Budh Gochar 2024: ತನ್ನ ನೀಚ ರಾಶಿಗೆ ಬುದ್ಧಿದಾತ ಬುಧನ ಪ್ರವೇಶ, ಈ ಜನರ ವೃತ್ತಿ ಜೀವನದಲ್ಲಿ ಅಪಾರ ಉನ್ನತಿ, ಎಲ್ಲಾ ಕೆಲಸಗಳಲ್ಲಿ ಯಶಸ್ಸು!

Budh Gochar 2024: ಗ್ರಹಗಳ ರಾಜಕುಮಾರ ಎಂದೇ ಖ್ಯಾತ ಬುದ್ಧಿದಾತ ಬುಧ ಶೀಘ್ರದಲ್ಲಿಯೇ ತನ್ನ ನೀಚ ರಾಶಿಯಾಗಿರುವ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಇದರಿಂದ ಕೆಲ ರಾಶಿಗಳ ಜನರ ಅದೃಷ್ಟ ಚಿನ್ನದಂತೆ ಹೊಳೆಯಲಿದ್ದು, ಲಾಭವೋ ಲಾಭ ಸಿಗಲಿದೆ (Spiritual News In Kannada)  

Written by - Nitin Tabib | Last Updated : Mar 1, 2024, 11:36 PM IST
  • ಮೀನ ಬುಧನ ನೀಚ ರಾಶಿಯಾಗಿದ್ದು, ಬುಧ ಮಿಥುನ ಮತ್ತು ಕನ್ಯಾ ರಾಶಿಗೆ ಅಧಿಪತಿಯಾಗಿದ್ದಾನೆ.
  • ಕನ್ಯಾ ಬುಧನ ಉಚ್ಚ ರಾಶಿಯಾಗಿದೆ. ಬುಧ ತನ್ನ ನೀಚ ರಾಶಿಗೆ ಪ್ರವೇಶಿಸುವುದು ಹಲವು ಜಾತಕದವರಿಗೆ
  • ಲಾಭ ತಂದು ಕೊಡಲಿದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ,
Budh Gochar 2024: ತನ್ನ ನೀಚ ರಾಶಿಗೆ ಬುದ್ಧಿದಾತ ಬುಧನ ಪ್ರವೇಶ, ಈ ಜನರ ವೃತ್ತಿ ಜೀವನದಲ್ಲಿ ಅಪಾರ ಉನ್ನತಿ, ಎಲ್ಲಾ ಕೆಲಸಗಳಲ್ಲಿ ಯಶಸ್ಸು! title=

Budh Gochar 2024 In Meen Rashi: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮಾರ್ಚ್ 7, 2024 ರಂದು ಬೆಳಗ್ಗೆ 9 ಗಂಟೆ 21 ನಿಮಿಷಕ್ಕೆ ಬುಧ ಮೀನ ರಾಶಿಗೆ ಪ್ರವೇಶಿಸಲಿದ್ದಾನೆ. ಮೀನ ರಾಶಿ ಬುಧನ ನೀಚ ರಾಶಿಯಾಗಿದೆ. ಮೀನ ಬುಧನ ನೀಚ ರಾಶಿಯಾಗಿದ್ದು, ಬುಧ ಮಿಥುನ ಮತ್ತು ಕನ್ಯಾ ರಾಶಿಗೆ ಅಧಿಪತಿಯಾಗಿದ್ದಾನೆ. ಕನ್ಯಾ ಬುಧನ ಉಚ್ಚ ರಾಶಿಯಾಗಿದೆ. ಬುಧ ತನ್ನ ನೀಚ ರಾಶಿಗೆ ಪ್ರವೇಶಿಸುವುದು ಹಲವು ಜಾತಕದವರಿಗೆ ಲಾಭ ತಂದು ಕೊಡಲಿದೆ. ಬನ್ನಿ ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ, 

