ಹರ್ಮನ್ಪ್ರೀತ್ ಕೌರ್ ನಾಯಕತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಇಂಗ್ಲೆಂಡ್ ವಿರುದ್ಧದ ಸರಣಿಯ ಮೂರನೇ ಮತ್ತು ಅಂತಿಮ T20 ಪಂದ್ಯದಲ್ಲಿ ಹೀನಾಯ ಸೋಲನ್ನು ಅನುಭವಿಸಿದೆ. ಬ್ರಿಸ್ಟಲ್ನಲ್ಲಿ 7 ವಿಕೆಟ್ಗಳ ಸೋಲಿನೊಂದಿಗೆ ಭಾರತ ಮಹಿಳಾ ತಂಡವೂ ಸರಣಿಯನ್ನು ಕಳೆದುಕೊಂಡಿದೆ. ಆಮಿ ಜಾನ್ಸ್ ನಾಯಕತ್ವದ ತಂಡ ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.
ಇದನ್ನೂ ಓದಿ: ರೋಹಿತ್-ದ್ರಾವಿಡ್ ನಿಂದ ಈ ಆಟಗಾರನಿಗೆ ಮೋಸ : ಫಾರ್ಮ್ ನಲ್ಲಿದ್ದರು ಟೀಂನಲಿಲ್ಲ ಸ್ಥಾನ!
ಬ್ರಿಸ್ಟಲ್ನ ಕೌಂಟಿ ಮೈದಾನದಲ್ಲಿ ನಡೆದ ಸರಣಿಯ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ನಾಯಕಿ ಆಮಿ ಜಾನ್ಸ್ ಫೀಲ್ಡಿಂಗ್ ಆಯ್ದುಕೊಂಡರು. ಭಾರತ 8 ವಿಕೆಟ್ಗೆ 122 ರನ್ ಗಳಿಸಿತ್ತು. ನಂತರ ಆಂಗ್ಲರ ತಂಡ 18.2 ಓವರ್ಗಳಲ್ಲಿ 3 ವಿಕೆಟ್ಗಳ ನಷ್ಟಕ್ಕೆ ಗುರಿಯನ್ನು ತಲುಪಿ ಗೆಲುವು ಸಾಧಿಸಿತು. ಸೋಫಿ ಎಕ್ಲೆಸ್ಟೋನ್ ಕೇವಲ 25 ರನ್ ಗೆ ಮೂರು ವಿಕೆಟ್ ಪಡೆದರೆ ಸಾರಾ ಗ್ಲೆನ್ ಎರಡು ವಿಕೆಟ್ ಪಡೆದರು. ಬಿ ಸ್ಮಿತ್, ಡೇವಿಸ್ ಮತ್ತು ವಾಂಗ್ ತಲಾ ಒಂದು ವಿಕೆಟ್ ಪಡೆದರು. ಇಂಗ್ಲೆಂಡ್ ಪರ ಆರಂಭಿಕ ಆಟಗಾರ್ತಿ ಸೋಫಿಯಾ ಡಂಕ್ಲಿ 49 ರನ್ ಬಾರಿಸಿದರು. ಇನ್ನು ಡೇನಿಯಲ್ ವ್ಯಾಟ್ (22) ಮತ್ತು ಸೋಫಿಯಾ 70 ರನ್ಗಳ ಆರಂಭಿಕ ಜೊತೆಯಾಟವನ್ನು ಆಡಿದರು. ಎಲ್ಲಿಸ್ ಕ್ಯಾಪ್ಸಿ 38 ರನ್ ಗಳಿಸಿ ಅಜೇಯರಾಗಿ ಉಳಿದರು.
