ಮುಂದಿನ ಒಂದು ತಿಂಗಳವರೆಗೆ ಈ ರಾಶಿಯವರ ಮೇಲಾಗುವುದು ಧನ ವೃಷ್ಠಿ

ಒಂದೇ ತಿಂಗಳಲ್ಲಿ ಮೂರು ಗ್ರಹಗಳ ಸಂಚಾರದಿಂದ ಕೆಲವು ರಾಶಿಯವರಿಗೆ ಭಾರೀ ಶುಭಾವಾಗಲಿದೆ. ಹಾಗಿದ್ದರೆ ಶುಕ್ರ, ಮಂಗಳ ಮತ್ತು ಸೂರ್ಯನ ಸಂಚಾರದಿಂದ  ಯಾರಿಗೆ ಲಾಭವಾಗಲಿದೆ ನೋಡೋಣ.  

Written by - Ranjitha R K | Last Updated : Mar 15, 2023, 10:10 AM IST
  • ಪ್ರತಿ ಗ್ರಹವು ತನ್ನ ರಾಶಿಯನ್ನು ನಿಗದಿತ ಸಮಯದಲ್ಲಿ ಬದಲಾಯಿಸುತ್ತದೆ.
  • ಇದರ ಪರಿಣಾಮವು ಎಲ್ಲಾ ರಾಶಿಯವರ ಜೀವನದಲ್ಲಿ ಕಂಡು ಬರುತ್ತದೆ.
  • ಜೀವನದ ಮೇಲೆ ಶುಭ ಅಶುಭ ಪರಿಣಾಮ ಬೀರುತ್ತದೆ
ಮುಂದಿನ ಒಂದು ತಿಂಗಳವರೆಗೆ ಈ ರಾಶಿಯವರ ಮೇಲಾಗುವುದು ಧನ ವೃಷ್ಠಿ  title=

ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ತನ್ನ ರಾಶಿಯನ್ನು  ನಿಗದಿತ ಸಮಯದಲ್ಲಿ ಬದಲಾಯಿಸುತ್ತದೆ. ಇದರ ಪರಿಣಾಮವು ಎಲ್ಲಾ ರಾಶಿಯವರ ಜೀವನದಲ್ಲಿ ಕಂಡು ಬರುತ್ತದೆ. ಕೆಲವರ ಜೀವನದ ಮೇಲೆ ಇದು ಒಳ್ಳೆಯ ಶುಭ ಪರಿಣಾಮ ಬೀರಿದರೆ ಇನ್ನು ಕೆಲವರ ಜಾತಕದ ಮೇಲೆ ಅಶುಭ ಪರಿಣಾಮ ಬೀರಬಹುದು. ಮಾರ್ಚ್ 12 ರಂದು ಶುಕ್ರ ಗ್ರಹ ಮೀನ ರಾಶಿಯಿಂದ ಮೇಷ ರಾಶಿಗೆ ಪ್ರವೇಶಿಸಿದೆ. ಮಾರ್ಚ್ 13 ರಂದು ಮಂಗಳವು ಮಿಥುನ ರಾಶಿಯನ್ನು ಪ್ರವೇಶಿಸಿದೆ. ಇನ್ನೊಂದೆಡೆ ಮಾರ್ಚ್ 15ರಂದು ಅಂದರೆ ಇಂದು ಸೂರ್ಯ ಕೂಡ ಮೀನರಾಶಿಗೆ ಪ್ರವೇಶಿಸಲಿದ್ದಾನೆ. ಅಂತಹ ಪರಿಸ್ಥಿತಿಯಲ್ಲಿ, ಒಂದೇ ತಿಂಗಳಲ್ಲಿ ಮೂರು ಗ್ರಹಗಳ ಸಂಚಾರದಿಂದ ಕೆಲವು ರಾಶಿಯವರಿಗೆ ಭಾರೀ ಶುಭಾವಾಗಲಿದೆ. 

