Weekly Horoscope: ನವರಾತ್ರಿಯಲ್ಲಿ ಈ ರಾಶಿಯವರಿಗೆ ಭಾಗ್ಯೋದಯ, ಮುಟ್ಟಿದ್ದೆಲ್ಲಾ ಚಿನ್ನ

Weekly Horoscope From October 16th to October 22nd:  ನಿನ್ನೆಯಿಂದ ಶುಭ ನವರಾತ್ರಿ ಆರಂಭವಾಗಿದೆ. ನವರಾತ್ರಿ ತಾಯಿ ದುರ್ಗೆಯ ಆಶೀರ್ವಾದಕ್ಕಾಗಿ ತುಂಬಾ ಪ್ರಾಶಸ್ತ್ಯವಾದ ಸಮಯ ಎಂದು ನಂಬಲಾಗಿದೆ. ಈ ವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯೋಣ... 

Written by - Yashaswini V | Last Updated : Oct 16, 2023, 08:53 AM IST
  • ಈ ವಾರ ತುಲಾ ರಾಶಿಯ ಜನರಿಗೆ ಗ್ರಹಗಳ ಸಾಗಣೆಯು ಸಂಬಂಧಿತ ಸೇವೆಗಳು ಮತ್ತು ವ್ಯವಹಾರದಲ್ಲಿ ಸವಾಲಾಗಿರುತ್ತದೆ.
  • ನವರಾತ್ರಿಯ ಈ ವಾರ ಧನು ರಾಶಿಯವರಿಗೆ ವೃತ್ತಿ ಜೀವನದಲ್ಲಿ ಯಶಸ್ಸನ್ನು ನೀಡಲಿದೆ.
  • ಮೀನ ರಾಶಿಯವರು ಈ ವಾರ ವೃತ್ತಿ ರಂಗದಲ್ಲಿ ಹಿರಿಯ ಅಧಿಕಾರಿಗಳ ಮನ್ನಣೆಗೆ ಪಾತ್ರರಾಗಲಿದ್ದಾರೆ.
Weekly Horoscope: ನವರಾತ್ರಿಯಲ್ಲಿ ಈ ರಾಶಿಯವರಿಗೆ ಭಾಗ್ಯೋದಯ, ಮುಟ್ಟಿದ್ದೆಲ್ಲಾ ಚಿನ್ನ  title=

Weekly Horoscope in  Kannada From October 16th to October 22nd: ಅಕ್ಟೋಬರ್ ಮೂರನೇ ವಾರ ನವರಾತ್ರಿಯ ಹಬ್ಬ ಇರುವುದರಿಂದ ಈ ವಾರ ತುಂಬಾ ವಿಶೇಷವಾಗಿದೆ. ಈ ವಾರ ಕೆಲವು ರಾಶಿಯವರ ಜೀವನದಲ್ಲಿ ಭಾಗ್ಯೋದಯದ ಸಮಯ ಎಂತಲೇ ಹೇಳಲಾಗುತ್ತಿದೆ. ಈ ವಾರದ ನಿಮ್ಮ ಭವಿಷ್ಯ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ವಾರ ಭವಿಷ್ಯ:  
ನವರಾತ್ರಿಯ ಈ ವಾರ ಮೇಷ ರಾಶಿಯವರಿಗೆ ನಿಮ್ಮ ಬಹುದಿನದ ಕನಸು ನನಸಾಗಲಿದೆ. ಸರ್ಕಾರಿ ನೌಕರರಿಗೆ ಬಡ್ತಿ ಸಂಭವವಿದೆ. ಇದಲ್ಲದೆ, ಈ ಸಮಯವು ಪ್ರೇಮ ಸಂಬಂಧಗಳಿಗೆ ಅನುಕೂಲಕರವಾಗಿರುತ್ತದೆ. ವಾರದ ಮಧ್ಯದವರೆಗೆ ಹಣ ಗಳಿಸಲು ಉತ್ತಮ ಅವಕಾಶಗಳಿವೆ. ವಾರಾಂತ್ಯದಲ್ಲಿ ದಿಢೀರ್ ಪ್ರಯಾಣ ಸಾಧ್ಯತೆ ಇದ್ದು, ಪ್ರಯಾಣವು ಲಾಭದಾಯಕವಾಗಿರುತ್ತದೆ. 
 
