IND vs PAK: 5 ಬಾರಿ ಇಂಡೋ-ಪಾಕ್ ಜಿದ್ದಾಜಿದ್ದಿ: ಐತಿಹಾಸಿಕ ಪಂದ್ಯಕ್ಕೆ ಅದೇ ಮೈದಾನ ಬೇಕೆಂದು ಹಠ ಹಿಡಿದ ಟೀಂ ಇಂಡಿಯಾ!

IND vs PAK ODI Cricket Match: ಈ ವರ್ಷ ಭಾರತ ಮತ್ತು ಪಾಕಿಸ್ತಾನ ನಡುವೆ ಏಷ್ಯಾ ಕಪ್ ಮತ್ತು ವಿಶ್ವಕಪ್‌ ನ ಒಟ್ಟು 5 ಪಂದ್ಯಗಳು ನಡೆಯಬಹುದು. ಏಷ್ಯಾ ಕಪ್ 2023 ಈ ವರ್ಷದ ಸೆಪ್ಟೆಂಬರ್‌ ನಲ್ಲಿ ಆರಂಭವಾಗಲಿದೆ. ಏಷ್ಯಾ ಕಪ್ 2023 ಟೂರ್ನಿಯ ಗುಂಪು ಹಂತ ಮತ್ತು ಸೂಪರ್-ಫೋರ್ ಹಂತ ಸೇರಿದಂತೆ ಭಾರತ ಮತ್ತು ಪಾಕಿಸ್ತಾನ ತಂಡಗಳು 2 ಬಾರಿ ಮುಖಾಮುಖಿಯಾಗಬಹುದು.

Written by - Bhavishya Shetty | Last Updated : May 11, 2023, 01:16 PM IST
    • ಭಾರತ ಮತ್ತು ಪಾಕಿಸ್ತಾನ ನಡುವೆ 5 ಏಕದಿನ ಪಂದ್ಯಗಳು ನಡೆಯಲಿವೆ
    • ಎರಡು ದೇಶಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿಗಳು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿಲ್ಲ
    • ಉಭಯ ತಂಡಗಳು ಕೊನೆಯ ದ್ವಿಪಕ್ಷೀಯ ಸರಣಿಯನ್ನು 2012-13ರಲ್ಲಿ ಆಡಿತ್ತು.
IND vs PAK: 5 ಬಾರಿ ಇಂಡೋ-ಪಾಕ್ ಜಿದ್ದಾಜಿದ್ದಿ: ಐತಿಹಾಸಿಕ ಪಂದ್ಯಕ್ಕೆ ಅದೇ ಮೈದಾನ ಬೇಕೆಂದು ಹಠ ಹಿಡಿದ ಟೀಂ ಇಂಡಿಯಾ! title=
IND vs PAK

IND vs PAK ODI Cricket Match: ಈ ವರ್ಷ ಭಾರತ ಮತ್ತು ಪಾಕಿಸ್ತಾನ ನಡುವೆ 5 ಏಕದಿನ ಪಂದ್ಯಗಳು ನಡೆಯಲಿವೆ. ಇಂಡೋ ಪಾಕ್ ಹೈವೋಲ್ಟೇಜ್ ಪಂದ್ಯ ವೀಕ್ಷಿಸಲು ಇಡೀ ಜಗತ್ತು ಕಾಯುತ್ತಿದೆ, ಏಕೆಂದರೆ ಈ ಎರಡು ದೇಶಗಳ ನಡುವೆ ಯಾವುದೇ ದ್ವಿಪಕ್ಷೀಯ ಸರಣಿಗಳು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿಲ್ಲ. ಭಾರತ ಮತ್ತು ಪಾಕಿಸ್ತಾನ ತಂಡಗಳು ವಿಶ್ವಕಪ್ ಅಥವಾ ಏಷ್ಯಾ ಕಪ್ ಪಂದ್ಯಗಳಲ್ಲಿ ಮಾತ್ರ ಪರಸ್ಪರ ಕ್ರಿಕೆಟ್ ಪಂದ್ಯಗಳನ್ನು ಆಡುತ್ತವೆ. ಉಭಯ ತಂಡಗಳು ಕೊನೆಯ ದ್ವಿಪಕ್ಷೀಯ ಸರಣಿಯನ್ನು 2012-13ರಲ್ಲಿ ಆಡಿತ್ತು.