ಶುಕ್ರ ಮತ್ತು ಮಂಗಳ ಮತ್ತು ಸೂರ್ಯನ ಸಂಚಾರದಿಂದ  ಯಾರಿಗೆ ಲಾಭ : 

ಮೇಷ ರಾಶಿ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಪ್ರಮುಖ ಗ್ರಹಗಳ ಸಾಗಣೆಯ ಪರಿಣಾಮ ಎಲ್ಲಾ ರಾಶಿಯವರ ಜೀವನದಲ್ಲಿ ಕಂಡು ಬರುತ್ತದೆ. ಆದರೆ ಕೆಲವು ರಾಶಿಯವರು ಇದರ ವಿಶೇಷ ಲಾಭ ಪಡೆಯುತ್ತಾರೆ. ಮೇಷ ರಾಶಿಯವರ ಜೀವನದಲ್ಲಿ ಶುಕ್ರ ಮತ್ತು ಮಂಗಳ ಮತ್ತು ಸೂರ್ಯನ ಸಂಚಾರ ಅನುಕೂಲಕರ ಪರಿಣಾಮಗಳು ಕಂಡುಬರುತ್ತವೆ. ಜೀವದಲ್ಲಿ ಎದುರಾಗುವ ಸಮಸ್ಯೆಗಳನ್ನು ಸುಲಭವಾಗಿ ಗೆದ್ದು ಬರಲಿದ್ದೀರಿ. ಏನೇ ಕೆಲಸ ಮಾಡಿದರೂ ಅದರಲ್ಲಿ ಯಶಸ್ಸು ಸಿಗಲಿದೆ. ಕಾರು ಖರೀದಿಸುವ ಕನಸು ಕೂಡಾ ಈ ಬಾರಿ ನನಸಾಗುವುದು. ಪ್ರೀತಿ ಮತ್ತು ವೈವಾಹಿಕ ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. 

ಇದನ್ನೂ ಓದಿ : Sun Transit 2023: ಸೂರ್ಯನ ಸಂಕ್ರಮಣದಿಂದ ಈ ರಾಶಿಯವರಿಗೆ ಧನಹಾನಿ ಸಂಭವ!

ವೃಷಭ ರಾಶಿ :
ಈ ಅವಧಿಯಲ್ಲಿ, ವೃಷಭ ರಾಶಿಯವರ ಆದಾಯ ಹೆಚ್ಚಾಗಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಮಕ್ಕಳಿಂದ ಕೆಲವು ಶುಭ ಸಮಾಚಾರ ಸಿಗಬಹುದು. ಕಲೆ ಮತ್ತು ಸಂಗೀತದಲ್ಲಿ ಆಸಕ್ತಿ ಹೆಚ್ಚಾಗುತ್ತದೆ. 

ಮಿಥುನ ರಾಶಿ :
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಸಮಯದಲ್ಲಿ ಆತ್ಮವಿಶ್ವಾಸ ಹೆಚ್ಚಾಗಬಹುದು. ಕೆಲಸದ ಸ್ಥಳದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಶಾಂತಿ ಮತ್ತು ಸಂತೋಷದ ಭಾವನೆ ಹೆಚ್ಚಾಗುತ್ತದೆ. ಪೂರ್ವಿಕರ ಆಸ್ತಿ ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ಕುಟುಂಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. 

ಇದನ್ನೂ ಓದಿ : Vastu Tips: ಕಚೇರಿಯಲ್ಲಿ ಈ ದಿಕ್ಕಿಗೆ ಕುಳಿತರೆ ವ್ಯಾಪಾರದಲ್ಲಿ ಪ್ರಗತಿ, ಲಾಭ!

ವೃಶ್ಚಿಕ ರಾಶಿ :
ಈ ಸಮಯದಲ್ಲಿ, ಶಾಂತಿ ಮತ್ತು ಸಂತೋಷದ ಭಾವನೆ ಹೆಚ್ಚಿರುತ್ತದೆ. ಉದ್ಯೋಗದಲ್ಲಿ ಉದ್ಯೋಗಿಗಳ ಸಹಕಾರ ದೊರೆಯಲಿದೆ. ಪ್ರಗತಿಯ ಹಾದಿಯು ತೆರೆದುಕೊಳ್ಳುತ್ತದೆ. ಸಂಪತ್ತು ಹೆಚ್ಚಾಗುವ  ಎಲ್ಲಾ ಸಾಧ್ಯತೆಗಳಿವೆ. ಸ್ನೇಹಿತರ ಬೆಂಬಲ ಸಿಗಲಿದೆ.

 
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News