Akshaya Tritiya 2023: ಅಕ್ಷಯ ತೃತೀಯದಂದು ತಪ್ಪಾಗಿಯೂ ಈ 5 ಕೆಲಸ ಮಾಡಬೇಡಿ, ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ!

Akshaya Tritiya 2023 Rules: ಇಂದು ಅಕ್ಷಯ ತೃತೀಯ. ಸನಾತನ ಧರ್ಮದಲ್ಲಿ, ಈ ದಿನವನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಎಲ್ಲಾ ಶುಭ ಕಾರ್ಯಗಳನ್ನು ಮುಹೂರ್ತ ನೋಡದೇ ಈ ದಿನ ಮಾಡುತ್ತಾರೆ. ಆದರೆ, ಈ ದಿನ ತಪ್ಪಾಗಿಯೂ ಕೆಲವು ಕೆಸಲ ಮಾಡಬಾರದು. ಇದು ಅಶುಭ ಫಲಗಳನ್ನು ನೀಡುತ್ತದೆ. 

Written by - Chetana Devarmani | Last Updated : Apr 22, 2023, 06:20 AM IST
  • ಇಂದು ಅಕ್ಷಯ ತೃತೀಯ
  • ತಪ್ಪಾಗಿಯೂ ಈ 5 ಕೆಲಸ ಮಾಡಬೇಡಿ
  • ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ!
Akshaya Tritiya 2023: ಅಕ್ಷಯ ತೃತೀಯದಂದು ತಪ್ಪಾಗಿಯೂ ಈ 5 ಕೆಲಸ ಮಾಡಬೇಡಿ, ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ!  title=
Akshaya Tritiya 2023

Akshaya Tritiya 2023: ಇಂದು ಪವಿತ್ರ ಅಕ್ಷಯ ತೃತೀಯ. ಈ ಹಬ್ಬವನ್ನು ವೈಶಾಖ ಮಾಸದ ಶುಕ್ಲ ಪಕ್ಷದ ಮೂರನೇ ದಿನದಂದು ಆಚರಿಸಲಾಗುತ್ತದೆ. ಈ ದಿನ ಮುಹೂರ್ತ ಇಲ್ಲದಿದ್ದರೂ ಮದುವೆಯಂತಹ ಶುಭ ಕಾರ್ಯಗಳನ್ನು ಮಾಡಬಹುದು. ಈ ದಿನ ಚಿನ್ನ, ಬೆಳ್ಳಿ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಖರೀದಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ದಿನ ಮಾಡಿದ ಯಾವುದೇ ಕೆಲಸವು ಫಲಪ್ರದ ಮತ್ತು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಗ್ರಹಪ್ರವೇಶ, ವಿವಾಹ, ಉಪನಯನದಂತಹ ಶುಭ ಕಾರ್ಯಗಳಿಗೆ ಶುಭ ಮುಹೂರ್ತ ಸಿಗದೇ ಇರುವವರು ಅಕ್ಷಯ ತೃತೀಯ ದಿನದಂದು ಮಾಡುತ್ತಾರೆ. ಆದರೆ, ಅಕ್ಷಯ ತೃತೀಯ ದಿನದಂದು ತಪ್ಪಾಗಿಯೂ ಕೆಲವು ಕೆಲಸಗಳನ್ನು ಮಾಡಬಾರದು. ಈ ಬಗ್ಗೆ ಶಾಸ್ತ್ರಗಳಲ್ಲಿಯೂ ಹೇಳಲಾಗಿದೆ. ಈ ರೀತಿ ಮಾಡುವುದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ ಎಂಬ ನಂಬಿಕೆಯಿದೆ.  

ಅಕ್ಷಯ ತೃತೀಯದಲ್ಲಿ ಈ ಕೆಲಸ ಮಾಡಬೇಡಿ: 

ಶಾಸ್ತ್ರಗಳ ಪ್ರಕಾರ ಅಕ್ಷಯ ತೃತೀಯ ದಿನದಂದು ಯಾರೂ ತಪ್ಪಾಗಿಯೂ ಸಾಲ ನೀಡಬಾರದು. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ನಿಮ್ಮ ಮನೆಯನ್ನು ಬಿಟ್ಟು ಬೇರೆಯವರ ಬಳಿ ಹೋಗುತ್ತಾಳೆ. ಇದರಿಂದಾಗಿ ನೀವು ದೀರ್ಘಕಾಲದವರೆಗೆ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು.