ಇದನ್ನೂ ಓದಿ: ಅಂದು Team India ವಿಶ್ವಕಪ್ ಗೆಲ್ಲುತ್ತಿದ್ದಂತೆ ವಕೀಲರ ಪುತ್ರಿಯನ್ನೇ ಪಟಾಯಿಸಿ ಮದುವೆಯಾಗಿದ್ದ ಈ ಆರಂಭಿಕ ಆಟಗಾರ!

ಈ ವರ್ಷ ಭಾರತ ಮತ್ತು ಪಾಕಿಸ್ತಾನ ನಡುವೆ ಏಷ್ಯಾ ಕಪ್ ಮತ್ತು ವಿಶ್ವಕಪ್‌ ನ ಒಟ್ಟು 5 ಪಂದ್ಯಗಳು ನಡೆಯಬಹುದು. ಏಷ್ಯಾ ಕಪ್ 2023 ಈ ವರ್ಷದ ಸೆಪ್ಟೆಂಬರ್‌ ನಲ್ಲಿ ಆರಂಭವಾಗಲಿದೆ. ಏಷ್ಯಾ ಕಪ್ 2023 ಟೂರ್ನಿಯ ಗುಂಪು ಹಂತ ಮತ್ತು ಸೂಪರ್-ಫೋರ್ ಹಂತ ಸೇರಿದಂತೆ ಭಾರತ ಮತ್ತು ಪಾಕಿಸ್ತಾನ ತಂಡಗಳು 2 ಬಾರಿ ಮುಖಾಮುಖಿಯಾಗಬಹುದು. ಭಾರತ ಮತ್ತು ಪಾಕಿಸ್ತಾನ ತಂಡಗಳು ಫೈನಲ್ ಪ್ರವೇಶಿಸಿದರೆ, ಉಭಯ ತಂಡಗಳ ನಡುವೆ ಒಟ್ಟು 3 ಪಂದ್ಯಗಳು ನಡೆಯಬಹುದು. ಏಷ್ಯಾ ಕಪ್ 2023 ಈ ವರ್ಷ ODI ಮಾದರಿಯಲ್ಲಿ ನಡೆಯಲಿದೆ.

ಅಭಿಮಾನಿಗಳಿಗೆ ದೊಡ್ಡ ಸುದ್ದಿ!

2023ರ ಏಷ್ಯಾಕಪ್ ಬಳಿಕ ಭಾರತ ಮತ್ತು ಪಾಕಿಸ್ತಾನ ತಂಡಗಳು 2023ರ ಏಕದಿನ ವಿಶ್ವಕಪ್‌ ನಲ್ಲಿ ಮುಖಾಮುಖಿಯಾಗಲಿವೆ. ವರದಿಗಳ ಪ್ರಕಾರ, ಈ ವರ್ಷ ಭಾರತದಲ್ಲಿ ನಡೆಯಲಿರುವ 2023 ರ ವಿಶ್ವಕಪ್ ಅಕ್ಟೋಬರ್ 5 ರಿಂದ ಪ್ರಾರಂಭವಾಗಲಿದೆ ಮತ್ತು ಅಂತಿಮ ಪಂದ್ಯವು ನವೆಂಬರ್ 19 ರಂದು ನಡೆಯಲಿದೆ. ಐಸಿಸಿ 2023ರ ಏಕದಿನ ವಿಶ್ವಕಪ್ ವೇಳಾಪಟ್ಟಿಗೆ ಸಂಬಂಧಿಸಿದಂತೆ, ಅಹಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಐತಿಹಾಸಿಕ ಪಂದ್ಯ ನಡೆಯಬಹುದು ಎಂದು ಅಂದಾಜಿಸಲಾಗಿದೆ.

