ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವೆ ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ರವೀಂದ್ರ ಜಡೇಜಾ ಅವರನ್ನು ಬೆದರಿಸಲು ಮೊಹಮ್ಮದ್ ಸಿರಾಜ್ ಪ್ರಯತ್ನಿಸಿದಾಗ ಒಂದು ತಮಾಷೆಯ ಘಟನೆ ನಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಬ್ಯಾಟಿಂಗ್ ವೇಳೆ ಬೆಂಗಳೂರು (ಆರ್‌ಸಿಬಿ) ಬೌಲರ್ ಮೊಹಮ್ಮದ್ ಸಿರಾಜ್ 19 ನೇ ಓವರ್‌ನಲ್ಲಿ ಬೌಲಿಂಗ್ ಮಾಡಲು ಬಂದರು.
ಜಡೇಜನನ್ನು ಹೆದರಿಸಲು ಯತ್ನಿಸಿದ ಸಿರಾಜ್ :
ಮೊಹಮ್ಮದ್ ಸಿರಾಜ್ ಅವರ ಈ ಓವರ್‌ನ ಎರಡನೇ ಎಸೆತದಲ್ಲಿ ರವೀಂದ್ರ ಜಡೇಜಾ (Ravindra Jadeja) ಬಲವಾದ ಹೊಡೆತವನ್ನು ಆಡಿ ನೇರ ಡ್ರೈವ್ ಹಾಕಲು ಪ್ರಯತ್ನಿಸಿದರು. ಇದಾದ ನಂತರ ಮೊಹಮ್ಮದ್ ಸಿರಾಜ್ ಚೆಂಡನ್ನು ಹಿಡಿದು ರವೀಂದ್ರ ಜಡೇಜಾ ಕಡೆಗೆ ವೇಗವಾಗಿ ಎಸೆಯಲು ಪ್ರಯತ್ನಿಸಿದರು. ಮೊಹಮ್ಮದ್ ಸಿರಾಜ್‌ನ ತ್ವರಿತತೆಯನ್ನು ನೋಡಿ ಗಾಬರಿಗೊಂಡ ರವೀಂದ್ರ ಜಡೇಜಾ ಕ್ರೀಸ್‌ನಿಂದ ಸ್ವಲ್ಪ ಮುಂದೆ ಬಂದರು, ಆದರೆ ಬಳಿಕ ಮತ್ತೆ ತನ್ನ ಕ್ರೀಸ್‌ಗೆ ಮರಳಿದರು.
— Aditya Das (@lodulalit001) April 25, 2021
ಇದನ್ನೂ ಓದಿ - IPL 2021: ರಾಜಸ್ಥಾನ್ ರಾಯಲ್ಸ್‌ಗೆ ಮತ್ತೊಂದು ದೊಡ್ಡ ಹೊಡೆತ
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್:
ಈ ಘಟನೆಯ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮೊಹಮ್ಮದ್ ಸಿರಾಜ್ (Mohammed Siraj) ಅವರು ಜಡೇಜಾ ಅವರನ್ನು ಚೆಂಡನ್ನು ತಮ್ಮ ಕಡೆಗೆ ಎಸೆಯುತ್ತಿದ್ದಾರೆ ಎಂದು ಹೆದರಿಸುವ ಮೂಲಕ ಅಂತಹ ಪ್ರತಿಕ್ರಿಯೆಯನ್ನು ನೀಡಿದರು, ಆದರೆ ಸಿರಾಜ್ ಹಾಗೆ ಮಾಡಲಿಲ್ಲ ಮತ್ತು ಮತ್ತೆ ನಗುತ್ತಾ ಬೌಲಿಂಗ್ ಮಾಡಲು ಪ್ರಾರಂಭಿಸಿದರು. ಇದರ ನಂತರ ಹರ್ಷಲ್ ಪಟೇಲ್ ಅವರ ಮುಂದಿನ ಓವರ್‌ನಲ್ಲಿ ಜಡೇಜಾ 37 ರನ್ ಗಳಿಸಿದರು.
ಇದನ್ನೂ ಓದಿ - Rajasthan vs Kolkata: ರಾಜಸ್ಥಾನ್ ರಾಯಲ್ಸ್ ಗೆ ಆರು ವಿಕೆಟ್ ಗಳ ಭರ್ಜರಿ ಜಯ
ಮತ್ತೆ ಧೂಳೆಬ್ಬಿಸಿದ ಜಡೇಜಾ:
ನಿನ್ನೆ ನಡೆದ ಪಂದ್ಯದಲ್ಲಿ ರವೀಂದ್ರ ಜಡೇಜಾ ಅವರ ಸ್ಪೋಟಕ ಬ್ಯಾಟಿಂಗ್ ಪಂದ್ಯಕ್ಕೆ ಮೆರಗು ತಂದಿತು. ರವೀಂದ್ರ ಜಡೇಜಾ ಕೇವಲ 28 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ ಬಾರಿಸಿ 62 ರನ್ ಗಳಿಸಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.