ವೃಷಭ ರಾಶಿಯವರ ವಾರ ಭವಿಷ್ಯ:  
ಈ ವಾರ, ವೃಷಭ ರಾಶಿಯ ಜನರು ವೃತ್ತಿಪರ ಜೀವನವನ್ನು ಅದ್ಭುತವಾಗಿಸುವಲ್ಲಿ ಯಶಸ್ವಿಯಾಗುತ್ತಾರೆ. ಈ ವಾರ ಗ್ರಹಗಳ ಸಂಚಾರವು ನಿಮ್ಮ ಸಂತೋಷ ಮತ್ತು ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀಡಲಿದ್ದು ಸಂತೋಷದ ಸಮಯವನ್ನು ಅನುಭವಿಸುವಿರಿ. ಪ್ರೇಮ ಸಂಬಂಧಗಳಲ್ಲಿ, ನಿಮ್ಮ ಸಂಗಾತಿಯ ಮಾನಸಿಕ ಸ್ಥಿತಿಯು ನಿಮಗೆ ಶುಭ ಮತ್ತು ಧನಾತ್ಮಕವಾಗಿರುತ್ತದೆ. ವಾರಾಂತ್ಯದಲ್ಲಿ ಹಣ ಗಳಿಸುವಲ್ಲಿ ಅಪೇಕ್ಷಿತ ಯಶಸ್ಸು ಇರುತ್ತದೆ.  
 
ಮಿಥುನ ರಾಶಿಯವರ ವಾರ ಭವಿಷ್ಯ:   
ಮಿಥುನ ರಾಶಿಯವರಿಗೆ ಈ ವಾರ ಬಂಡವಾಳ ಹೂಡಿಕೆ ಮತ್ತು ವಿದೇಶಿ ಕೆಲಸಗಳಿಂದ ಬಂಪರ್ ಲಾಭವಾಗ್ಲೈದೆ. ಆದಾಗ್ಯೂ, ಸ್ಥಿರಾಸ್ತಿಗೆ ಸಂಬಂಧಿಸಿದ ವ್ಯವಹಾರಗಳಲ್ಲಿ ತುಂಬಾ ಜಾಗರೂಕರಾಗಿರುವುದು ಅತ್ಯಾವಶ್ಯಕವಾಗಿದೆ. ವಾರದ ದ್ವಿತೀಯಾರ್ಧದಲ್ಲಿ, ವ್ಯಾಪಾರಕ್ಕೆ ಸಂಬಂಧಿಸಿದ ಕೈಗಾರಿಕೆಗಳು ವೇಗಗೊಳ್ಳಲಿದ್ದು ನಿರೀಕ್ಷಿತ ಲಾಭ ಗಳಿಸುವಿರಿ. 

ಕರ್ಕಾಟಕ ರಾಶಿಯವರ ವಾರ ಭವಿಷ್ಯ: 
ಕರ್ಕಾಟಕ ರಾಶಿಯ ಜನರು ಈ ವಾರ ಸುಖ ದಾಂಪತ್ಯ ಜೀವನವನ್ನು ಅನುಭವಿಸುವರು. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯುವ ಸಾಧ್ಯತೆ ಇದೆ. ಉದ್ಯೋಗಕ್ಕಾಗಿ, ಉನ್ನತ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗಲು ಬಯಸುವವರಿಗೆ ಅದೃಷ್ಟದ ಸಮಯ. ಈ ವಾರದ ದ್ವಿತೀಯಾರ್ಧದಲ್ಲಿ ಕೆಲಸದ ಒತ್ತಡ ಹೆಚ್ಚಾಗುವುದರಿಂದ ಇದು ನಿಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. 
 
