ನವದೆಹಲಿ: ಸೋಮವಾರದಂದು ನಡೆದ ಕಾಮನ್‌ವೆಲ್ತ್ ಗೇಮ್ಸ್ ನ ಮಹಿಳೆಯರ ಜೂಡೋ 48 ಕೆಜಿ ಫೈನಲ್‌ನಲ್ಲಿ ಭಾರತದ ಶುಶೀಲಾ ದೇವಿ ಲಿಕ್ಮಾಬಾಮ್ ದಕ್ಷಿಣ ಆಫ್ರಿಕಾದ ಮೈಕೆಲಾ ವೈಟ್‌ಬೂಯಿ ವಿರುದ್ಧ ಸೋಲನ್ನು ಅನುಭವಿಸುವುದರ ಮೂಲಕ ಬೆಳ್ಳಿ ಪದಕವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಶುಶೀಲಾ ದೇವಿ ಲಿಕ್ಮಾಬಾಮ್ ಅವರು ಕೋವೆಂಟ್ರಿ ಅರೆನಾ ಜೂಡೋ ಮ್ಯಾಟ್ 2 ನಲ್ಲಿ ದಕ್ಷಿಣ ಆಫ್ರಿಕಾದ ಮೈಕೆಲಾ ವೈಟ್‌ಬೂಯಿ ವಿರುದ್ಧ ಸೋಲನ್ನು ಅನುಭವಿಸಿದರು.
ಇಬ್ಬರು ಜೂಡೋಕಾಗಳ ನಡುವಿನ ಪಂದ್ಯವು ಕಠಿಣ ಹೋರಾಟದಿಂದ ಕೂಡಿತ್ತು. ಅದು ಎಷ್ಟರ ಮಟ್ಟಿಗೆ ಎಂದರೆ ಇಬ್ಬರೂ ಆಟಗಾರರು ಎರಡನೇ ಶಿಡೋವನ್ನು ಪಡೆದರು. ಜೊತೆಗೆ ಇಬ್ಬರೂ ಜೂಡೋ ಪಟುಗಳು ತಲಾ ಎರಡು ಪೆನಾಲ್ಟಿಯಲ್ಲಿದ್ದರು.ಆದರೆ ಅಂತಿಮವಾಗಿ ಮೈಕೆಲಾ ವೈಟ್‌ಬೂಯಿ ಅವರು ಲೆಗ್ ಸ್ವೀಪ್‌ನೊಂದಿಗೆ ಚಿನ್ನದ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾದರು.
SHUSHILA BAGS SILVER 🤩🤩
Shushila Devi 🥋 (2014 #CWG Silver medalist) clinches her 2nd #CommonwealthGames medal after putting up a good technical fight against Michaela Whitebooi of South Africa 💪💪
Well done champ, we are proud of you!#Cheer4India#India4CWG2022 pic.twitter.com/gCp2HwUWEt
— SAI Media (@Media_SAI) August 1, 2022
ಇದನ್ನೂ ಓದಿ: ಧಾರಾವಾಹಿ ಶೂಟಿಂಗ್ ಸೆಟ್‌ನಲ್ಲಿ ನಟ ಚಂದನ್‌ಗೆ ಕಪಾಳ ಮೋಕ್ಷ..!
ಸೋಮವಾರದಂದು ಇದಕ್ಕೂ ಮೊದಲು ನಡೆದ ಕಾಮನ್‌ವೆಲ್ತ್ ಗೇಮ್ಸ್ 2022 ರ ಮಹಿಳೆಯರ 48 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಶುಶೀಲಾ ದೇವಿ ಲಿಕ್ಮಾಬಮ್ ಅವರು ಮಾರಿಷಸ್‌ನ ಪ್ರಿಸ್ಸಿಲ್ಲಾ ಮೊರಾಂಡ್ ಅವರನ್ನು ಸೋಲಿಸಿದರು.ಕಾಮನ್‌ವೆಲ್ತ್ ಗೇಮ್ಸ್ 2014 ರ ಬೆಳ್ಳಿ ಪದಕ ವಿಜೇತೆ ಶುಶೀಲಾ ದೇವಿ ಜೂಡೋ ಮಹಿಳೆಯರ 48 ಕೆಜಿ ಸೆಮಿಫೈನಲ್‌ನಲ್ಲಿ ಮಾರಿಷಸ್‌ನ ಪ್ರಿಸ್ಸಿಲ್ಲಾ ಮೊರಾಂಡ್ ಅವರನ್ನು 2:52 ನಿಮಿಷಗಳಲ್ಲಿ ಸೋಲಿಸಿದರು.
ಕ್ವಾರ್ಟರ್ ಫೈನಲ್‌ನಲ್ಲಿ ಶುಶೀಲಾ ಅವರು ಹ್ಯಾರಿಯೆಟ್ ಬಾನ್‌ಫೇಸ್ ಅವರನ್ನು 1 ನಿಮಿಷ ಮತ್ತು 19 ಸೆಕೆಂಡುಗಳಲ್ಲಿ ಸೋಲಿಸಿದರು.
True to his name, Vijay Kumar Yadav wins a Bronze 🥉 medal in Judo at the #CWG2022! 🇮🇳
Congratulations, champ! Thank you for inspiring a whole new generation of judokas! 🙌 #Cheer4India #B2022 #CommonwealthGames #YuvaShakti pic.twitter.com/fpioYwuzsU
— MyGovIndia (@mygovindia) August 1, 2022
ಇದನ್ನೂ ಓದಿ: Monkeypox: ಕರ್ನಾಟಕದ ಗಡಿ ರಾಜ್ಯದಲ್ಲಿ ಮಂಕಿಪಾಕ್ಸ್‌ಗೆ ಓರ್ವ ಬಲಿ?
ಇನ್ನೊಂದೆಡೆಗೆ ಇಂತಹ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ ವಿಜಯ್ ಕುಮಾರ್ ಯಾದವ್ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಸೈಪ್ರಸ್‌ನ ಪೆಟ್ರೋಸ್ ಕ್ರಿಸ್ಟೋಡೌಲಿಡೆಸ್ ಅವರನ್ನು ಕೇವಲ 58 ಸೆಕೆಂಡುಗಳಲ್ಲಿ 'ಇಪ್ಪಾನ್' ಮೂಲಕ ಸೋಲಿಸುವುದರ ಮೂಲಕ ಕಂಚಿನ ಪದಕವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.