Weekly Horoscope: ಮುಂದಿನ ವಾರ ಎರಡು ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಕೈತುಂಬಾ ಹಣ

Weekly Career Horoscope From March 18th to March 24th: ಮಾರ್ಚ್ 18ರಿಂದ ಮಾರ್ಚ್ 24ರವರೆಗೆ ಈ ವಾರ ವೃತ್ತಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Mar 15, 2024, 09:04 AM IST
  • ಮಿಥುನ ರಾಶಿಯವರಿಗೆ ಈ ವಾರ ನಿಮ್ಮ ಉದ್ಯೋಗ ರಂಗದಲ್ಲಿ ನಿಮ್ಮ ಮೇಲಾಧಿಕಾರಿಗಳಿಂದ ಮನ್ನಣೆ ಸಾಧ್ಯತೆ
  • ವೃಶ್ಚಿಕ ರಾಶಿಯ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಜನರಿಗೆ ಮುಂಬರುವ ವಾರ ನಿರೀಕ್ಷೆಗಿಂತ ಅಧಿಕ ಲಾಭವಾಗಲಿದೆ.
  • ಧನು ರಾಶಿಯ ಸ್ವಂತ ವ್ಯವಹಾರ ಮಾಡುವ ಜನರಿಗೆ ಮುಂಬರುವ ವಾರ ಖರ್ಚಿನ ವಾರ.
Weekly Horoscope: ಮುಂದಿನ ವಾರ ಎರಡು ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಕೈತುಂಬಾ ಹಣ  title=

Career Varabhavishya in Kannada From March 18th to March 24th: ಮಾರ್ಚ್ ತಿಂಗಳ ಮೂರನೇ ವಾರ ಹಣ, ಯಶಸ್ಸು ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಕೆಲವು ಗ್ರಹಗಳ ಸ್ಥಾನಮಾನದಲ್ಲಿ ಬದಲಾವಣೆ ಕಂಡು ಬರಲಿದೆ. ಇದರ ಪ್ರಭಾವದಿಂದ ದ್ವಾದಶ ರಾಶಿಗಳಲ್ಲಿ ಕೆಲವು ರಾಶಿಯ ಜನರು ವೃತ್ತಿ-ವ್ಯವಹಾರದಲ್ಲಿ ಪ್ರಗತಿ ಕಂಡು ಬರಲಿದೆ. ಮಾತ್ರವಲ್ಲದೆ, ಆದಾಯದ ಹೊಸ ಮೂಲಗಳು ಹೆಚ್ಚಾಗಲಿವೆ ಎಂದು ಹೇಳಲಾಗುತ್ತಿದೆ. ಮುಂದಿನ ವಾರ ವೃತಿ-ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವ ರಾಶಿಯವರ ಫಲ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ವಾರ ಭವಿಷ್ಯ:  
ಮುಂಬರುವ ವಾರ ಮೇಷ ರಾಶಿಯವರಿಗೆ ವೃತ್ತಿ-ವ್ಯವಹಾರದಲ್ಲಿ ಸ್ಥಿರತೆ ಕಂಡು ಬರಲಿದೆ. ಅದರಲ್ಲೂ ವೃತ್ತಿ ಬದುಕಿನಲ್ಲಿ ಹೊಸ ಹೊಸ ಅವಕಾಶಗಳು ಲಭ್ಯವಾಗಲಿದೆ. ಈ ವಾರ ಭೂಮಿ ಹೂಡಿಕೆಯಿಂದ ಲಾಭ ಗಳಿಸಬಹುದು. 

ವೃಷಭ ರಾಶಿಯವರ ವಾರ ಭವಿಷ್ಯ:  
ವೃಷಭ ರಾಶಿಯ ಆನ್‌ಲೈನ್ ವ್ಯವಹಾರ ಮಾಡುತ್ತಿರುವವರಿಗೆ ಈ ವಾರ ಬಂಪರ್ ಧನಲಾಭವಾಗಲಿದೆ. ಉದ್ಯೋಗಸ್ಥರಿಗೆ ದೊಡ್ಡ ಜವಾಬ್ದಾರಿ ಹೆಗಲೇರಬಹುದು. ವೃಷಭ ರಾಶಿಯವರು ಈ ವಾರ ಹೂಡಿಕೆಯ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆಗಳನ್ನಿಡಬೇಕು. 