ಇದನ್ನೂ ಓದಿ- Surya Gochar: ನಾಳೆ ತುಲಾ ರಾಶಿಗೆ ಸೂರ್ಯನ ಪ್ರವೇಶ, ನಿಮ್ಮ ಮೇಲೆ ಏನು ಪರಿಣಾಮ

ಸಿಂಹ ರಾಶಿಯವರ ವಾರ ಭವಿಷ್ಯ:  
ಈ ವಾರ ಸಿಂಹ ರಾಶಿಯವರಿಗೆ ಯಾವುದೇ ಕೆಲಸದಲ್ಲಿ ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ ದೊರೆಯಲಿದೆ. ಇದು ಉದ್ಯೋಗ ರಂಗದಲ್ಲಿ ನಿಮ್ಮ ಗೌರವ, ಪ್ರತಿಷ್ಠೆಯನ್ನು ಹೆಚ್ಚಿಸಲಿದೆ. ಈ ವಾರದ ಮೊದಲ ಭಾಗದಿಂದ ನೀವು ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ವಾರದ ದ್ವಿತೀಯಾರ್ಧದಲ್ಲಿ ವೈವಾಹಿಕ ಜೀವನದಲ್ಲಿ ಮಧುರ ಕ್ಷಣಗಳನ್ನು ಅನುಭವಿಸಬಹುದು. ನೀವು ಮದುವೆಗೆ ಅರ್ಹರಾಗಿದ್ದರೆ, ಅನುಕೂಲಕರ ಜೀವನ ಸಂಗಾತಿಯು ನಿಮ್ಮನ್ನು ಸೇರಲಿದ್ದಾರೆ. 
 
ಕನ್ಯಾ ರಾಶಿಯವರ ವಾರ ಭವಿಷ್ಯ: 
ಈ ವಾರ, ಕನ್ಯಾ ರಾಶಿಯ ಜನರು ತಮ್ಮ ಸಾಮಾಜಿಕ ಮತ್ತು ರಾಜಕೀಯ ಜೀವನದಲ್ಲಿ ಪ್ರಗತಿಗಾಗಿ ಕೆಲವು ಆಕರ್ಷಕ ಯೋಜನೆಗಳನ್ನು ಪ್ರಾರಂಭಿಸಬಹುದು. ನೀವು ವ್ಯಾಪಾರಸ್ಥರಾಗಿದ್ದರೆ ಅಥವಾ ಸರಕುಗಳ ನಿರ್ಮಾಪಕ ಮತ್ತು ಮಾರಾಟಗಾರರಾಗಿದ್ದರೆ ನಿಮ್ಮ ಕೆಲಸ ಕಾರ್ಯಗಳಲ್ಲಿ ತೊಡಕುಗಳು ಉಂಟಾಗಬಹುದು ಎಚ್ಚರ. ವೈವಾಹಿಕ ಜೀವನದಲ್ಲಿ ಪರಸ್ಪರ ಸಹಕಾರ ಮತ್ತು ಪ್ರೀತಿಯ ಪರಿಸ್ಥಿತಿ ಇರುತ್ತದೆ. 
 
