Weekly Horoscope: ಏಪ್ರಿಲ್ ಮೊದಲ ವಾರ ದ್ವಾದಶ ರಾಶಿಗಳಲ್ಲಿ ಯಾರಿಗೆ ಶುಭ? ಯಾರು ಜಾಗರೂಕರಾಗಿರಬೇಕು?

Weekly Horoscope From April 01t to April 07th: ಏಪ್ರಿಲ್ 01ರಿಂದ ಏಪ್ರಿಲ್ 07ರವರೆಗೆ ಈ ವಾರದ ಭವಿಷ್ಯ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Apr 1, 2024, 10:41 AM IST
  • ಕರ್ಕಾಟಕ ರಾಶಿಯವರಿಗೆ ಈ ವಾರ ವೃತ್ತಿ-ವ್ಯವಹಾರಕ್ಕೆ ಸಂಬಂಧಿಸಿದಂತೆ ಉತ್ತಮ ವಾರ ಎಂದು ಹೇಳಲಾಗುತ್ತಿದೆ.
  • ಸಿಂಹ ರಾಶಿಯ ಜನರು ಈ ವಾರ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚು ಗಮನವಹಿಸಬೇಕು.
  • ತುಲಾ ರಾಶಿಯ ಸ್ವಂತ ವ್ಯಾಪಾರ ಮಾಡುವ ಜನರಿಗೆ ಈ ವಾರ ಅತ್ಯುತ್ತಮವಾಗಿದೆ.
Weekly Horoscope: ಏಪ್ರಿಲ್ ಮೊದಲ ವಾರ ದ್ವಾದಶ ರಾಶಿಗಳಲ್ಲಿ ಯಾರಿಗೆ ಶುಭ? ಯಾರು ಜಾಗರೂಕರಾಗಿರಬೇಕು?  title=

Varabhavishya in Kannada From April 01t to April 07th: ಏಪ್ರಿಲ್ ಮೊದಲ ವಾರ ಕೆಲವು ಗ್ರಹಗಳ ಸ್ಥಾನದಲ್ಲಿ ಪ್ರಮುಖ ಬದಲಾವಣೆ ಕಂಡು ಬರಲಿದ್ದು ಇದರ ಫಲವಾಗಿ ಕೆಲವು ಕೆಲ ರಾಶಿಗಳಿಗೆ ಬಂಪರ್ ಲಾಭವಾಗಲಿದೆ. ಇನ್ನೂ ಕೆಲವು ರಾಶಿಯ ಜನರಿಗೆ ಮಿಶ್ರ ಫಲಗಳಿಂದ ಕೂಡಿದ ವಾರ ಇದಾಗಲಿದೆ. ಈ ವಾರ ಯಾವ ರಾಶಿಯವರ್ ಅಭವಿಷ್ಯ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ವಾರ ಭವಿಷ್ಯ (Aries Weekly Horoscope):  
ಮೇಷ ರಾಶಿಯವರಿಗೆ ಏಪ್ರಿಲ್ ತಿಂಗಳ ಮೊದಲ ವಾರ ಅಷ್ಟು ಉತ್ತಮವಾಗಿಲ್ಲ. ಕೆಲಸಕ್ಕೆ ಸಂಬಂಧಿಸಿದಂತೆ ಅನಾವಶ್ಯಕ ಸುತ್ತಾಟ ಹೆಚ್ಚಾಗಲಿದೆ. ಸರಿಯಾದ ಸಮಯಕ್ಕೆ ಕೆಲಸ ಪೂರ್ಣಗೊಳ್ಳದೆ ಮನಸ್ಸಿನ ನೆಮ್ಮದಿ ಹಾಳಾಗಬಹುದು. ವ್ಯವಹಾರಸ್ಥರು ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ. ವಾರದ ಮಧ್ಯೆ ಪ್ರಯಾಣ ವ್ಯಾಪಾರಕ್ಕೆ ಸಂಬಂಧಿಸಿದ ಪ್ರಯಾಣವು ಲಾಭದಾಯಕವಾಗಿರಲಿದೆ. ವಾಹನ ಚಾಲನೆ ವೇಳೆ ಅಪಘಾತ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಇರಿ. 

