India vs Pakistan T20 World Cup Live Score: ಭರ್ಜರಿ ಅರ್ಧ ಶತಕ ಗಳಿಸಿದ ಕೊಹ್ಲಿ, ಭಾರತ 151/ 7

ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿದೆ.

Written by - Zee Kannada News Desk | Last Updated : Oct 24, 2021, 09:38 PM IST
  • ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿ
India vs Pakistan T20 World Cup Live Score: ಭರ್ಜರಿ ಅರ್ಧ ಶತಕ ಗಳಿಸಿದ ಕೊಹ್ಲಿ, ಭಾರತ 151/ 7 title=
file photo

ನವದೆಹಲಿ: ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಪಾಕ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ 20 ಓವರ್ ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 151 ರನ್ ಗಳಿಸಿದೆ.

ಇದನ್ನೂ ಓದಿ: ICC T20 World Cup 2021: ಭಾರತ-ಪಾಕ್ ಪಂದ್ಯಕ್ಕೂ ಮುನ್ನ ಪ್ರಕಟಗೊಂಡಿದೆ ಈ ಭವಿಷ್ಯವಾಣಿ, ಈ ತಂಡದ ಗೆಲುವು ನಿಶ್ಚಿತ!

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಪಾಕಿಸ್ತಾನ್ ತಂಡವು ತನ್ನ ಮಾರಕ ಬೌಲಿಂಗ್ ದಾಳಿಯಿಂದಾಗಿ ಭಾರತಕ್ಕೆ ಆಘಾತ ನೀಡಿದೆ.ಪಾಕಿಸ್ತಾನದ ಪರವಾಗಿ ಪರಿಣಾಮಕಾರಿ ಬೌಲಿಂಗ್ ದಾಳಿ ನಡೆಸಿದ ಶಾಹಿನ್ ಆಫ್ರಿದಿ ಭಾರತದ ಆರಂಭಿಕ ಆಟಗಾರರಾದ ಕೆ.ಎಲ್ ರಾಹುಲ್ (3) ರೋಹಿತ್ ಶರ್ಮಾ(0) ಅವರ ವಿಕೆಟ್ ಕಬಳಿಸುವ ಮೂಲಕ ಪಾಕಿಸ್ತಾನವು ಮೇಲುಗೈ ಸಾಧಿಸುವಂತೆ ಮಾಡಿದರು.

ಇದನ್ನೂ ಓದಿ: India vs Pakistan T20 World Cup Live Score: ಆರಂಭಿಕ ಬ್ಯಾಟ್ಸ್ಮನ್ ಗಳ ವೈಫಲ್ಯ, ಸಂಕಷ್ಟದಲ್ಲಿ ಭಾರತ ತಂಡ

ಇನ್ನೊಂದೆಡೆಗೆ ತಳ ಊರುವ ಸೂಚನೆ ತೋರಿಸುತ್ತಿದ್ದ ಸೂರ್ಯ ಕುಮಾರ್ 11 ರನ್ ಗಳಾಗಿದ್ದಾಗ ಹಸನ್ ಅಲಿ ಅವರಿಗೆ ವಿಕೆಟ್ ಒಪ್ಪಿಸಿದರು.ನಂತರ ವಿರಾಟ್ ಕೊಹ್ಲಿ ಹಾಗೂ ರಿಶಬ್ ಪಂತ್ ಅವರ ಬ್ಯಾಟಿಂಗ್ ನಿಂದಾಗಿ ಭಾರತ ಚೇತರಿಸಿಕೊಂಡಿತು.

ಭಾರತದ ಪರವಾಗಿ ವಿರಾಟ್ ಕೊಹ್ಲಿ  49 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದಾಗಿ 57 ರನ್ ಗಳಿಸಿದರೆ, ರಿಶಬ್ ಪಂತ್ 30 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಎರಡು ಸಿಕ್ಸರ್ ನೆರವಿನಿಂದಾಗಿ 39 ರನ್ ಗಳಿಸಿದರು.ಪಾಕಿಸ್ತಾನದ ಪರವಾಗಿ ಶಾಹಿನ್ ಆಫ್ರಿದಿ ಮೂರು  ಹಾಗೂ ಹಸನ್ ಅಲಿ ಎರಡು ವಿಕೆಟ್ ಗಳನ್ನು ಕಬಳಿಸುವ ಮೂಲಕ ಭಾರತದ ರನ್ ವೇಗಕ್ಕೆ ಕಡಿವಾಣ ಹಾಕಿದರು.

ಇದನ್ನೂ ಓದಿ-Team Babar ವಿರುದ್ಧ Virat ಸಮರ, ಪಂದ್ಯದ ಮೇಲೆ ವಿಶ್ವದ ಕಣ್ಣು, ಯಾರ ವರಸೆ ಯಾರ ಮೇಲೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News