TikTok ಪಿಚ್ ಮೇಲೆ ಇನ್ನಿಂಗ್ಸ್ ಆರಂಭಿಸಿದ ಕ್ರಿಸ್ ಗೈಲ್... ವೀಕ್ಷಿಸಿ ವಿಡಿಯೋ

TikTok ಪಿಚ್ ಗೆ ಎಂಟ್ರಿ ನೀಡಿರುವ ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಕ್ರಿಸ್ ಗೈಲ್, 1 ಕೋಟಿಗೂ ಅಧಿಕ ಜನರಿಂದ ವಿಡಿಯೋ ವೀಕ್ಷಣೆ..!

Last Updated : Jan 4, 2020, 05:50 PM IST
TikTok ಪಿಚ್ ಮೇಲೆ ಇನ್ನಿಂಗ್ಸ್ ಆರಂಭಿಸಿದ ಕ್ರಿಸ್ ಗೈಲ್... ವೀಕ್ಷಿಸಿ ವಿಡಿಯೋ title=

ನವದೆಹಲಿ: ವೆಸ್ಟ್ ಇಂಡೀಸ್ ನ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಕ್ರಿಸ್ ಗೈಲ್ ಇದೀಗ ವಿಡಿಯೋ ಶೇರಿಂಗ್ ಪ್ಲಾಟ್ಫಾರ್ಮ್ ಟಿಕ್-ಟಾಕ್ ಸೇರಿರುವ ಆಟಗಾರರ ಪಟ್ಟಿಯಲ್ಲಿ ಶಾಮೀಲಾಗಿದ್ದಾರೆ. ಆದರೆ, ಟಿಕ್-ಟಾಕ್ ನ ಪಿಚ್ ಮೇಲೆ ಕ್ರಿಸ್ ಗೈಲ್ ಏನು ಮಾಡಲಿದ್ದಾರೆ ಎಂಬುದು ಇನ್ನೂ ತಿಳಿದು ಬಂದಿಲ್ಲ. ಸದ್ಯ ಟಿಕ್-ಟಾಕ್ ಪ್ಲಾಟ್ಫಾರ್ಮ್ ಮೇಲೆ ಅವರೊಂದು ವಿಡಿಯೋ ಹಂಚಿಕೊಂಡಿದ್ದು, ವಿಡಿಯೋ ವಿಕ್ಷೀಸಿದ ಬಳಿಕ ಟಿಕ್-ಟಾಕ್ ಪ್ಲಾಟ್ಫಾರ್ಮ್ ಮೇಲೆ ಧಮಾಲ್ ಮಾಡಲು ಅವರು ಸಜ್ಜಾಗಿದ್ದಾರೆ ಎಂಬುದು ಮಾತ್ರ ಖಚಿತವಾಗಿದೆ. ಅವರು ಪೋಸ್ಟ್ ಮಾಡಿರುವ ಈ ವಿಡಿಯೋ ಈಗಾಗಲೇ ಒಂದು ಕೋಟಿಗೂ ಅಧಿಕ ಬಾರಿ ವೀಕ್ಷಣೆಗೆ ಒಳಗಾಗಿದೆ. ಇಲ್ಲಿವೆ ಕ್ರಿಸ್ ಗೈಲ್ ಹಂಚಿಕೊಂಡಿರುವ ಟಾಪ್ 3 ವಿಡಿಯೋಗಳು,