ವೃಷಭ ರಾಶಿಯವರ ವಾರ ಭವಿಷ್ಯ (Taurus Weekly Horoscope):  
ವೃಷಭ ರಾಶಿಯವರಿಗೆ ಈ ವಾರ ಏರಿಳಿತಗಳಿಂದ ಕೂಡಿದ ವಾರವಾಗಿರುತ್ತದೆ. ವಾರದ ಪ್ರಥಮಾರ್ಧದಲ್ಲಿ ವ್ಯಾಪಾರದಲ್ಲಿ ಅನಿರೀಕ್ಷಿತ ಲಾಭದಿಂದ ನೆಮ್ಮದಿ ಕಾಣುವಿರಿ. ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭವನ್ನು ನಿರೀಕ್ಷಿಸಬಹುದು. ಆದಾಗ್ಯೂ, ವಾರಾಂತ್ಯವು ನಿಮಗೆ ಕಠಿಣ ಸಮಯ ಎಂದು ಸಾಬೀತು ಪಡಿಸಬಹುದು. ಅನಗತ್ಯ ಖರ್ಚು ನಿಮ್ಮ ಹೊರೆಯನ್ನು ಹೆಚ್ಚಿಸಲಿದೆ. ಉದ್ಯೋಗ ಸ್ಥಳದಲ್ಲಿ ಆರ್ಥಿಕ ವಿಚಾರವಾಗಿ ಮಾತ್ರವಲ್ಲದೆ ಗೌರವಕ್ಕೂ ಧಕ್ಕೆ ಬರಬಹುದು. ಆದಾಗ್ಯೂ, ಪ್ರೇಮ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ವಾರ ಉತ್ತಮವಾಗಿದೆ. 

ಮಿಥುನ ರಾಶಿಯವರ ವಾರ ಭವಿಷ್ಯ (Gemini Weekly Horoscope):   
ಮಿಥುನ ರಾಶಿಯ ಜನರು ಈ ವಾರ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತುಂಬಾ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಆಸ್ತಿ ವಿಚಾರಗಳು ಈ ವಾರ ನಿಮ್ಮ ಚಿಂತೆಯನ್ನು ಹೆಚ್ಚಿಸಬಹುದು. ದೇಶೀಯ ವ್ಯವಹಾರಗಳಲ್ಲಿ ತೊಡಗಿರುವವರಿಗೆ ಇದು ಸವಾಲಿನ ವಾರ. ಉದ್ಯೋಗ ರಂಗದಲ್ಲಿ ನಿಮ್ಮ ಸಹೋದ್ಯೋಗಿಗಳೊಂದಿಗೆ ಸಹನೆಯಿಂದ ಇರುವುದರಿಂದ ಪ್ರಯೋಜನವನ್ನು ಪಡೆಯುವಿರಿ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಈ ವಾರ ಶುಭ ವಾರ್ತೆ ಸಿಗಲಿದೆ. ಆದಾಯದ ಹೊಸ ಮೂಲಗಳು ಹೆಚ್ಚಾಗಲಿದ್ದು ಐಷಾರಾಮಿ ಜೀವನವನ್ನು ನಡೆಸುವಿರಿ. 

ಕರ್ಕಾಟಕ ರಾಶಿಯವರ ವಾರ ಭವಿಷ್ಯ (Cancer Weekly Horoscope): 
ಕರ್ಕಾಟಕ ರಾಶಿಯವರಿಗೆ ಈ ವಾರ ವೃತ್ತಿ-ವ್ಯವಹಾರಕ್ಕೆ ಸಂಬಂಧಿಸಿದಂತೆ ಉತ್ತಮ ವಾರ ಎಂದು ಹೇಳಲಾಗುತ್ತಿದೆ. ದೀರ್ಘ ಸಮಯದಿಂದ ಪ್ರಯತ್ನಿಸುತ್ತಿದ್ದ ನಿಮ್ಮ ಕನಸೊಂದು ಈ ವಾರ ಕೈಗೂಡಲಿದೆ. ವಾರದ ಆರಂಭದಲ್ಲಿ ಪ್ರಭಾವಿ ವ್ಯಕ್ತಿಗಳ ಭೇಟಿಯು ಲಾಭದಾಯಕಾವಿರಲಿದೆ. ಉದ್ಯೋಗಸ್ಥರು ಉನ್ನತ ಹುದ್ದೆಗೆ ಏರುವ ಸಂಭವವಿದೆ. ಉದ್ಯೋಗಸ್ಥ ಮಹಿಳೆಯರು ವೃತ್ತಿ ಜೀವನ ಮತ್ತು ವೈಯಕ್ತಿಕ ಜೀವನ ಎರಡನ್ನೂ ಸಮನ್ವಯಗೊಳಿಸುವಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.  ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. 

