IPL 2024 ಟ್ರೋಫಿ ಗೆದ್ದ KKR ತಂಡದ ನಾಯಕ ಶ್ರೇಯಸ್ ಅಯ್ಯರ್ ಎಷ್ಟು ಕೋಟಿ ಆಸ್ತಿಯ ಒಡೆಯ ಗೊತ್ತಾ?

Shreyas Iyer: ಡಿಸೆಂಬರ್ 6, 1994 ರಂದು ಮುಂಬೈನಲ್ಲಿ ಜನಿಸಿದ ಶ್ರೇಯಸ್ ಅಯ್ಯರ್ ಅದ್ಭುತ ಬ್ಯಾಟಿಂಗ್ ಹಾಗೂ ಕ್ಯಾಪ್ಟನ್ಸಿಗೆ ಹೆಸರುವಾಸಿಯಾಗಿದ್ದಾರೆ. ಇವರು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಐಪಿಎಲ್ 2024 ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪರವಾಗಿ ಅದ್ಭುತ ಪ್ರದರ್ಶನ ನೀಡಿ ಟ್ರೋಫಿ ತಮ್ಮದಾಗಿಸಿಕೊಂಡಿದ್ದಾರೆ.. 

Written by - Savita M B | Last Updated : May 28, 2024, 12:31 PM IST
  • ಮುಂಬೈನಲ್ಲಿ ಹುಟ್ಟಿ ಬೆಳೆದ ಶ್ರೇಯಸ್ ಅಯ್ಯರ್ ಚಿಕ್ಕ ವಯಸ್ಸಿನಿಂದಲೂ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದರು.
  • ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು.
IPL 2024 ಟ್ರೋಫಿ ಗೆದ್ದ KKR ತಂಡದ ನಾಯಕ ಶ್ರೇಯಸ್ ಅಯ್ಯರ್ ಎಷ್ಟು ಕೋಟಿ ಆಸ್ತಿಯ ಒಡೆಯ ಗೊತ್ತಾ?  title=

Shreyas Iyer Net Worth: ಮುಂಬೈನಲ್ಲಿ ಹುಟ್ಟಿ ಬೆಳೆದ ಶ್ರೇಯಸ್ ಅಯ್ಯರ್ ಚಿಕ್ಕ ವಯಸ್ಸಿನಿಂದಲೂ ಕ್ರಿಕೆಟ್ ಬಗ್ಗೆ ಆಸಕ್ತಿ ಹೊಂದಿದ್ದರು. ತನ್ನ ಮಗನ ಉತ್ಸಾಹವನ್ನು ಗ್ರಹಿಸಿದ ಶ್ರೇಯಸ್ ಅಯ್ಯರ್ ಅವರ ತಂದೆ ಸಂತೋಷ್ ಅಯ್ಯರ್ ಅವರು 11 ವರ್ಷದವರಾಗಿದ್ದಾಗ ಅವರನ್ನು ಶಿವಾಜಿ ಪಾರ್ಕ್ ಜಿಮ್ಖಾನಾಗೆ ಸೇರಿಸಿದರು. ಶ್ರೇಯಸ್ ಅಯ್ಯರ್ ಅವರು ತಮ್ಮ ಕೋಚ್ ಪ್ರವೀಣ್ ಆಮ್ರೆ ಅವರ ಮಾರ್ಗದರ್ಶನದಲ್ಲಿ ಬೆಳೆದು 2014 ರಲ್ಲಿ U-19 ವಿಶ್ವಕಪ್ ಸರಣಿಯಲ್ಲಿ ಆಡಿದರು. ಈ ಮೂಲಕ ರಣಜಿ ಟ್ರೋಫಿಯಲ್ಲಿ ಆಡುವ ಅವಕಾಶ ಸಿಕ್ಕಿತು.. ಇವರು 2015-16ರಲ್ಲಿ ಮುಂಬೈ ತಂಡದ ಪರ 1321 ರನ್ ಗಳಿಸಿದ್ದಕ್ಕಾಗಿ ಮುಂಬೈ ತಂಡ ರಣಜಿ ಪ್ರಶಸ್ತಿ ಗೆದ್ದುಕೊಂಡಿತು.

