/kannada/photo-gallery/this-south-star-has-helped-more-than-500-families-these-are-the-netizens-who-are-the-real-heroes-221337 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!!  ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 500ಕ್ಕೂ ಹೆಚ್ಚು ಕುಟುಂಬಗಳಿಗೆ ನೆರವಾಗಿದ್ದಾರೆ ಈ ಸೌತ್ ಸ್ಟಾರ್!! ರಿಯಲ್ ಹೀರೋ ಇವರೇ ಎಂದ ನೆಟ್ಟಿಗರು 221337

ಮಹಿಳಾ ಫೋರ್ಸ್ ಲಾನ್ ಬೌಲ್ಸ್ ತಂಡವು ಫೈನಲ್‌ನಲ್ಲಿ ನ್ಯೂಜಿಲೆಂಡ್ ಅನ್ನು 16-13 ರಿಂದ ಸೋಲಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿದೆ. ಈ ಮೂಲಕ ಭಾರತೀಯ ಪಡೆ ಏಳನೇ ಪದಕ ಪಡೆಯುವುದು ಖಚಿತಪಡಿಸಿಕೊಂಡಿದೆ. ಇದು ಐತಿಹಾಸಿಕ ಸಾಧನೆಯಾಗಿದ್ದು, ಈ ಕ್ರೀಡೆಯಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಲಿದೆ. 

ಲವ್ಲಿ ಚೌಬೆ, ಪಿಂಕಿ, ನಯನಮೋನಿ ಸೈಕಿಯಾ ಮತ್ತು ರೂಪಾ ರಾಣಿ ಟಿರ್ಕಿ ಅವರ ತಂಡ ಕ್ವಾರ್ಟೆಟ್ ಪಂದ್ಯದಲ್ಲಿ ಅದ್ಭುತ ಪುನರಾಗಮನವನ್ನು ಮಾಡಿ ಕನಿಷ್ಠ ಬೆಳ್ಳಿ ಪದಕವನ್ನು ಖಾತರಿಪಡಿಸಿಕೊಂಡಿದೆ. ಫೈನಲ್‌ನಲ್ಲಿ ಗೆದ್ದರೆ ಚಿನ್ನ ಪಕ್ಕಾ ಆಗಿದೆ. 

ಇದನ್ನೂ ಓದಿ: ಶಾಸ್ತ್ರ ಎಂದು ಅವಕಾಶ ಕೊಟ್ಟಿದ್ದೇ ತಪ್ಪಾಯಿತು ಎಲ್ಲರೂ ಮುಖ ಮುಚ್ಚಿಕೊಳ್ಳುವಂತೆ ವರ್ತಿಸಿದ ಜೋಡಿ!

ಭಾನುವಾರ ನಡೆದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನಾರ್ಫೋಕ್ ದ್ವೀಪವನ್ನು ಸೋಲಿಸಿ ಮಹಿಳೆಯರ ಫೋರ್ಸ್ ತಂಡವು ಲಾನ್ ಬೌಲ್ಸ್ ಸ್ಪರ್ಧೆಯ ಸೆಮಿಫೈನಲ್‌ಗೆ ಅರ್ಹತೆ ಪಡೆದಿತ್ತು.

ಕ್ರೀಡೆಯಲ್ಲಿ 40 ಪದಕಗಳನ್ನು ಹೊಂದಿರುವ ಮತ್ತು ಐದು ಅತ್ಯಂತ ಯಶಸ್ವಿ ಲಾನ್ ಬೌಲ್ಸ್ ತಂಡಗಳಲ್ಲಿ ಒಂದಾಗಿರುವ ತಂಡವನ್ನು ಸೋಲಿಸುವ ಮೂಲಕ ಭಾರತವು ತನ್ನ ಮೊದಲ ಪದಕವನ್ನು ಖಚಿತಪಡಿಸಿಕೊಂಡಿರುವುದರಿಂದ ಈ ಗೆಲುವು ಭಾರಿ ಅದ್ಭುತವಾಗಿದೆ. 

ನ್ಯೂಜಿಲೆಂಡ್ ತಂಡವನ್ನು 16-13 ಅಂತರದಿಂದ ಸೋಲಿಸಿತು. ಲವ್ಲಿ ಚೌಬೆ, ಪಿಂಕಿ, ನಯನಮೋನಿ ಸೈಕಿಯಾ ಮತ್ತು ರೂಪಾ ರಾಣಿ ಅವರನ್ನೊಳಗೊಂಡ ಭಾರತ ಕ್ವಾರ್ಟೆಟ್ ಸೆಮಿಫೈನಲ್‌ನಲ್ಲಿ 0-5 ಅಂತರದಿಂದ ಆರಂಭಗೊಂಡಿತ್ತು. ಬಳಿಕ 7-6 ಮುನ್ನಡೆ ಗಳಿಸಿ, ಕೊನೆಗೆ 10-7 ಅಂಕಗಳ ಅಂತರ ಕಾಯ್ದುಕೊಂಡು ಗೆಲುವು ಸಾಧಿಸಿದರು. 

ಭಾರತ ಈಗ ಮಹಿಳೆಯರ ಫೋರ್ಸ್ ಈವೆಂಟ್‌ನ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಭಾನುವಾರ ಎರಡು ಚಿನ್ನದ ಪದಕಗಳನ್ನು ಪಡೆದ ಭಾರತ ಇಂದು ಮತ್ತೆ ಪದಕ ಬೇಟೆಗೆ ಮುಂದಾಗಿದೆ. ಭಾರತವು ಇದುವರೆಗೆ ಆರು ಪದಕಗಳನ್ನು (ಮೂರು ಚಿನ್ನ, ಎರಡು ಬೆಳ್ಳಿ ಮತ್ತು ಒಂದು ಕಂಚು) ಗೆದ್ದಿದೆ. ಕಳೆದ ದಿನ ಇಬ್ಬರು ವೇಟ್‌ಲಿಫ್ಟರ್‌ಗಳು ಭಾರತದ ಪರ ಮಿಂಚಿದ್ದರು.