ಇದನ್ನೂ ಓದಿ: Shukra Dasha : ಈ 4 ರಾಶಿಗಳ ಮೇಲೆ ಸಂಪತ್ತಿನ ಮಳೆ ಸುರಿಸಲಿದ್ದಾನೆ ಶುಕ್ರ.. ಇನ್ಮೇಲೆ ಅದೃಷ್ಟವೆಲ್ಲ ನಿಮ್ಮದೇ!

ಚಿನ್ನ-ಬೆಳ್ಳಿ ಮತ್ತು ಇತರ ಅಮೂಲ್ಯ ಲೋಹಗಳನ್ನು ಖರೀದಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಆದರೆ, ಈ ದಿನ ಅಪ್ಪಿತಪ್ಪಿಯೂ ಅಲ್ಯೂಮಿನಿಯಂ, ಪ್ಲಾಸ್ಟಿಕ್ ಅಥವಾ ಸ್ಟೀಲ್ ಪಾತ್ರೆಗಳನ್ನು ಖರೀದಿಸಬಾರದು. ಇದರಿಂದ ರಾಹು ವ್ಯಕ್ತಿಯ ಮೇಲೆ ಪ್ರಾಬಲ್ಯ ಸಾಧಿಸುತ್ತಾನೆ ಮತ್ತು ನಕಾರಾತ್ಮಕ ಶಕ್ತಿಗಳು ಮನೆಗೆ ಪ್ರವೇಶಿಸುತ್ತವೆ.

ಈ ಶುಭ ದಿನದಂದು ಮಾಂಸ, ಮದ್ಯ, ಬೆಳ್ಳುಳ್ಳಿ ಮತ್ತು ಈರುಳ್ಳಿ ಇತ್ಯಾದಿಗಳನ್ನು ಸೇವಿಸಬಾರದು. ಅಕ್ಷಯ ತೃತೀಯ ದಿನದಂದು ತಾಮಸಿಕ ಆಹಾರವನ್ನು ಸೇವಿಸುವುದರಿಂದ ಮನೆಯಲ್ಲಿ ಬಡತನ ಮತ್ತು ಕುಟುಂಬದಲ್ಲಿ ರೋಗಗಳು ಹರಡುತ್ತವೆ. ಅದಕ್ಕಾಗಿಯೇ ಇದನ್ನು ತಪ್ಪಿಸಬೇಕು.

ಕಳ್ಳತನ, ದರೋಡೆ, ಜೂಜಾಟದಂತಹ ಅಪರಾಧಗಳಿಂದ ದೂರವಿರಬೇಕು. ಇದರೊಂದಿಗೆ ಯಾರಿಗೂ ಸುಳ್ಳು ಹೇಳಬಾರದು. ಈ ಎರಡೂ ಕಾರಣಗಳಿಂದ ಸಮಾಜದಲ್ಲಿ ಗೌರವ ಕುಸಿಯಬಹುದು, ಮಾಡುವ ಕೆಲಸವೂ ಹಾಳಾಗಬಹುದು.

ಇದನ್ನೂ ಓದಿ: Guru Gochar 2023: ಈ ರಾಶಿಗಳಿಗೆ ಸುವರ್ಣಯುಗ ಆರಂಭ.. ಕೈಯಿಟ್ಟಲ್ಲೆಲ್ಲಾ ಹಣ, ಹೆಜ್ಜೆಯಿಟ್ಟಲ್ಲೆಲ್ಲಾ ಖ್ಯಾತಿ!

ಅಕ್ಷಯ ತೃತೀಯವನ್ನು ಲಕ್ಷ್ಮಿ ದೇವಿಯ ಆರಾಧನೆಯ ದಿನವೆಂದು ಪರಿಗಣಿಸಲಾಗಿದೆ. ಈ ದಿನ ಮನೆಯನ್ನು ಅಪ್ಪಿತಪ್ಪಿಯೂ ಕೊಳಕಾಗಿ ಉಳಿಯಲು ಬಿಡಬೇಡಿ. ಹೀಗೆ ಮಾಡುವುದರಿಂದ ತಾಯಿ ಲಕ್ಷ್ಮಿ ಕೋಪಗೊಳ್ಳುತ್ತಾಳೆ, ಇದರಿಂದ ವ್ಯಕ್ತಿಯು ತೊಂದರೆ ಅನುಭವಿಸಬೇಕಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ಆಚರಣೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಅದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News