ನಂತರ ಭಾರತ ತಂಡದಲ್ಲಿ ಸ್ಥಾನ ಪಡೆದರು. ನವೆಂಬರ್ 1, 2017 ರಂದು, ಅವರು ನ್ಯೂಜಿಲೆಂಡ್ ವಿರುದ್ಧದ T20 ಸರಣಿಯಲ್ಲಿ ತಮ್ಮ ಚೊಚ್ಚಲ ಪಂದ್ಯವನ್ನು ಆಡಿದರು.. ಅದೇ ರೀತಿ, ಅವರು ಡಿಸೆಂಬರ್ 10 ರಂದು ಶ್ರೀಲಂಕಾ ವಿರುದ್ಧ ODI ಸರಣಿಗೆ ಪಾದಾರ್ಪಣೆ ಮಾಡಿದರು. ನಂತರ 3ನೇ ಡಿಸೆಂಬರ್ 2021 ರಂದು ನ್ಯೂಜಿಲೆಂಡ್ ವಿರುದ್ಧ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಭಾರತದಲ್ಲಿ ನಡೆದ ಕೊನೆಯ ಏಕದಿನ ಕ್ರಿಕೆಟ್ ಸರಣಿಯಲ್ಲಿ ಅವರು 530 ರನ್ ಗಳಿಸಿದ್ದರು.. 

ಇದನ್ನೂ ಓದಿ-IPL : ಗ್ರೌಂಡ್-ಸ್ಟಾಫ್‌ಗಳಿಗೆ ನಗದು ಬಹುಮಾನ ಘೋಷಿಸಿದ ಬಿಸಿಸಿಐ, ಕಾರ್ಯದರ್ಶಿ ಜಯ್ ಶಾ ಕೃತಜ್ಞತೆ

ಭಾರತ ತಂಡದಲ್ಲಿ ಆಡುತ್ತಿರುವ ಶ್ರೇಯಸ್ ಅಯ್ಯರ್ ಕಳೆದ ಫೆಬ್ರವರಿಯಲ್ಲಿ ಬಿ ಗ್ರೇಡ್ ಗುತ್ತಿಗೆಯಿಂದ ಹೊರಬಿದ್ದಿದ್ದರು... ಆದರೆ ಅದಕ್ಕೂ ಮುನ್ನ 2022-23ರಲ್ಲಿ ಬಿ ಗ್ರೇಡ್ ಮೂಲಕ ವರ್ಷಕ್ಕೆ 3 ಕೋಟಿ ರೂ.ವರೆಗೆ ಆದಾಯ ಪಡೆಯುತ್ತಿದ್ದರು. 2012ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ 12.25 ಕೋಟಿ ರೂ.ಗೆ ಶ್ರೇಯಸ್ ಅಯ್ಯರ್ ಅವರನ್ನು ಬಿಡ್ ಮಾಡಿತ್ತು. ಅವರು ಈ ವರ್ಷ ಕೋಲ್ಕತ್ತಾ ತಂಡದ ನಾಯಕರಾಗಿ ಆಡಿದ್ದಾರೆ.. ಐಪಿಎಲ್ ಮೂಲಕ ಅವರು ಇಲ್ಲಿಯವರೆಗೆ 72.55 ಕೋಟಿ ಗಳಿಸಿದ್ದಾರೆ.

ಇದನ್ನೂ ಓದಿ-IPL 2024 : ಈ ಟೂರ್ನಿಯಲ್ಲಿ ಯಾವೆಲ್ಲಾ ಪ್ರಶಸ್ತಿ ಯಾರಿಗೆ, ಯಾವ ತಂಡಕ್ಕೆ ಕಂಪ್ಲೀಟ್ ಲಿಸ್ಟ್ ಇಲ್ಲಿದೆ..

ಹಲವು ಕಂಪನಿಗಳಿಗೆ ಬ್ರಾಂಡ್ ಅಂಬಾಸಿಡರ್ ಕೂಡ ಆಗಿರು ಶ್ರೇಯಸ್‌ ಅವರು ಬಾಟ್, ಮಾನ್ಯವರ್ ಮತ್ತು ಡ್ರೀಮ್ 11 ನೊಂದಿಗೆ ಬ್ರ್ಯಾಂಡ್ ಒಪ್ಪಂದವನ್ನು ಮಾಡಿಕೊಂಡಿದ್ದಾರೆ.. ರಿಯಲ್ ಎಸ್ಟೇಟ್ ಕಂಪನಿಗಳಲ್ಲೂ ಹೂಡಿಕೆ ಮಾಡಿದ್ದಾರೆ ಎನ್ನಲಾಗಿದೆ.

ಸಾಮಾನ್ಯವಾಗಿ ಕ್ರಿಕೆಟಿಗರು ಕಾರು ಮತ್ತು ಬೈಕ್ ಪ್ರಿಯರು. ಅವರಲ್ಲಿ ಶ್ರೇಯಸ್ ಅಯ್ಯರ್ ಕೂಡ ಒಬ್ಬರು. ಅವರು Mercedes-Benz G63 AMG, ಒಂದು ಲಂಬೋರ್ಗಿನಿ Huracan ಮತ್ತು 2.25 ಕೋಟಿ ಮೌಲ್ಯದ Audi S5 ಅನ್ನು ಹೊಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News