Home Bathroom Vastu Tips: ಮನೆ ಕಟ್ಟುವಾಗ ಅಥವಾ ಖರೀದಿಸುವಾಗ ವಾಸ್ತುವಿನ ಬಗ್ಗೆ ಕಾಳಜಿ ವಹಿಸುವುದು ತುಂಬಾ ಮುಖ್ಯ. ಸಾಮಾನ್ಯವಾಗಿ, ಜನರು ಶುಚಿಯಾಗಲು ಸ್ನಾನಗೃಹಕ್ಕೆ ಹೋಗುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಸ್ನಾನಗೃಹವು ನಕಾರಾತ್ಮಕ ಶಕ್ತಿಯ ಉಗ್ರಾಣವಾಗಿರಬಾರದು. ವಾಸ್ತು ಶಾಸ್ತ್ರದ ತಜ್ಞರ ಪ್ರಕಾರ ಸ್ನಾನಗೃಹದ ನಕಾರಾತ್ಮಕ ಶಕ್ತಿಯಿಂದ ಆರ್ಥಿಕ ಬಿಕ್ಕಟ್ಟು ಎದುರಾಗಬಹುದು ಎನ್ನಲಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಸ್ನಾನಗೃಹಕ್ಕೆ ಸಂಬಂಧಿಸಿದ ಕೆಲ ವಿಶೇಷ ವಾಸ್ತು ಸಲಹೆಗಳನ್ನು ಅರಿತುಕೊಳ್ಳುವುದು ತುಂಬಾ ಮುಖ್ಯ. (Spiritual News In Kannada)
1. ಬಾತ್ರೂಮ್ ವಾಸ್ತು ಸಲಹೆ 1 - ವಾಸ್ತುಶಾಸ್ತ್ರದ ಪ್ರಕಾರ ಸ್ನಾನಗೃಹದ ಬಾಗಿಲುಗಳು ಮರದಿಂದ ಮಾಡಿರಬೇಕು. ಸ್ನಾನಗೃಹದಲ್ಲಿ ಕಬ್ಬಿಣ ಅಥವಾ ಉಕ್ಕಿನ ಬಾಗಿಲುಗಳು ನಕಾರಾತ್ಮಕತೆಯನ್ನು ಉತ್ತೇಜಿಸುತ್ತವೆ. ಇದು ಆರೋಗ್ಯದ ಮೇಲೂ ಕೂಡ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
2. ಬಾತ್ರೂಮ್ ವಾಸ್ತು ಸಲಹೆ 2 - ಜನರು ಸಾಮಾನ್ಯವಾಗಿ ಬಾತ್ರೂಮ್ನಲ್ಲಿ ಕನ್ನಡಿಗಳನ್ನು ಹಾಕುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಕನ್ನಡಿ ಇದ್ದರೆ ಒಳ್ಳೆಯದು. ಅಲ್ಲದೆ, ವಾಶ್ಬಾಸಿನ್ಗಳನ್ನು ಸ್ಥಾಪಿಸಲು ಕೂಡ ಅದೇ ದಿಕ್ಕು ಸೂಕ್ತವಾಗಿದೆ.
3. ಬಾತ್ರೂಮ್ ವಾಸ್ತು ಸಲಹೆ 3 - ಮನೆಯ ವಾಯುವ್ಯ ದಿಕ್ಕಿನಲ್ಲಿ ಸ್ನಾನಗೃಹವಿದ್ದರೆ ಉತ್ತಮ. ಕೆಲವರು ನೈಋತ್ಯ ದಿಕ್ಕಿನಲ್ಲಿ ಸ್ನಾನಗೃಹವನ್ನು ನಿರ್ಮಿಸುತ್ತಾರೆ, ಇದು ವಾಸ್ತುವಿನ ದೃಷ್ಟಿಯಿಂದ ಶುಭವಲ್ಲ.
4. ಬಾತ್ರೂಮ್ ವಾಸ್ತು ಸಲಹೆ 4 - ವಾಸ್ತು ಶಾಸ್ತ್ರದ ಪ್ರಕಾರ, ವಾಶ್ಬಾಸಿನ್ ಮತ್ತು ಶವರ್ ಪೂರ್ವ, ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿರಬೇಕು. ಇದಲ್ಲದೆ, ಬಾತ್ರೂಮ್ ನಿಂದ ಹೊರ ಹೋಗುವ ನೀರಿನ ದಿಕ್ಕು ಹಾಗೂ ಚರಂಡಿಯ ದಿಕ್ಕು ಒಂದೇ ಆಗಿರಬೇಕು.
ಇದನ್ನೂ ಓದಿ-
5. ಬಾತ್ರೂಮ್ ವಾಸ್ತು ಸಲಹೆ 5 - ಮನೆಯೊಳಗೆ ನಕಾರಾತ್ಮಕ ಶಕ್ತಿ ಹರಡುವುದನ್ನು ತಡೆಯಲು ಯಾವಾಗಲೂ ಸ್ನಾನದ ಬಾಗಿಲುಗಳನ್ನು ಮುಚ್ಚಿಡಿ. ಈ ವಾಸ್ತು ಸಲಹೆಗಳನ್ನು ಅನುಸರಿಸುವುದರಿಂದ ಮನೆಯಲ್ಲಿ ಸುಖ-ಸಂತೋಷ ನೆಲೆಸುತ್ತದೆ ಎಂದು ನಂಬಲಾಗಿದೆ.
ಇದನ್ನೂ ಓದಿ-
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