ಜೈಪುರ: ಇಲ್ಲಿನ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಭಾರತ ಐದು ವಿಕೆಟ್ ಗಳ ಗೆಲುವನ್ನು ಸಾಧಿಸಿದೆ.
T20I half-century No. 3 for Suryakumar Yadav 👏 pic.twitter.com/UGlYKjnSPx
— ICC (@ICC) November 17, 2021
ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಭಾರತ ತಂಡವು ನ್ಯೂಜಿಲೆಂಡ್ (New Zealand) ತಂಡದ ಐದು ವಿಕೆಟ್ ಗಳನ್ನು ಕಬಳಿಸುವ ಮೂಲಕ 19.4 ಓವರ್ ಗಳಲ್ಲಿ 166 ರನ್ ಗಳಿಗೆ ಕಟ್ಟಿ ಹಾಕಿತು.ನ್ಯೂಜಿಲೆಂಡ್ ತಂಡದ ಪರವಾಗಿ ಗುಪ್ತಿಲ್ ಕೇವಲ 42 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಗಳೊಂದಿಗೆ 70 ರನ್ ಗಳನ್ನು ಗಳಿದರೆ, ಇನ್ನೊಂದೆಡೆಗೆ ಚಾಪ್ಮ್ಹಾನ್ 50 ಎಸೆತಗಳಲ್ಲಿ 63 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾದರು.ಭಾರತದ ಪರವಾಗಿ ಭುವನೇಶ್ವರ ಹಾಗೂ ಆಶ್ವಿನ್ ತಲಾ ಎರಡು ವಿಕೆಟ್ ಗಳನ್ನು ಪಡೆದುಕೊಳ್ಳುವ ಮೂಲಕ ಯಶಸ್ವಿ ಬ್ಯಾಟ್ಸ್ಮನ್ ಎನಿಸಿಕೊಂಡರು.
What a finish 💥
Despite a commendable effort from New Zealand in the death, India clinch a thriller in the final over to take a 1-0 lead in the three-match #INDvNZ T20I series. pic.twitter.com/Da2LKSNKrU
— ICC (@ICC) November 17, 2021
ಈ 167 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ಭಾರತದ ತಂಡವು ಆರಂಭದಲ್ಲಿ ಕೆ.ಎಲ್ ರಾಹುಲ್ ರವರ ವಿಕೆಟ್ ಗಳನ್ನು ಕಳೆದುಕೊಂಡರು ಸಹಿತ ರೋಹಿತ್ ಶರ್ಮಾ ಅವರ 48 ಹಾಗೂ ಸೂರ್ಯಕುಮಾರ್ ಯಾದವ್ 62 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ನೆರವಾದರು.ಒಂದು ಹಂತದಲ್ಲಿ ಸೂರ್ಯ ಕುಮಾರ್ ಔಟಾದ ನಂತರ ಆಘಾತಕ್ಕೆ ಒಳಗಾಗಿದ್ದ ತಂಡಕ್ಕೆ ರಿಶಬ್ ಪಂತ ಅವರು ಜವಾಬ್ದಾರಿಯುತ ಆಟದ ಮೂಲಕ ತಂಡದ ಗೆಲುವಿಗೆ ಶ್ರಮಿಸಿದರು.
ಈ ಪಂದ್ಯದ ವಿಶೇಷವೆಂದರೆ ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಅವರು ಕ್ರಮವಾಗಿ ನಾಯಕ ಮತ್ತು ಕೋಚ್ ಆಗಿ ನೇಮಕಗೊಂಡಿದ್ದಾರೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.