ತುಲಾ ರಾಶಿಯವರ ವಾರ ಭವಿಷ್ಯ: 
ಈ ವಾರ ತುಲಾ ರಾಶಿಯ ಜನರಿಗೆ ಗ್ರಹಗಳ ಸಾಗಣೆಯು ಸಂಬಂಧಿತ ಸೇವೆಗಳು ಮತ್ತು ವ್ಯವಹಾರದಲ್ಲಿ ಸವಾಲಾಗಿರುತ್ತದೆ. ಹೆಚ್ಚುತ್ತಿರುವ ಒತ್ತಡದಿಂದಾಗಿ ನೀವು ತೊಂದರೆ ಅನುಭವಿಸುವಿರಿ. ಅದೇ ಸಮಯದಲ್ಲಿ, ಈ ವಾರದ ಮಧ್ಯ ಭಾಗದಲ್ಲಿ, ನೀವು ಕೆಲವು ಕಾರ್ಯಗಳನ್ನು ಪೂರ್ಣಗೊಳಿಸುವಲ್ಲಿ ತೊಂದರೆ ಅನುಭವಿಸಬೇಕಾಗಬಹುದು. ಆದಾಗ್ಯೂ, ಈ ವಾರಾಂತ್ಯದಲ್ಲಿ ನೀವು ಉತ್ತಮ ಆರ್ಥಿಕ ಲಾಭವನ್ನು ಕಾಣಬಹುದು. 
 
ವೃಶ್ಚಿಕ ರಾಶಿಯವರ ವಾರ ಭವಿಷ್ಯ:  
ಈ ವಾರ, ವೃಶ್ಚಿಕ ರಾಶಿಯ ಉದ್ಯೋಗಸ್ಥರಿಗೆ ಹೆಚ್ಚುವರಿ ಜವಾಬ್ದಾರಿಗಳನ್ನು ನಿಯೋಜಿಸುವ ಸಾಧ್ಯತೆಗಳಿವೆ. ನೀವು ಈ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡರೆ ಯಶಸ್ಸು ನಿಮ್ಮದಾಗಲಿದೆ. ಈ ವಾರದ ಮೊದಲ ಭಾಗವು ಆರೋಗ್ಯದ ದೃಷ್ಟಿಯಿಂದ ಅನುಕೂಲಕರವಾಗಿರುತ್ತದೆ. ಈ ವಾರದ ಉತ್ತರಾರ್ಧದಲ್ಲಿ ಭೂಮಿ ಮತ್ತು ಕಟ್ಟಡ ವಿಚಾರಗಳಲ್ಲಿ ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸು ದೊರೆಯಲಿದೆ. 

ಇದನ್ನೂ ಓದಿ- 1113 ವರ್ಷಗಳ ಬಳಿಕ ಈ 3 ರಾಶಿಗಳಿಗೆ ಜಾಕ್‌ಪಾಟ್‌.. ಗುರು-ರಾಹು ಅಪರೂಪದ ಸಂಯೋಗ, ಸಂಪತ್ತಿನ ಸುರಿಮಳೆ!

ಧನು ರಾಶಿಯವರ ವಾರ ಭವಿಷ್ಯ:  
ನವರಾತ್ರಿಯ ಈ ವಾರ ಧನು ರಾಶಿಯವರಿಗೆ ವೃತ್ತಿ ಜೀವನದಲ್ಲಿ ಯಶಸ್ಸನ್ನು ನೀಡಲಿದೆ. ಹಣಕಾಸಿಗೆ ಸಂಬಂಧಿಸಿದ ವಿಷಯಗಳು ಉತ್ತಮವಾಗಿದ್ದು, ಜೀವನೋಪಾಯವನ್ನು ಗಮನದಲ್ಲಿಟ್ಟುಕೊಂಡು ದೂರದ ಸ್ಥಳಗಳಿಗೆ ಪ್ರಯಾಣ ಮತ್ತು ವಲಸೆಯ ಪರಿಸ್ಥಿತಿ ಇರುತ್ತದೆ. ಆರೋಗ್ಯದ ದೃಷ್ಟಿಯಿಂದಲೂ, ಈ ವಾರ ಉತ್ತಮ ವಾರ ಎಂತಲೇ ಹೇಳಬಹುದು. ನಿಮ್ಮ ಪೋಷಕರ ಆರೋಗ್ಯದ ಬಗ್ಗೆಯೂ ಜಾಗರೂಕರಾಗಿರಿ. 