ಭಾರತ ಮತ್ತು ಪಾಕಿಸ್ತಾನ ನಡುವಿನ ಗುಂಪು ಹಂತದ ಪಂದ್ಯ ಅಕ್ಟೋಬರ್ 15 ರಂದು ನಡೆಯಲಿದೆ. ವಿಶ್ವಕಪ್ ಫೈನಲ್ ಅಥವಾ ಸೆಮಿಫೈನಲ್‌ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾದರೆ, ಉಭಯ ತಂಡಗಳ ನಡುವೆ ಒಟ್ಟು 2 ಪಂದ್ಯಗಳು ನಡೆಯಲಿವೆ. ಈ ಮೂಲಕ ಏಷ್ಯಾಕಪ್ ಮತ್ತು ವಿಶ್ವಕಪ್ ಪಂದ್ಯಗಳು ಒಟ್ಟಾಗಿ ಒಟ್ಟು 5 ಬಾರಿ ಭಾರತ ಮತ್ತು ಪಾಕಿಸ್ತಾನದ ಪೈಪೋಟಿಯನ್ನು ಕಾಣಲಿವೆ.

ಟೀಂ ಇಂಡಿಯಾಗೆ ಲಾಭ:

ಬಿಸಿಸಿಐ ಭಾರತೀಯ ತಂಡದ ಮ್ಯಾನೇಜ್‌ಮೆಂಟ್‌ನೊಂದಿಗೆ ಸಭೆ ನಡೆಸಿದ್ದು, ಇದರಲ್ಲಿ ಟೀಮ್ ಇಂಡಿಯಾದ ಲಾಭವನ್ನು ಪರಿಗಣಿಸಿ 2023 ರ ವಿಶ್ವಕಪ್ ಪಂದ್ಯಗಳಿಗೆ ಸ್ಥಳವನ್ನು ನಿರ್ಧರಿಸುವ ಬಗ್ಗೆ ಚರ್ಚೆ ನಡೆದಿದೆ. ಮೂಲಗಳ ಪ್ರಕಾರ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಪಂದ್ಯಗಳನ್ನು ಉತ್ತಮ ಪಿಚ್ ಹೊಂದಿರುವ ಮೈದಾನದಲ್ಲಿ ಆಯೋಜನೆ ಮಾಡುವಂತೆ ಟೀಂ ಇಂಡಿಯಾ ಒತ್ತಾಯಿಸಿದೆ. ಪಿಚ್ ನಿಧಾನವಾಗಿದ್ದು, ಸ್ಪಿನ್ ಬೌಲರ್‌ ಗಳಿಗೆ ಅದ್ಭುತ ಸಹಾಯ ಸಿಗುವ ಮೈದಾನವನ್ನು ಆರಿಸುವಂತೆ ಮನವಿ ಮಾಡಿದೆ. ತವರಿನಲ್ಲಿ ನಡೆಯುವ ಈ ವಿಶ್ವಕಪ್‌ ನ ಸಂಪೂರ್ಣ ಲಾಭವನ್ನು ಪಡೆಯಲು ಬಯಸುತ್ತಿರುವುದರಿಂದ ನಿಧಾನಗತಿಯ ಪಿಚ್‌ ಗಳಿಗೆ ಆದ್ಯತೆ ನೀಡಲು ಬಯಸುವುದಾಗಿ ಟೀಮ್ ಇಂಡಿಯಾ ಮಂಡಳಿಗೆ ತಿಳಿಸಿದೆ.

ಇದನ್ನೂ ಓದಿ: ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಕೆಎಲ್ ರಾಹುಲ್ ಬದಲಿಗೆ ಇಶಾನ್ ಕಿಶನ್ ಗೆ ಸ್ಥಾನ

12 ವರ್ಷಗಳ ಹಿಂದೆ ತವರಿನಲ್ಲಿ ಆಡಿದ 2011ರ ವಿಶ್ವಕಪ್‌ ನಲ್ಲಿ ಭಾರತ ಪ್ರಶಸ್ತಿ ಗೆದ್ದಿತ್ತು. ಈ ಬಾರಿ ಕೂಡ 2023 ರ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವ ಹಂಬಲದಲ್ಲಿದೆ ಟೀಂ ಇಂಡಿಯಾ. ಈ ಬಾರಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಐಸಿಸಿ ಟ್ರೋಫಿಯ ಬರ ನೀಗಿಸಲು ತನ್ನ ಶಕ್ತಿಮೀರಿ ಪ್ರಯತ್ನಿಸಲಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News