ಇದನ್ನೂ ಓದಿ- April Horoscope: ಏಪ್ರಿಲ್‌ನಲ್ಲಿ ಹಲವು ಶುಭ ಯೋಗಗಳ ನಿರ್ಮಾಣ, ಐದು ರಾಶಿಯವರಿಗೆ ಗೋಲ್ಡನ್ ಟೈಮ್

ಸಿಂಹ ರಾಶಿಯವರ ವಾರ ಭವಿಷ್ಯ (Leo Weekly Horoscope):  
ಸಿಂಹ ರಾಶಿಯ ಜನರು ಈ ವಾರ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಹೆಚ್ಚು ಗಮನವಹಿಸಬೇಕು. ಪ್ರೀತಿಪಾತ್ರರೊಡನೆ ಸಣ್ಣ ವಿಚಾರಕ್ಕೆ ವೈಮನಸ್ಯ ಸಾಧ್ಯತೆ ಇರುವುದರಿಂದ ನಿಮ್ಮ ಕೋಪಕ್ಕೆ ಕಡಿವಾಣ ಹಾಕಿ. ವ್ಯಾಪಾರಸ್ಥರು ಅಲ್ಪಾವಧಿಯ ಲಾಭಕ್ಕೆ ಆಸೆಪಟ್ಟು ದೀರ್ಘಾವಧಿಯಲ್ಲಿ ನಷ್ಟವನ್ನು ಅನುಭವಿಸಬೇಕಾಗಬಹುದು. ವಾರಾಂತ್ಯದಲ್ಲಿ ಪ್ರಯಾಣ ಸಾಧ್ಯತೆ ಇದೆ. ಆರೋಗ್ಯವೂ ಸುಧಾರಿಸಲಿದೆ. ದಾಂಪತ್ಯ ಜೀವನ ಸುಖಮಯವಾಗಿರಲು ನಿಮ್ಮ ಸಂಗಾತಿಯ ಭಾವನೆಗಳನ್ನು ಕಡೆಗಣಿಸುವುದನ್ನು ತಪ್ಪಿಸಿ. 

ಕನ್ಯಾ ರಾಶಿಯವರ ವಾರ ಭವಿಷ್ಯ (Virgo Weekly Horoscope): 
ಕನ್ಯಾ ರಾಶಿಯ ಜನರಿಗೆ ಈ ವಾರ ವೃತ್ತಿ-ವ್ಯವಹಾರಕ್ಕೆ ಸಂಬಂಧಿಸಿದಂತೆ ಶುಭಕರವಾಗಿದೆ. ಆದರೆ, ಕುಟುಂಬ ವಿಚಾರದಲ್ಲಿ ನೀವು ಸಂಯಮವನ್ನು ಕಾಯ್ದುಕೊಳ್ಳದಿದ್ದರೆ ಸಣ್ಣ ವಿಷಯಗಳು ಕೂಡ ಸಂಬಂಧವನ್ನು ಹದಗೆಡಿಸಬಹುದು. ಆಪ್ತ ಮಿತ್ರರ ನೆರವಿನಿಂದ ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿವೆ. ಭೂಮಿ-ವಾಹನ ಖರೀದಿ ಮಾಡಲು ಯೋಚಿಸುತ್ತಿರುವವರಿಗೆ ಇದು ಶುಭ ವಾರ. ಪೂರ್ವಜರ ಆಸ್ತಿಯಿಂದ ಲಾಭವಾಗಲಿದೆ. ವ್ಯಾಪಾರಸ್ಥರು ವಾರಾಂತ್ಯದಲ್ಲಿ ಹೆಚ್ಚಿನ ಲಾಭವನ್ನು ನಿರೀಕ್ಷಿಸಬಹುದು. ಮಕ್ಕಳಿಂದ ಶುಭ ವಾರ್ತೆಯನ್ನು ನಿರೀಕ್ಷಿಸಬಹುದು. 