ಅಚಿಂತಾ ಶೆಯುಲಿ 73 ಕೆಜಿ ವಿಭಾಗದಲ್ಲಿ ಚಿನ್ನ ಗೆಲ್ಲುವ ಮೊದಲು ಜೆರೆಮಿ ಲಾಲ್ರಿನ್ನುಂಗಾ 67 ಕೆಜಿ ವಿಭಾಗದಲ್ಲಿ ಭಾರತಕ್ಕೆ ಬಂಗಾರವನ್ನು ಗೆದ್ದಿದ್ದರು. ಇನ್ನು ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಮೀರಾಬಾಯಿ ಚಾನು 49 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ಗಳಿಸಿದ್ದರು. 

ಇದನ್ನೂ ಓದಿ: Viral Video: ಬಿರಿಯಾನಿ ಪ್ರಿಯರು ಈ ವಿಡಿಯೋ ನೋಡಬೇಡಿ: ಹೃದಯ ಒಡೆಯುವುದು ಗ್ಯಾರಂಟಿ!

ಇಂದು ಹಲವಾರು ಭಾರತೀಯ ಕ್ರೀಡಾಪಟುಗಳು ಕ್ರೀಡಾಂಗಣದಲ್ಲಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ. ಬ್ಯಾಡ್ಮಿಂಟನ್‌ನಲ್ಲಿ ಭಾರತ ಮಿಶ್ರ ತಂಡ ಸೆಮಿಫೈನಲ್‌ನಲ್ಲಿ ಸಿಂಗಾಪುರವನ್ನು ಎದುರಿಸಲಿದೆ. ಟೇಬಲ್ ಟೆನಿಸ್‌ನಲ್ಲಿ ಭಾರತೀಯ ಪುರುಷರ ತಂಡ ನೈಜೀರಿಯಾ ವಿರುದ್ಧ ಸೆಮಿಫೈನಲ್‌ನಲ್ಲಿ ಆಡಲಿದೆ. ಸ್ಕ್ವಾಷ್‌ನಲ್ಲಿ ಜೋಶನಾ ಚಿನಪ್ಪ ಮತ್ತು ಸೌರವ್ ಘೋಷಾಲ್ ಕ್ವಾರ್ಟರ್ ಫೈನಲ್‌ನಲ್ಲಿ ಆಡಲಿದ್ದಾರೆ. ಬಾಕ್ಸಿಂಗ್‌ನಲ್ಲಿ ಅಮಿತ್ ಪಂಘಲ್ (51 ಕೆಜಿ) ಮತ್ತು ಹುಸ್ಸಾಮ್ ಉದ್ದೀನ್ ಮೊಹಮ್ಮದ್ (57 ಕೆಜಿ) ಮತ್ತು ಆಶಿಶ್ ಕುಮಾರ್ (80 ಕೆಜಿ) ಆಡಲಿದ್ದಾರೆ. ಘಾನಾವನ್ನು 11-0 ಅಂತರದಿಂದ ಸೋಲಿಸಿದ ನಂತರ, ಪುರುಷರ ಹಾಕಿ ತಂಡವು ಮತ್ತೊಮ್ಮೆ ಪೂಲ್ ಬಿ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಆಡಲಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Section: 
English Title: 
CWG 2022: India Women's Force enters lawn bowls final: Seventh medal assured
News Source: 
Home Title: 

CWG 2022: ಲಾನ್ ಬೌಲ್ಸ್ ಫೈನಲ್‌ ಪ್ರವೇಶಿಸಿದ ಭಾರತ ಮಹಿಳಾ ಫೋರ್ಸ್: ಏಳನೇ ಪದಕ ಪಕ್ಕಾ

CWG 2022: ಲಾನ್ ಬೌಲ್ಸ್ ಫೈನಲ್‌ ಪ್ರವೇಶಿಸಿದ ಭಾರತ ಮಹಿಳಾ ಫೋರ್ಸ್: ಏಳನೇ ಪದಕ ಪಕ್ಕಾ
Caption: 
lawn bowls
Yes
Is Blog?: 
No
Tags: 
Facebook Instant Article: 
Yes
Highlights: 

ಭಾರತೀಯ ಪಡೆ ಏಳನೇ ಪದಕ ಪಡೆಯುವುದು ಖಚಿತ

ಮಹಿಳಾ ಫೋರ್ಸ್ ಲಾನ್ ಬೌಲ್ಸ್‌ನಲ್ಲಿ ಫೈನಲ್‌ ಪ್ರವೇಶಿಸಿದ ಭಾರತ

ಈ ಕ್ರೀಡೆಯಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಲಿದೆ

Mobile Title: 
CWG 2022: ಲಾನ್ ಬೌಲ್ಸ್ ಫೈನಲ್‌ ಪ್ರವೇಶಿಸಿದ ಭಾರತ ಮಹಿಳಾ ಫೋರ್ಸ್: ಏಳನೇ ಪದಕ ಪಕ್ಕಾ
Bhavishya Shetty
Publish Later: 
No
Publish At: 
Monday, August 1, 2022 - 16:30
Created By: 
Bhavishya Shetty
Updated By: 
Bhavishya Shetty
Published By: 
Bhavishya Shetty
Request Count: 
2
Is Breaking News: 
No