Mangal Rashi Parivartane: ಇನ್ನೇನು 2023ರ ಕೊನೆಯ ಹಂತಕ್ಕೆ ಬಂದಿದ್ದೇವೆ. ಹೊಸ ವರ್ಷವನ್ನು ಬರಮಾಡಿಕೊಳ್ಳಲು ದಿನಗಣನೆ ಆರಂಭವಾಗಲಿದೆ. ಹೊಸ ವರ್ಷ 2024ಕ್ಕೂ ಮೊದಲು ಗ್ರಹಗಳ ಕಮಾಂಡರ್ ಮಂಗಳ ತನ್ನ ರಾಶಿಚಕ್ರವನ್ನು ಬದಲಾಯಿಸಲಿದ್ದಾನೆ. ಸದ್ಯ ವೃಶ್ಚಿಕ ರಾಶಿಯಲ್ಲಿರುವ ಮಂಗಳ ಶೀಘ್ರದಲ್ಲೇ ಧನು ರಾಶಿಗೆ ಪದಾರ್ಪಣೆ ಮಾಡಲಿದ್ದಾನೆ.
ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಇನ್ನೆರಡು ದಿನಗಳಲ್ಲಿ ಮಂಗಳ ರಾಶಿ ಪರಿವರ್ತನೆ ಆಗಲಿದೆ. ಮಂಗಳ ಗ್ರಹವು 27 ಡಿಸೆಂಬರ್ 2023 ರಂದು ರಾತ್ರಿ 11:40 ಕ್ಕೆ ರಾಶಿಚಕ್ರವನ್ನು ಬದಲಾಯಿಸಿ ಧನು ರಾಶಿಗೆ ಪ್ರವೇಶಿಸಲಿದ್ದಾನೆ. ಇದರ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳು ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ ಈ ಸಮಯವನ್ನು ಮೂರು ರಾಶಿಯವರ ದೃಷ್ಟಿಯಿಂದ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- Surya Grahan 2024: ಹೊಸ ವರ್ಷದಲ್ಲಿ ಮೊದಲ ಸೂರ್ಯಗ್ರಹಣ ಯಾವಾಗ? ಎಲ್ಲೆಲ್ಲಿ ಗೋಚರ
ಮಂಗಳ ಗೋಚಾರ: ಹೊಸ ವರ್ಷಕ್ಕೂ ಮೊದಲೇ ಬದಲಾಗಲಿದೆ ಈ ರಾಶಿಯವರ ಭವಿಷ್ಯ
ಮೇಷ ರಾಶಿ:
ಮಂಗಳ ರಾಶಿ ಬದಲಾವಣೆಯು ಮೇಷ ರಾಶಿಯವರಿಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ಮೇಷ ರಾಶಿಯ ಜನರು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಜೊತೆಗೆ ವ್ಯವಹಾರದಲ್ಲಿ ಕಠಿಣ ಪರಿಶ್ರಮ ಸಂಪೂರ್ಣ ಫಲವನ್ನು ಅನುಭವಿಸಲಿದ್ದಾರೆ. ಕುಟುಂಬದವರೊಂದಿಗೆ ಪ್ರವಾಸವನ್ನೂ ಯೋಜಿಸಬಹುದು.
ತುಲಾ ರಾಶಿ:
ಮಂಗಳ ಸಂಚಾರದ ಶುಭ ಪರಿಣಾಮ ತುಲಾ ರಾಶಿಯವರ ಮೇಲೂ ಸಹ ಕಂಡು ಬರುತ್ತದೆ. ಮಂಗಳನ ಅನುಗ್ರಹದಿಂದ ಇನ್ನೂ ಮದುವೆಯಾದ ಯುವಕ-ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಹೊಸ ಕೆಲಸ ಆರಂಭಿಸಲು ಸಮಯ ಅತ್ಯುತ್ತಮವಾಗಿದೆ. ಒಟ್ಟಾರೆಯಾಗಿ ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮೊಂದಿಗಿದೆ.
ಇದನ್ನೂ ಓದಿ- Weekly Career Horoscope: 2023ರ ಕೊನೆಯ ವಾರ 3 ರಾಶಿಯವರಿಗೆ ಸಿಗಲಿದೆ ಗುಡ್ ನ್ಯೂಸ್
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರ ಅಧಿಪತಿಯೂ ಆಗಿರುವ ಮಂಗಳ ಗ್ರಹ ಸಂಚಾರದಿಂದ ಈ ರಾಶಿಯವರಿಗೆ ಸುವರ್ಣ ಸಮಯ ಎಂತಲೇ ಹೇಳಬಹುದು. ವೃಶ್ಚಿಕ ರಾಶಿಯ ಉದ್ಯೋಗಸ್ತರಿಗೆ ಬಡ್ತಿ ಸಂಭವವಿದೆ. ಹೊಸ ಉದ್ಯೋಗದ ನಿರೀಕ್ಷಿಯಲ್ಲಿದ್ದವರಿಗೆ ಗುಡ್ ನ್ಯೂಸ್ ಸಿಗಲಿದೆ. ಆರ್ಥಿಕವಾಗಿಯೂ ಸಹ ಮಂಗಳಕರ ಫಲಗಳನ್ನು ಅನುಭವಿಸುವಿರಿ. ಒಟ್ಟಾರೆ ಇದು ನಿಮಗೆ ಅತ್ಯುತ್ತಮ ಸಮಯ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.