ತುಲಾ ರಾಶಿಯವರ ವಾರ ಭವಿಷ್ಯ (Libra Weekly Horoscope): 
ತುಲಾ ರಾಶಿಯ ಸ್ವಂತ ವ್ಯಾಪಾರ ಮಾಡುವ ಜನರಿಗೆ ಈ ವಾರ ಅತ್ಯುತ್ತಮವಾಗಿದೆ. ವಾರದ ಮೊದಲಾರ್ಧದಲ್ಲಿ ವೃತ್ತಿಪರರು ಮೇಲಾಧಿಕಾರಿಗಳ ಮನ್ನಣೆಗೆ ಪಾತ್ರರಾಗುವಿರಿ. ಮಾತ್ರವಲ್ಲದೆ, ಬಡ್ತಿ ಸಂಭವವೂ ಇದೆ. ಹೂಡಿಕೆಯಿಂದ ಲಾಭವನ್ನು ನಿರೀಕ್ಷಿಸಬಹುದು. ವಿದೇಶ ಸಂಬಂಧಿಸಿದ ವ್ಯಾಪಾರ ಮಾಡುವವರಿಗೆ ಈ ಸಮಯವು ತುಂಬಾ ಚೆನ್ನಾಗಿದೆ. ವಾರದ ದ್ವಿತೀಯಾರ್ಧದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು, ರಾಜಕೀಯಕ್ಕೆ ಸಂಬಂಧಿಸಿದ ಜನರಿಗೆ ಬಂಪರ್ ಪ್ರಯೋಜನವಾಗಲಿದೆ. ಭೂಮಿ ವ್ಯವಹಾರಕ್ಕೆ ಸಂಬಂಧಿಸಿದಂತೆ ತಂದೆ ಸಮಾನರಿಂದ ಸಲಹೆ ಸಾಧ್ಯತೆ ಇದೆ. 

ವೃಶ್ಚಿಕ ರಾಶಿಯವರ ವಾರ ಭವಿಷ್ಯ (Scorpio Weekly Horoscope):  
ವೃಶ್ಚಿಕ ರಾಶಿಯ ಜನರು ಈ ವಾರ ಯೋಜಿತ ಕಾರ್ಯಗಳಲ್ಲಿ ಯಶಸ್ಸು ಪಡೆಯುವರು. ವಾರದ ಆರಂಭದಲ್ಲಿ ವ್ಯಾಪಾರ-ವ್ಯವಹಾರಕ್ಕೆ ಸಂಬಂಧಿಸಿದ ಪ್ರಯಾಣವು ಲಾಭದಾಯಕವಾಗಿರಲಿದೆ. ವೃತ್ತಿ ಬದುಕಿನಲ್ಲಿ ಪ್ರತಿ ಕೆಲಸದಲ್ಲೂ ಯಶಸ್ಸು ಸಾಧಿಸುವಿರಿ. ಇದರಿಂದ ಸ್ಥಾನಮಾನ, ಪ್ರತಿಷ್ಠೆ ಹೆಚ್ಚಾಗಲಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಆಸ್ತಿ ಖರೀದಿ ಬಗ್ಗೆ ಯೋಚಿಸುತ್ತಿರುವವರಿಗೆ ಶುಭ ಸಮಯ. ವಾಹನ ಖರೀದಿ ಯೋಗವೂ ಇದೆ. ವಾರದ ದ್ವಿತೀಯ ಭಾಗದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಾಗಿ ಸಿದ್ದತೆ ನಡೆಸುತ್ತಿರುವವರಿಗೆ ಶುಭ ಸಮಯ. ವಿವಾಹ ಜೀವನದಲ್ಲಿ ಮಧುರತೆಯನ್ನು ಅನುಭವಿಸುವಿರಿ. 

