ಈ 4 ಪ್ರಮುಖರಿಗೆ ಟೀಂ ಇಂಡಿಯಾದ ಬಾಗಿಲು ಬಂದ್! ಯುವ ಆಟಗಾರರ ಎಂಟ್ರಿಯಿಂದ ಅಂತ್ಯವಾಯ್ತು ಇವರ ವೃತ್ತಿಬದುಕು!

BCCI Central Contract 4 Players Team India Doors Closed: ಅಂದಹಾಗೆ ಈ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಇದುವರೆಗೆ 4 ಆಟಗಾರರಿಗೆ ಪದಾರ್ಪಣೆ ಮಾಡಲು ಅವಕಾಶ ನೀಡಿದೆ. ಆದರೆ ಕಳೆದ ದಿನ ಪ್ರಕಟಗೊಂಡ ಬಿಸಿಸಿಐ ವಾರ್ಷಿಕ ಒಪ್ಪಂದದ ಪಟ್ಟಿಯಲ್ಲಿ ಟೀಂ ಇಂಡಿಯಾದ ನಾಲ್ವರು ದಿಗ್ಗಜ ಭಾರತೀಯ ಆಟಗಾರರನ್ನು ಹೊರಗಿಡಲಾಗಿದೆ.

Written by - Bhavishya Shetty | Last Updated : Feb 29, 2024, 03:28 PM IST
    • ಟೀಂ ಇಂಡಿಯಾ ಇದುವರೆಗೆ 4 ಆಟಗಾರರಿಗೆ ಪದಾರ್ಪಣೆ ಮಾಡಲು ಅವಕಾಶ ನೀಡಿದೆ
    • ಕಳೆದ ದಿನ ಪ್ರಕಟಗೊಂಡ ಬಿಸಿಸಿಐ ವಾರ್ಷಿಕ ಒಪ್ಪಂದದ ಪಟ್ಟಿ
    • ಟೀಂ ಇಂಡಿಯಾದ ಬಾಗಿಲು ಶಾಶ್ವತವಾಗಿ ಮುಚ್ಚಲ್ಪಡುತ್ತದೆ ಎಂದು ಹೇಳಲಾಗುತ್ತಿದೆ
ಈ 4 ಪ್ರಮುಖರಿಗೆ ಟೀಂ ಇಂಡಿಯಾದ ಬಾಗಿಲು ಬಂದ್! ಯುವ ಆಟಗಾರರ ಎಂಟ್ರಿಯಿಂದ ಅಂತ್ಯವಾಯ್ತು ಇವರ ವೃತ್ತಿಬದುಕು! title=
BCCI Annual Contract

BCCI Central Contract 4 Players Team India Doors Closed: ಟೀಂ ಇಂಡಿಯಾ ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ನಾಯಕ ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡುತ್ತಿದೆ. ಇದುವರೆಗೆ 4 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 3 ಪಂದ್ಯಗಳನ್ನು ಗೆಲ್ಲುವ ಮೂಲಕ ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ 3-1 ಮುನ್ನಡೆ ಸಾಧಿಸಿದೆ.

ಅಂದಹಾಗೆ ಈ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ಇದುವರೆಗೆ 4 ಆಟಗಾರರಿಗೆ ಪದಾರ್ಪಣೆ ಮಾಡಲು ಅವಕಾಶ ನೀಡಿದೆ. ಆದರೆ ಕಳೆದ ದಿನ ಪ್ರಕಟಗೊಂಡ ಬಿಸಿಸಿಐ ವಾರ್ಷಿಕ ಒಪ್ಪಂದದ ಪಟ್ಟಿಯಲ್ಲಿ ಟೀಂ ಇಂಡಿಯಾದ ನಾಲ್ವರು ದಿಗ್ಗಜ ಭಾರತೀಯ ಆಟಗಾರರನ್ನು ಹೊರಗಿಡಲಾಗಿದೆ. ಅಷ್ಟೇ ಅಲ್ಲದೆ, ಅವರಿಗೆ ಟೀಂ ಇಂಡಿಯಾದ ಬಾಗಿಲು ಶಾಶ್ವತವಾಗಿ ಮುಚ್ಚಲ್ಪಡುತ್ತದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ರಾಜ್ಯ ಸರ್ಕಾರ ಪಾಕ್ ಪರ ಘೋಷಿಣೆ ಕೂಗಿದವರ ರಕ್ಷಣೆ ಮಾಡಿ, ನೈತಿಕವಾಗಿ ದಿವಾಳಿಯಾಗಿದೆ: ಬಸವರಾಜ ಬೊಮ್ಮಾಯಿ  

ಭುವನೇಶ್ವರ್ ಕುಮಾರ್:

2022 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾ ಪರ ಭುವನೇಶ್ವರ್ ಕುಮಾರ್ ಕೊನೆಯ ಪಂದ್ಯವನ್ನು ಆಡಿದ್ದರು. ಕಳೆದ 15 ತಿಂಗಳಿಂದ ಭುವನೇಶ್ವರ್ ಕುಮಾರ್’ಗೆ ಯಾವುದೇ ಫಾರ್ಮೆಟ್’ನಲ್ಲಿ ಟೀಂ ಇಂಡಿಯಾ ಪರ ಆಡುವ ಅವಕಾಶ ಸಿಕ್ಕಿರಲಿಲ್ಲ. ಟೀಂ ಇಂಡಿಯಾ ಪರ 21 ಟೆಸ್ಟ್, 121 ಏಕದಿನ ಹಾಗೂ 87 ಟಿ20 ಪಂದ್ಯಗಳನ್ನಾಡಿರುವ ಈ 34ರ ಹರೆಯದ ಅನುಭವಿ ವೇಗದ ಬೌಲರ್, ಈಗ ಟೀಂ ಇಂಡಿಯಾ ಪರ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗಲು ನಿರ್ಧರಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಶಿಖರ್ ಧವನ್:

2022ರ ಕೊನೆಯಲ್ಲಿ ಬಾಂಗ್ಲಾದೇಶ ಪ್ರವಾಸದಲ್ಲಿ ಟೀಮ್ ಇಂಡಿಯಾ ಪರ ತಮ್ಮ ಕೊನೆಯ ಪಂದ್ಯವನ್ನು ಶಿಖರ್ ಧವನ್ ಆಡಿದ್ದರು. ಅದಾದ ಬಳಿಕ ಯಾವುದೇ ಸ್ವರೂಪದಲ್ಲಿ ಆಡುವ ಅವಕಾಶವನ್ನು ಪಡೆದಿಲ್ಲ. ಇವರು ಟೀಂ ಇಂಡಿಯಾ ಪರ 34 ಟೆಸ್ಟ್, 167 ಏಕದಿನ ಹಾಗೂ 68 ಪಂದ್ಯಗಳನ್ನು ಆಡಿದ್ದಾರೆ.

ಚೇತೇಶ್ವರ ಪೂಜಾರ:

ಟೀಂ ಇಂಡಿಯಾ ಪರ 103 ಟೆಸ್ಟ್ ಪಂದ್ಯಗಳನ್ನಾಡಿರುವ ಚೇತೇಶ್ವರ ಪೂಜಾರ ಕಳೆದ 8 ತಿಂಗಳಿಂದ ಭಾರತ ತಂಡದ ಪರ ಯಾವುದೇ ಟೆಸ್ಟ್ ಪಂದ್ಯ ಆಡುವ ಅವಕಾಶ ಪಡೆದಿಲ್ಲ. 2023 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌’ನಲ್ಲಿ ಭಾರತ ತಂಡಕ್ಕಾಗಿ ತಮ್ಮ ಕೊನೆಯ ಪಂದ್ಯವನ್ನು ಆಡಿದ್ದರು. ಪ್ರಸ್ತುತ ರಣಜಿ ಟ್ರೋಫಿಯಲ್ಲಿ ಚೇತೇಶ್ವರ್ ಪೂಜಾರ ಸಾಕಷ್ಟು ರನ್ ಗಳಿಸಿದ್ದಾರೆ, ಆದರೆ ಅದರ ಹೊರತಾಗಿಯೂ, ಯಾವುದೇ ಫಾರ್ಮ್ಯಾಟ್‌ನಲ್ಲಿ ಟೀಮ್ ಇಂಡಿಯಾ ಪರ ಆಡುವ ಅವಕಾಶವನ್ನು ಪಡೆದಿಲ್ಲ.

ಇದನ್ನೂ ಓದಿ: IPLಗೂ ಆರಂಭಕ್ಕೂ ಮುನ್ನ RCBಗೆ ಗುಡ್ ನ್ಯೂಸ್: ಬಲಿಷ್ಠ ಆಲ್’ರೌಂಡರ್ ಅಬ್ಬರಕ್ಕೆ ಮಿಂಚಿನ ಶತಕದಾಟ

ಅಜಿಂಕ್ಯ ರಹಾನೆ:

ಟೆಸ್ಟ್ ಕ್ರಿಕೆಟ್‌ನಲ್ಲಿ ಟೀಮ್ ಇಂಡಿಯಾದ ನಾಯಕತ್ವ ವಹಿಸಿದ್ದ ಅಜಿಂಕ್ಯ ರಹಾನೆ ಭಾರತ ತಂಡದ ಪರ 85 ಪಂದ್ಯಗಳನ್ನು ಆಡಿದ್ದಾರೆ. ಆದರೆ 2023 ರಲ್ಲಿ ನಡೆದ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯ ನಂತರ, ಅಜಿಂಕ್ಯ ರಹಾನೆ ಸಂಪೂರ್ಣ ವಿಫಲರಾಗಿದ್ದಾರೆ. ರಣಜಿ ಟ್ರೋಫಿಯ ಪ್ರಸಕ್ತ ಋತುವಿನಲ್ಲಿ ಸಹ, ಅಜಿಂಕ್ಯ ರಹಾನೆ ಸಂಪೂರ್ಣ ವಿಫಲರಾಗಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News