T20 WC 2024: ಟೀಂ ಇಂಡಿಯಾ ಆಡುವ ಕ್ರಮಾಂಕದಲ್ಲಿ ಮಹತ್ವದ ಬದಲಾವಣೆ: ಆರಂಭಿಕರಾಗಿ ರೋಹಿತ್ ಅಲ್ಲ, ಈ ಆಟಗಾರ ಕಣಕ್ಕೆ..!

ಟಿ20 ವಿಶ್ವಕಪ್‌’ನಲ್ಲಿ ಕೊಹ್ಲಿ ಓಪನಿಂಗ್ ಮಾಡಬೇಕು ಎಂದು ಹಲವು ಅನುಭವಿಗಳು ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಜೂನ್ 5 ರಿಂದ 2024ರ T20 ವಿಶ್ವಕಪ್‌’ನಲ್ಲಿ ಭಾರತ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಮೊದಲ ಪಂದ್ಯ ಐರ್ಲೆಂಡ್ ವಿರುದ್ಧ ನಡೆಯಲಿದೆ.

Written by - Bhavishya Shetty | Last Updated : May 29, 2024, 06:58 PM IST
    • ಐಪಿಎಲ್‌’ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು
    • ಕೊಹ್ಲಿ ಓಪನಿಂಗ್ ಮಾಡಬೇಕು ಎಂದು ಹಲವು ಅನುಭವಿಗಳು ಅಭಿಪ್ರಾಯಪಟ್ಟಿದ್ದಾರೆ
    • ವಿರಾಟ್ ಕೊಹ್ಲಿ ಯಶಸ್ವಿ ಜೈಸ್ವಾಲ್ ಜೊತೆ ಓಪನಿಂಗ್ ಮಾಡಬೇಕು ಎಂದು ಸಲಹೆ
T20 WC 2024: ಟೀಂ ಇಂಡಿಯಾ ಆಡುವ ಕ್ರಮಾಂಕದಲ್ಲಿ ಮಹತ್ವದ ಬದಲಾವಣೆ: ಆರಂಭಿಕರಾಗಿ ರೋಹಿತ್ ಅಲ್ಲ, ಈ ಆಟಗಾರ ಕಣಕ್ಕೆ..! title=
T20 World Cup 2024

Openers in T20 WC: ಐಪಿಎಲ್‌’ನಲ್ಲಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. RCB ಪರ ಅನೇಕ ಪಂದ್ಯ-ವಿಜೇತ ಇನ್ನಿಂಗ್ಸ್‌’ಗಳನ್ನು ಆಡಿದರು. ಮುಂಬರುವ ಟಿ20 ವಿಶ್ವಕಪ್‌’ನಲ್ಲಿ ಕೊಹ್ಲಿ-ಯಶಸ್ವಿ ಜೈಸ್ವಾಲ್ ಅವರೊಂದಿಗೆ ವಿರಾಟ್ ಓಪನಿಂಗ್ ಮಾಡಲಿದ್ದಾರೆಯೇ ಎಂಬುದು ಈಗ ದೊಡ್ಡ ಪ್ರಶ್ನೆಯಾಗಿದೆ.

ಟಿ20 ವಿಶ್ವಕಪ್‌’ನಲ್ಲಿ ಕೊಹ್ಲಿ ಓಪನಿಂಗ್ ಮಾಡಬೇಕು ಎಂದು ಹಲವು ಅನುಭವಿಗಳು ಅಭಿಪ್ರಾಯಪಟ್ಟಿದ್ದಾರೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಜೂನ್ 5 ರಿಂದ 2024ರ T20 ವಿಶ್ವಕಪ್‌’ನಲ್ಲಿ ಭಾರತ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ಮೊದಲ ಪಂದ್ಯ ಐರ್ಲೆಂಡ್ ವಿರುದ್ಧ ನಡೆಯಲಿದೆ. ಇದರ ನಂತರ, ಜೂನ್ 9 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ದೊಡ್ಡ ಪಂದ್ಯ ನಡೆಯಲಿದೆ. ಅಂದಹಾಗೆ ಪಂದ್ಯಾವಳಿಯ ಆರಂಭಕ್ಕೂ ಮುನ್ನ ಮಾಜಿ ಬ್ಯಾಟ್ಸ್‌ಮನ್ ವಾಸಿಂ ಜಾಫರ್, ವಿರಾಟ್ ಕೊಹ್ಲಿ ಯಶಸ್ವಿ ಜೈಸ್ವಾಲ್ ಜೊತೆ ಓಪನಿಂಗ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಒಂದು ಲೋಟ ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿದರೆ ಸಂಧುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗುತ್ತೆ: ಮಂಡಿನೋವು ಕೂಡ ನಿವಾರಣೆಯಾಗುತ್ತೆ!

ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ 2024 ರಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ವಿರಾಟ್ ಕೊಹ್ಲಿ ಓಪನಿಂಗ್ ಮಾಡಬೇಕು ಎಂದು ವಾಸಿಂ ಜಾಫರ್ ಹೇಳಿದ್ದಾರೆ. ರೋಹಿತ್ ಸ್ಪಿನ್ ಬೌಲಿಂಗ್‌’ನಲ್ಲಿ ಅತ್ಯುತ್ತಮ ಆಟಗಾರನಾಗಿರುವುದರಿಂದ 3 ಅಥವಾ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ವಾಸಿಂ ಜಾಫರ್ ಎಕ್ಸ್‌’ನಲ್ಲಿ ಹೀಗೊಂದು ಪೋಸ್ಟ್ ಮಾಡಿದ್ದು, “ಕೊಹ್ಲಿ ಮತ್ತು ಜೈಸ್ವಾಲ್ ವಿಶ್ವಕಪ್‌’ನಲ್ಲಿ ಓಪನಿಂಗ್ ಮಾಡಬೇಕು. ನಾವು ಯಾವ ರೀತಿಯ ಆರಂಭವನ್ನು ಪಡೆಯುತ್ತೇವೆ ಎಂಬುದರ ಆಧಾರದ ಮೇಲೆ ರೋಹಿತ್ ಮತ್ತು ಸೂರ್ಯಕುಮಾರ್ ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು. ರೋಹಿತ್ ಸ್ಪಿನ್ ಚೆನ್ನಾಗಿ ಆಡುತ್ತಾರೆ. ಆದ್ದರಿಂದ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವುದು ಉತ್ತಮ” ಎಂದಿದ್ದಾರೆ.

3 ಮತ್ತು 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿರುವ ನಾಯಕ ರೋಹಿತ್ ಶರ್ಮಾ ದಾಖಲೆಗಳು ಕಳಪೆಯೇನಲ್ಲ. ಈ ಕ್ರಮಾಂಕದ ಮೇಲೆ 12 T20I ಗಳಲ್ಲಿ, 39.37 ರ ಸರಾಸರಿಯಲ್ಲಿ 315 ರನ್ ಗಳಿಸಿದ್ದಾರೆ, ಇದರಲ್ಲಿ 4 ಅರ್ಧ ಶತಕಗಳು ಸೇರಿವೆ. 2010ರ T20 ವಿಶ್ವಕಪ್‌’ನಲ್ಲಿ ಕೆನ್ಸಿಂಗ್ಟನ್ ಓವಲ್‌’ನಲ್ಲಿ ಆಸ್ಟ್ರೇಲಿಯಾ ವಿರುದ್ಧ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅವರು ಔಟಾಗದೆ 79 ರನ್ ಕಲೆ ಹಾಕಿದ್ದರು. ಇದ ಅವರ ಅಗ್ರ ಸ್ಕೋರ್ ಆಗಿದೆ.

ಇನ್ನು ಕೊಹ್ಲಿ ಬಗ್ಗೆ ಹೇಳುವುದಾದರೆ, ಆರಂಭಿಕರಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. 9 ಪಂದ್ಯಗಳಲ್ಲಿ 57.14 ಸರಾಸರಿಯಲ್ಲಿ 400 ರನ್ ಗಳಿಸಿದ್ದಾರೆ. ಇದು ಏಷ್ಯಾ ಕಪ್ 2022 ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಅಜೇಯ 122 ರನ್‌’ಗಳನ್ನು ಸಹ ಒಳಗೊಂಡಿದೆ. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ಅವರ ಅತ್ಯುತ್ತಮ ಸ್ಕೋರ್.

ಇದನ್ನೂ ಓದಿ:  ಬ್ಲೂ ಜೆರ್ಸಿ ಜೊತೆಗಿನ ಸಂಬಂಧ ಅಂತ್ಯ! ರೋಹಿತ್ ಶರ್ಮಾ ಗುಡ್ ಬೈ ಸುಳಿವು ನೀಡಿದ ಅನುಭವಿ ಕ್ರಿಕೆಟಿಗ

ಮತ್ತೊಂದೆಡೆ, ಯಶಸ್ವಿ ಜೈಸ್ವಾಲ್ ಕಳೆದ ವರ್ಷ ಏಷ್ಯನ್ ಗೇಮ್ಸ್ 2023 ರಲ್ಲಿ ನೇಪಾಳ ವಿರುದ್ಧ ಬ್ಯಾಟಿಂಗ್ ಮಾಡುವಾಗ T20 ಶತಕ ಗಳಿಸಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News