ಇದನ್ನೂ ಓದಿ- ಈ 5 ರಾಶಿಗಳಿಗೆ ಶನಿ ಸಂಚಾರದಿಂದ ಹಣದ ಮಳೆ.. ಸುಖ ಸಂಪತ್ತು ಧಾರೆ ಎರೆಯುವ ಶನಿದೇವ, ಉದ್ಯೋಗದಲ್ಲಿ ಬಡ್ತಿ.. ರಾಜರ ಜೀವನ !

ಧನು ರಾಶಿಯವರ ವಾರ ಭವಿಷ್ಯ (Sagittarius Weekly Horoscope):  
ಧನು ರಾಶಿಯ ಜನರಿಗೆ ಈ ವಾರ ವೃತ್ತಿ ಬದುಕಿಗೆ ಸಂಬಂಧಿಸಿದಂತೆ ಅದ್ಭುತವಾಗಿರಲಿದೆ. ಪ್ರಭಾವಿ ವ್ಯಕ್ತಿಗಳ ಭೇಟಿಯು ಲಾಭದಾಯಕವಾಗಿರಲಿದೆ. ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವಿರಿ. ದೀರ್ಘ ಸಮಯದಿಂದ ಬಾಕಿ ಉಳಿದಿದ್ದ ಕೆಲಸಗಳು ಈಗ ಪೂರ್ಣಗೊಳ್ಳಲಿದೆ. ಭೂಮಿ ಅಥವಾ ಕಟ್ಟಡಕ್ಕೆ ಸಂಬಂಧಿಸಿದ ಯಾವುದೇ ವಿವಾದದಲ್ಲಿ ಸಿಲುಕಿದ್ದರೆ ಈ ವಾರ ಅದು ಬಗೆಹರಿಯಲಿದೆ. ಭೂಮಿ ಮಾರಾಟಕ್ಕಾಗಿ ಯೋಚಿಸುತ್ತಿರುವವರಿಗೆ ಶುಭ ಸಮಯ. ಪ್ರೀತಿ ವಿಚಾರಗಳಲ್ಲಿ ಈ ವಾರ ಶುಭ ಸುದ್ದಿಯನ್ನು ನಿರೀಕ್ಷಿಸಬಹುದು. ವಾರದ ಕೊನೆಯಲ್ಲಿ, ಮಕ್ಕಳ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳಬಹುದು. 

ಮಕರ ರಾಶಿಯವರ ವಾರ ಭವಿಷ್ಯ (Capricorn Weekly Horoscope):  
ಮಕರ ರಾಶಿಯವರಿಗೆ ಈ ವಾರ ನಿಮ್ಮ ಜೀವನದಲ್ಲಿ ಎದುರಾಗಿದ್ದ ಸಮಸ್ಯೆಗಳಿಂದ ಪರಿಹಾರ ದೊರೆತು ಮಾನಸಿಕ ಚಿಂತೆ ದೂರವಾಗಲಿದೆ. ವಾರದ ಮೊದಲಾರ್ಧದಲ್ಲಿ ಸ್ತ್ರೀಯರಿಂದ ನಿಮ್ಮ ಪ್ರಮುಖ ಸಮಸ್ಯೆಗಳಿಗೆ ಪರಿಹಾರವನ್ನು ಪಡೆಯಬಹುದು. ವಾರದ ಮಧ್ಯದಲ್ಲಿ, ಕೌಟುಂಬಿಕ ಕಲಹಗಳು ಬಗೆಹರಿಯಲಿದೆ. ವಾರದ ಕೊನೆಯ ಭಾಗದಲ್ಲಿ ನಿಮ್ಮ ಬಹುದೊಡ್ಡ ಕನಸೊಂದು ನನಸಾಗಲಿದೆ. ಪಾಲುದಾರಿಕೆಯೊಂದಿಗೆ ಕೆಲಸ ಮಾಡುವವರು ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಪ್ರೀತಿಯಲ್ಲಿ ಇರುವವರಿಗೆ ಸಂಬಂಧಗಳು ಗಟ್ಟಿಯಾಗುತ್ತವೆ. 