ಮಿಥುನ ರಾಶಿಯವರ ವಾರ ಭವಿಷ್ಯ:   
ಮಿಥುನ ರಾಶಿಯವರಿಗೆ ಈ ವಾರ ನಿಮ್ಮ ಉದ್ಯೋಗ ರಂಗದಲ್ಲಿ ನಿಮ್ಮ ಮೇಲಾಧಿಕಾರಿಗಳಿಂದ ಮನ್ನಣೆ, ಬಡ್ತಿ ಸಿಗುವ ಸಾಧ್ಯತೆ ಇದೆ. ಹೊಸ ಆಸ್ತಿ ಖರೀದಿಗಾಗಿ ಯೋಚಿಸುತ್ತಿರುವವರಿಗೆ ಇದು ಅತ್ಯುತ್ತಮ ಸಮಯ. 

ಕರ್ಕಾಟಕ ರಾಶಿಯವರ ವಾರ ಭವಿಷ್ಯ: 
ಈ ವಾರ ಕರ್ಕಾಟಕ ರಾಶಿಯ ನಿರುದ್ಯೋಗಿಗಳಿಗೆ ನೀವು ಇಚ್ಛಿಸಿದ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಅದರಲ್ಲೂ, ವಿದೇಶದಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಶುಭ ಸಮಯ ಎಂತಲೇ ಹೇಳಬಹುದು. 

ಇದನ್ನೂ ಓದಿ- Budh Uday: ಬುಧ ಉದಯದ ಪ್ರಭಾವ, ನಾಲ್ಕು ರಾಶಿಯವರ ಜೀವನದಲ್ಲಿ ತೆರೆಯಲಿದೆ ಅದೃಷ್ಟದ ಬಾಗಿಲು

ಸಿಂಹ ರಾಶಿಯವರ ವಾರ ಭವಿಷ್ಯ:  
ಸಿಂಹ ರಾಶಿಯವರಿಗೆ ದೀರ್ಘ ಸಮಯದಿಂದ ಸ್ಥಗಿತಗೊಂಡಿದ್ದ ಕೆಲಸ ಕಾರ್ಯಗಳು ಚಾಲನೆ ಪಡೆಯಲಿವೆ.  ಶಾಪಿಂಗ್‌ನಿಂದ ಹಣ ವ್ಯಯವಾಗಲಿದೆ. ಆದರೂ, ಇದು ನಿಮ್ಮ ಪ್ರೀತಿ ಪಾತ್ರರಿಗೆ ಸಂತಸವನ್ನು ತರಲಿದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭವಾಗಲಿದೆ. 

ಕನ್ಯಾ ರಾಶಿಯವರ ವಾರ ಭವಿಷ್ಯ: 
ಕನ್ಯಾ ರಾಶಿಯವರೇ ಮುಂದಿನ ವಾರ ನೀವು ಉದ್ಯೋಗ ರಂಗದಲ್ಲಿ ನಾನಾ ರೀತಿಯ ಸವಾಲುಗಳನ್ನು ಎದುರಿಸುತ್ತೀರಿ. ಆದರೂ, ವಿಜಯಲಕ್ಷ್ಮಿ ನಿಮ್ಮ ಕೈ ಹಿಡಿಯಲಿದ್ದಾಳೆ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಭರ್ಜರಿ ಧನಾಗಮನ. 

ತುಲಾ ರಾಶಿಯವರ ವಾರ ಭವಿಷ್ಯ: 
ತುಲಾ ರಾಶಿಯ ಜನರಿಗೆ ಮುಂದಿನ ವಾರ ಹಠಾತ್ ಧನಾಗಮನ ಸಾಧ್ಯತೆ ಇದೆ. ಆದರೂ, ವ್ಯಾಪಾರಸ್ಥರಿಗೆ ನಷ್ಟ, ಉದ್ಯೋಗ ಬದಲಾವಣೆಗಾಗಿ ಪ್ರಯತ್ನಿಸುತ್ತಿರುವವರಿಗೆ ಸಮಯ ಅಷ್ಟು ಉತ್ತಮವಾಗಿಲ್ಲ. 