@chris_gayle

#happynewyear

♬ original sound - chris_gayle

ಅವರ ಕ್ರಿಕೆಟ್ ಬ್ಯಾಕ್ ಗ್ರೌಂಡ್ ಕುರಿತು ಕಿರುಮಾಹಿತಿ
ವೆಸ್ಟ್ ಇಂಡೀಸ್ ನ ಈ ಕೆರೆಬಿಯನ್ ಆಟಗಾರ ತನ್ನ ಸ್ಫೋಟಕ ಬ್ಯಾಟಿಂಗ್ ಗಾಗಿ ಹೆಸರುವಾಸಿಯಾಗಿದ್ದಾರೆ. ಒನ್ ಡೇ ಆಗಿರಲಿ ಅಥವಾ ಟಿ-20 ಆಗಿರಲಿ, ಅವರ ಆಕರ್ಷಕ ಬ್ಯಾಟಿಂಗ್ ಶೈಲಿ ನೆರೆದ ಪ್ರೇಕ್ಷಕರನ್ನು ನಿಬ್ಬೆರಗಾಗಿಸುತ್ತದೆ. ಇದುವರೆಗೆ 103 ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಗಳನ್ನು ಆಡಿರುವ ಕ್ರಿಸ್ ಗೈಲ್ 7000 ಕ್ಕೂ ಅಧಿಕ ರನ್ ಗಳಸಿದ್ದಾರೆ. ಇವುಗಳಲ್ಲಿ 15 ಶತಕ ಹಾಗೂ 37 ಅರ್ಧ ಶತಕ ಶಾಮೀಲಾಗಿವೆ. ಅಂತಾರಾಷ್ಟ್ರೀಯ ಏಕದಿನ ಪಂದ್ಯಗಳ ಕುರಿತು ಮಾತನಾಡುವುದಾದರೆ, ಅವರು ಒಟ್ಟು 301 ಪಂದ್ಯಗಳಲ್ಲಿ 10 ಸಾವಿರಕ್ಕೂ ಅಧಿಕ ರನ್ ಬಾರಿಸಿದ್ದಾರೆ. ಇವುಗಳಲ್ಲಿ 25 ಶತಕ ಹಾಗೂ 54 ಅರ್ಧಶತಕಗಳು ಶಾಮೀಲಾಗಿವೆ.

@chris_gayle

#loveglasses #chrisgayle #attiitude

♬ original sound - chris_gayle

ಕ್ರಿಸ್ ಗೈಲ್ ಅವರ ಫೆವರಿಟ್ ಫಾರ್ಮ್ಯಾಟ್ ಆಗಿರುವ ಟಿ-20 ಕುರಿತು ಮಾತನಾಡುವುದಾದರೆ. ಅವರು ಒಟ್ಟು 58 ಅಂತಾರಾಷ್ಟ್ರೀಯ ಟಿ-20 ಪಂದ್ಯಗಳನ್ನು ಆಡಿದ್ದು, ಒಟ್ಟು 377 ರನ್ ಗಳಿಸಿದ್ದಾರೆ. ಇವುಗಳಲ್ಲಿ 2 ಶತಕ ಹಾಗೂ 13 ಅರ್ಧ ಶತಕ ಒಳಗೊಂಡಿವೆ. ಆದರೆ, ಒಟ್ಟಾರೆ ಎಲ್ಲ ಟಿ-20 ಸರಣಿಗಳ ಕುರಿತು ಹೇಳುವುದಾದರೆ, ಒಟ್ಟು 400 ಪಂದ್ಯಗಳನ್ನು ಆಡಿರುವ ಕ್ರಿಸ್ ಗೈಲ್ 13ಸಾವಿರಕ್ಕಿಂತ ಅಧಿಕ ರನ್ ಗಳನ್ನು ಬಾರಿಸಿದ್ದು, ಅವುಗಳಲ್ಲಿ 22 ಶತಕ ಹಾಗೂ 81 ಅರ್ಧಶತಕಗಳು ಶಾಮೀಲಾಗಿವೆ. ಸದ್ಯ ಐಪಿಎಲ್ ನಲ್ಲಿ ಕ್ರಿಸ್ ಗೈಲ್ ಕಿಂಗ್ಸ್ ಎಲೆವನ್ ಪಂಜಾಬ್ ಪರ ಆಟವಾಡುತ್ತಿದ್ದಾರೆ.

@chris_gayle

#Chrisgayle #attiitude are you ready for universal boss?

♬ original sound - Chris Gayle

Trending News