ಮಕರ ರಾಶಿಯವರ ವಾರ ಭವಿಷ್ಯ:  
ಈ ವಾರ ಮಕರ ರಾಶಿಯವರಿಗೆ ವ್ಯಾಪಾರ-ವ್ಯವಹಾರದಲ್ಲಿ ಅತ್ಯುತ್ತಮ ವಾರ ಎಂತಲೇ ಹೇಳಬಹುದು. ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಪ್ರಯತ್ನಿಸುತ್ತಿದ್ದರೆ, ನೀವು ಯಶಸ್ವಿಯಾಗುತ್ತೀರಿ. ಅದೇ ಸಮಯದಲ್ಲಿ, ಆರೋಗ್ಯದ ದೃಷ್ಟಿಯಿಂದಲೂ ಈ ವಾರ ಅನುಕೂಲಕರವಾಗಿದೆ.  ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ನೀವು ಪ್ರಯತ್ನಿಸುತ್ತಿದ್ದರೆ, ನೀವು ಯಶಸ್ವಿಯಾಗುತ್ತೀರಿ. ಅದೇ ಸಮಯದಲ್ಲಿ, ಆರೋಗ್ಯದ ದೃಷ್ಟಿಯಿಂದ

ಕುಂಭ ರಾಶಿಯವರ ವಾರ ಭವಿಷ್ಯ:  
ಕುಂಭ್ ರಾಶಿಯವರಿಗೆ ಈ ವಾರ ನಿಮ್ಮ ಪಕ್ಷವನ್ನು ಬಲಗೊಳಿಸಲು ಅನುಕೂಲಕರ ಅವಕಾಶಗಳಿವೆ. ಹಣಕಾಸಿನ ವಿಷಯಗಳಲ್ಲಿ ಹೆಚ್ಚುತ್ತಿರುವ ವೆಚ್ಚಗಳ ಹೊರೆಯಿಂದ ನೀವು ತೊಂದರೆಗೊಳಗಾಗಬಹುದು. ಆರೋಗ್ಯವನ್ನು ಉತ್ತಮವಾಗಿರಿಸಲು ನಿಮ್ಮ ಆಹಾರ ಪದ್ದತಿಯ ಬಗ್ಗೆ ನಿಗಾವಹಿಸುವುದು ಅವಶ್ಯಕವಾಗಿದೆ. ವಿದೇಶಿ ಕೆಲಸದಲ್ಲಿ ಉತ್ತಮ ಪ್ರಗತಿಗೆ ಅವಕಾಶಗಳಿವೆ. 

ಮೀನ ರಾಶಿಯವರ ವಾರ ಭವಿಷ್ಯ: 
ಮೀನ ರಾಶಿಯವರು ಈ ವಾರ ವೃತ್ತಿ ರಂಗದಲ್ಲಿ ಹಿರಿಯ ಅಧಿಕಾರಿಗಳ ಮನ್ನಣೆಗೆ ಪಾತ್ರರಾಗಲಿದ್ದಾರೆ. ವ್ಯವಹಾರದಲ್ಲಿ ಉತ್ತಮ ಲಾಭದ ಪರಿಸ್ಥಿತಿ ಇರುತ್ತದೆ. ವಾರದ ಮಧ್ಯ ಭಾಗದಲ್ಲಿ, ನೀವು ಪ್ರಯಾಣಕ್ಕೆ ಹೋಗಬೇಕಾಗುತ್ತದೆ. ಈ ವಾರದ ದ್ವಿತೀಯಾರ್ಧದಲ್ಲಿ ಕೆಲವು ಸಮಸ್ಯೆಗಳು ಉಂಟಾಗಬಹುದು. ಆದರೆ, ಯಾವುದಕ್ಕೂ ಎದೆಗುಂದಬೇಡಿ. ನಿಮ್ಮ ಪ್ರಯತ್ನವನ್ನು ಮುಂದುವರೆಸಿ, ಯಶಸ್ಸು ನಿಮ್ಮದೇ ಆಗಿರುತ್ತದೆ. 
 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News