ವೃಶ್ಚಿಕ ರಾಶಿಯವರ ವಾರ ಭವಿಷ್ಯ:  
ವೃಶ್ಚಿಕ ರಾಶಿಯ ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ಜನರಿಗೆ ಮುಂಬರುವ ವಾರ ನಿರೀಕ್ಷೆಗಿಂತ ಅಧಿಕ ಲಾಭವಾಗಲಿದೆ. ಉದ್ಯೋಗಸ್ಥರಿಗೆ ಮೇಲಾಧಿಕಾರಿಗಳಿಂದ ಮನ್ನಣೆ ದೊರೆಯಲಿದೆ. ವೆಚ್ಚಗಳನ್ನು ನಿಯಂತ್ರಿಸಿದರೆ ಭವಿಷ್ಯ ಉಜ್ವಲಗೊಳ್ಳಲಿದೆ. 

ಇದನ್ನೂ ಓದಿ- 10 ವರ್ಷಗಳ ಬಳಿಕ ಹೋಳಿ ಹುಣ್ಣಿಮೆಯಂದೇ ರಾಜಯೋಗ: ಈ 3 ರಾಶಿಗೆ ಸುವರ್ಣಯುಗ ಶುರು, ಸರ್ಕಾರಿ ವೃತ್ತಿ ಜೊತೆ ಪ್ರಮೋಷನ್ ಪಕ್ಕಾ!

ಧನು ರಾಶಿಯವರ ವಾರ ಭವಿಷ್ಯ:  
ಧನು ರಾಶಿಯ ಸ್ವಂತ ವ್ಯವಹಾರ ಮಾಡುವ ಜನರಿಗೆ ಮುಂಬರುವ ವಾರ ಖರ್ಚಿನ ವಾರ. ಆದಾಗ್ಯೂ, ನಿಮ್ಮ ಆದಾಯ ಉತ್ತಮವಾಗಿರುವುದರಿಂದ ನಿಮ್ಮ ಆರ್ಥಿಕ ಸಮಸ್ಯೆಗಳನ್ನು ಸುಲಭವಾಗಿ ನಿರ್ವಹಿಸುವಿರಿ. 

ಮಕರ ರಾಶಿಯವರ ವಾರ ಭವಿಷ್ಯ:  
ಮಕರ ರಾಶಿಯ ಜನರಿಗೆ ಈ ವಾರ ಉದ್ಯೋಗ ಕ್ಷೇತ್ರದಲ್ಲಿ ಪದೋನ್ನತಿ ಸಾಧ್ಯತೆ ಇದೆ. ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಬಯಸುವವರಿಗೆ ಉತ್ತಮ ಸಮಯ ಇದಾಗಿದ್ದು ಆದಾಯ ವೃದ್ಧಿಯಾಗಲಿದೆ. 

ಕುಂಭ ರಾಶಿಯವರ ವಾರ ಭವಿಷ್ಯ:  
ಕುಂಭ ರಾಶಿಯ ಉದ್ಯೋಗಸ್ಥರು ಕಾನೂನು ವಿಷಯಗಳಿಗೆ ಸಂಬಂಧಿಸಿದಂತೆ ಎಚ್ಚರಿಕೆ ಹೆಜ್ಜೆಗಳನ್ನು ಇಡುವುದು ಒಳ್ಳೆಯದು. ವ್ಯಾಪಾರ-ವ್ಯವಹಾರದ ದೃಷ್ಟಿಯಿಂದ ಕೈಗೊಳ್ಳುವ ಪ್ರಯಾಣವು ಫಲಪ್ರದವಾಗಿರಲಿದೆ. 

ಮೀನ ರಾಶಿಯವರ ವಾರ ಭವಿಷ್ಯ: 
ಮೀನ ರಾಶಿಯ ಜನರಿಗೆ ಉದ್ಯೋಗ ಬದಲಾವಣೆ ಲಾಭದಾಯಕ ಎಂದು ಸಾಬೀತುಪಡಿಸಲಿದೆ. ನೀವು ಪೂರ್ವಿಕಾರ ಆಸ್ತಿ-ವ್ಯವಹಾರಕ್ಕೆ ಸಂಬಂಧಿಸಿದಂತೆ ಇಷ್ಟು ದಿನಗಳ ಕಾಲ ಎದುರಿಸುತ್ತಿದ್ದ ಸಮಸ್ಯೆಗಳು ಈಗ ಬಗೆ ಹರಿಯುವ ಸಾಧ್ಯತೆ ಇದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News