ಇನ್ನು ಪಂದ್ಯದಲ್ಲಿ ಭಾರತ ವನಿತೆಯರ ತಂಡದ ಬ್ಯಾಟಿಂಗ್ ಪ್ರದರ್ಶನ ತೀರಾ ಕಳಪೆಯಾಗಿತ್ತು. ತಂಡದಲ್ಲಿರುವ 11 ಬ್ಯಾಟ್ಸ್ಮನ್ಗಳಲ್ಲಿ ಮೂವರು ಮಾತ್ರ ಎರಡಂಕಿ ದಾಟಲು ಸಾಧ್ಯವಾಯಿತು. ಕುತೂಹಲಕಾರಿಯಾಗಿ, ತಂಡವು ಹೆಚ್ಚುವರಿಯಾಗಿ 14 ರನ್ ಗಳಿಸಿತು. ವಿಕೆಟ್ ಕೀಪರ್ ಬ್ಯಾಟ್ಸ್ಮನ್ ರಿಚಾ ಘೋಷ್ 22 ಎಸೆತಗಳಲ್ಲಿ 5 ಬೌಂಡರಿ ಬಾರಿಸಿ 33 ರನ್ಗಳ ಕೊಡುಗೆ ನೀಡಿದರು. ದೀಪ್ತಿ ಶರ್ಮಾ 24 ಮತ್ತು ಪೂಜಾ ವಸ್ತ್ರಾಕರ್ ಅಜೇಯ 19 ರನ್ ಗಳಿಸಿದರು. 11 ಎಸೆತಗಳ ಅಜೇಯ ಇನ್ನಿಂಗ್ಸ್ನಲ್ಲಿ 2 ಬೌಂಡರಿಗಳನ್ನು ಬಾರಿಸಿದರು. ಎಸ್ ಮೇಘನಾ ಮತ್ತು ಹೇಮಲತಾ ಅವರಿಗೆ ಖಾತೆ ತೆರೆಯಲು ಸಹ ಸಾಧ್ಯವಾಗಲಿಲ್ಲ. ಬೌಲಿಂಗ್ನಲ್ಲಿ ರಾಧಾ ಯಾದವ್, ಸ್ನೇಹ ರಾಣಾ ಮತ್ತು ಪೂಜಾ ವಸ್ತ್ರಕರ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ: ಈ ಬಾರಿ ಟಿ20 ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಗೆಲುವು ಖಚಿತ! ಯಾಕೆ ಇಲ್ಲಿದೆ ನೋಡಿ
ಚೆಸ್ಟರ್ ಲೀ ಸ್ಟ್ರೀಟ್ನಲ್ಲಿ ನಡೆದ ಟಿ20-ಐ ಸರಣಿಯಲ್ಲಿ ಗೆಲುವಿನೊಂದಿಗೆ ಇಂಗ್ಲೆಂಡ್ ಮಹಿಳಾ ತಂಡವು ಮೊದಲ ಪಂದ್ಯವನ್ನು 9 ವಿಕೆಟ್ಗಳಿಂದ ಗೆದ್ದುಕೊಂಡಿದೆ. ಎರಡನೇ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ನೇತೃತ್ವದ ತಂಡ 8 ವಿಕೆಟ್ಗಳ ಜಯ ಸಾಧಿಸಿತ್ತು. ಈಗ ಉಭಯ ತಂಡಗಳು ODIಗಳಲ್ಲಿ ಮುಖಾಮುಖಿಯಾಗಲಿದ್ದು, ಮೂರು ಪಂದ್ಯಗಳ ಸರಣಿಯು ಸೆಪ್ಟೆಂಬರ್ 18 ರಂದು ಹೋವ್ನಲ್ಲಿರುವ ಕೌಂಟಿ ಮೈದಾನದಲ್ಲಿ ಪ್ರಾರಂಭವಾಗಲಿದೆ. ಎರಡನೇ ಏಕದಿನ ಪಂದ್ಯ ಸೆಪ್ಟೆಂಬರ್ 21 ರಂದು ನಡೆಯಲಿದ್ದು, ಮೂರನೇ ಮತ್ತು ಅಂತಿಮ ಪಂದ್ಯ ಸೆಪ್ಟೆಂಬರ್ 24 ರಂದು ಲಾರ್ಡ್ಸ್ ಮೈದಾನದಲ್ಲಿ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.