ಕುಂಭ ರಾಶಿಯವರ ವಾರ ಭವಿಷ್ಯ (Aquarius Weekly Horoscope):  
ಕುಂಭ ರಾಶಿಯವರಿಗೆ ಇದು ಮಿಶ್ರಫಲಗಳಿಂದ ಕೂಡಿದ ವಾರ. ಈ ವಾರ ನೀವು ಕುಟುಂಬಕ್ಕೆ ಸಂಬಂಧಿಸಿದ ಯಾವುದೇ ನಿರ್ಧಾರಗಳನ್ನು ಕೈಗೊಳ್ಳುವಾಗ ತುಂಬಾ ಜಾಗರೂಕರಾಗಿರಬೇಕು. ಯಾವುದೇ ಕೆಲಸ ಕಾರ್ಯಗಳಲ್ಲಿ ಕುಟುಂಬಸ್ಥರ ಬೆಂಬಲ ದೊರೆಯದೆ ನೀವು ಗೊಂದಲಕ್ಕೆ ಒಳಗಾಗಬಹುದು. ವಾರದ ದ್ವಿತೀಯಾರ್ಧದಲ್ಲಿ, ಬಾಕಿ ಉಳಿದಿರುವ ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ನಿಮ್ಮ ಆಪ್ತರಿಂದ  ಬೆಂಬಲ ಸಹಕಾರ ದೊರೆಯಲಿದೆ. ಆದಾಯದ ಮೂಲಗಳು ಹೆಚ್ಚಾಗಲಿವೆ. ಅದಕ್ಕೆ ತಕ್ಕಂತೆ ವೆಚ್ಚಗಳು ಕೂಡ ಇರಲಿವೆ. 

ಮೀನ ರಾಶಿಯವರ ವಾರ ಭವಿಷ್ಯ (Pisces Weekly Horoscope): 
ಮೀನ ರಾಶಿಯ ಜನರು ಈ ವಾರ ನಿಮಾಮ್ ಮಾತಿನ ಮೇಲೆ ಹಿಡಿತ, ನಿಮ್ಮ ನಡವಳಿಕೆಯಲ್ಲಿ ಬದಲಾವಣೆಗಳನ್ನು ಕಾಯ್ದುಕೊಳ್ಳುವುದು ಅವಶ್ಯಕ. ಬೇರೆಯವರೊಂದಿಗೆ ಅನುಚಿತ ವರ್ತನೆಯು ಭಾರೀ ನಷ್ಟಕ್ಕೆ ಕಾರಣವಾಗಬಹುದು. ನಿಮ್ಮ ವ್ಯವಹಾರವನ್ನು ಇತರರ ಕೈಯಲ್ಲಿ ಬಿಡುವುದನ್ನು ತಪ್ಪಿಸಿ. ಯಾರನ್ನೂ ಕೂಡ ಕುರುಡಾಗಿ ನಂಬಬೇಡಿ. ನೀವು ಉದ್ಯೋಗ ಬದಲಾಯಿಸಲು ಯೋಚಿಸುತ್ತಿದ್ದರೆ ಇದು ಒಳ್ಳೆಯ ವಾರ. ವಾರದ ಮಧ್ಯ ಭಾಗದಲ್ಲಿ ಕುಟುಂಬದೊಂದಿಗೆ ಉತ್ತಮ ಸಮಯವನ್ನು ಆನಂದಿಸುವಿರಿ. ಉದ್ಯೋಗ ಸ್ಥಳದಲ್ಲಿ ಸವಾಲುಗಳು ಹೆಚ್ಚಾಗಿದ್ದರೂ, ಬುದ್ದಿವಂತಿಕೆಯಿಂದ ಎಲ್ಲವನ್ನೂ ನಿರ್ವಹಿಸುವಿರಿ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News