಸಾಧ್ಯತೆ ಇರುವುದರಿಂದ ಹಣಕಾಸಿನ ಬಗ್ಗೆ ಜಾಗರೂಕರಾಗಿರಿ. ನಿಮ್ಮ ಪ್ರೀತಿಪಾತ್ರರ ಜೊತೆ ಪ್ರವಾಸವನ್ನು ಯೋಜಿಸಲು ಇದು ಉತ್ತಮ ದಿನ.
ಮೀನ ರಾಶಿಯವರ ಭವಿಷ್ಯ (Pisces Horoscope):
ವೈಯಕ್ತಿಕ ಜೀವನದಲ್ಲಿ ದ್ವೇಷಗಳನ್ನು ಹಿಡಿದಿಟ್ಟುಕೊಳ್ಳಬೇಡಿ. ಇದು ನಿಮ್ಮ ಮನಸ್ಸಿನ ಉದ್ವೇಗಕ್ಕೆ ಕಾರಣವಾಗಬಹುದು. ನಿಮ್ಮ ಮನಮುಟ್ಟುವ ವ್ಯಕ್ತಿತ್ವವು ಜನರನ್ನು ನಿಮ್ಮೆಡೆಗೆ ಆಕರ್ಷಿಸುತ್ತದೆ. ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.