ಕರ್ಕ ರಾಶಿ: ಬುಧ ನಿಮ್ಮ ಜಾತಕದ ನವಮ ಭಾವದಲ್ಲಿ ವಿರಾಜಮಾನನಾಗಿದ್ದಾನೆ, ಇದರಿಂದ ನಿಮ್ಮ ವೃತ್ತಿ ಜೀವನದಲ್ಲಿ ಭಾರಿ ಬದಲಾವಣೆ ಕಾಣಲು ಸಿಗಲಿದೆ. ಆದರೆ ಯಶಸ್ಸು ಕೂಡ ನಿಮ್ಮದಾಗಲಿದೆ. ಸಮಾಜದಲ್ಲಿ ಸ್ಥಾನ ಮಾನ ಹೆಚ್ಚಾಗಲಿದೆ. ಆರ್ಥಿಕ ಸ್ಥಿತಿ ಉತ್ತಮವಾಗಲಿದೆ. ಆದಾಯದ ಹೊಸ ಮೂಲಗಳು ತೆರೆದುಕೊಳ್ಳಲಿವೆ. ಈ ಅವಧಿಯಲ್ಲಿ ನಿಮಗೆ ಅಪಾರ ಲಾಭ ಸಿಗಲಿದೆ. 

ಧನು ರಾಶಿ: ದಶಮ ಭಾವದಲ್ಲಿ ಬುಧ ಸಂಚರಿಸಲಿದ್ದಾನೆ, ನೌಕರ ವರ್ಗದ ಜನರಿಗೆ ಇದರಿಂದ ಅಪಾರ ಲಾಭ ಸಿಗಲಿದೆ. ವ್ಯಾಪಾರಕ್ಕೆ ಸಂಬಂಧಿಸಿದ ಜಾತಕದವರಿಗೆ ಕೆಲಸದ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಮುಂಬರುವ ದಿನಗಳಲ್ಲಿ ಇದರಿಂದ ನಿಮಗೆ ಅಪಾರ ಲಾಭ ಸಿಗಲಿದೆ. ಹಲವು ಮಾಧ್ಯಮಗಳಿಂದ ನಿಮಗೆ ಧನಲಾಭ ಸಿಗಲಿದೆ. 

ಇದನ್ನೂ ಓದಿ-Rahu Shukra Conjunction 2024: 18 ವರ್ಷಗಳ ಬಳಿಕ ಪರಸ್ಪರ ಹತ್ತಿರಕ್ಕೆ ಬರಲಿದ್ದಾರೆ ರಾಹು-ಶುಕ್ರ, ಧನಕುಬೇರ ಕೃಪೆಯಿಂದ ಈ ಜನರಿಗೆ ಭಾರಿ ಧನಲಾಭ!

ಮಿಥುನ ರಾಶಿ: ಬುಧನ ಈ ಗೋಚರ ನಿಮಗೆ ಆರ್ಥಿಕ ದೃಷ್ಟಿಯಿಂದ ಅಪಾರ ಲಾಭದಾಯಕವಾಗಿರಲಿದೆ. ಈ ಅವಧಿಯಲ್ಲಿ ನೀವು ನಿಮ್ಮ ಬುದ್ಧಿಯ ಸಹಾಯದಿಂದ ಅಪಾರ ಹಣ ಸಂಪಾದಿಸುವಲ್ಲಿ ಯಶಸ್ಸನ್ನು ಕಾಣುವಿರಿ. ನೌಕರಿಯಲ್ಲಿ ಮೇಲಾಧಿಕಾರಿಗಳ ಬೆಂಬಲ ನಿಮಗೆ ಸಿಗಲಿದೆ. ಹೂಡಿಕೆಗೆ ಈ ಸಮಯ ಅನುಕೂಲಕರವಾಗಿದ್ದು, ಭವಿಷ್ಯದಲಿ ಅದರಿಂದ ನಿಮಗೆ ಅಪಾರ ಆದಾಯ ಹರಿದುಬರಲಿದೆ. 

ಇದನ್ನೂ ಓದಿ-Navpancham Rajyog 2024: ಶೀಘ್ರದಲ್ಲೇ ಕೇತು-ಗುರುವಿನ ಕೃಪೆಯಿಂದ ನವಪಂಚಮ ಯೋಗ ರಚನೆ, ಅದೃಷ್ಟ ಲಕ್ಷ್ಮಿಯ ಕೃಪೆಯಿಂದ ಈ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News